Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಬ್ಲಡ್ ಗ್ರೂಪ್ ನಲ್ಲಿ ಅಡಗಿದೆ ನಿಗೂಢ ವ್ಯಕ್ತಿತ್ವ

ಪ್ರತಿಯೊಬ್ಬರ ನಡವಳಿಕೆ, ವರ್ತನೆಗಳು ಭಿನ್ನವಾಗಿರುವಂತೆ ಪ್ರತಿಯೊಬ್ಬರ ರಕ್ತದ ಪ್ರಕಾರವೂ ವಿಭಿನ್ನವಾಗಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಎ,ಬಿ, ಎಬಿ ಹಾಗೂ ಒ ಹೀಗೆ ನಾಲ್ಕು ತರಹದ ಬ್ಲಡ್ ಗ್ರೂಪ್ ಗಳಿವೆ. ಆದರೆ ನಿಮ್ಮ ಬ್ಲಡ್ ಗ್ರೂಪ್ ಯಾವುದು? ಎನ್ನುವುದರ ಆಧಾರದ ಮೇಲೆ ನಿಮ್ಮ ಬಗ್ಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಯಬಹುದಂತೆ. ರಕ್ತದ ಗುಂಪು ನೀವು ಯಾವ ರೀತಿಯ ವ್ಯಕ್ತಿ, ವ್ಯಕ್ತಿತ್ವ ಏನು, ನಿಮ್ಮಲ್ಲಿ ಸಕಾರಾತ್ಮಕ ಗುಣಗಳಿವೆಯೇ ಇಲ್ಲವೇ ಹೀಗೆ ನಾನಾ ರೀತಿಯ ಅಂಶಗಳನ್ನು ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

Personality Test: ನಿಮ್ಮ ಬ್ಲಡ್ ಗ್ರೂಪ್ ನಲ್ಲಿ ಅಡಗಿದೆ ನಿಗೂಢ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 21, 2025 | 9:41 AM

ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಹರಿಯುವ ರಕ್ತ (Blood) ದ ಬಣ್ಣವೇ ಕೆಂಪು (Red). ಆದರೆ ಎಲ್ಲರ ರಕ್ತ ಒಂದೇ ಬಗೆಯದ್ದಾಗಿರುವುದಿಲ್ಲ. ರಕ್ತದ ಕಣಗಳನ್ನು ಅನುಸರಿಸಿ ಮುಖ್ಯವಾಗಿ ಎ, ಬಿ, ಎಬಿ ಮತ್ತು ಒ ಹೀಗೆ ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ. ನಿಮ್ಮ ರಕ್ತ ರಕ್ತದ ಗುಂಪು (Blood Group) ಯಾವುದು? ಎನ್ನುವುದರ ಆಧಾರದ ಮೇಲೆ ವ್ಯಕ್ತಿತ್ವ (Personality) ನಿರ್ಣಯಿಸಬಹುದು. ಎ,ಬಿ, ಎಬಿ ಮತ್ತು ಒ ಈ ನಾಲ್ಕು ವಿಧದ ರಕ್ತ ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವ ಏನು? ಅವರ ಆಸಕ್ತಿ ಹವ್ಯಾಸ, ಸಕಾರಾತ್ಮಕ ವಿಷಯಗಳೇನು? ಎಂದು ಈ ಮೂಲಕ ತಿಳಿದುಕೊಳ್ಳಬಹುದು.

  • ಎ ಬ್ಲಡ್ ಗ್ರೂಪ್ : ಎ ರಕ್ತದ ಗುಂಪಿನ ಜನರು ಮಾದರಿ ವ್ಯಕ್ತಿಗಳಾಗಿ ಬದುಕುತ್ತಾರೆ. ಶಾಂತ ಸ್ವಭಾವದವರಾದ ಇವರು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ಕಷ್ಟ ಪಟ್ಟು ದುಡಿಯುವ ಗುಣ ಹೊಂದಿದ್ದು, ಜೀವನದಲ್ಲಿ ಸುಲಭವಾಗಿ ಯಶಸ್ಸು ಸಾಧಿಸುತ್ತಾರೆ. ಈ ಜನರಲ್ಲಿ ಎಲ್ಲರೊಂದಿಗೂ ಬೆರೆಯುವ ಹಾಗೂ ಹೊಂದಿಕೊಳ್ಳುವ ಗುಣವು ಅಧಿಕವಾಗಿರುತ್ತದೆ. ಹೆಚ್ಚು ಸ್ನೇಹಿತರನ್ನು ಹೊಂದಿದ್ದು ಎಲ್ಲರಿಗೂ ಕೂಡ ವಿಧೇಯರಾಗಿರುತ್ತಾರೆ. ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದರೂ ಕೂಡ ಅತಿಯಾದ ಯೋಚನೆಯೂ ಒತ್ತಡವನ್ನುಂಟು ಮಾಡುತ್ತದೆ.
  • ಬಿ ಬ್ಲಡ್ ಗ್ರೂಪ್ : ಬಿ ರಕ್ತದ ಗುಂಪಿನ ಜನರು ಸ್ನೇಹಪರರು, ಹಠಮಾರಿಗಳು ಹಾಗೂ ಹೊಂದಾಣಿಕೆ ಗುಣವುಳ್ಳವರು. ಆದರೆ ಸ್ವಾರ್ಥಿತನ ಹೆಚ್ಚಿದ್ದು ಇತರರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುವುದೇ ಹೆಚ್ಚು. ಅಷ್ಟು ಸುಲಭವಾಗಿ ಯಾರನ್ನು ಕೂಡ ನಂಬುವುದಿಲ್ಲ. ಶ್ರಮಜೀವಿಗಳಾಗಿದ್ದು ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಹೋರಾಟ ಮನೋಭಾವ ಹೊಂದಿದ್ದು ಜೀವನದಲ್ಲಿನ ಎಲ್ಲಾ ಸನ್ನಿವೇಶವನ್ನು ಎದುರಿಸುವ ತಾಕತ್ತು ಇವರಿಗಿದೆ. ನೇರವಾಗಿ ಮಾತನಾಡುವ ವ್ಯಕ್ತಿಗಳಾಗಿದ್ದು ಸತ್ಯವನ್ನು ಹೊಡೆದಂತೆ ಹೇಳುತ್ತಾರೆ. ಈ ಗುಣದಿಂದಲೇ ಈ ವ್ಯಕ್ತಿಗಳು ತನ್ನ ಸುತ್ತಮುತ್ತಲಿನ ವ್ಯಕ್ತಿಗಳಿಂದ ದೂರ ಉಳಿಯುತ್ತಾರೆ.
  • ಎಬಿ ಬ್ಲಡ್ ಗ್ರೂಪ್ : ರಕ್ತದ ಗುಂಪು ಎಬಿಯಾಗಿದ್ದರೆ ಈ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಸ್ಮಾರ್ಟ್ ಆಗಿ ಯೋಚಿಸುವ ಈ ಜನರು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿಗಳಾಗಿದ್ದು ಇವರ ಸ್ನೇಹ ಬಳಗವು ದೊಡ್ಡದಿರುತ್ತದೆ. ಆದರೆ ಇವರ ಒಳ್ಳೆತನವನ್ನು ಇತರರು ಬಳಸಿಕೊಳ್ಳುವುದೇ ಹೆಚ್ಚು.
  • ಒ ಬ್ಲಡ್ ಗ್ರೂಪ್ : ರಕ್ತದ ಗುಂಪು ಒ ಆಗಿದ್ದರೆ ಈ ವ್ಯಕ್ತಿಗಳು ಜೀವನದಲ್ಲಿ ಎಂತಹ ಸನ್ನಿವೇಶವೇ ಇರಲಿ, ಪಾಸಿಟಿವ್ ಆಗಿ ಯೋಚಿಸುತ್ತಾರೆ. ಈ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಹೀಗಾಗಿ ನಾಯಕ ಹಾಗೂ ಮಾರ್ಗದರ್ಶಕನಾಗುವ ಎಲ್ಲಾ ಗುಣಗಳು ಇರುತ್ತದೆ. ಕೆಲಸದ ವಿಷಯದಲ್ಲಿ ನಿಷ್ಠಾವಂತರು ಹಾಗೂ ಕಠಿಣ ಪರಿಶ್ರಮ ಪಡುತ್ತಾರೆ. ಸದಾ ಉತ್ಸಾಹಿಗಳಾಗಿದ್ದು, ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯುತ್ತಾರೆ. ಹೀಗಾಗಿ ಮೋಜು ಮಸ್ತಿ, ಪಾರ್ಟಿ ಮಾಡುವುದೆಂದರೆ ಇವರಿಗೆ ಇಷ್ಟ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು