AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2022: ನಾಳೆ ಈ ವರ್ಷದ ಮೊದಲ ಸೂರ್ಯ ಗ್ರಹಣ; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

Surya Grahan 2022: ಏಪ್ರಿಲ್ 30ರಂದು ನಡೆಯಲಿರುವ 2022ರ ಮೊದಲ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ದಕ್ಷಿಣ ಅಮೆರಿಕಾ, ಅಂಟಾರ್ಕ್ಟಿಕಾ, ದಕ್ಷಿಣ ಮತ್ತು ಪೆಸಿಫಿಕ್ ಸಾಗರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಸೂರ್ಯಗ್ರಹಣವನ್ನು ವೀಕ್ಷಿಸಬಹುದು.

Solar Eclipse 2022: ನಾಳೆ ಈ ವರ್ಷದ ಮೊದಲ ಸೂರ್ಯ ಗ್ರಹಣ; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು
ಸೂರ್ಯಗ್ರಹಣ
TV9 Web
| Edited By: |

Updated on: Apr 29, 2022 | 12:47 PM

Share

ನವದೆಹಲಿ: ನಾಳೆ ಅಂದರೆ ಏ. 30ರಂದು ಈ ಜಗತ್ತು 2022ರ ಮೊದಲ ಸೂರ್ಯಗ್ರಹಣಕ್ಕೆ (Surya Grahan) ಸಾಕ್ಷಿಯಾಗಲಿದೆ. 2022ರಲ್ಲಿ ನಾಲ್ಕು ಚಂದ್ರ ಗ್ರಹಣಗಳು ಉಂಟಾಗಿದ್ದು, ಎರಡು ಸೂರ್ಯಗ್ರಹಣಗಳು ಮಾತ್ರ ಇರುತ್ತವೆ. ಈ ವರ್ಷದ ಎರಡು ಸೂರ್ಯಗ್ರಹಣಗಳಲ್ಲಿ ಮೊದಲನೆಯದು ಶನಿವಾರ (ಏಪ್ರಿಲ್ 30) ಸಂಭವಿಸುತ್ತದೆ. ಈ ತಿಂಗಳ ಅಂತ್ಯದಲ್ಲಿ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ (NASA) ನಾಳೆಯ ಸೂರ್ಯಗ್ರಹಣದ ಕುರಿತು ಕೆಲವು ಕುತೂಹಲಕಾರಿ ವಿವರಗಳನ್ನು ಒಳಗೊಂಡ ಅಧಿಸೂಚನೆಯನ್ನು ಪ್ರಕಟಿಸಿದೆ. ಏಪ್ರಿಲ್ 30ರಂದು ನಡೆಯಲಿರುವ 2022ರ ಮೊದಲ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ದಕ್ಷಿಣ ಅಮೆರಿಕಾ, ಅಂಟಾರ್ಕ್ಟಿಕಾ, ದಕ್ಷಿಣ ಮತ್ತು ಪೆಸಿಫಿಕ್ ಸಾಗರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಸೂರ್ಯಗ್ರಹಣವನ್ನು ವೀಕ್ಷಿಸಬಹುದು.

ಏಪ್ರಿಲ್ 30ರ ಸಂಜೆ ಭಾರತದಲ್ಲಿ ಸೂರ್ಯ ಮುಳುಗುತ್ತಿದ್ದಂತೆ, ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗಗಳು, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ಸಣ್ಣ ಪ್ರದೇಶಗಳಲ್ಲಿ ಸ್ಪಷ್ಟವಾದ ಆಕಾಶವನ್ನು ಹೊಂದಿರುವವರಿಗೆ ಭಾಗಶಃ ಸೂರ್ಯ ಗ್ರಹಣ ಕಾಣಿಸುತ್ತದೆ. ಭಾರತೀಯ ಸಮಯದ ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 30ರಂದು ರಾತ್ರಿ 12:15ಕ್ಕೆ ಪ್ರಾರಂಭವಾಗುತ್ತದೆ, ಮೇ 1ರಂದು ಬೆಳಿಗ್ಗೆ 4:07ಕ್ಕೆ ಕೊನೆಗೊಳ್ಳುತ್ತದೆ.

ಸೂರ್ಯಗ್ರಹಣ ಭಾರತದಲ್ಲಿ ಕಾಣಿಸುತ್ತಾ?: ಏಪ್ರಿಲ್ 30ರಂದು ಸೂರ್ಯಗ್ರಹಣವನ್ನು ಭಾರತದಿಂದ ನೋಡಬಹುದೇ ಎಂದು ತಿಳಿಯಲು ಅನೇಕ ಆಕಾಶ ಉತ್ಸಾಹಿಗಳು ಬಹಳ ಉತ್ಸುಕರಾಗಿದ್ದಾರೆ. ಆದರೆ, ಭಾರತದಲ್ಲಿ ನೀವು ಈ ಗ್ರಹಣವನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ಈ ಗ್ರಹಣದ ಸಮಯದಲ್ಲಿ ಭಾರತದಲ್ಲಿ ರಾತ್ರಿಯಾಗಿರುತ್ತದೆ. ಸೂರ್ಯನು ಭೂಮಿಯ ಇತರ ಭಾಗದಲ್ಲಿ ಈ ವೇಳೆ ಹಗಲು ವೇಳೆಯಾಗಿರುತ್ತದೆ. ಆ ದೇಶಗಳಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆ.

ಈ ವರ್ಷದ ಮೊದಲ ಚಂದ್ರ ಗ್ರಹಣವು ಮೇ 16ರಂದು ಸಂಭವಿಸಲಿದೆ. ನಾಳೆಯ ಸೂರ್ಯ ಗ್ರಹಣವನ್ನು ನಾಸಾದ ನೇರ ಪ್ರಸಾರದ ಮೂಲಕ ವೀಕ್ಷಿಸಬಹುದು ಮತ್ತು ನಾಸಾದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುವುದು. ನಾಸಾದ ಪ್ರಕಾರ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆಗ ಭೂಮಿಯ ಮೇಲೆ ನೆರಳು ಬೀಳುತ್ತದೆ. ಕೆಲವು ಪ್ರದೇಶಗಳಲ್ಲಿ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸಲಾಗುತ್ತದೆ. ಭಾಗಶಃ ಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಯಾರೋ ಕಚ್ಚಿ ಒಂದು ತುಂಡನ್ನು ತೆಗೆದ ಹಾಗೆ ಕಾಣುವ ಅರ್ಧಚಂದ್ರಾಕಾರದ ಆಕಾರ ಕಂಡುಬರುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು?: – ಸೂರ್ಯಗ್ರಹಣದ ಸಮಯದಲ್ಲಿ ಜನರು ಶಿವನ ಮಂತ್ರವನ್ನು ಪಠಿಸಬೇಕು.

– ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡಿ.

– ಸೂರ್ಯ ಗ್ರಹಣ ಮುಗಿದ ನಂತರ ಜನರು ಮನೆಯನ್ನು ಸ್ವಚ್ಛಗೊಳಿಸಬೇಕು.

– ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಬೇಕು.

– ಸೂತಕದ ಅವಧಿಯಲ್ಲಿ ಗರ್ಭಿಣಿಯರು ಮನೆಯೊಳಗೆ ಇರಬೇಕು.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು?: – ಜನರು ಸೂರ್ಯಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸುವುದು ಮತ್ತು ತಿನ್ನುವುದು ನಿಷೇಧ ಎನ್ನಲಾಗುತ್ತದೆ.

– ಜನರು ಎಂದಿಗೂ ಗ್ರಹಣವನ್ನು ಬರಿಗಣ್ಣುಗಳಿಂದ ನೋಡಬಾರದು ಎಂದು ಸಲಹೆ ನೀಡಲಾಗುತ್ತದೆ.

– ಗ್ರಹಣದ ಸಮಯದಲ್ಲಿ ಮಲಗಬಾರದು.

– ಸೂರ್ಯಗ್ರಹಣದ ಮೊದಲು ಜನರು ತುಳಸಿ ಎಲೆಗಳನ್ನು ನೀರು ಮತ್ತು ಆಹಾರದಲ್ಲಿ ಹಾಕಬೇಕು.

– ಗ್ರಹಣದ ಸಮಯದಲ್ಲಿ ಅನೇಕ ಜನರು ತೀಕ್ಷ್ಣವಾದ ವಸ್ತುವನ್ನು ಬಳಸುವುದಿಲ್ಲ.

ಇದನ್ನೂ ಓದಿ: Solar Eclipse 2022: ಏ. 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ; ಈ ಸ್ಥಳಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ

Solar Eclipse 2022: ಸೂರ್ಯಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು?