Travel: ಕರ್ನಾಟಕ ಸೇರಿ ಈ ಎಲ್ಲ ಪ್ರದೇಶಗಳಿಗೆ ವಾರದ ಪ್ರವಾಸ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2023 | 5:33 PM

ಈ ವಾರಾಂತ್ಯದಲ್ಲಿ ಕುಟುಂಬದವರ ಜೊತೆಗೆ ಅಥವಾ ಸ್ನೇಹಿತರ ಜೊತೆಗೆ ಯಾವುದಾದರೂ ವಿಶೇಷ ಸ್ಥಳಕ್ಕೆ ಟ್ರಿಪ್ ಹೋಗುವ ಮೂಲಕ ಅದ್ಭುತವಾದ ಪ್ರವಾಸದ ಅನುಭವವನ್ನು ಪಡೆಯಬೇಕು ಎಂದು ಅಂದುಕೊಂಡಿದ್ದೀರಾ. ದೆಹಲಿ, ಮುಂಬೈ ಮತ್ತು ಕರ್ನಾಟಕದಲ್ಲಿನ ಈ ಕೆಲವೊಂದು ಆಫ್‌ಬೀಟ್ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ವಾರಾಂತ್ಯದ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸಿ.

Travel: ಕರ್ನಾಟಕ ಸೇರಿ ಈ ಎಲ್ಲ ಪ್ರದೇಶಗಳಿಗೆ ವಾರದ ಪ್ರವಾಸ ಮಾಡಿ
ಸಾಂದರ್ಭಿಕ ಚಿತ್ರ
Follow us on

ಪ್ರವಾಸಕ್ಕೆ ಹೋಗುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕೆಲವರು ಸ್ನೇಹಿತರ ಜೊತೆ ಹ್ಯಾಂಗ್‌ಔಟ್ ಮಾಡಲು ಪ್ರವಾಸಕ್ಕೆ ಹೋದರೆ ಇನ್ನು ಕೆಲವರು ಕುಟುಂಬದವರ ಜೊತೆ ಒಂದೊಳ್ಳೆ ಕ್ಷಣವನ್ನು ಕಳೆಯುವ ಸಲುವಾಗಿ ಕುಟುಂಬದ ಜೊತೆ ಪ್ರವಾಸ ಹೋಗುತ್ತಾರೆ. ಒಂದಷ್ಟು ಜನ ಕೆಲಸದ ಒತ್ತಡದಿಂದ ಬಿಡುವು ಪಡೆದುಕೊಳ್ಳುವ ಸಲುವಾಗಿ ಹೆಚ್ಚಾಗಿ ವಾರಾಂತ್ಯದಲ್ಲಿ ಆಗಾಗ್ಗೆ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಈಗ ನಾವು ಪ್ರವಾಸಕ್ಕೆ ಹೋಗಬೇಕು, ಅದರಲ್ಲಿಯೂ ಅದ್ಭುತವಾದ ಗುಪ್ತ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು ಎಂದು ಬಯಸುತ್ತೀರಾ? ಹಾಗಾಗದರೆ ಈ ವಾರಾಂತ್ಯದಲ್ಲಿ ಕರ್ನಾಟಕ, ದೆಹಲಿ, ಮುಂಬೈ ನಲ್ಲಿ ಇರುವ ಕೆಲವು ಗುಪ್ತ ಪ್ರವಾಸಿ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. ಇಲ್ಲಿನ ಅನೇಕ ಪ್ರವಾಸಿ ತಾಣಗಳು ತನ್ನದೇ ಆದ ವಿಶಿಷ್ಟತೆ ಮತ್ತು ಆಕರ್ಷಣೆಯನ್ನು ಹೊಂದಿದೆ. ಈ ಯಾವುದಾದರೂ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ವಾರಾಂತ್ಯದ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸಬಹುದು.

ಮಾಪಲ್ಸ್ ಕೊಗೊ ಸಹ ಸಂಸ್ಥಾಪಕ ಪ್ರವೀರ್ ಕೊಚ್ಚರ್ ಅವರು ದೆಹಲಿ, ಮುಂಬೈ ಮತ್ತು ಕರ್ನಾಟಕದಲ್ಲಿ ಪ್ರವಾಸಿಗರು ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ: ಕರ್ನಾಟಕದಲ್ಲಿಯೂ ಅನೇಕ ಅದ್ಭುತ ಪ್ರವಾಸಿ ತಾಣಗಳಿವೆ. ಈ ಬಾರಿ ನೀವು ಕರ್ನಾಟಕದ ಯಾವುದಾದರೂ ಒಂದು ರಮಣೀಯ ಪ್ರಾಕೃತಿಕ ತಾಣಕ್ಕೆ ಪ್ರವಾಸ ಹೋಗಬೇಕು ಎಂದು ಬಯಿಸದರೆ, ಪಶ್ಚಿಮ ಘಟ್ಟಗಳಲ್ಲಿರುವ ರಮಣೀಯ ಪಟ್ಟಣವಾದ ಸಕಲೆಶಪುರಕ್ಕೆ ಭೇಟಿ ನೀಡಬಹುದು. ಇಲ್ಲಿ ನೀವು ಕಾಫಿ ತೋಟಗಳು, ಬೆಟ್ಟಗಳು, ಮಂಜರಾಬಾದ್ ಕೋಟೆಯ ವೈಭವವನ್ನು ವೀಕ್ಷಿಸಬಹುದು. ಪ್ರಕೃತಿಯ ಮಡಿಲಲ್ಲಿರುವ ಮಂಜೇಹಳ್ಳಿ ಜಲಪಾತ, ಅಬ್ಬೆ ಜಲಪಾತ ಸೇರಿದಂತೆ ಇನ್ನೂ ಅನೇಕ ಜಲಪಾತಗಳ ತಾಣಗಳಿಗೆ ಭೇಟಿ ನೀಡಬಹುದು.

ದೆಹಲಿ: ದೆಹಲಿಯ ಹತ್ತಿರಲ್ಲಿರುವ ಹಾಗೂ ನಗರದಿಂದ ದೂರವಿರುವ ಪ್ರಶಾಂತವಾದ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತೀರಾ. ಖಿಮ್ಸರ್ ಗ್ರಾಮವು ನೀವು ಭೇಟಿ ನೀಡಲೇಬೇಕಾದ ತಾಣವಾಗಿದೆ. ರಾಜಸ್ಥಾನದ ನೌರ್ ಜಿಲ್ಲೆಯಲ್ಲಿರುವ ಈ ಪುಟ್ಟ ಹಳ್ಳಿಯು ಮರಳಿನ ದಿಬ್ಬಗಳಿಂದ ಆವೃತ್ತವಾಗಿದೆ. ಈ ಮರಳುಗಾಡಿನ ಮಧ್ಯದಲ್ಲಿ ಕ್ಯಾಂಪಿಂಗ್ ಮಾಡುವ ರೋಮಾಂಚನ ಅನುಭವವನ್ನು ನೀವು ಪಡೆಯಬಹುದು. ಮಾತ್ರವಲ್ಲದೆ ನೀವು ಇಲ್ಲಿ ಖಿಮ್ಸರ್ ಸ್ಯಾಂಡ್ ಡ್ಯೂನ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವು ಬಗೆಯ ವನ್ಯಜೀವಿಗಳನ್ನು ಕೂಡಾ ವೀಕ್ಷಿಸಬಹುದು.

ನೀವು ಪ್ರಾಣಿಪ್ರಿಯರಾಗಿದ್ದರೆ, ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಬಹುದು. ಈ ಮೀಸಲು ಪ್ರದೇಶವು ಬಂಗಾಳ ಹುಲಿ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳ ನೆಲೆಯಾಗಿದೆ. ನೀವು ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಲು ಬಯಸಿದರೆ ತಪ್ಪದೇ ಈ ಸ್ಥಳಕ್ಕೆ ಭೇಟಿ ನೀಡಿ.

ಇದನ್ನೂ ಓದಿ:Travel: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಕರ್ನಾಟಕದ ಈ ಪ್ರದೇಶಗಳಿಗೆ ಹೋಗಿ ಬನ್ನಿ

ಮುಂಬೈ: ಮುಂಬೈ ಸುತ್ತಮುತ್ತಲಿನ ಕೆಲವೊಂದು ಪ್ರವಾಸಿ ಸ್ಥಳಗಳ ಬಗ್ಗೆ ಪ್ರವೀರ್ ಕೊಚ್ಚರ್ ಅವರು ತಿಳಿಸಿದ್ದಾರೆ. ಗಣಪತಿಪುಲೆ ಇದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಪ್ರಶಾಂತವಾದ ಕಡಲತೀರದ ಪಟ್ಟಣವಾಗಿದೆ. ಇಲ್ಲಿ ನೀವು ಕಡಲತೀರದ ಬಳಿ ಕುಳಿತು ಮನಸ್ಸನ್ನು ಪ್ರಶಾಂತಗೊಳಿಸಬಹುದು ಮತ್ತು ಇಲ್ಲಿನ ಪ್ರಾಚೀನ ದೇವಾಲಯಗಳಿಗೆ ಭೇಟಿ ನೀಡಬಹುದು.

ನೀವು ಟ್ರೆಕ್ಕಿಂಗ್ ಪ್ರಿಯರಾಗಿದ್ದರೆ, ಜೈಗಡ್ ಕೋಟೆಗೆ ಭೇಟಿ ನೀಡಿ. ಜೈಗಡ್ ಕೋಟೆಗೆ ಟ್ರೆಕ್ಕಿಂಗ್ ಮಾಡುವ ಮೂಲಕ ಅಲ್ಲಿನ ಸುತ್ತಮತ್ತಲಿನ ಭೂದೃಶ್ಯದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಮತ್ತು ಪ್ರಕೃತಿಯನ್ನು ಪ್ರೀತಿಸುವವರಿಗೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿರುವ ಮಲ್ಶೇಜ್ ಘಾಟ್ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಜಲಪಾತಗಳು ಹಾಗೂ ವಿವಿಧ ಪಕ್ಷಿ ಪ್ರಬೇಧಗಳನ್ನು ನೋಡಬಹುದು.