Travel: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಕರ್ನಾಟಕದ ಈ ಪ್ರದೇಶಗಳಿಗೆ ಹೋಗಿ ಬನ್ನಿ

ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮನಸ್ಸನ್ನು ಪ್ರಶಾಂತವಾಗಿಸಲು ಯಾವುದಾದರೂ ಒಳ್ಳೆಯ ಸ್ಥಳಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೀರಾ. ಬೆಂಗಳೂರಿಗೆ ಹತ್ತಿರವಾದ ಕೆಲವೊಂದು ಪ್ರವಾಸಿ ಸ್ಥಳಗಳ ಕುರಿತ ಮಾಹಿತಿ ಇಲ್ಲಿದೆ.

Travel: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಕರ್ನಾಟಕದ ಈ ಪ್ರದೇಶಗಳಿಗೆ ಹೋಗಿ ಬನ್ನಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 01, 2023 | 2:51 PM

ಈ ವಾರಾಂತ್ಯದಲ್ಲಿ ಬೆಂಗಳೂರಿನ ನಗರ ಜೀವನದ ಜಂಜಾಟದಿಂದ ಹಾಗೂ ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮನಸ್ಸನ್ನು ಪ್ರಶಾಂತವಾಗಿಸಲು ಯಾವುದಾದರೂ ಒಳ್ಳೆಯ ಸ್ಥಳಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೀರಾ. ಬೆಂಗಳೂರಿಗೆ ಹತ್ತಿರವಾದ ಕೆಲವೊಂದು ಪ್ರವಾಸಿ ಸ್ಥಳಗಳ ಕುರಿತ ಮಾಹಿತಿ ಇಲ್ಲಿದೆ.

ಗುಡಿಬಂಡೆ:

ಬೆಂಗಳೂರಿಗೆ ಹತ್ತಿರವಾದ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಒಂದಾದ ಗುಡಿಬಂಡೆ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಐತಿಹಾಸಿಕ ಸ್ಥಳವಾದ ಇದು ಬೆಟ್ಟಗಳು ಹಾಗೂ ಗುಡಿಬಂಡೆ ಕೋಟೆಗೆ ಹೆಸರುವಾಸಿಯಾಗಿದೆ. ಈ ಗುಡಿಬಂಡೆಯಲ್ಲಿ 17ನೇ ಶತಮಾನದಲ್ಲಿ ರಚಿಸಲಾದ ಕೋಟೆಯಾಗಿದ್ದು, ಇದನ್ನು ಸ್ಥಳೀಯ ಆಡಳಿತಗಾರ ಬೈರೇಗೌಡ ನಿರ್ಮಿಸಿದನು. ಈ ಬಹುಹಂತದ ಕೋಟೆಯು 16 ರಾಕ್ ಕಟ್ ಕೊಳಗಳನ್ನು ಹೊಂದಿದೆ. ಇವುಗಳನ್ನು ನೀರನ್ನು ಸಂಗ್ರಹಿಸಲು ರಚಿಸಲಾಗಿದೆ. ಈ ಪ್ರದೇಶವು ಹಲವಾರು ದೇವಾಲಯಗಳು ಮತ್ತು ಸುಂದರವಾದ ಸರೋವರಗಳಿಗೆ ನೆಲೆಯಾಗಿದೆ. ಆದ್ದರಿಂದ ಬೆಟ್ಟಗಳು, ಸ್ಮಾರಕಗಳು ಮತ್ತು ಸರೋವರಗಳ ಮಧ್ಯೆ ಈ ವಾರಂತ್ಯವನ್ನು ಕಳೆಯಲು ಉತ್ತಮವಾದ ಸ್ಥಳ ಇದಾಗಿದೆ. ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಟ್ರೆಕ್ಕಿಂಗ್ ಇಷ್ಟಪಡುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಟ್ರೆಕ್ಕಿಂಗ್ ಹೊರತಾಗಿ ನೀವು ಬ್ರಹ್ಮಹಳ್ಳಿ, ನಿಚ್ಚನಬಂಡಿಹಳ್ಳಿ ಮತ್ತು ಚಿನ್ನ ಹಳ್ಳಿ ಗ್ರಾಮಗಳಿಗೆ ಭೇಟಿ ನೀಡಬಹುದು.

ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರ, ಚಿಕ್ಕಬಳ್ಳಾಪುರದ ಸಮೀಪದಲ್ಲಿದೆ ಈ ಸ್ಥಳ. ಬೆಂಗಳೂರಿನಿಂದ ಸಾಕಷ್ಟು ಸಿಟಿ ಬಸ್‌ಗಳು ಇಲ್ಲಿಗೆ ಹೋಗುತ್ತವೆ. 2 ಗಂಟೆಯ ಪ್ರಯಾಣದ ಮೂಲಕ ಈ ಸ್ಥಳವನ್ನು ತಲುಪಬಹುದು. ಹಾಗೂ ಗುಡಿಬಂಡೆಯಿಂದ ಸುಮಾರು 30 ಕಿಮೀ ದೂರದಲ್ಲಿ ಗೌರಿಬಿದನೂರಿನಲ್ಲಿ ರೈಲ್ವೆ ನಿಲ್ದಾಣವಿದೆ. ರೈಲಿನ ಮೂಲಕ ಬಂದರೆ, ಅಲ್ಲಿಂದ ಟ್ಯಾಕ್ಸಿಯ ಮೂಲಕ ಇಲ್ಲಿಗೆ ತಲುಪಬಹುದು.

ಗಂಡಿಕೋಟ:

ಭಾರತದ ಗ್ರ್ಯಾಂಡ್ ಕ್ಯಾನ್ಯನ್ ಎಂದು ಪ್ರಸಿದ್ಧವಾಗಿರುವ ಈ ಸ್ಥಳವು ಬೆಂಗಳೂರಿನಿಂದ ಸುಮಾರು 300ಕಿಮೀ ದೂರದಲ್ಲಿದೆ. ಕೆಲಸದ ಒತ್ತಡ ಹಾಗೂ ಬೆಂಗಳೂರು ಟ್ರಾಫಿಕ್‌ನಿಂದ ಬೇಸತ್ತು ಹೋಗಿದ್ದರೆ, ಈ ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಮನಸ್ಸನ್ನು ಪ್ರಶಾಂತವಾಗಿರಿಸಬಹುದು. ಪ್ರಶಾಂತವಾಗಿರುವ ಈ ಸ್ಥಳದಲ್ಲಿ ಕುಟೀರದ ವ್ಯವಸ್ಥೆಯೂ ಇದೆ. ಇಲ್ಲಿ ಕ್ಯಾಂಪ್ ಮಾಡಲು ಕೂಡ ಅನುಮತಿ ಇದೆ. ಹಾಗೂ ಇಲ್ಲಿ ಪೆನ್ನಾ ನದಿಯು ಹರಿದು ಹೋಗುವುದರಿಂದ ಆ ನದಿಯ ಸೌಂದರ್ಯವನ್ನು ಸವಿಯಬಹುದು. ಜೊತೆಗೆ ಕಯಾಕಿಂಗ್ ಮಾಡಲು ಅವಕಾಶವಿದೆ. ಮುಂಜಾನೆ ಬಂದು ಈ ಪ್ರಕೃತಿಯ ಮಧ್ಯೆ ನಡೆದಾಡುವ ಮೂಲಕ ಮನಸ್ಸನ್ನು ರಿಫ್ರೇಶ್ ಮಾಡಿಕೊಳ್ಳಬಹುದು. ಜೊತೆಗೆ ಇದು ಐತಿಹಾಸಿಕ ಸ್ಥಳವಾಗಿದೆ. ಇತಿಹಾಸ ಪ್ರಿಯರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಭೇಟಿ ನೀಡಲು ಯೋಗ್ಯವಾದ ಸ್ಥಳ ಇದಾಗಿದೆ. ಬೆಂಗಳೂರಿನಿಂದ ಹೈದರಬಾದ್‌ಗೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಗಂಡಿಕೋಟ ಸ್ಥಳವನ್ನು ತಲುಪಬಹುದು.

ತುರಹಳ್ಳಿ ಅರಣ್ಯ:

ಬೆಂಗಳೂರು ನಗರದ ಹೊರಗೆ ಕೇವಲ 20 ಕಿಮೀ ದೂರದಲ್ಲಿ ಈ ತುರಹಳ್ಳಿ ಅರಣ್ಯ ಪ್ರದೇಶವಿದೆ. ಈ ಸೊಗಸಾದ ಮೀಸಲು ಪ್ರದೇಶವು ಸೈಕ್ಲಿಂಗ್, ಟ್ರೆಕ್ಕಿಂಗ್ ಮಾಡಲು ಹಾಟ್ ಸ್ಪಾಟ್ ಸ್ಥಳವಾಗಿದೆ. ಸೈಕಲ್ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಈ ಕಾಡಿನೊಳಗೆ ಪ್ರವೇಶವಿಲ್ಲ. ನಗರ ಜೀವನದ ಜಂಜಾಟದಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಲು, ಈ ಶಾಂತಿಯುತವಾದ ಅರಣ್ಯವು ಸೂಕ್ತವಾಗಿದೆ.

ಇಲ್ಲಿ ಸೈಕ್ಲಿಂಗ್ ಅಥವಾ ಟ್ರೆಕ್ಕಿಂಗ್ ಮಾಡುವ ಮೂಲಕ ಕಾಡಿನಲ್ಲಿರುವ ಬಂಡೆಗಳು, ಸಸ್ಯರಾಶಿಗಳು, ಹಾಗೂ ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು. ಈ ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯುತ್ತಾ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

ಹೆಸರಘಟ್ಟ ಕೆರೆ:

ಒಂದು ದಿನದ ಪ್ರವಾಸ ಕೈಗೊಳ್ಳಲು ಬೆಂಗಳೂರಿಗೆ ಹತ್ತಿರದಲ್ಲಿರು ಸ್ಥಳವಾಗಿದೆ. ಈ ಹೆಸರಘಟ್ಟ ಸರೋವರವು 19ನೇ ಶತಮಾನದಲ್ಲಿ ರಚಿಸಲಾದ ಮಾನವ ನಿರ್ಮಿತ ಸರೋವರವಾಗಿದೆ. ಜೊತೆಗೆ ಇದು ಹಲವು ಬಗೆಯ ಪಕ್ಷಿಗಳ ತಾಣವಾಗಿದೆ. ಇಲ್ಲಿ ಪಕ್ಷಿಗಳನ್ನು ನೋಡಬಹುದು. ಈ ಸ್ಥಳವು ಪಕ್ಷಿ ವೀಕ್ಷಣೆಗೆ, ಕ್ಯಾಂಪಿಂಗ್ ಮಾಡಲು, ಪಿಕ್ನಿಕ್ ಮಾಡಲು, ಸೈಕ್ಲಿಂಗ್, ಬೋಟಿಂಗ್ ಮಾಡಲು ಸೂಕ್ತವಾಗಿದೆ. ನಗರ ಜೀವನದಿಂದ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಈ ಹೆಸರಘಟ್ಟ ಕೆರೆಯ ಸೌಂದರ್ಯ ಸವಿಯಲು ಒಂದು ದಿನದ ವಿಹಾರಕ್ಕೆ ಇಲ್ಲಿ ನೀವು ಬರಬಹುದು. ಬೆಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿರುವ ಈ ಸ್ಥಳಕ್ಕೆ 55 ನಿಮಿಷಗಳ ಪ್ರಯಾಣದ ಮೂಲಕ ತಲುಪಬಹುದು.

Published On - 2:21 pm, Sat, 1 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ