South Indian Vegetarian Recipes: ಕೇರಳದ ಆರೋಗ್ಯಕರ ಈ ಸಸ್ಯಾಹಾರಿ ಪಾಕವನ್ನು ನೀವು ಇಷ್ಟಪಡುವುದು ಖಂಡಿತ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2022 | 5:48 PM

ಕೇರಳದ ಅಮಲ್ ತಮಾರಾ ರೆಸ್ಟೋರೆಂಟಿನಲ್ಲಿನ ರುಚಿಕರವಾದ ಅಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳ ಪಟ್ಟಿಯನ್ನು ನಾವು ಇಲ್ಲಿ ಹಂಚಿಕೊಂಡಿದ್ದೇವೆ. ಇವುಗಳನ್ನು ತಯಾರಿಸುವುದು ಸುಲಭವಲ್ಲ ಆದರೆ ಇದು ಆರೋಗ್ಯಕರವಾದ ಹಾಗೂ ರುಚಿಕರ ಪಾಕ ವಿಧಾನವಾಗಿದೆ. ನೀವು ಕೂಡ ಈ ದಕ್ಷಿಣ ಭಾರತೀಯ ಶೈಲಿಯ ಕೇರಳದ ಪಾಕ ವಿಧಾನವನ್ನು ಮನೆಯಲ್ಲಿಯೇ ತಯಾರಿಸಬಹುದು.

South Indian Vegetarian Recipes: ಕೇರಳದ ಆರೋಗ್ಯಕರ ಈ ಸಸ್ಯಾಹಾರಿ ಪಾಕವನ್ನು ನೀವು ಇಷ್ಟಪಡುವುದು ಖಂಡಿತ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಕೇರಳ(kerala) ಅಮಲ್ ತಮಾರಾ ರೆಸ್ಟೋರೆಂಟಿನಲ್ಲಿನ (Amal Tamara Restaurant) ರುಚಿಕರವಾದ ಅಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳ ಪಟ್ಟಿಯನ್ನು ನಾವು ಇಲ್ಲಿ ಹಂಚಿಕೊಂಡಿದ್ದೇವೆ. ಇವುಗಳನ್ನು ತಯಾರಿಸುವುದು ಸುಲಭವಲ್ಲ ಆದರೆ ಇದು ಆರೋಗ್ಯಕರವಾದ ಹಾಗೂ ರುಚಿಕರ ಪಾಕ ವಿಧಾನವಾಗಿದೆ. ನೀವು ಕೂಡ ಈ ದಕ್ಷಿಣ ಭಾರತೀಯ ಶೈಲಿಯ ಕೇರಳದ ಪಾಕ ವಿಧಾನವನ್ನು ಮನೆಯಲ್ಲಿಯೇ ತಯಾರಿಸಬಹುದು.
ಕೇರಳದ ಅಲಪ್ಪುಝಾ ಬಳಿಯ ವೆಂಬನಾಡ್ ಸರೋವರದ ಅಂಚಿನಲ್ಲಿರುವ ಐಷಾರಾಮಿ ರೆಸಾರ್ಟ್ ಅಮಲ್ ತಮಾರಾದಲ್ಲಿ ಪ್ಯಾನ್ ಇಂಡಿಯಾನ್ ರೆಸಿಪಿಗಳು ಮತ್ತು ಅಂತರಾಷ್ಟ್ರೀಯ ರುಚಿಗಳನ್ನು ಒಳಗೊಂಡಿರುವ ಮೆನುವನ್ನು ಒದಗಿಸುತ್ತದೆ. ವಿಶೇಷವಾಗಿ ಅಲ್ಲಿ ಕೇರಳದ ಭಕ್ಷ್ಯಗಳು ಎದ್ದು ಕಾಣುತ್ತವೆ. ಆರೋಗ್ಯಕರ ಹಾಗೂ ಅಷ್ಟೇ ರುಚಿಕರವಾದ ಸಾಮಾನ್ಯ ಆಹಾರದ ಭಾಗವಾಗಿರುವ ಅ ಕೇರಳದ ಭಕ್ಷ್ಯಗಳ ಕುರಿತು ನಾವು ತಿಳಿಸಿಕೊಡುತ್ತೇವೆ. ಇವುಗಳನ್ನು ತಯಾರಿಸುವುದು ಸುಲಭವಲ್ಲ ಆದರೆ ಸ್ವಾಸ್ಥ್ಯ ಮತ್ತು ರುಚಿಕರ ಸುವಾಸನೆಯಿಂದ ಈ ಆಹಾರದಲ್ಲಿ ಕೂಡಿದೆ.

ಕೆಲವು ಆರೋಗ್ಯಕರ ಕೇರಳದ ವಿಶೇಷ ವೆಜ್ ಪಾಕ ವಿಧಾನಗಳು ಇಲ್ಲಿವೆ. (ಪಾಕ ವಿಧಾನಗಳು: ಕೃಪೆ- ಅಮಲ್ ತಮಾರಾ ಆಲಪ್ಪುಳ)

ಚೀರಾ (ಹರಿವೆ ಸೊಪ್ಪು) ಮಪ್ಪಾಸ್: ಇದು ಪಲಾಕ್‌ನಿಂದ ತಯಾರಿಸಲಾಗುವ ಕೇರಳದ ಖಾದ್ಯವಾಗಿದೆ. ಇದನ್ನು ಕೆಂಪು ಅನ್ನದೊಂದಿಗೆ (ಬ್ರೌನ್ ರೈಸ್) ಅವರು ಸೇವಿಸುತ್ತಾರೆ. ಈ ರುಚಿಕರವಾದ ಖಾದ್ಯವನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣಾ

ಬೇಕಾಗುವ ಪದಾರ್ಥಗಳು : ಸಣ್ಣ ಗಾತ್ರದ ಈರುಳ್ಳಿ 30 ಗ್ರಾಂ, ಶುಂಠಿ 5 ಗ್ರಾಂ, ಸ್ವಲ್ಪ ಕರಿಬೇವಿನ ಎಲೆಗಳು, ತೆಂಗಿನ ಹಾಲು 2 ಕಪ್, ಗರಂ ಮಸಾಲಾ 5 ಗ್ರಾಂ. ಅರಶಿನ ಪುಡಿ -1 ಚಮಚ, ಕೊತ್ತಂಬರಿ ಪುಡಿ 4 ಚಮಚ, ಚೀರಾ (ಕೆಂಪು ಪಾಲಕ್) 100 ಗ್ರಾಂ, ತೆಂಗಿನ ಎಣ್ಣೆ 2 ಟೆಬಲ್ ಸ್ಪೂನ್,

ತಯಾರಿಸುವ ವಿಧಾನ :

1. ಮೊದಲು ಚೀರಾ (ಕೆಂಪು ಪಾಲಕ್)ನ್ನು ಚೆನ್ನಾಗಿ ತೊಳೆದು ಕಟ್ ಮಾಡಿ ಇಟ್ಟುಕೊಳ್ಳಿ.

2. ಈಗ ದಪ್ಪ ತಳದ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಎಲ್ಲಾ ಮಸಾಲೆಗಳು, ಸಣ್ಣ ಈರುಳ್ಳಿ ಸೇರಿಸಿ 3-5 ನಿಮಿಷ ಅಥವಾ ಮಸಾಲೆಯ ಹಸಿ ವಾಸನೆ ಕಡಿಮೆಯಾಗುವವರೆಗೆ ಹುರಿಯಿರಿ.

3. ನಂತರ ತೆಳುವಾದ ತೆಂಗಿನ ಹಾಲನ್ನು ಹಾಕಿ ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿ ಕುದಿಯಲು ಬಿಡಿ. ಅದರ ಗ್ರೇವಿ ದಪ್ಪಗಾಗುವವರೆಗೆ ಬೇಯಿಸಿ.

4. ಇದಾದ ಬಳಿಕ ದಪ್ಪ ತೆಂಗಿನ ಹಾಲು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿದರೆ ಚೀರಾ ಮಪ್ಪಾಸ್ ಸವಿಯಲು ಸಿದ್ಧ.

ಬೀಟ್ರೂಟ್ ಹಲ್ವಾ : ಅಮಲ್ ತಾಮರ ರೆಸಾಟ್‌ನಲ್ಲಿ ಹಲ್ವಾವನ್ನು ಸಿಹಿಗೊಳಿಸಲು ಬೆಲ್ಲವನ್ನು ಬಳಸುತ್ತಾರೆ. ಇದು ಭಾರತದಾದ್ಯಂತ ನೆಚ್ಚಿನ ಖದ್ಯವಾಗಿದೆ.

ಬೇಕಾಗುವ ಸಾಮಾಗ್ರಿಗಳು : ತುರಿದ ಬೀಟ್ರೂಟ್ 2 ಕಪ್, ತೆಂಗಿನ ಹಾಲು 2 ಕಪ್, ಬೆಲ್ಲದ ಪಾನಕ 1 ಕಪ್, ಏಲಕ್ಕಿ ಪುಡಿ 1 tbsp, ಗೋಡಂಬಿ 10, ಒಣದ್ರಾಕ್ಷಿ 10, ತುಪ್ಪ 3 tbsp, ಅಕ್ಕಿ ಪುಡಿ 2 tbsp,

ತಯಾರಿಸುವ ವಿಧಾನ :

1. ಬೀಟ್ರೂಟ್ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ತುರಿಯಿರಿ

2. ಪ್ಯಾನ್ ಬಿಸಿ ಮಾಡಿ ತುಪ್ಪ ಸೇರಿಸಿ ಮತ್ತು ತುರಿದಿಟ್ಟುಕೊಂಡ ಬೀಟ್ರೂಟನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಹುರಿಯಿರಿ. ನಂತರ ಬೆಲ್ಲದ ಸಿರಪ್ ಸೇರಿಸಿ.

4.ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಕಡಿಮೆ ಉರಿಯಲ್ಲಿ ಬೇಯಿಸಿ

5.ಅಕ್ಕಿ ಪುಡಿಯನ್ನು ತೆಳುವಾದ ಹಾಲಿನೊಂದಿಗೆ ಬೆರೆಸಿ, ಅದನ್ನು ಕಡಾಯಿಗೆ ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ

6.ಇದು ಅಂಟಿಕೊಳ್ಳದ ಸ್ಥಿರತೆಯನ್ನು ತಲುಪುವವರೆಗೆ ಕಡಿಮೆ ಜ್ವಾಲೆಯ ಮೇಲೆ ಬೆರೆಸುತ್ತಾ ಇರಿ.

7.ಕೊನೆಗೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ, ಸ್ವಲ್ಪ ಏಲಕ್ಕಿ ಪುಡಿ ಉದುರಿಸಿ. ಬಿಸಿ ಬಿಸಿಯಾಗಿ ಬಡಿಸಿ

ಇದನ್ನು ಓದಿ: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ಕೂಟು ಕರಿ: ಇದು ಕೇರಳದ ಸಾಂಪ್ರದಾಯಿಕ ಶೈಲಿಯ ಅಡುಗೆಗಳಲ್ಲಿ ಒಂದಾಗಿದೆ. ಇದನ್ನು ಏಳು ತರಕಾರಿಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಅನ್ನ, ರೊಟ್ಟಿ, ದೋಸೆಯೊಮದಿಗೆ ಇದನ್ನು ಸವಿಯಬಹುದು

ಬೇಕಾಗುವ ಸಾಮಾಗ್ರಿಗಳು: ಕಪ್ಪು ಕಡಲೆ 50 ಗ್ರಾಂ, ಕೇರಳ ಬಾಳೆ ಹಣ್ಣು 25 ಗ್ರಾಂ, ಕ್ಯಾರೆಟ್ 25 ಗ್ರಾಂ, ಸೌತೆ ಕಾಯಿ 25 ಗ್ರಾಂ, ಗೆಣಸು / ಸುವರ್ಣಗೆಡ್ಡೆ 50 ಗ್ರಾಂ, ಹೂಕೋಸು 25 ಗ್ರಾಂ, ತೆಂಗಿನ ಎಣ್ಣೆ 2 ಚಮಚ, ಅರಶಿನ ಪುಡಿ 4 ಚಮಚ, ದನಿಯಾ ಪುಡಿ 4 ಚಮಚ, ಗರಂ ಮಸಾಲ 4 ಚಮಚ, ಅಚ್ಚ ಖಾರದ ಪುಡಿ 4 ಚಮಚ, ಕರಿಬೇವಿನ ಎಲೆಗಳು ಸ್ವಲ್ಪ, ತುರಿದ ತೆಂಗಿನ ಕಾಯಿ 1 ಕಪ್.

ತಯಾರಿಸುವ ವಿಧಾನ:

1. ಕಪ್ಪು ಕಡಲೆಯನ್ನು ಚೆನ್ನಾಗಿ ಬೇಯಿಸಿ ಬದಿಗಿಟ್ಟುಕೊಳ್ಳಿ

2. ತೆಂಗಿನಕಾಯಿ, ಕರಿಬೇವಿನ ಎಲೆ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಸಿನ ಪುಡಿಯನ್ನು ಒಟ್ಟಾಗಿ ಹುರಿದು ಅದು ತಣ್ಣಗಾದ ಬಳಿಕ ನಯವಾದ ಪೇಸ್ಟ್ ರೂಪಕ್ಕೆ ರುಬ್ಬುಕೊಳ್ಳಿ.

3. 1 ಟೀಸ್ಪೂನ್ ಎಣ್ಣೆಯೊಂದಿಗೆ ಬಾಣಲೆಯಲ್ಲಿ ಈರುಳ್ಳಿಯನ್ನು ಹುರಿಯಿರಿ. ನಂತರ ಎಲ್ಲಾ ತರಕಾರಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿಕೊಂಡು 5 ನಿಮಿಷಗಳ ಕಾಲ ಹುರಿಯಿರಿ.

4 .ಈಗ ಸ್ವಲ್ಪ ನೀರು ಸೇರಿಸಿ ಮುಚ್ಚಳವನ್ನು ಮುಚ್ಚಿ. ತರಕರಿಗಳು ಬೇಯುವವರೆಗೆ ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.

5. ಈಗ ಬೇಯಿಸಿದ ಕಪ್ಪು ಕಡಲೆ ಮತ್ತು ರುಬ್ಬಿಟ್ಟುಕೊಂಡ ತೆಂಗಿನಕಾಯಿ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷಗಳ ಕಾಲ ಕುದಿಸಿ.
ನಂತರ ತೆಂಗಿನ ಎಣ್ಣೆಯಲ್ಲಿ ಸಾಸಿವೆ ಮತ್ತು ಕರಿಬೇವಿ ಸೊಪ್ಪನ್ನು ಹದಗೊಳಿಸಿ ಒಗ್ಗರಣೆ ಕೊಟ್ಟು ಚೆನ್ನಾಗಿ ಬೆರೆಸಿದರೆ ಬಿಸಿಯಾದ ಕೂಟು ಕರಿ ಸವಿಯಲು ಸಿದ್ಧ.

ವೆಜಿಟೆಬಲ್ ಮೊಯ್ಲಿ: ಇದು ಕೇರಳದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿದ್ದು, ಭಾರತಿಯ ಹೋಟೆಲ್‌ಗಳ ಬಫೆಟ್ ಸಿಸ್ಟಮ್‌ನಲ್ಲಿ ಕಾಣಬಹುದು. ಇದನ್ನು ಶುಂಠಿ, ದಾಲ್ಚಿನ್ನಿ ಮತ್ತು ತೆಂಗಿನ ಹಾಲು ಹಾಗೂ ಮಸಾಲೆಗಳು, ತರಕಾರಿಯಿಂದ ತಯಾರಿಸಲಾಗುತ್ತದೆ. ಇದನ್ನು ಅಪ್ಪಮ್ ಜೊತೆಗೆ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು: ಏಲಕ್ಕಿ 2, ದಾಲ್ಚಿನ್ನಿ 1 ತುಂಡು, ಲವಂಗ 2, ಈರುಳ್ಳಿ 2, ಶುಂಠಿ 5 ಗ್ರಾಂ, ಕ್ಯಾರೆಟ್ 50 ಗ್ರಾಂ, ಬೀನ್ಸ್ 50 ಗ್ರಾಂ, ಹೂಕೋಸು 50 ಗ್ರಾಂ, ಆಲುಗಡ್ಡೆ 50 ಗ್ರಾಂ, ತೆಂಗಿನ ಹಾಲು 2 ಕಪ್, ಸ್ವಲ್ಪ ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

1. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಂಪೂರ್ಣ ಮಸಾಲೆಗಳು, ಈರುಳ್ಳಿ, ಕರಿಬೇವಿನ ಎಲೆ, ಶುಂಠಿ ಮತ್ತು ಉಪ್ಪು ಸೇರಿಸಿ ಈರುಳ್ಳಿಯು ಅರೆ ಪಾರದರ್ಶಕವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ

2. ತೆಂಗಿನ ಹಾಲಿನೊಂದಿಗೆ ಅರಶಿನ ಮತ್ತು ಮಿಶ್ರ ತರಕಾರಿಗಳನ್ನು ಸೇರಿಸಿ. ತರಕಾರಿಗಳು ಬೇಯುವವರೆಗೆ 12 ರಿಂದ 15 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.

3. ನಂತರ ಉಳಿದ ಅರ್ಧ ತೆಂಗಿನ ಹಾಲು, ನಿಂಬೆ ರಸ, ಮತ್ತು ಟೊಮೆಟೊ ಸೇರಿಸಿ, ಮೊಯ್ಲಿ ನಿಧಾನವಾಗಿ ಕುದಿ ಬರಲು ಆರಂಭಿಸಿದಾಗ ತೆಂಗಿನ ಹಾಲು ಸೇರಿಸಿ ಮತ್ತು ಗ್ಯಾಸ್ ಆಫ್ ಮಾಡಿ . ಈಗ ಬಿಸಿಯಾದ ವೆಜಿಟೆಬಲ್ ಮೊಯ್ಲಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:36 pm, Mon, 26 December 22