Live Longer: ಹೆಚ್ಚು ವರ್ಷ ಬದುಕಬೇಕೇ? ಹಾಗಾದರೆ ಮದುವೆಯಾಗಿ!

Live Longer: ಹೆಚ್ಚು ವರ್ಷ ಬದುಕಬೇಕೆ? ಹಾಗಾದರೆ ಮದುವೆಯಾಗಿ ಇದು ನಾವು ಹೇಳ್ತಿರೋದಲ್ಲ ಅಧ್ಯಯನವೊಂದು ಹೇಳಿದ್ದು. ಸಾಮಾನ್ಯವಾಗಿ ಮದುವೆ ಬಳಿಕ ಸಂಸಾರವೆಂಬ ಜಂಜಾಟದಲ್ಲಿ ಒಟ್ಟಾರೆ ಮಾನಸಿಕ ಆರೋಗ್ಯ ಹಾಳಾಗುತ್ತದೆ ಎಂದು ಹಲವರು ನಂಬಿದ್ದಾರೆ ಆದರೆ ಅಧ್ಯಯನವೊಂದರ ಪ್ರಕಾರ ಮದುವೆಯಾದವರು ಉಳಿದವರಿಗಿಂತ ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ ಎನ್ನುವ ಎಂದು ಹೇಳಿದೆ.

Live Longer: ಹೆಚ್ಚು ವರ್ಷ ಬದುಕಬೇಕೇ? ಹಾಗಾದರೆ ಮದುವೆಯಾಗಿ!
Marriage
Follow us
TV9 Web
| Updated By: ನಯನಾ ರಾಜೀವ್

Updated on:Jun 02, 2022 | 10:59 AM

ಹೆಚ್ಚು ವರ್ಷ ಬದುಕಬೇಕೆ? ಹಾಗಾದರೆ ಮದುವೆಯಾಗಿ ಇದು ನಾವು ಹೇಳ್ತಿರೋದಲ್ಲ ಅಧ್ಯಯನವೊಂದು ಹೇಳಿದ್ದು. ಸಾಮಾನ್ಯವಾಗಿ ಮದುವೆ ಬಳಿಕ ಸಂಸಾರವೆಂಬ ಜಂಜಾಟದಲ್ಲಿ ಒಟ್ಟಾರೆ ಮಾನಸಿಕ ಆರೋಗ್ಯ ಹಾಳಾಗುತ್ತದೆ ಎಂದು ಹಲವರು ಹೇಳ್ತಾರೆ, ಆದರೆ ಅಧ್ಯಯನವೊಂದರ ಪ್ರಕಾರ ಮದುವೆಯಾದವರು ಉಳಿದವರಿಗಿಂತ ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ .

ಜಾಮಾ ನೆಟ್​ವರ್ಕ್​ ಜರ್ನಲ್​ನಲ್ಲಿ ಪ್ರಕಟವಾದ ವರದಿ ಪ್ರಕಾರ ಮದುವೆಯಾಗದವರು ಹಾಗೂ ಮದುವೆಯಾದವರನ್ನು ಹೋಲಿಕೆ ಮಾಡಿದಾಗ ವಿವಾಹಿತರು ಹೃದಯ ಸಂಬಂಧಿ ಕಾಯಿಲೆ, ಅಪಘಾತ ಸೇರಿದಂತೆ ಇತರೆ ಕಾರಣಗಳಿಂದ ಸಾವನ್ನಪ್ಪುವ ಪ್ರಮಾಣ ಶೇ. 15ರಷ್ಟು ಕಡಿಮೆ ಇದೆ ಎಂಬುದು ತಿಳಿದುಬಂದಿದೆ.

ಮದುವೆಯಾದ ಮೇಲೆ ಸ್ವಾತಂತ್ರ್ಯ ಹೋಯ್ತು, ಹೆಚ್ಚೊತ್ತು ಹೊರಗಡೆ ಇರೋಹಾಗಿಲ್ಲ, ಮನೆಗೆ ಬೇಗ ಹೋಗ್ಬೇಕು ಅಂತೆಲ್ಲಾ ಬಡಬಡಿಸಿದರೂ ಅದರಿಂದ ಎಷ್ಟು ಅನುಕೂಲವಿದೆ ಗೊತ್ತೇ.

ಅವಿವಾಹಿತರಿಗೆ ಒಂಟಿತನ ಹೆಚ್ಚು ಕಾಡುತ್ತಿರುತ್ತದೆ. ಹಾಗೆಯೇ ಧೂಮಪಾನ, ಮದ್ಯಪಾನ ರೀತಿಯ ದುಶ್ಚಟಗಳಿಗೆ ದಾಸರಾಗಿರುತ್ತಾರೆ. ಆರೋಗ್ಯವನ್ನು ಹದಗೆಡಿಸಿಕೊಂಡಿರುತ್ತಾರೆ. ಹಲವು ರೋಗಗಳಿಗೆ ತುತ್ತಾಗಿ ಜೀವನವನ್ನು ಅಂತ್ಯಗೊಳಿಸುತ್ತಾರೆ.

ಅಧ್ಯಯನವು 623,140 ಮಂದಿಯನ್ನು ಒಳಗೊಂಡಿತ್ತು, ಎಲ್ಲರೂ 54 ವರ್ಷ ಆಸುಪಾಸಿನವರಾಗಿದ್ದರು. ಅದರಲ್ಲಿ ಶೇ.86.4ರಷ್ಟು ಮಂದಿ ವಿವಾಹಿತರಾಗಿದ್ದರು. ಅದರಲ್ಲಿ ವಿವಾಹಿತರು, ವಿಚ್ಛೇದಿತರು, ವಿಧವೆಯರು ಇದ್ದರು.

15 ವರ್ಷಗಳಲ್ಲಿ ಒಟ್ಟು 123,264 ಮಂದಿ ಮೃತಪಟ್ಟವರಲ್ಲಿ ಕ್ಯಾನ್ಸರ್​ನಿಂದ 41,362 ಮಂದಿ ಕ್ಯಾನ್ಸರ್​ನಿಂದ, 13,583 ಮಂದಿ ಉಸಿರಾಟದ ತೊಂದರೆಯಿಂದ, 14,563 ಮಂದಿ ಮಾನಸಿಕ ಕಾಯಿಲೆಗಳಿಂದ ಮೃತಪಟ್ಟವರಾಗಿದ್ದಾರೆ.

ಅವಿವಾಹಿತರಲ್ಲಿ ಶೇ.12 ರಷ್ಟು ಮಂದಿ ಮಾನಸಿಕ ಕಾಯಿಲೆ, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಹಾಗೆಯೇ ಶೇ.19ರಷ್ಟು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ.

ಕಾರಣವೇನು? -ವಿವಾಹಿತರು ಜವಾಬ್ದಾರಿಯುತರಾಗಿ ವರ್ತಿಸುತ್ತಾರೆ

-ಏನೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವೈದ್ಯರನ್ನು ಸಂಪರ್ಕಿಸುತ್ತಾರೆ

-ವಿವಾಹದ ಬಳಿಕ ಆರೋಗ್ಯಕರ ಜೀವನ ಶೈಲಿ ರೂಪುಗೊಳ್ಳುತ್ತದೆ

-ವಾಹನಗಳನ್ನು ಓಡಿಸುವಾಗ ಜಾಗ್ರತೆಯಿಂದಿರುತ್ತಾರೆ

-2010ರ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಖಿನ್ನತೆ, ಒತ್ತಡದಿಂದ ಬಳಲುತ್ತಿರುವವರಲ್ಲಿ ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು, ವಿವಾಹಿತರು ಏನೇ ಸಮಸ್ಯೆಗಳಿದ್ದರೂ ತಮ್ಮ ಸಂಗಾತಿ ಬಳಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.

ಹೆಚ್ಚು ವರ್ಷ ಬದುಕಲು ಇಲ್ಲಿವೆ ಕೆಲವು ಸಲಹೆಗಳು

ತೂಕ: ಆರೋಗ್ಯವಂತರಾಗಿರಬೇಕು ಎಂದರೆ ಮೊದಲು ನಿಮ್ಮ ತೂಕದ ಬಗ್ಗೆ ಗಮನ ಹರಿಸಿ. ತೂಕ ಹೆಚ್ಚಳವಾದ್ರೆ ಆರೋಗ್ಯ ಸಮಸ್ಯೆಗಳು ಒಂದರ ಮೇಲೊಂದು ಕಾಡುತ್ತವೆ. ನಿಮ್ಮ ಆಹಾರದ ಮೇಲೆ ಗಮನವಿರಲಿ. ವ್ಯಾಯಾಮ, ಆಹಾರದ ಮೂಲಕ ನಿಮ್ಮ ಎತ್ತರಕ್ಕೆ ತಕ್ಕ ತೂಕ ನಿಭಾಯಿಸಿ.

ಜನರೊಂದಿಗೆ ಬೆರೆಯಿರಿ: ಪ್ರೀತಿಸುವ ಜನರ ನಡುವೆ ಇದ್ದಾಗ ಜನರು ಹೆಚ್ಚು ವರ್ಷ ಬದುಕುತ್ತಾರಂತೆ. ನಿಮ್ಮ ಸುತ್ತಲೂ ಧನಾತ್ಮಕ ಮನಸ್ಥಿತಿ ಇರುವ ಜನರ ಸಂಪರ್ಕ ಇಟ್ಟುಕೊಳ್ಳಿ. ಹೆಚ್ಚು ಹೆಚ್ಚು ಜನರ ನಡುವೆ ಇದ್ದಷ್ಟೂ ಹೆಚ್ಚು ಆರೋಗ್ಯಕರವಾಗಿರುತ್ತದೆ ಮನಸ್ಸು ಹಾಗೂ ದೇಹ. ಒಂಟಿತನದ ಮಾನಸಿಕ ಸಮಸ್ಯೆಗಳು ಕಾಡುವುದಿಲ್ಲ. ಮಾತು, ನಗು, ಹರಟೆಯು ಮಾನಸಿಕ ಆರೋಗ್ಯ ಕಾಪಾಡುತ್ತದೆ. ಈ ಜನರ ಸ್ನೇಹ ಮಾಡುವಾಗ ಅವರು ಸಜ್ಜನರೇ ಆಗಿರಬೇಕು ಎಂಬುದು ಗಮನದಲ್ಲಿರಲಿ.

ಪ್ರತಿ ದಿನ ವ್ಯಾಯಾಮ: ದಿನ ತಲೆಮಾರಿನ ಬಹುತೇಕರು ಲ್ಯಾಪ್ಟಾಪ್ ಮುಂದೆ ಕುಳಿತು ಸಮಯ ಕಳೆಯುತ್ತಾರೆ. ಇದಕ್ಕೆ ಮಕ್ಕಳೂ ಹೊರತಲ್ಲ. ಆದರೆ, ದೇಹಕ್ಕೆ ವ್ಯಾಯಾಮವಿಲ್ಲದಿದ್ದರೆ ಅದು ಹೆಚ್ಚು ವರ್ಷಗಳ ಕಾಲ ನಮಗೆ ಸಾಥ್ ನೀಡುವುದಿಲ್ಲ. ಹೆಚ್ಚು ವರ್ಷ ಆರೋಗ್ಯವಂತರಾಗಿ ಬದುಕಬೇಕು ಎಂದರೆ, ಹೇಗೋ ಸಮಯ ಹೊಂದಿಸಿಕೊಂಡು ವ್ಯಾಯಾಮ, ಯೋಗ, ಪ್ರಾಣಾಯಾಮ, ನೃತ್ಯ, ಕ್ರೀಡೆ- ಇವುಗಳಲ್ಲಿ ಯಾವುದರಲ್ಲಾದರೂ ತೊಡಗಿಸಿಕೊಳ್ಳಲೇಬೇಕು. ಇದರಿಂದ ಹೃದಯ, ಮನಸ್ಸು, ಸ್ನಾಯುಗಳು ದೇಹ ಎಲ್ಲವೂ ಫಿಟ್ ಆಗಿರುತ್ತದೆ. ವಾಕಿಂಗ್ ಕೂಡಾ ಒಳ್ಳೆಯದೇ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಅಧ್ಯಯನದ ಸಾರವನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Thu, 2 June 22

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!