
ಬಹುತೇಕ ಹೆಚ್ಚಿನ ಮನೆಗಳಲ್ಲಿ ಜಿರಳೆಗಳ (cockroaches) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಅಡುಗೆಮನೆಯಲ್ಲಿ ಅವುಗಳ ಹಾವಳಿ ತುಸು ಹೆಚ್ಚೇ ಇರುತ್ತದೆ. ಇವು ನೋಡಲು ಸಾಮಾನ್ಯ ಎನಿಸಿದರೂ ಇವುಗಳು ರೋಗಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಜಿರಳೆಗಳನ್ನು ಓಡಿಸಲು ಹಲವರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದ್ರೆ ಇವುಗಳು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಕ್ಕರೆಯೊಂದಿಗೆ ಒಂದು ವಸ್ತುವನ್ನು ಬೆರೆಸಿ ಮನೆಯ ಮೂಲೆ ಮೂಲೆಗಳಲ್ಲಿ ಹರಡಿದ ಸಾಕು ಜಿರಳೆಗಳ ಕಾಟದಿಂದ ಸುಲಭವಾಗಿ, ಶಾಶ್ವತವಾಗಿ ಮುಕ್ತಿ ಪಡೆಯಬಹುದು ಎಂದು ಸೆಲೆಬ್ರಿಟಿ ಮಾಸ್ಟರ್‌ಚೆಫ್ ಪಂಕಜ್ ಬಧೋರಿಯಾ ಟಿಪ್ಸ್ ನೀಡಿದ್ದಾರೆ. ಸಕ್ಕರೆ ಜಿರಳೆಯನ್ನು ಓಡಿಸಲು ಹೇಗೆ ಪರಿಣಾಮಕಾರಿ ಎಂಬುದನ್ನು ತಿಳಿಯಿರಿ.
ಸೆಲೆಬ್ರಿಟಿ ಮಾಸ್ಟರ್‌ಚೆಫ್ ಪಂಕಜ್ ಬಧೋರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಿರಳೆಗಳನ್ನು ಓಡಿಸಲು ಪರಿಣಾಮಕಾರಿ ಮನೆ ಮದ್ದಿನ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಸಕ್ಕರೆ ಪುಡಿಗೆ ಬೋರಿಕ್ ಆಸಿಡ್ ಪೌಡರ್ ಅಥವಾ ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಮನೆಯ ಮೂಲೆ ಮೂಲೆಗಳಲ್ಲಿ ಹರಡಿದರೆ ಸಾಕು. ಸಕ್ಕರೆಯ ವಾಸನೆಗೆ ಇದರತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.
ಇದಕ್ಕಾಗಿ, ಎರಡು ಚಮಚ ಸಕ್ಕರೆ ಪುಡಿಯ ಜೊತೆಗೆ ಎರಡು ಚಮಚ ಬೋರಿಕ್ ಪೌಡರ್ ಸೇರಿಸಿ, ಚೆನ್ನಾಗಿ ಬೆರೆಸಿ, ಈ ಮಿಶ್ರಣವನ್ನು ಜಿರಳೆಗಳು ಹೆಚ್ಚಾಗಿ ಓಡಾಡುವ ಅಡುಗೆಮನೆಯ ಕೌಂಟರ್‌ಗಳು, ಅಡುಗೆಮನೆಯ ಸಿಂಕ್ ಬಳಿ ಮತ್ತು ಸ್ನಾನಗೃಹದ ಸಿಂಕ್ ಮೇಲೆ ಸಿಂಪಡಿಸಿ. ಜಿರಳೆಗಳು ಸಕ್ಕರೆಗೆ ಆಕರ್ಷಿತವಾಗುತ್ತವೆ ಮತ್ತು ಅದನ್ನು ತಿನ್ನುತ್ತವೆ. ಇದರಲ್ಲಿರುವ ಬೋರಿಕ್ ಪೌಡರ್ ಮಿಶ್ರಣ ಜಿರಳೆಗಳನ್ನು ಸುಲಭವಾಗಿ ಕೊಲ್ಲುತ್ತದೆ.
ಇದನ್ನೂ ಓದಿ: ಟಾಯ್ಲೆಟ್ ಕಮೋಡ್‌ನಲ್ಲಿ ಅಂಟಿರುವ ಗಾಢ ಕಲೆಯನ್ನು ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯೇ ಸಾಕು
ಅಡುಗೆ ಸೋಡಾ ಮತ್ತು ಸಕ್ಕರೆ ಪುಡಿಯು ಸಹ ಜಿರಳೆಗಳನ್ನು ಓಡಿಸಲು ಪರಿಣಾಮಕಾರಿ. ಇದಕ್ಕಾಗಿ ಒಂದು ಚಮಚ ಅಡುಗೆ ಸೋಡಾಕ್ಕೆ ಅಷ್ಟೇ ಪ್ರಮಾಣದ ಸಕ್ಕರೆ ಪುಡಿಯನ್ನು ಮಿಶ್ರಣ ಮಾಡಿ, ಜಿರಳೆಗಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ. ಈ ಮೂಲಕ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ