ಟಾಯ್ಲೆಟ್ ಸೀಟ್‌ಗಿಂತಲೂ ಹೆಚ್ಚು ಕೊಳಕಾಗಿರುವ ವಸ್ತುಗಳಿವು, ಇವುಗಳ ಸ್ವಚ್ಛತೆಯ ಬಗ್ಗೆ ಇರಲಿ ಗಮನ
ಶೌಚಾಲಯ ಮತ್ತು ಶೌಚಾಲಯ ಸೀಟ್‌ಗಳು ಕೊಳಕಾಗಿರುವಷ್ಟು, ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಕುಳಿತುಕೊಳ್ಳುವಷ್ಟು ಬೇರೆ ಯಾವ ವಸ್ತುಗಳೂ ಕೊಳಕಾಗಿರಲು ಸಾಧ್ಯವೇ ಇಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಶೌಚಾಲಯಕ್ಕಿಂತ ನಾವು ದಿನನಿತ್ಯ ಬಳಕೆ ಮಾಡುವ ಈ ವಸ್ತುಗಳೇ ಹೆಚ್ಚು ಕೊಳಕಾಗಿರುತ್ತಂತೆ. ಅವುಗಳ ಸ್ವಚ್ಛತೆಯ ಬಗ್ಗೆ ನೀವು ತುಸು ಹೆಚ್ಚೇ ಕಾಳಜಿಯನ್ನು ವಹಿಸಬೇಕು.

ಶೌಚಾಲಯ (toilet) ತುಂಬಾ ಕೊಳಕಾಗಿರುತ್ತವೆ, ಅಲ್ಲಿ ತುಂಬಾನೇ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಆದ್ದರಿಂದ ಪ್ರತಿನಿತ್ಯ ಟಾಯ್ಲೆಟ್ ಕ್ಲೀನ್ ಮಾಡ್ಬೇಕು ಎಂದು ಸಲಹೆ ನೀಡಲಾಗುತ್ತದೆ. ಆದ್ರೆ ಏನು ಗೊತ್ತಾ ಶೌಚಾಲಯಕ್ಕಿಂತಲೂ ಈ ಒಂದಷ್ಟು ಗೃಹಪಯೋಗಿ ವಸ್ತುಗಳು ಸಿಕ್ಕಾಪಟ್ಟೆ ಕೊಳಕಾಗಿರುತ್ತಂತೆ. ಇವುಗಳ ಬಗ್ಗೆ ಸ್ವಚ್ಛತೆಯ ಬಗ್ಗೆ ಆದಷ್ಟು ಗಮನಹರಿಸಬೇಕು, ಇಲ್ಲದಿದ್ದರೆ ಈ ವಸ್ತುಗಳಲ್ಲಿ ಸೇರಿಕೊಳ್ಳುವ ಕಾಣದ ಬ್ಯಾಕ್ಟೀರಿಯಾಗಳಿಂದ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವ ಗೃಹೋಪಯೋಗಿ ವಸ್ತುಗಳು ಯಾವುವು ಎಂಬುದನ್ನು ನೋಡೋಣ.
ಟಾಯ್ಲೆಟ್ ಸೀಟ್‌ಗಿಂತ ಕೊಳಕಾಗಿರುವ ವಸ್ತುಗಳಿವು:
ಮೊಬೈಲ್ ಫೋನ್‌ಗಳು: ನಾವು ಒಂದು ಕ್ಷಣವೂ ಬಿಟ್ಟಿರದ ಸ್ಮಾರ್ಟ್‌ಫೋನ್‌ನಲ್ಲಿ ಟಾಯ್ಲೆಟ್ ಸೀಟ್‌ಗಿಂತಲೂ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವಂತೆ. ಆದ್ದರಿಂದ ಪ್ರತಿದಿನ ಮೈಕ್ರೋಫೈಬರ್ ಬಟ್ಟೆಗಳು, ಆಲ್ಕೋಹಾಲ್ ಆಧಾರಿತ ವೈಪ್‌ಗಳಿಂದ ಸ್ಕ್ರೀನ್ ಮತ್ತು ಕವರ್ ಅನ್ನು ಸ್ವಚ್ಛಗೊಳಿಸಿ.
ಟಿವಿ ರಿಮೋಟ್: ಆಗಾಗ್ಗೆ ಸ್ಪರ್ಷಿಸುವ ರಿಮೋಟ್ ಅದು ಟಾಯ್ಲೆಟ್ ಸೀಟ್‌ಗಿಂತ 15 ಪಟ್ಟು ಹೆಚ್ಚು ಕೊಳಕಾಗಿರುತ್ತವಂತೆ. ಆದ್ದರಿಂದ ಪ್ರತಿನಿತ್ಯ ಇದರ ಸ್ವಚ್ಛತೆಯ ಬಗ್ಗೆ ಗಮನ ವಹಿಸಿ.
ನೀರಿನ ಬಾಟಲ್: ಬಾಟಲಿಯೊಳಗಿನ ತೇವಾಂಶವುಳ್ಳ ವಾತಾವರಣ ಬ್ಯಾಕ್ಟೀರಿಯಾ ಬೆಳೆಯಲು ಕಾರಣ. ಆದ್ದರಿಂದ ನಿಯಮಿತವಾಗಿ ಬಾಟಲ್ ಕ್ಲೀನ್ ಮಾಡದಿದ್ದರೆ ಇದು ಹೊಟ್ಟೆ ಮತ್ತು ಕರುಳಿನ ಕಾಯಿಲೆಗೆ ಕಾರಣವಾಗಬಹುದು.
ಇದನ್ನೂ ಓದಿ: ಟಾಯ್ಲೆಟ್ ಕಮೋಡ್‌ನಲ್ಲಿ ಅಂಟಿರುವ ಗಾಢ ಕಲೆಯನ್ನು ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯೇ ಸಾಕು
ದಿಂಬಿನ ಕವರ್‌ಗಳು: ದಿಂಬಿನ ಹೊದಿಕೆಗಳು ನೆತ್ತಿಯ ಎಣ್ಣೆ, ಬೆವರು ಮತ್ತು ಧೂಳನ್ನು ಸಂಗ್ರಹಿಸುತ್ತವೆ, ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಆದ್ದರಿಂದ ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
ಕಿಚನ್ ಸ್ಪಾಂಜ್: ಪಾತ್ರೆ ಸ್ವಚ್ಛಗೊಳಿಸಲು ಬಳಸುವ ಸ್ಪಾಂಜ್ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಸ್ಪಾಂಜ್ ಅನ್ನು ಬದಲಾಯಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Mon, 24 November 25




