
ಈ ಬಿರು ಬೇಸಿಗೆಯಲ್ಲಿನ ಬಿಸಿ ತಾಪಮಾನದಿಂದ ಶೆಕೆಯ ಜೊತೆ ಜೊತೆಗೆ ದೇಹದಲ್ಲಿ ನಿರ್ಜಲೀಕರಣ (dehydration), ಆಯಾಸದಂತಹ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತದೆ. ಹೌದು ಶೆಕೆಯಿಂದಾಗಿ ದೇಹ ಹೆಚ್ಚು ಬೆವರುವ ಕಾರಣ, ಮೈಯಿಂದ ಬೆವರು ಹರಿದು ಹೋದಷ್ಟು ನಮ್ಮ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಇದನ್ನು ಸರಿದೂಗಿಸಲು ನೀರನ್ನು ಕುಡಿಯುವುದು ಅತ್ಯಗತ್ಯ. ಇಲ್ಲದಿದ್ದರೆ ನಿರ್ಜಲೀಕರಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುವ ಕಾರಣ ಕೆಲವರು ಜ್ಯೂಸ್, ಎಳನೀರು, ತಂಪು ಪಾನೀಯಗಳನ್ನು ಕುಡಿದ್ರೆ, ಇನ್ನೂ ಕೆಲವರು ದಾಹ ತೀರಿಸಿಲು ಫ್ರಿಡ್ಜ್‌ನಲ್ಲಿರುವ ಕೋಲ್ಡ್ ನೀರನ್ನೇ ಗಟಗಟನೇ ಕುಡಿಯುತ್ತಾರೆ. ಈ ಕೋಲ್ಡ್ ನೀರು ಕುಡಿಯುವುದರಿಂದ ದೇಹದ ಜಲಸಂಚಯನವನ್ನು ಕಾಪಾಡಿಕೊಳ್ಳಬಹುದೇ? ಬಿಸಿ ನೀರು ಅಥವಾ ಕೋಲ್ಡ್ ನೀರು ಈ ಬೇಸಿಗೆಯಲ್ಲಿ ಯಾವ ನೀರು ಕುಡಿದರೆ ಸೂಕ್ತ ಎಂಬುದನ್ನು ಕಂಟೆಂಟ್ ಕ್ರಿಯೆಟರ್ ಸಯ್ಯದ್ ಶಾಯನ್ (Sayyaad Shayan) ಒಂದು ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದಾರೆ.
ಈ ಸುಡು ಬೇಸಿಗೆಯಲ್ಲಿ ಕೋಣೆಯ ತಾಪಮಾನ ಅಥವಾ ಬಿಸಿ ನೀರಿನ ಬದಲಾಗಿ ಜನರು ಹೆಚ್ಚಾಗಿ ಫ್ರಿಡ್ಜ್‌ನಲ್ಲಿರುವ ಕೋಲ್ಡ್ ನೀರನ್ನೇ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಈ ಬಿರು ಬೇಸಿಗೆಯಲ್ಲಿ ಕೋಲ್ಡ್ ನೀರು ನೀರು ಕುಡಿಯುವುದು ಅಷ್ಟು ಸೂಕ್ತವಲ್ಲ. ಯಾಕಂದ್ರೆ ಈ ಸಮಯದಲ್ಲಿ ದೇಹ ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುವುದರಿಂದ ಕೋಲ್ಡ್ ನೀರು ಕುಡಿದರೆ ಅದು ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಅದೇ ಬಿಸಿ ಅಥವಾ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯುವುದರಿಂದ ದೇಹ ಬೇಗ ಹೈಡ್ರೇಟ್ ಆಗುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ಕೋಲ್ಡ್ ನೀರು ಬದಲು ಬಿಸಿ ಅಥವಾ ಕೋಣೆ ಉಷ್ಣಾಂಶದ ನೀರು ಕುಡಿಯುವುದೇ ಉತ್ತಮ. ಕಂಟೆಂಟ್ ಕ್ರಿಯೆಟರ್ ಸಯ್ಯದ್ ಶಾಯನ್ ಈ ಮಾಹಿತಿಯನ್ನು ಪ್ರಯೋಗದ ಮೂಲಕ ತಿಳಿಸಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿಹಿ ತಿಂಡಿಯಿಂದ ರೇಷ್ಮೆ ಸೀರೆಗಳವರೆಗೆ : ಕರ್ನಾಟಕದ ಈ ಜಿಲ್ಲೆಗಳು ಈ ಕಾರಣಕ್ಕೆ ಫೇಮಸ್ ನೋಡಿ
ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ