Relationship:ಪ್ರೀತಿ, ಮದುವೆ, ಸಂಬಂಧದ ಬಗ್ಗೆ ಹೊಸ ಸಮೀಕ್ಷೆ ಏನು ಹೇಳುತ್ತೆ?
ಪ್ರೀತಿ, ಮದುವೆ ಎಂಬುದು ಜೀವನದ ಅತ್ಯಮೂಲ್ಯ ವಿಷಯವಾಗಿದೆ. ಹಾಗೆಯೇ ಮದುವೆಯು ಎರಡು ಮನಸ್ಸನ್ನು ಬೆಸೆಯುವುದು ಮಾತ್ರವಲ್ಲದೆ ಎರಡು ಕುಟುಂಬದವರನ್ನೂ ಒಟ್ಟುಗೂಡಿಸುತ್ತದೆ.
ಪ್ರೀತಿ, ಮದುವೆ ಎಂಬುದು ಜೀವನದ ಅತ್ಯಮೂಲ್ಯ ವಿಷಯವಾಗಿದೆ. ಹಾಗೆಯೇ ಮದುವೆಯು ಎರಡು ಮನಸ್ಸನ್ನು ಬೆಸೆಯುವುದು ಮಾತ್ರವಲ್ಲದೆ ಎರಡು ಕುಟುಂಬದವರನ್ನೂ ಒಟ್ಟುಗೂಡಿಸುತ್ತದೆ. ಹೆಣ್ಣಾಗಿರಲಿ, ಗಂಡಾಗಿರಲಿ ಮಕ್ಕಳು ಹರೆಯಕ್ಕೆ ಬರುತ್ತಿದ್ದಂತೆಯೇ ಪ್ರತಿಯೊಬ್ಬರ ಮನೆಯಲ್ಲಿ ಆಲೋಚಿಸುವಂತಹ ವಿಷಯ ಇದಾಗಿದೆ. ಆದರೆ ಈಗ ಕಾಲ ಬದಲಾಗಿದೆ. ಒಂಟಿಯಾಗಿಯೋ ಅಥವಾ ಲಿವಿಂಗ್ ರಿಲೇಷನ್ಶಿಪ್ನಲ್ಲಿ ಇರುವವರ ಸಂಖ್ಯೆ ಹೆಚ್ಚುತ್ತಿದೆ.
ಮದುವೆಯೇ ಜೀವನದ ಮೈಲಿಗಲ್ಲು ಅಲ್ಲ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಭಾರತದಲ್ಲಿ ಮದುವೆ ವಿಶೇಷ ಸ್ಥಾನಮಾನ ಪಡೆದಿದ್ದು, ಮಹಾ ಸಂಭ್ರಮದ ವಿಶೇಷ ಘಟ್ಟವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಒಂದು ಮೈಲಿಗಲ್ಲು. ಆದರೆ ಈಗ ಕಾಲಕ್ರಮೇಣ ಜನರ ಮನಸ್ಸು ಬದಲಾಗುತ್ತಿದೆ, ಯಾರಿಗೂ ಮದುವೆ ಎಂಬ ಬಂಧ, ಜವಾಬ್ದಾರಿ ಇವೆಲ್ಲವೂ ಬೇಡವಾಗಿದೆ.
ಹಣಕಾಸಿನ ಯೋಗಕ್ಷೇಮ ಒಂದು ಸಾರಿ ಕೌಟುಂಬಿಕ ಜೀವನ ಪ್ರಾರಂಭಿಸಿದ ನಂತರದಲ್ಲಿ ಹಣದ ಬಗ್ಗೆ ನಿಮ್ಮ ವೈಯಕ್ತಿಕ ದೃಷ್ಟಿಕೋನ ಮತ್ತು ಧೋರಣೆ ದಂಪತಿ ಹಣಕಾಸಿನ ಯೋಗಕ್ಷೇಮಕ್ಕೆ ಭದ್ರ ಅಡಿಪಾಯ ಹಾಕಲು ಸಹಕರಿಸುತ್ತದೆ.
ಹೀಗಾಗಿ ಜನರು ಈ ಜಂಜಾಟಕ್ಕೆ ಇಳಿಯುವುದೇ ಇಲ್ಲ, ಯಾವುದೇ ಕಮಿಟ್ಮೆಂಟ್ಗಳಿಲ್ಲದ ರಿಲೇಷನ್ಶಿಪ್ನಲ್ಲಿ ಶೇ.80ರಷ್ಟು ಮಂದಿ ಇರಲು ಇಷ್ಟಪಡುತ್ತಾರೆ. ಮದುವೆ, ಮಕ್ಕಳು, ಕುಟುಂಬವೆಂಬ ಜಂಜಾಟವಿಲ್ಲ, ಅವರಿಗೆ ಇಷ್ಟಬಂದಂತೆ ಇರಬಹುದು ಎಂಬುದು ಯುವಕರ ಮನಸ್ಸಿನಲ್ಲಿರುವ ಭಾವನೆಯಾಗಿದೆ. ಕೇವಲ 65ರಷ್ಟು ಮಂದಿ ಮಾತ್ರ ಮದುವೆಯಾಗಲು ಇಷ್ಟಪಡುತ್ತಾರೆ ಎಂಬುದು ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ.
ಅವರಲ್ಲಿ ಹೆಚ್ಚಿನವರು ಮದುವೆಯು ಕೇವಲ ಲೇಬಲ್ ಎಂದು ನಂಬುತ್ತಾರೆ ಮತ್ತು ಅವರು ಲೇಬಲ್‌ಗಿಂತ ಬದ್ಧತೆ ಮತ್ತು ಆರೋಗ್ಯಕರ ಸಂಬಂಧವನ್ನು ಹೆಚ್ಚು ಗೌರವಿಸುತ್ತಾರೆ. ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮದುವೆಯು ತಮ್ಮ ಮನಸ್ಸನ್ನು ಬದಲಾಯಿಸುತ್ತದೆ ಎಂದು ನಂಬಿದ್ದಾರೆ.
ಮದುವೆಯ ನಂತರ, ಎಲ್ಲಾ ಅಧಿಕೃತ ದಾಖಲೆಗಳಲ್ಲಿ ತಮ್ಮ ಸರ್ನೇಮ್ ಬದಲಾಯಿಸುವುದು, ಅವರ ಜನ್ಮಸ್ಥಳವನ್ನು ಬಿಟ್ಟುಕೊಡುವುದು, ಗಂಡನ ಮನೆಯನ್ನು ಅವರದು ಎಂದು ಪರಿಗಣಿಸುವುದು ಇತರೆ ವಿಷಯಗಳು ಎಲ್ಲಾ ಹೆಣ್ಣುಮಕ್ಕಳಿಗೂ ಇಷ್ಟವಾಗುವುದಿಲ್ಲ. ಹೀಗಾಗಿ ಮದುವೆಯಾಗದೆ ಉಳಿಯುವುದಕ್ಕೆ ಇಷ್ಟಪಡುತ್ತಾರೆ.
ಶೇ.30ರಷ್ಟು ಮಂದಿ ತಾವು ಇಷ್ಟ ಪಟ್ಟ ಸಂಗಾತಿಯೊಂದಿಗೆ ಮದುವೆಯಾದೇ ದೀರ್ಘಕಾಲ ಇರಲು ಇಷ್ಟಪಡುತ್ತಾರೆ. ಸಂಬಂಧ ತುಂಬಾ ವರ್ಷಗಳ ಕಾಲ ಉತ್ತಮವಾಗಿದ್ದರೆ, ಅದರಲ್ಲಿ ಶೇ.5ರಷ್ಟು ಮಂದಿ ಮಾತ್ರ ಮಗುವನ್ನು ಪಡೆಯಲು ಅಥವಾ ದತ್ತು ತೆಗೆದುಕೊಳ್ಳುವ ಆಲೋಚನೆ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ