ಹೊಳೆಯುವ ತ್ವಚೆ ಬೇಕಾ? ತಮನ್ನಾ ಭಾಟಿಯಾ ಹೇಳಿದ ಬ್ಯೂಟಿ ಸೀಕ್ರೆಟ್ ಇಲ್ಲಿದೆ

ಟಾಲಿವುಡ್ ನಟಿ ತಮನ್ನಾ ಭಾಟಿಯಾಗೆ ಮಿಲ್ಕಿ ಬ್ಯೂಟಿ ಎಂದೇ ಹೆಸರು. ಬಿಳಿಯಾದ ಹೊಳೆಯುವ ತ್ವಚೆ ಹೊಂದಿರುವ ತಮನ್ನಾ ಭಾಟಿಯಾ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಇವರು ತ್ವಚೆಗೆ ಯಾವ ಸೌಂದರ್ಯ ಉತ್ಪನ್ನವನ್ನು ಬಳಸುತ್ತಾರೆ ಎಂದು ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ತಮನ್ನಾ ತಮ್ಮ ತ್ವಚೆಯ ಕಾಳಜಿಗೆ ಮನೆಯಲ್ಲೇ ತಯಾರಿಸುವ ಫೇಸ್​ ಮಾಸ್ಕ್ ಬಗ್ಗೆ ಹೇಳಿದ್ದಾರೆ.

ಹೊಳೆಯುವ ತ್ವಚೆ ಬೇಕಾ? ತಮನ್ನಾ ಭಾಟಿಯಾ ಹೇಳಿದ ಬ್ಯೂಟಿ ಸೀಕ್ರೆಟ್ ಇಲ್ಲಿದೆ
ತಮನ್ನಾ ಭಾಟಿಯಾ
Image Credit source: iStock

Updated on: Jan 24, 2024 | 7:03 PM

ತಮನ್ನಾ ಭಾಟಿಯಾ ಯಾವಾಗಲೂ ತಮ್ಮ ತ್ವಚೆಯನ್ನು ಮೃದುವಾಗಿಡಲು ಮತ್ತು ಮೈಬಣ್ಣವನ್ನು ಹೊಳೆಯುವಂತೆ ಮಾಡಲು ಆದಷ್ಟೂ ನೈಸರ್ಗಿಕ ಉತ್ಪನ್ನಗಳನ್ನು ಹೆಚ್ಚು ಇಷ್ಟಪಡುತ್ತಾರೆ. ತಮನ್ನಾ ಭಾಟಿಯಾ ರೀತಿಯ ಸ್ವಚ್ಛ, ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಯಾವ ರೀತಿಯ ಫೇಸ್​ಪ್ಯಾಕ್ ಮಾಡಿಕೊಳ್ಳಬೇಕೆಂದು ತಮನ್ನಾ ಅವರೇ ಟಿಪ್ಸ್​ ಕೊಟ್ಟಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ತಮನ್ನಾ ಭಾಟಿಯಾ ತನ್ನ ಹೋಮ್‌ಮೇಡ್ ಫೇಸ್ ಸ್ಕ್ರಬ್ ಸೀಕ್ರೆಟ್​ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳುವ ಈ ಫೇಸ್​ ಸ್ಕ್ರಬ್ ಚರ್ಮದ ರಂಧ್ರಗಳನ್ನು ತೆರವುಗೊಳಿಸಿ, ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ. ಹಾಗಾದರೆ, ಈ ಫೇಸ್​ ಸ್ಕ್ರಬ್ ತಯಾರಿಸುವುದು ಹೇಗೆ?

ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್‌ನೆಸ್ ರಹಸ್ಯವೇನು?

ಒಂದು ಚಮಚ ಶ್ರೀಗಂಧದ ಪುಡಿ ಮತ್ತು ಸ್ವಲ್ಪ ಕಾಫಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ, ಚೆನ್ನಾಗಿ ಪೇಸ್ಟ್​ ಮಾಡಿಕೊಳ್ಳಿ. ನೀವು ಒಣ ಚರ್ಮವನ್ನು ಹೊಂದಿದ್ದರೆ, ನೀವು ಸ್ವಲ್ಪ ಹೆಚ್ಚು ಜೇನುತುಪ್ಪವನ್ನು ಸೇರಿಸಬಹುದು. ನಿಮ್ಮ ಚರ್ಮದ ಅಗತ್ಯಗಳನ್ನು ಪೂರೈಸಲು ಈ ಸ್ಕ್ರಬ್ ಜೊತೆ ಬೇರೆ ಪದಾರ್ಥಗಳನ್ನು ಬೇಕಾದರೂ ಸೇರಿಸಿಕೊಳ್ಳಬಹುದು. ಈ ಫೇಸ್​ ಸ್ಕ್ರಬ್ ಹಚ್ಚಿಕೊಂಡು 10 ನಿಮಿಷಗಳ ಬಳಿಕ ಮಸಾಜ್ ಮಾಡುತ್ತಾ ಮುಖವನ್ನು ತೊಳೆದುಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Wed, 24 January 24