AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep: ಹವಾಮಾನವು ನಿಮ್ಮ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ನೀವು ಉತ್ತಮವಾಗಿ ನಿದ್ರಿಸಲು ಹವಾಮಾನವು ಕೂಡ ಕಾರಣವಾಗಿರುತ್ತದೆ, ಚಳಿ, ಸೆಖೆ ಯಾವುದು ಹೆಚ್ಚಿದ್ದರೂ ನಿದ್ರೆ ಅಷ್ಟು ಸುಲಭವಾಗಿ ಬರುವುದಿಲ್ಲ.

Sleep: ಹವಾಮಾನವು ನಿಮ್ಮ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತೆ?
Sleep
TV9 Web
| Updated By: ನಯನಾ ರಾಜೀವ್|

Updated on: Jul 28, 2022 | 3:57 PM

Share

ನೀವು ಉತ್ತಮವಾಗಿ ನಿದ್ರಿಸಲು ಹವಾಮಾನವು ಕೂಡ ಕಾರಣವಾಗಿರುತ್ತದೆ, ಚಳಿ, ಸೆಖೆ ಯಾವುದು ಹೆಚ್ಚಿದ್ದರೂ ನಿದ್ರೆ ಅಷ್ಟು ಸುಲಭವಾಗಿ ಬರುವುದಿಲ್ಲ. ಹವಾಮಾನ ಹಾಗೂ ನಿದ್ರೆಗೆ ಸಂಬಂಧವಿದೆಯೇ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ತಜ್ಞರ ಪ್ರಕಾರ, ನಿದ್ರೆ ನಮ್ಮ ದೇಹವನ್ನು ತಂಪಾಗಿಸುತ್ತದೆ ಮತ್ತು ಪುನರ್ಯೌವನಗೊಳಿಸುತ್ತದೆ.

ಯುಎಸ್ ಮೂಲದ ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ನಮ್ಮ ದೇಹದ ಉಷ್ಣತೆಯು ದಿನವಿಡೀ ಏರುತ್ತದೆ ಮತ್ತು ಇಳಿಯುತ್ತದೆ ಮತ್ತು ಅನೇಕ ಜನರಿಗೆ, ಅವರು ಮಲಗಿದಾಗ ಸುಮಾರು ಎರಡು ಡಿಗ್ರಿಗಳಷ್ಟು ತಾಪಮಾನದ ಕುಸಿತವನ್ನು ಕಾಣಬಹುದಾಗಿದೆ. ಆದ್ದರಿಂದ, ಮಲಗುವ ಕೋಣೆ ತಾಪಮಾನವನ್ನು ಸಮರ್ಪಕವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಬಿಸಿ ವಾತಾವರಣದಲ್ಲಿ, ಎಸಿಯನ್ನು 24 ಡಿಗ್ರಿಗಳಲ್ಲಿ ಇಡುವುದು ಉತ್ತಮ, ಮತ್ತು ಚಳಿಗಾಲದಲ್ಲಿ ಹೀಟರ್‌ಗಳನ್ನು ತುಂಬಾ ಬಳಕೆ ಮಾಡಬೇಡಿ. ಬಿಸಿ ಮತ್ತು ಆರ್ದ್ರ ವಾತಾವರಣವು ಉತ್ತಮವಾಗಿ ನಿದ್ರಿಸಲು ಅವಕಾಶ ಮಾಡಿಕೊಡುವುದಿಲ್ಲ. ಆಳವಾದ ನಿದ್ರೆಗೆ ಯಾವುದೇ ಅವಕಾಶವನ್ನು ನೀಡುವುದಿಲ್ಲ.

ಪದೇ ಪದೇ ಎಚ್ಚರಗೊಳ್ಳುವಂತೆ ಮಾಡುತ್ತದೆ. ತಂಪಾದ ಪರಿಸ್ಥಿತಿಗಳಲ್ಲಿ, ಒಬ್ಬರು ಉತ್ತಮವಾಗಿ ನಿದ್ರಿಸುತ್ತಾರೆ ಆದರೆ ಅದೇ ವ್ಯಕ್ತಿಗಳಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗಬಹುದು.

ನಿದ್ರೆಯ ಕೊರತೆಯಿಂದ ಏನಾಗುತ್ತದೆ? ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಹಲವು ಆರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸರಿಯಾಗಿ ನಿದ್ರೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ನಿದ್ರೆ ಸರಿಯಾಗದಿದ್ದರೆ ಅನುಭವಿಸುವ ತೊಂದರೆಗಳು -ಅಧಿಕ ರಕ್ತದೊತ್ತಡ -ಹೃದಯಾಘಾತದ ಸಾಧ್ಯತೆ -ಮಧುಮೇಹ (ಟೈಪ್ 2) -ಬೊಜ್ಜು ಮತ್ತು ತೂಕ ಹೆಚ್ಚಾಗುವುದು -ಖಿನ್ನತೆ ಮತ್ತು ಆತಂಕದ ಸಮಸ್ಯೆಗಳು

ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ