Relationship Tips : ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2024 | 4:51 PM

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ತಿರುವಿನ ಘಟ್ಟ. ಯೋಗ್ಯವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನವು ಸುಖಕರವಾಗಿ ಸಾಗಲು ಸಾಧ್ಯ. ಹೀಗಾಗಿ ಹುಡುಗರು ಹುಡುಗಿಯನ್ನು ನೋಡಲು ಹೋದಾಗ, ಆಕೆಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ. ಹಾಗಾದ್ರೆ ಹುಡುಗರು ಕೇಳಬೇಕಾದ ಆ ಪ್ರಶ್ನೆಗಳೇನು ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

Relationship Tips : ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!
ಸಾಂದರ್ಭಿಕ ಚಿತ್ರ
Follow us on

ಮದುವೆ, ಸಂಸಾರ ಹಾಗೂ ಮಕ್ಕಳು ಎಲ್ಲವೂ ಸರಿಯಾದ ಸಮಯಕ್ಕೆ ಆದರೇನೇ ಚಂದ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಮದುವೆಯನ್ನು ಮುಂದಕ್ಕೆ ಹಾಕುವವರೇ ಹೆಚ್ಚಾಗಿದ್ದಾರೆ. ಮದುವೆಗೆ ವಧು ಹುಡುಕುತ್ತಿರುವಾಗ, ಮನೆಯ ಹಿರಿಯರು ಹುಡುಗಿಯ ಮನೆಗೆ ಹೋಗುವ ಸಂಪ್ರದಾಯವಿದೆ. ಹುಡುಗಿ ನೋಡುವ ಶಾಸ್ತ್ರದ ಬಳಿಕ ಹುಡುಗ ಮತ್ತು ಹುಡುಗಿ ಪರಸ್ಪರ ಮಾತನಾಡಲು ಅವಕಾಶವಿರುತ್ತದೆ. ಈ ವೇಳೆ ಆಕೆಯ ಬಳಿ ಈ ಪ್ರಶ್ನೆಗಳನ್ನು ಕಡ್ಡಾಯವಾಗಿ ಕೇಳಲೇ ಬೇಕಂತೆ. ಹುಡುಗಿಯು ನೀಡುವ ಉತ್ತರವು ಈಕೆಯು ತನಗೆ ಸಂಗಾತಿಯಾಗಲು ಅರ್ಹಳೇ ಎನ್ನುವುದಕ್ಕೆ ಸ್ಪಷ್ಟತೆಯೂ ಸಿಗುತ್ತದೆಯಂತೆ.

* ಯಾವ ರೀತಿಯ ಜೀವನ ಸಂಗಾತಿಯ ಬೇಕೆಂದು ಪ್ರಶ್ನಿಸಿ : ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಗಳು ವಿಭಿನ್ನವಾಗಿರುತ್ತದೆ. ಅಷ್ಟೇ ಅಲ್ಲದೇ ತಮ್ಮ ಜೀವನ ಸಂಗಾತಿಯ ಕುರಿತು ಎಲ್ಲರೂ ಕನಸುಗಳನ್ನು ಕಟ್ಟಿರುತ್ತಾರೆ. ಹೀಗಾಗಿ ಹುಡುಗರು ಹುಡುಗಿಯ ಬಳಿ ಯಾವ ರೀತಿಯ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಪಡೆಯಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳುವುದು ಒಳ್ಳೆಯದು. ಆಕೆಯ ಉತ್ತರಕ್ಕೆ ತಕ್ಕಂತೆ ನೀವಿದ್ದರೆ ನೀವು ಅವರಿಗೆ ಸರಿಯಾದ ಸಂಗಾತಿಯಾದಂತೆಯೇ ಎನ್ನುವುದು ನಿಮಗೆ ತಿಳಿಯುತ್ತದೆ.

* ಇಷ್ಟ ಕಷ್ಟಗಳ ಬಗ್ಗೆ ತಿಳಿಯಿರಿ : ಹುಡುಗ ಹುಡುಗಿಯ ಮಾತುಕತೆಯ ವೇಳೆಯಲ್ಲಿ ತನ್ನ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು. ಹುಡುಗಿಯ ಇಷ್ಟವೇನು ಎನ್ನುವುದು ತಿಳಿಯುವುದು ಮುಖ್ಯ. ಇಬ್ಬರ ಇಷ್ಟ ಕಷ್ಟಗಳು ಒಂದೇಯಾಗಿದ್ದರೆ ಮದುವೆಯ ನಿರ್ಧಾರಕ್ಕೆ ಹೋಗಬಹುದು. ಒಂದು ವೇಳೆ ಇಬ್ಬರ ಇಷ್ಟಗಳು ತದ್ವಿರುದ್ದವಾಗಿದ್ದರೆ ಸಂಬಂಧವನ್ನು ಮುಂದುವರೆಸುವುದೇ ಬೇಡವೇ ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣವು ಸಿಗುತ್ತದೆ.

* ಸೇವಿಸುವ ಆಹಾರದ ಬಗ್ಗೆ ಮಾತನಾಡಿ : ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಬಳಿ ಸಸ್ಯಾಹಾರಿ ಅಥವಾ ಮಾಂಸಾಹಾರಿಯೇ? ಎನ್ನುವ ಪ್ರಶ್ನೆಗಳನ್ನು ಕೇಳಲೇಬೇಕು. ಇಬ್ಬರ ಆಹಾರ ಹಾಗೂ ಅಭಿರುಚಿಗಳು ಬೇರೆ ಬೇರೆಯಾಗಿದ್ದರೆ ಬದುಕು ಕಷ್ಟವೆನಿಸುತ್ತದೆ.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಪ್ರೀತಿ ದುಪ್ಪಟ್ಟು ಆಗಬೇಕಾ? ಹಾಗಾದ್ರೆ ಈ ಸಲಹೆ ಪಾಲಿಸಿ

* ಭವಿಷ್ಯದ ಯೋಜನೆಯ ಬಗ್ಗೆ ಪ್ರಶ್ನಿಸಿ : ಈಗಿನ ಕಾಲದಲ್ಲಿ ಬಹುತೇಕ ಹುಡುಗಿಯರು ಉದ್ಯೋಗದಲ್ಲಿರುತ್ತಾರೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಕೆಲವೊಮ್ಮೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಇರಬಹುದು. ಆದರೆ ಕೆಲ ವಿವಾಹದ ಬಳಿಕ ಉದ್ಯೋಗಕ್ಕೆ ಹೋಗಬೇಕು, ಹೀಗೆ ಜೀವನ ನಡೆಯಬೇಕು ಎಂದು ಕೊಂಡಿರುತ್ತಾರೆ. ಪರಸ್ಪರ ಪ್ರಶ್ನಿಸಿ ಉತ್ತರ ಕಂಡುಕೊಂಡರೆ ಇಬ್ಬರಿಗೂ ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಇಬ್ಬರ ಜೀವನದ ಗುರಿಗಳು ವಿರುದ್ಧ ದಿಕ್ಕಿನಲ್ಲಿದ್ದರೆ ಜೊತೆಯಾಗಿ ಬದುಕಲು ಕಷ್ಟವಾಗಬಹುದು. ಈ ಪ್ರಶ್ನೆಯನ್ನು ಮದುವೆಗೂ ಮುಂಚಿತವಾಗಿ ಕೇಳುವುದು ಸೂಕ್ತ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ