ಮಸಾಲೆ ಪದಾರ್ಥಗಳು ಬೇಗ ಹಾಳಾಗದಂತೆ ಜಾಗೃತಿ ವಹಿಸುವುದು ಹೇಗೆ ಎಂಬ ಗೊಂದಲ ಇದೆಯೇ? ಇಲ್ಲಿದೆ ಸಲಹೆ

| Updated By: preethi shettigar

Updated on: Feb 06, 2022 | 3:00 PM

ಕೆಲವು ಮಸಾಲೆಗಳನ್ನು ಪ್ರತಿದಿನ ಬಳಸಲಾಗುವುದಿಲ್ಲ ಮತ್ತು ಅವುಗಳು ಹಾಳಾಗುವ ಭಯವು ಅತ್ಯಧಿಕವಾಗಿದೆ. ಮಸಾಲೆಯ ದೀರ್ಘಾಯುಷ್ಯವು ಅದರ ಸಂಗ್ರಹಣೆಯ ಮೇಲೆ ನಿಂತಿದೆ ಎಂದು ಹೇಳಲಾಗುತ್ತದೆ. ನೀವು ದೀರ್ಘಕಾಲದವರೆಗೆ ಮಸಾಲೆಗಳನ್ನು ತಾಜಾವಾಗಿಡಲು ಬಯಸಿದರೆ, ಇದಕ್ಕಾಗಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ.

ಮಸಾಲೆ ಪದಾರ್ಥಗಳು ಬೇಗ ಹಾಳಾಗದಂತೆ ಜಾಗೃತಿ ವಹಿಸುವುದು ಹೇಗೆ ಎಂಬ ಗೊಂದಲ ಇದೆಯೇ? ಇಲ್ಲಿದೆ ಸಲಹೆ
ಪ್ರಾತಿನಿಧಿಕ ಚಿತ್ರ
Follow us on

ಆಹಾರವನ್ನು ರುಚಿಕರವಾಗಿಸಲು ಮಸಾಲಾ ಪದಾರ್ಥಗಳು( spices) ಬಹಳ ಮುಖ್ಯ. ಹೆಚ್ಚಿನ ಜನರು ಎಲ್ಲಾ ರೀತಿಯ ಮಸಾಲೆಗಳನ್ನು ಬಳಸುತ್ತಾರೆ ಮತ್ತು ಅನೇಕ ಜನರು ಮಸಾಲೆಗಳ ಮೂಲಕ ತಮ್ಮದೇ ಆದ ಮಿಶ್ರಣವನ್ನು ತಯಾರಿಸುತ್ತಾರೆ. ಈ ಕಾರಣದಿಂದಾಗಿ ಅಡುಗೆಮನೆಯು ಮಸಾಲಾ ಪದಾರ್ಥಗಳಿಂದ ತುಂಬಿರುತ್ತದೆ. ಆದರೆ ಮಸಾಲಾ ಪದಾರ್ಥಗಳನ್ನು ದೀರ್ಘಕಾಲದವರೆಗೆ ಶೇಕರಿಸುವುದು ಹೇಗೆ ಎಂಬ ಗೊಂದಲ ಇರುತ್ತದೆ. ಇದರಿಂದಾಗಿ ಮಸಾಲಾ ಪದಾರ್ಥಗಳು ಬೇಗ ರುಚಿ(Taste) ಕೆಡುತ್ತದೆ.  ಸರಿಯಾಗಿ ಇಡದಿದ್ದರೆ, ಅವು ಬೇಗನೆ ಹಾಳಾಗುತ್ತವೆ. ಒಮ್ಮೆ ಈ ಮಸಾಲೆಗಳು ಹುಳುಗಳನ್ನು ಪಡೆದರೆ, ನಂತರ ಅವುಗಳನ್ನು ಬಳಸಲಾಗುವುದಿಲ್ಲ. ಕೆಲವು ಮಸಾಲೆಗಳನ್ನು ಪ್ರತಿದಿನ ಬಳಸಲಾಗುವುದಿಲ್ಲ ಮತ್ತು ಅವುಗಳು ಹಾಳಾಗುವ ಭಯವು ಅತ್ಯಧಿಕವಾಗಿದೆ. ಮಸಾಲೆಯ ದೀರ್ಘಾಯುಷ್ಯವು ಅದರ ಸಂಗ್ರಹಣೆಯ ಮೇಲೆ ನಿಂತಿದೆ ಎಂದು ಹೇಳಲಾಗುತ್ತದೆ. ನೀವು ದೀರ್ಘಕಾಲದವರೆಗೆ ಮಸಾಲೆಗಳನ್ನು ತಾಜಾವಾಗಿಡಲು(Fresh) ಬಯಸಿದರೆ, ಇದಕ್ಕಾಗಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ.

ಗಾಳಿಯಾಡದಂತೆ ನೋಡಿಕೊಳ್ಳಿ

ಸಾಂಬಾರ ಪದಾರ್ಥಗಳಲ್ಲಿ ತೇವಾಂಶ ಹೆಚ್ಚಾದಾಗ ಅವು ಬೇಗನೆ ಹಾಳಾಗುತ್ತವೆ. ಮಸಾಲೆಗಳನ್ನು ಗಾಳಿ ಒಳಗೆ ಬರದಂತೆ ಬಿಗಿಯಾದ ಪಾತ್ರೆಯಲ್ಲಿ ಇರಿಸಲು ಪ್ರಯತ್ನಿಸಿ. ಇಷ್ಟು ಮಾತ್ರವಲ್ಲದೆ ಮಸಾಲೆ ಪದಾರ್ಥಗಳನ್ನು ಗಾಳಿಗೆ ದೀರ್ಘಕಾಲದವರೆಗೆ ಒಡ್ಡುವುದರಿಂದ ಅವು ಹಾಳಾಗಬಹುದು ಎಂದು ತಿಳಿಯಿರಿ.

ಗಾಜಿನ ಪಾತ್ರೆಯಲ್ಲಿ ಇರಿಸಿ

ಹೆಚ್ಚಿನ ಮನೆಗಳಲ್ಲಿ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಮಸಾಲೆಗಳನ್ನು ಇಡುತ್ತಾರೆ. ಆದರೆ ಮಳೆಗಾಲದಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಬದಲಿಗೆ ಗಾಜಿನ ಪಾತ್ರೆಯಲ್ಲಿ ಇಡುವುದು ಉತ್ತಮ. ಏಕೆಂದರೆ ಮಸಾಲೆಗಳು ತೇವಾಂಶವನ್ನು ಪಡೆದರೆ ಅವು ಸುಲಭವಾಗಿ ಒಣಗುತ್ತವೆ.

ಮಸಾಲೆಗಳನ್ನು ಬಿಸಿ ಮಾಡಿ

ಮಸಾಲೆಗಳು ಹಾಳಾಗದಂತೆ ಇರಿಸಿಕೊಳ್ಳಲು ಅವುಗಳನ್ನು ಲಘುವಾಗಿ ಹುರಿಯಿರಿ. ಇದನ್ನು ಬಾಣಲೆ ಅಥವಾ ತವಾದಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಪ್ಯಾನ್ ಬಿಸಿಯಾಗಲು ಬಿಡಿ. ನಂತರ ಅದಕ್ಕೆ ಮಸಾಲೆ ಸೇರಿಸಿ ಮತ್ತು ಸ್ವಲ್ಪ ಬಿಸಿಯಾಗುವವರೆಗೆ ಬೆರೆಸಿ. ಇದನ್ನು ಮಾಡುವುದರಿಂದ, ಮಸಾಲೆಗಳು ಕೀಟಗಳನ್ನು ಪಡೆಯುವುದಿಲ್ಲ ಮತ್ತು ಅವುಗಳ ರುಚಿ ಮತ್ತು ಬಣ್ಣವು ಸಹ ಕಳೆದುಕೊಳ್ಳುವುದಿಲ್ಲ.

ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ

ನೀವು ಪ್ರತಿದಿನ ಬಳಸದ ಮಸಾಲೆಗಳನ್ನು ಕತ್ತಲೆ ತುಂಬಿದ ಸ್ಥಳದಲ್ಲಿ ಸಂಗ್ರಹಿಸಿ. ಹೀಗೆ ಮಾಡುವುದರಿಂದ ಹೆಚ್ಚು ದಿನ ಫ್ರೆಶ್ ಆಗಿರಬಹುದು. ಕೆಲವೊಮ್ಮೆ ಶಾಖ ಅಥವಾ ಸೂರ್ಯನ ಬೆಳಕಿನಿಂದ ಮಸಾಲೆಗಳು ಹಾಳಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:
Physical Weakness: ದೈಹಿಕ ನಿಶ್ಯಕ್ತಿ ಕಾಡುತ್ತಿದೆಯಾ? ಚಿಂತೆ ಬಿಡಿ ಈ 5 ಆಹಾರಗಳನ್ನು ಸೇವಿಸಿ

ಒಂದು ಚಿಟಿಕೆ ಕಪ್ಪು ಉಪ್ಪು ಅನೇಕ ರೋಗಗಳನ್ನು ದೂರ ಮಾಡುತ್ತದೆ; ಇಲ್ಲಿದೆ ಸಂಪೂರ್ಣ ಮಾಹಿತಿ