Rose Day 2022: ರೋಸ್ ಡೇ ಮಹತ್ವ ಗೊತ್ತಾ? ಪ್ರೇಮಿಸುವ ಮುನ್ನ ತಿಳಿದುಬಿಡಿ

Valentine’s Week 2022: ಇಂದು ಫೆ.7 ರೋಸ್​ ಡೇ ವ್ಯಾಲೆಂಟೈನ್ಸ್​ ವಾರದ ಮೊದಲ ದಿನ. ಪ್ರೇಮಿಗೊಂದು ಕೆಂಗುಲಾಬಿ ನೀಡಿ ಮನದ ತುಡಿತಗಳನ್ನು ಹಂಚಿಕೊಳ್ಳುವ ವಿಶೇಷ ದಿನ.

Rose Day 2022: ರೋಸ್ ಡೇ ಮಹತ್ವ ಗೊತ್ತಾ? ಪ್ರೇಮಿಸುವ ಮುನ್ನ ತಿಳಿದುಬಿಡಿ
ರೋಸ್​ ಡೇ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: sandhya thejappa

Updated on:Feb 08, 2022 | 1:16 PM

ಇಂದು ಫೆ.7 ರೋಸ್​ ಡೇ (Rose Day). ವ್ಯಾಲೆಂಟೈನ್ಸ್​ ವಾರದ (Valentine’s week) ಮೊದಲ ದಿನ. ಪ್ರೇಮಿಗೊಂದು ಕೆಂಗುಲಾಬಿ ನೀಡಿ ಮನದ ತುಡಿತಗಳನ್ನು ಹಂಚಿಕೊಳ್ಳುವ ವಿಶೇಷ ದಿನ. ಪ್ರೀತಿ ಆರಂಭಕ್ಕೆ, ಆರಂಭವಾದ ಪ್ರೀತಿಗೊಂದು ಹೊಸ ಖುಷಿ ನೀಡುವ ದಿನ ಈ ರೋಸ್​ ಡೇ. ಪ್ರೀತಿ ಎಂದರೆ ಅದು ಪದಗಳಿಗೆ ನಿಲುಕದ್ದು, ಮನಸ್ಸು, ಭಾವನೆಗಳ ಸಮ್ಮಿಲನ.  ದೀರ್ಘಾಕಾಲದ ತಪಸ್ಸು, ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಅದ್ಭುತ ಶಕ್ತಿ. ಈ ಸುಂದರ ಅನುಭೂತಿ ನೀಡುವ  ಪ್ರೀತಿಗೆ ಒಂದು ದಿನ ಮೀಸಲಿಡಲೇಬೇಕು ಅಲ್ವಾ. ಹೌದು ಪ್ರೀತಿಯ ಉತ್ಸವ ನಡೆಸಲು ಒಂದು ದಿನ ಪೂರ್ತಿ ವಾರವನ್ನು ಮೀಸಲಿಡಲಾಗಿದೆ ಅದನ್ನೇ ವ್ಯಾಲೆಂಟೈನ್ಸ್​ ವೀಕ್​ ಎಂದು ಕರೆಯುತ್ತಾರೆ. ಅದರಲ್ಲಿ ಮೊದಲ ದಿನವೇ ರೋಸ್​ ಡೇ. ಅದೆಷ್ಟೋ ಮುನಿಸು, ಅದೆಷ್ಟೋ ತಪ್ಪುಕಲ್ಪನೆಗಳು ಪ್ರೀತಿಯಿಂದ ನೀಡುವ ಒಂದು ಗುಲಾಬಿ ಹೂವಿನಿಂದ ನಿವಾರಣೆಯಾಗುತ್ತದೆ. ಹಾಗಾದರೆ ಗುಲಾಬಿ ಹೂವಿಗೂ ಎಷ್ಟು ಶಕ್ತಿ ಇದೆ ಅಲ್ವಾ? ಅದಕ್ಕೆಂದೇ ವ್ಯಾಲೆಂಟೈನ್ಸ್​ ವಾರದ ಮೊದಲ ದಿನ ರೋಸ್​ ಡೇ ಆಚರಿಸುತ್ತಾರೆ. ಅದೇ ಇಂದು ಆಚರಿಸುವ ರೋಸ್​ ಡೇ. ಪ್ರೀತಿ ಪಾತ್ರರಿಗೆ  ಗುಲಾಬಿ ಹೂವು ನೀಡಿ ಹೊಸ ಉಲ್ಲಾಸ  ನೀಡುವ ದಿನ. ಪ್ರೀತಿ ಗುಲಾಬಿಯಂತೆ. ಗುಲಾಬಿಯ ಮೃದುತ್ವ, ಸೌಂದರ್ಯದಂತೆ ಪ್ರೀತಿಯೂ ಕೂಡ ಗುಲಾಬಿಯ ಪಕಳೆಯಂತೆ ಹಂತಹಂತವಾಗಿ ಅರಳಿ ಸುಂದರ ಅನುಭವವನ್ನು ನೀಡುತ್ತದೆ.

ರೋಸ್​ ಡೇ ಯ ಇತಿಹಾಸವೇನು?: ರೋಸ್​ಡೇಗೂ ಒಂದು ಪುಟ್ಟ ಇತಿಹಾಸವಿದೆ. ಪ್ರೀತಿಯ ಸಂಕೇತವಾದ ಗುಲಾಬಿಯನ್ನು ವಿಕ್ಟೋರಿಯನ್ನರು ಹೆಚ್ಚು ಬಳಸುತ್ತಿದ್ದರು. ಪ್ರೀತಿಯ ಭಾಗವಾಗಿ ಪ್ರೇಮಿಗಳು ಪರಸ್ಪರ ಗುಲಾಬಿಯನ್ನು ಬದಲಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ರೋಮನ್​ ಸಂಸ್ಕೃತಿಯಲ್ಲಿ ಈ ರೋಸ್​ ಡೇಯನ್ನು ಪ್ರೀತಿಯ ಕತೆಗಳಲ್ಲಿ ಕೇಳಿಬರುವ ವ್ಯಕ್ತಿತ್ವಗಳಾದ ಆಂಟೋನಿ ಮತ್ತು ಕ್ಲಿಯೋಪಾತ್ರ  ಒಂದೇ ರೂಮಿನಲ್ಲಿ ಗುಲಾಬಿ ಹೂವುಗಳ ನಡುವೆ ಇದ್ದರು. ಇವರ ಪ್ರೀತಿಯ ಸಂಕೇತವಾಗಿ ರೋಸ್​ ಡೇ ಆಚರಿಸಲಾಗುತ್ತದೆ ಎಂದು ನಂಬಲಾಗುತ್ತದೆ.

ಸಂತೋಷ, ಸೌಂದರ್ಯ, ಖುಷಿ, ಸೊಬಗು ಮತ್ತು ವಿವರಿಸಲಾಗದ ಪ್ರೀತಿಯನ್ನು ಪ್ರಚೋದಿಸುವ ಗುಣ ಗುಲಾಬಿಯಲ್ಲಿದೆ. ಗುಲಾಬಿ ತಾಜಾತನ, ಮುಗ್ಧತೆ, ವಾತ್ಸಲ್ಯವನ್ನು ಸಂಕೇತಿಸುತ್ತದೆ ಜತೆಗೆ ಗುಲಾಬಿ ಹೂವು  ಆಳವಾದ ಭಾವನೆಗಳನ್ನು ತಿಳಿಸುತ್ತದೆ. ಹೀಗಾಗಿಯೇ ವ್ಯಾಲೆಂಟೈನ್ಸ್​ ವೀಕ್​ನ ಮೊದಲ ದಿನದಂದು ಪ್ರೀತಿಯ ಹುಡುಗ/ಹುಡುಗಿಗೆ ಮನದ ಭಾವನೆಗಳನ್ನು ತಿಳಿಸಲು ಗುಲಾಬಿಯನ್ನು ನೀಡುತ್ತಾರೆ.

ಗುಲಾಬಿಯಲ್ಲಿಯೂ ಹಲವು ಬಣ್ಣಗಳಿವೆ. ಪ್ರತೀ ಬಣ್ಣದ ಗುಲಾಬಿಗೂ ಅದರದೇ ಆದ ಅರ್ಥವಿದೆ ಹಾಗಾದರೆ ಯಾವ ಬಣ್ಣದ ಗುಲಾಬಿಗೆ ಯಾವ ಅರ್ಥ ತಿಳಿಯೋಣ ಬನ್ನಿ:

ಕೆಂಪು ಗುಲಾಬಿ: ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಅಂತಹವರಿಗೆ ಕೆಂಪು ಗುಲಾಬಿ ನೀಡಿ. ಕೆಂಗುಲಾಬಿ ಪ್ರೀತಿಯ ಸಂಕೇತ. ಹೀಗಾಗಿ ಕೆಂಪು ಗುಲಾಬಿ ನೀಡಿ ಒಂದು ಲವ್​ ಯೂ ಹೇಳಿಬಿಡಿ.

ಹಳದಿ ಗುಲಾಬಿ: ಹಳದಿ ಗುಲಾಬಿ ಸ್ನೇಹದ ಸಂಕೇತ. ನಿಮ್ಮ ಬೆಸ್ಟ್​ ಪ್ರೆಂಡ್​ಗೆ ನೀವು ಹಳದಿ ಗುಲಾಬಿ ನೀಡಿ ರೋಸ್​​ ಡೇಯ ವಿಶ್​​ ಮಾಡಬಹುದು. ಅಲ್ಲದೆ ನಿಮ್ಮ ಬಾಳಿನಲ್ಲಿ ಸ್ನೇಹಿತನಾ/ಳಾಗಿ, ಸಂಗಾತಿಯಾಗಿರುವ ವ್ಯಕ್ತಿಗೂ ಹಳದಿ ಗುಲಾಬಿ ನೀಡಿ ಶುಭಕೋರಬಹುದು.

ಬಿಳಿ ಗುಲಾಬಿ: ಶಾಂತತೆ, ಶುದ್ಧತೆಯ ಪ್ರತಿರೂಪ ಬಿಳಿ ಗುಲಾಬಿ.  ನಿಮ್ಮ ಪ್ರೀತಿ ಪಾತ್ರರಿಗೆ ಬಿಳಿಗುಲಾಬಿಯನ್ನು ಒಂದು ಕೆಂಗುಲಾಬಿಯನ್ನು ಸೇರಿಸಿ ನೀಡಿ. ಆಗ ಅಪ್ಪಟ, ಶುದ್ಧ ಪ್ರೀತಿಯ ಸಂಕೆತವಾಗಿರುತ್ತದೆ.

ಪಿಂಕ್​ ಅಥವಾ ಬೇಬಿ ಪಿಂಕ್​ ಗುಲಾಬಿ: ಪಿಂಕ್​ ಅಥವಾ ಬೇಬಿ ಬಿಂಕ್​ ಗುಲಾಬಿ ಹೆಣ್ಣು ಮಕ್ಕಳ ನೆಚ್ಚಿನ ಬಣ್ಣ. ಹೀಗಾಗಿ ನಿಮ್ಮ ಪ್ರೀತಿಯ ಪಾರ್ಟನರ್​ಗೆ ಒಂದು ಪಿಂಕ್​ಗುಲಾಬಿ ನೀಡಿ, ಭಾವನೆ ಹಂಚಿಕೊಳ್ಳಿ. ಒಟ್ಟಿನಲ್ಲಿ ನಿಮ್ಮ ಪ್ರೇಮಿಗೆ ಪ್ರೀತಿಯೊಂದ ನೀಡುವ ಗುಲಾಬಿ ನಿಮ್ಮ ರೋಸ್​ ಡೇಯನ್ನು ಪರಿಪೂರ್ಣಗೊಳಿಸುತ್ತದೆ.

ರೋಸ್​ ಡೇಯನ್ನು ನೀವು ವಿಭಿನ್ನವಾಗಿ ಆಚರಿಸಬಹುದು. ಸಂಗಾತಿಯ ದಿನವನ್ನು ಗುಲಾಬಿ ಹೂ ನೀಡುವ ಮೂಲಕ ಆರಂಭಿಸಿ. ಪ್ರತೀ ಕಲಸ ಮಾಡುವಾಗಲೂ ಒಂದೊಂದು ಹೂವು ನೀಡಿ ಸರ್ಫೈಸ್​ ನೀಡಿ. ಇದರಿಂದ ನಿಮ್ಮ ಮನದಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳಬಹುದು. ಪರಿಪೂರ್ಣ ರೋಸ್​​ಡೇಯನ್ನು ಆಚರಿಸಬಹುದು.

ಇದನ್ನೂ ಒದಿ:

Valentine’s Week List 2022: ಪ್ರೇಮಿಗಳ ವಾರದಲ್ಲಿ ಯಾವ ದಿನ ಯಾವುದಕ್ಕೆ ಮೀಸಲು ಗೊತ್ತಾ?ಇಲ್ಲಿದೆ ಮಾಹಿತಿ

Published On - 9:55 am, Mon, 7 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ