ನಿದ್ರೆಗೆ ಭಂಗ ಉಂಟಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣ

ನಾವು ಆರೋಗ್ಯವಂತವಾಗಿರಲು ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ಉತ್ತಮ ನಿದ್ರೆಯೂ ಮುಖ್ಯ. ಆದರೆ ಇಂದು ಅನೇಕರಿಗೆ ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಲು ಸಾಧ್ಯವೇ ಇಲ್ಲ. ನಿಮಗೂ ಕೂಡ ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ? ಇದಕ್ಕೆ ಈ ಕೆಲವು ಅಭ್ಯಾಸಗಳೇ ಮುಖ್ಯ ಕಾರಣ. ಅವುಗಳನ್ನು ತ್ಯಜಿಸುವ ಮೂಲಕ ನೀವು ಉತ್ತಮ ನಿದ್ರೆ ಮಾಡಬಹುದು. ಹಾಗಿದ್ದರೆ ನಿದ್ರೆಗೆ ಭಂಗ ತರುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರೆಗೆ ಭಂಗ ಉಂಟಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 04, 2026 | 8:35 PM

ಆಹಾರ, ನೀರಿನಂತೆ ಮನುಷ್ಯನಿಗೆ ನಿದ್ರೆಯೂ (sleep) ತುಂಬಾ ಮುಖ್ಯ. 8 ರಿಂದ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಆದರೆ ಇಂದು ಹೆಚ್ಚಿನವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೌದು ಅನೇಕರಿಗೆ ಎಷ್ಟೇ ಪ್ರಯತ್ನಪಟ್ಟರೂ ರಾತ್ರಿ ನಿದ್ರೆ ಮಾಡಲು ಸಖತ್‌ ಕಷ್ಟಕರವಾಗುತ್ತದೆ. ನಿದ್ರಾಹೀನತೆಗೆ ಈ ಕೆಲವೊಂದು ಅಭ್ಯಾಸಗಳೇ ಕಾರಣವಂತೆ. ಈ ಅಭ್ಯಾಸಗಳನ್ನು ತ್ಯಜಿಸಿದರೆ ನೀವು ಸಹ ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಬಹುದು. ನಿದ್ರೆಗೆ ಭಂಗ ತರುವಂತಹ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರಾಹೀನತೆಗೆ ಈ ಅಭ್ಯಾಸಗಳೇ ಮುಖ್ಯ ಕಾರಣ:

ಫೋನ್‌ ನೋಡುವುದು: ಮಲಗುವ ಮುನ್ನ ಅತಿಯಾಗಿ ಫೋನ್‌ ಬಳಸುವ ಅಭ್ಯಾಸ ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಫೋನ್‌ನಿಂದ ಹೊರಸೂಸುವ ನೀಲಿ ಬೆಳಕು  ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಈ ನೀಲಿ ಬೆಳಕು  ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸಬಹುದು. ಮೆಲಟೋನಿನ್ ಕೊರತೆಯು ನಿದ್ರಾಹೀನತೆ, ಕಿರಿಕಿರಿ ಮತ್ತು ಹಗಲಿನ ನಿದ್ರೆಗೆ ಕಾರಣವಾಗಬಹುದು.

ಕಾಫಿ, ಮದ್ಯಪಾನ  ಸೇವನೆ: ಕಾಫಿ ಮತ್ತು ಆಲ್ಕೋಹಾಲ್ ನಲ್ಲಿರುವ ಕೆಫೀನ್ ನಿಮ್ಮ ನಿದ್ರೆಯ ಮಾದರಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಲಗುವ ನಾಲ್ಕು ಗಂಟೆಗಳ ಮುನ್ನ ಕಾಫಿ ಅಥವಾ ಟೀ ಕುಡಿಯುವುದರಿಂದ ನಿದ್ರೆ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಮಧ್ಯಪಾನ, ಕೆಫೀನ್‌ ಸೇವನೆಯನ್ನು  ತಪ್ಪಿಸಿ.

ಭಾರವಾದ ಆಹಾರ ಸೇವನೆ: ಮಲಗುವ ಸ್ವಲ್ಪ ಅಥವಾ ಒಂದು ಗಂಟೆ ಮೊದಲು ಭಾರವಾದ ಊಟ ಮಾಡುವ ಅಣ್ಯಾಸವು ನಿದ್ರೆಗೆ ಅಡ್ಡಿಯುಂಟುಮಾಡುತ್ತದೆ. ಭಾರವಾದ ಆಹಾರ ಸೇವಿಸಿದರೆ ಅದು ನೀವು ಹಾಸಿಗೆಯಲ್ಲಿ ಮಲಗಿದ ನಂತರವೂ ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಿದ್ರೆ ಅಡ್ಡಿಯುಂಟಾಗುತ್ತದೆ.

ಹಗಲಿನಲ್ಲಿ ಮಲಗುವ ಅಭ್ಯಾಸ: ಕೆಲವು ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ  ರಾತ್ರಿಯಲ್ಲಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸ್ಪಷ್ಟವಾಗಿ ಹಾಳುಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಸಿಗರೇಟ್‌ ಸೇವನೆ: ಮಲಗುವ ಮುನ್ನ ಸಿಗರೇಟ್‌ ಸೇದುವುದರಿಂದ ನಿದ್ರೆಗೆ ಭಂಗ ಬರಬಹುದು. ತಂಬಾಕಿನಲ್ಲಿರುವ ನಿಕೋಟಿನ್‌ ಅಂಶ ಮೆದುಳನ್ನು ಉತ್ತೇಜಿಸುತ್ತದೆ. ಇದು ನಿದ್ರೆಗೆ ಭಂಗ ಉಂಟುಮಾಡುತ್ತದೆ.

ಅತಿಯಾದ ಯೋಚನೆ: ಹೆಚ್ಚು ಯೋಚಿಸುವ ಅಭ್ಯಾಸ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾದ ಯೋಚನೆ ಮತ್ತು ಒತ್ತಡವು ನಿದ್ರಾಹೀನತೆಗೆ ಕಾರಣವಾಗಬಹುದು.

ಒತ್ತಡ: ಹೆಚ್ಚಿನ ಮಟ್ಟದ ಒತ್ತಡವು ನಿದ್ರೆಗೆ ಭಂಗ ತರುತ್ತದೆ. ನಿದ್ರೆಯ ಕೊರತೆಯು ನಮ್ಮ ದೇಹದ ಒತ್ತಡ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ, ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ನಿದ್ರೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ. ಇದಲ್ಲದೆ, ಜಡ ಜೀವನಶೈಲಿಯು ನಿದ್ರಾಹೀನತೆಗೆ ಪ್ರಮುಖ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us