AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gardening Tips: ಮಳೆಗಾಲದಲ್ಲಿ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ಈ ಮನೆಮದ್ದುಗಳೇ ಸಾಕು

ಮಳೆಗಾಲದಲ್ಲಿ ಕೀಟ, ಹಾವುಗಳ ಕಾಟ ಮಾತ್ರವಲ್ಲ, ಕಂಬಳಿ ಹುಳಗಳ ಕಾಟವೂ ತೀರಾ ಹೆಚ್ಚಿರುತ್ತವೆ. ಅದರಲ್ಲೂ ಈ ಕಂಬಳಿ ಹುಳಗಳು ಮನೆ ಅಂಗಳದಲ್ಲಿರುವ ಸುಂದರ ಗಿಡಗಳನ್ನೇ ಹಾಳು ಮಾಡಿಬಿಡುತ್ತವೆ. ಹೀಗೆ ನಿಮ್ಮ ಮನೆಯ ಗಿಡಗಳ ಮೇಲೂ ಕಂಬಳಿ ಹುಳಗಳಿವೆಯೇ? ಈ ಸಮಸ್ಯೆಯಿಂದ ಗಿಡಗಳನ್ನು ರಕ್ಷಿಸಲು ರಾಸಾಯನಿಕಯುಕ್ತ ಉತ್ಪನ್ನಗಳ ಬದಲು ಈ ಕೆಲವೊಂದಿಷ್ಟು ಮನೆಮದ್ದುಗಳನ್ನು ಪ್ರಯತ್ನಿಸಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Gardening Tips: ಮಳೆಗಾಲದಲ್ಲಿ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ಈ ಮನೆಮದ್ದುಗಳೇ ಸಾಕು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Jul 21, 2026 | 5:18 PM

Share

ಮುಖ್ಯಾಂಶಗಳು

  • ಮಳೆಗಾಲದಲ್ಲಿ ಕಂಬಳಿ ಹುಳುಗಳ ಹಾವಳಿ ಹೆಚ್ಚು
  • ಕಂಬಳಿ ಹುಳಗಳು ಸಸ್ಯಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ
  • ಈ ಕಂಬಳಿ ಹುಳಗಳನ್ನು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ತೊಡೆದುಹಾಕಬಹುದು

ಮಳೆಗಾಲದ ಆರಂಭದೊಂದಿಗೆ ಕೀಟ, ಸೊಳ್ಳೆಗಳು, ಹಾವುಗಳ ಹಾವಳಿಯೂ ತೀರಾ ಹೆಚ್ಚಾಗಿರುತ್ತವೆ. ಕಂಬಳಿ ಹುಳಗಳ (caterpillars) ಕಾಟವೂ ಇದಕ್ಕೆ ಹೊರತಾಗಿಲ್ಲ. ಹೌದು ಮಳೆಗಾಲದಲ್ಲಿ ಮನೆ ಅಂಗಳದಲ್ಲಿರುವ ಗಿಡಗಳ ತುಂಬೆಲ್ಲಾ ಕಂಬಳಿ ಹುಳಗಳದ್ದೇ ಹಾವಳಿ. ಇವು ಗಿಡಗಳಿಗೆ ಗಮನಾರ್ಹವಾಗಿ ಹಾನಿಯುಂಟು ಮಾಡಿ, ಸಸ್ಯಗಳ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ. ಇದಲ್ಲದೆ ಈ ಕಂಬಳಿ ಹುಳಗಳು ಸ್ವಲ್ಪ ತಾಗಿದರೂ ಮೈಯೆಲ್ಲಾ ತುರಿಕೆ ಉಂಟಾಗುತ್ತದೆ. ಹೀಗಾಗಿ ಹೆಚ್ಚಿನವರು ರಾಸಾಯನಿಕಯುಕ್ತ ಕೀಟನಾಶಕಗಳನ್ನು ಬಳಸುತ್ತಾರೆ. ಆದರೆ ಇವು ಸಸ್ಯಗಳಿಗೆ ಹಾನಿ ಮಾಡಬಹುದು. ಹೀಗಿರುವಾಗ ಕೀಟಗಳು ಮತ್ತು ಕಂಬಳಿ ಹುಳಗಳಿಂದ ನಿಮ್ಮ  ಮನೆಯ ಗಿಡಗಳನ್ನು ರಕ್ಷಿಸಲು ಈ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ.

ಕಂಬಳಿ ಹುಳಗಳಿಂದ ಗಿಡಗಳನ್ನು ರಕ್ಷಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ:

ಬೇವಿನ ಎಣ್ಣೆ: ಮನೆಯಲ್ಲಿರುವ ಸುಂದರ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ರಾಸಾಯನಿಕಯುಕ್ತ ಕೀಟನಾಶಗಳ ಬದಲು ಬೇವಿನ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ಒಂದು ಸ್ಪ್ರೇ ಬಾಟಲಿಯಲ್ಲಿ ಬೇವಿನ ಎಣ್ಣೆಯನ್ನು ತುಂಬಿಸಿ ಅದನ್ನು ಗಿಡಗಳು, ಎಲೆಗಳ ಮೇಲೆ ಸಿಂಪಡಿಸಿ. ಇದು ಕೀಟಗಳು ಮತ್ತು ಕಂಬಳಿ ಹುಳಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ.

ಬೆಳ್ಳುಳ್ಳಿ: ಸಸ್ಯಗಳಲ್ಲಿ ಅಂಟಿರುವ ಕಂಬಳಿ ಹುಳಗಳನ್ನು ತೊಡೆದು ಹಾಕಲು ಬೆಳ್ಳುಳ್ಳಿ ಕೂಡ ತುಂಬಾನೇ ಸಹಕಾರಿ. ಇದಕ್ಕಾಗಿ  6 ರಿಂದ 7 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅವುಗಳನ್ನು ಪೇಸ್ಟ್ ಮಾಡಿ. ನಂತರ, ಸ್ವಲ್ಪ ನೀರಿಗೆ ಡಿಶ್‌ವಾಶ್‌ ಲಿಕ್ವಿಡ್‌ ಸೇರಿಸಿ, ಅದಕ್ಕೆ ಈ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಸ್ಪ್ರೇ ಬಾಟಲಿಗೆ ಹಾಕಿ  ಅದನ್ನು ಸಸ್ಯಗಳ ಮೇಲೆ ಸಿಂಪಡಿಸಿ. ಈ ಮನೆಮದ್ದು ಕಂಬಳಿ ಹುಳಗಳನ್ನು ತೊಡೆದುಹಾಕಲು ಪರಿಣಾಮಕಾರಿ.

ಇದನ್ನೂ ಓದಿ: ಫ್ರಿಜ್‌ನಲ್ಲಿಟ್ಟರೂ ಹಸಿ ಮೆಣಸಿನಕಾಯಿ ಬೇಗ ಹಾಳಾಗುತ್ತಿದೆಯೇ? ಸುಲಭ ಟ್ರಿಕ್ ಅನುಸರಿಸಿ

ಕೆಂಪು ಮೆಣಸಿನ ಪುಡಿ: ನೀರಿಗೆ ಸ್ವಲ್ಪ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಸಸ್ಯಗಳ ಮೇಲೆ ಸಿಂಪಡಿಸಿ.  ಈ ಕೆಂಪು ಮೆಣಸಿನ ಪುಡಿಯನ್ನು ವಾರಕ್ಕೆ 4 ಬಾರಿ ಸಿಂಪಡಿಸುವುದರಿಂದ  ಸಸ್ಯಗಳಿಗೆ ಹಾನಿ ಮಾಡುವ ಕಂಬಳಿ ಹುಳಗಳು ನಿವಾರಣೆಯಾಗುತ್ತವೆ. ಇದಲ್ಲದೆ ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ ಲಭ್ಯವಿದೆ, ಅದನ್ನು ನೀವು ಬಳಸಬಹುದು.

ವಿನೆಗರ್: ಬೆಚ್ಚಗಿನ ನೀರಿನೊಂದಿಗೆ ವಿನೆಗರ್ ಮಿಶ್ರಣ ಮಾಡಿ, ಸ್ವಲ್ಪ ಪಾತ್ರೆ ತೊಳೆಯುವ ದ್ರವ ಅಥವಾ ಪಾತ್ರೆ ತೊಳೆಯುವ ಸೋಪ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಗಿಡಗಳಿಗೆ  ಸಿಂಪಡಿಸಿ. ಇದು ಹುಳಗಳನ್ನು ಮತ್ತು ಕೀಟಗಳನ್ನು ತಕ್ಷಣವೇ ಕೊಲ್ಲುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Tue, 21 July 26

Follow Us
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್