Breakup: ಬ್ರೇಕ್ಅಪ್ ಬಳಿಕ ಹುಡುಗಿಯರ ಮನಸ್ಸಿನಲ್ಲಿ ಓಡುವ ವಿಷಯಗಳೇನು? ಮುಂದಿನ ಹೆಜ್ಜೆ ಏನಿರಬಹುದು ಗೊತ್ತೇ?
ಬ್ರೇಕ್ಅಪ್(Breakup) ಎನ್ನುವ ವಿಚಾರ ಹುಡುಗನಿಗಾಗಲಿ ಹುಡುಗಿಗಾಗಲಿ ಖುಷಿ ಕೊಡುವ ವಿಚಾರವೇನಲ್ಲ, ಇಬ್ಬರೂ ಆಘಾತಕ್ಕೊಳಗಾಗಿರುತ್ತಾರೆ, ಇಬ್ಬರ ಮನಸ್ಥಿತಿಯೂ ಸರಿ ಇರುವುದಿಲ್ಲ.
ಬ್ರೇಕ್ಅಪ್(Breakup) ಎನ್ನುವ ವಿಚಾರ ಹುಡುಗನಿಗಾಗಲಿ ಹುಡುಗಿಗಾಗಲಿ ಖುಷಿ ಕೊಡುವ ವಿಚಾರವೇನಲ್ಲ, ಇಬ್ಬರೂ ಆಘಾತಕ್ಕೊಳಗಾಗಿರುತ್ತಾರೆ, ಇಬ್ಬರ ಮನಸ್ಥಿತಿಯೂ ಸರಿ ಇರುವುದಿಲ್ಲ. ಯಾವುದೋ ಒಂದು ವಿಚಾರಕ್ಕೆ ಕಲಹ ಶುರುವಾಗಿ ಬಳಿಕ ಬ್ರೇಕ್ಅಪ್ನಲ್ಲಿ ಸಂಬಂಧ ಅಂತ್ಯಗೊಳಿಸಿಬಿಡುತ್ತಾರೆ. ಈ ಸಂದರ್ಭದಲ್ಲಿ ಇಬ್ಬರ ಮನಸ್ಸು ಕೂಡ ತುಂಬಾ ಸೂಕ್ಷ್ಮವಾಗಿರುತ್ತದೆ.
ಹಾಗಾದರೆ ಸಂಬಂಧ ಮುರಿದ ಬಳಿಕ ಹುಡುಗಿಯರು ಏನು ಆಲೋಚನೆ ಮಾಡುತ್ತಾರೆ ಎನ್ನುವ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಮರೆಯುವ ಪ್ರಯತ್ನ ಸಾಮಾನ್ಯವಾಗಿ ಬ್ರೇಕ್ಅಪ್ ನಂತರ, ನಿಮ್ಮ ಸಂಗಾತಿಯನ್ನು ಆದಷ್ಟು ಬೇಗ ಮರೆಯುವ ಪ್ರಯತ್ನವನ್ನು ಆರಂಭಿಸುತ್ತಾರೆ. ಅವರ ನೆನಪನ್ನು ತರಿಸುವ ಯಾವುದೇ ವಸ್ತುಗಳು ತಮ್ಮ ಜತೆಗೆ ಇರದಂತೆ ನೋಡಿಕೊಳ್ಳಲು ಬಯಸುತ್ತಾರೆ.
ಮೊದಲು ಆತನ ನಂಬರ್ ಬ್ಲಾಕ್ ಮಾಡುತ್ತಾರೆ, ಬಳಿಕ ಅವರು ಮಾಡಿರುವ ಮೆಸೇಜ್, ನಂತರ ಅವರು ಕೊಟ್ಟಿರುವ ಗಿಫ್ಟ್ ಅನ್ನು ಹಿಂದಿರುಗಿಸಲು ಅಥವಾ ಅದನ್ನು ಸುಟ್ಟುಹಾಕುವ ಪ್ರಯತ್ನ ಮಾಡುತ್ತಾರೆ.
ಆದರೂ ಆತನ ಮೇಲೊಂದು ಕಣ್ಣು ಆತನ ಮೇಲೊಂದು ಕಣ್ಣಿಡಲು ಬಯಸುತ್ತಾರೆ, ಆತ ಬೇಡವಾದರೂ ಆತ ಏನು ಮಾಡುತ್ತಿದ್ದಾನೆ, ಯಾರ ಜತೆ ಸುತ್ತಾಡುತ್ತಿರಬಹುದು, ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಆಕೆ ತಿಳಿದುಕೊಳ್ಳಲು ಬಯಸುತ್ತಾಳೆ.
ಸ್ನೇಹಿತರು, ಸಂಬಂಧಿಕರನ್ನು ಭೇಟಿಯಾಗಬಹುದು ಈ ಘಟನೆಯ ನೋವನ್ನು ಮರೆಯಲು, ಹಳೆಯ ಸ್ನೇಹಿತರು, ಇಷ್ಟದ ಅಥವಾ ಹತ್ತಿರದ ಸಂಬಂಧಿಕರನ್ನು ಭೇಟಿಯಾಗುತ್ತಾರೆ.
ಮನಸ್ಸು ಅಷ್ಟೇ ಸೂಕ್ಷ್ಮ ಆ ಸಮಯದಲ್ಲಿ ಇಬ್ಬರ ಮನಸ್ಸು ತುಂಬಾ ಸೂಕ್ಷ್ಮವಾಗಿರುವ ಕಾರಣ, ಮತ್ತೊಂದು ಪ್ರೀತಿಯಲ್ಲಿ ಬೀಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು, ಒಂದು ಪ್ರೀತಿ ಕಳೆದುಕೊಂಡಿರುವಾಗ ಬೇರೊಬ್ಬರ ಬಗ್ಗೆ ಬಹುಬೇಗ ಆಕರ್ಷಿತರಾಗುವ ಅಪಾಯ ಹೆಚ್ಚು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ