Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸು ನಲವತ್ತು ದಾಟುವ ಮೊದಲು ತಪ್ಪದೇ ಮಾಡಲೇಬೇಕಾದ ಕೆಲಸಗಳಂತೆ ಇವು

ವಯಸ್ಸು ನಲವತ್ತು ಆಗುತ್ತಿದ್ದಂತೆ ಯೌವನ ಮುಗಿಯಿತು ಅಂದರ್ಥ. ಮಧ್ಯವಯಸ್ಸಿಗೆ ಬರುವ ಮುಂಚಿತವಾಗಿ ಈ ಕೆಲವು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರೆ ಮಾತ್ರ ಮುಂಬರುವ ಜೀವನವನ್ನು ನೆಮ್ಮದಿಯಿಂದ ಕಳೆಯಲು ಸಾಧ್ಯ. ಹಾಗಾದ್ರೆ ನೀವು ನಲವತ್ತು ವರ್ಷದ ಮೊದಲು ಈ ಕೆಲವು ಕೆಲಸಗಳನ್ನು ಅದೇನಾದರೂ ಕೂಡ ಮಾಡಿ ಮುಗಿಸುವುದು ಒಳ್ಳೆಯದು.

ವಯಸ್ಸು ನಲವತ್ತು ದಾಟುವ ಮೊದಲು ತಪ್ಪದೇ ಮಾಡಲೇಬೇಕಾದ ಕೆಲಸಗಳಂತೆ ಇವು
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Oct 17, 2024 | 10:17 AM

ಬದುಕಿನ ಜಂಜಾಟದ ನಡುವೆ ವಯಸ್ಸು ನಲವತ್ತು ದಾಟಿದ್ದೆ ಗೊತ್ತಾಗಲ್ಲ, ಆದರೆ ಅಷ್ಟು ಬೇಕಾ ವಯಸ್ಸು ನಲವತ್ತು ಆಯಿತಾ, ಜೀವನದಲ್ಲಿ ಅಂದುಕೊಂಡದ್ದು ಹಾಗೆ ಇಲ್ಲ ಎನ್ನುವ ಚಡಪಡಿಕೆಯೊಂದು ಆರಂಭವಾಗುತ್ತದೆ. ಅದಲ್ಲದೇ ಕೆಲವರಂತೂ ಇನ್ನು ನನ್ನಿಂದ ಏನು ಮಾಡಲು ಆಗುವುದಿಲ್ಲ ಎಂದು ಕೊರಗುತ್ತಾ ಕೂರುತ್ತಾರೆ. ಹಾಗಂತ ನಲವತ್ತರ ನಂತರ ಏನು ಮಾಡಲು ಸಾಧ್ಯವಿಲ್ಲ ಎಂದರ್ಥವಲ್ಲ, ಆದರೆ ಕೆಲವು ಆಸೆ ಕನಸುಗಳು ಕೆಲಸಗಳನ್ನು ಮೊದಲೇ ಮುಗಿಸಿಕೊಂಡರೆ ದೇಹ ಹಾಗೂ ಮನಸ್ಸು ಸ್ವಲ್ಪ ನೆಮ್ಮದಿಯಿಂದ ಇರಲು ಸಾಧ್ಯ.

ವಯಸ್ಸು 40 ದಾಟುವ ಮುನ್ನ ಈ ಕೆಲಸಗಳನ್ನು ಮುಗಿಸಿಕೊಳ್ಳಿ:

  1. ನಲವತ್ತು ವರ್ಷ ತುಂಬುವ ಮೊದಲೇ ಸಾಲವನ್ನು ಮಾಡಿದ್ದರೆ ಅದನ್ನು ಮರುಪಾವತಿಸಿ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ.
  2. ವಯಸ್ಸಾದ ಕಾಲದಲ್ಲಿ ಜೀವನ ನಡೆಸಲು ಹಣ ಉಳಿಸುವತ್ತ ಗಮನ ಕೊಡಿ.
  3. ನಿಮ್ಮ ಮಕ್ಕಳ ಭವಿಷ್ಯ ರೂಪಿಸಲು ಸರಿಯಾದ ಯೋಜನೆ ಹಾಕಿ, ಆ ಬಗ್ಗೆ ಗಮನವಿರಲಿ.
  4. ಬದುಕಿನಲ್ಲಿ ಜಂಜಾಟದಿಂದ ಬೇಸೆತ್ತು ಹೋಗಿದ್ದರೆ ಒಬ್ಬರೇ ನಿಮಗಿಷ್ಟದ ಸ್ಥಳಕ್ಕೆ ಪ್ರವಾಸ ಕೈಗೊಳ್ಳಿ.
  5. ಜೀವನದಲ್ಲಿ ಒಮ್ಮೆಯಾದರೂ ಹಡಗಿನಲ್ಲಿ, ವಿಮಾನದಲ್ಲಿ ಪ್ರಯಾಣಿಸಿ ಆ ಅನುಭವವನ್ನು ಪಡೆದುಕೊಳ್ಳಿ.
  6. ಬಿಡುವು ಸಿಕ್ಕಾಗೆಲ್ಲಲ್ಲಾ ತಿಂಗಳಿಗೆ ಅಲ್ಲದಿದ್ದರೂ ವರ್ಷಕ್ಕೆ ಆದರೂ ಒಂದು ಪ್ರವಾಸವನ್ನು ಕೈಗೊಳ್ಳಿ.
  7. ಎಲ್ಲಾ ಕೆಲಸ ಕಾರ್ಯಗಳಿಗೆ ಸಂಗಾತಿಯನ್ನೇ ಅವಲಂಬಿಸುವುದು ಸರಿಯಲ್ಲ. ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಲು ಕಲಿತುಕೊಳ್ಳಿ.
  8. ಟ್ರೆಕ್ಕಿಂಗ್, ದೇವಸ್ಥಾನಗಳು ಹಾಗೂ ಇನ್ನಿತ್ತರ ಸ್ಥಳಗಳನ್ನು ನೋಡಬೇಕೆಂಬ ಆಸೆಯಿದ್ದರೆ ಅದನ್ನು ಪೂರೈಸಿಕೊಂಡು ಬಿಡಿ.
  9. ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ, ನಿಮ್ಮದೇ ಸ್ವಂತವಾದ ಮನೆಯೊಂದನ್ನು ಮಾಡಿಕೊಳ್ಳಿ.
  10. ನಿಮ್ಮಲ್ಲಿ ಪ್ರತಿಭೆಯಿದ್ದರೆ ಅದನ್ನು ಒಳಗೆ ಇಟ್ಟುಕೊಳ್ಳಬೇಡಿ. ನಿಮ್ಮ ಸುತ್ತಮುತ್ತಲಿನ ಜನರ ಮುಂದೆ ಆ ಪ್ರತಿಭೆಯು ಅಭಿವ್ಯಕ್ತವಾಗಲಿ.
  11. ಕಠಿಣ ಪರಿಶ್ರಮದೊಂದಿಗೆ ಕಷ್ಟ ಪಟ್ಟು ದುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
  12. ವಾರ ಅಥವಾ ತಿಂಗಳಿಗೆ ಒಂದು ದಿನವಾದರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿ.
  13. ಮಕ್ಕಳನ್ನು ಪ್ರೀತಿಸುವ ಭರದಲ್ಲಿ ಸಂಗಾತಿಗೂ ಕೂಡ ಸ್ವಲ್ಪ ಪ್ರೀತಿಯನ್ನು ತೋರಿ. ಪತಿ ಅಥವಾ ಪತ್ನಿಗೆ ನಿಮ್ಮ ಬದುಕಿನಲ್ಲಿ ಮೊದಲೇ ಆದ್ಯತೆಯಿರಲಿ
  14. ಜೀವನದಲ್ಲಿ ಈ ವಸ್ತುಗಳು ಬೇಕು ಎಂದುಕೊಂಡಿದ್ದರೆ, ದುಬಾರಿಯಾಗಿದ್ದರೂ ಕೂಡ ಆ ವಸ್ತುಗಳನ್ನು ಖರೀದಿಸಿ ಬಿಡಿ.
  15. ವರ್ಷಕ್ಕೆ ಒಮ್ಮೆಯಾದರೂ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವುದನ್ನುಕೊಳ್ಳುವುದನ್ನು ಮರೆಯದಿರಿ.
  16. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ದಿನನಿತ್ಯ ಆರೋಗ್ಯಕರ ಆಹಾರ ಸೇವನೆ ಮಾಡುವ ಅಭ್ಯಾಸವಿರಲಿ.
  17. ದಿನನಿತ್ಯ ವಾಕಿಂಗ್‌ ಮತ್ತು ಯೋಗವನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
  18. ನಿಮ್ಮ ಹಾಗೂ ಕುಟುಂಬದ ಸುರಕ್ಷತೆಗಾಗಿ ಆರೋಗ್ಯ ವಿಮೆ ಮತ್ತು ಜೀವ ವಿಮೆ ಇಲ್ಲದಿದ್ದರೆ ಅದನ್ನು ಮಾಡಿಸಿಕೊಳ್ಳಿ.
  19.  ಜೀವನದಲ್ಲಿ ನಮ್ಮವರಿಗೆ ಸಮಯ ಕೊಡುವುದರೊಂದಿಗೆ ವಿಶ್ರಾಂತಿ ನೀಡುವುದು ಅಷ್ಟೇ ಮುಖ್ಯ. ಹೀಗಾಗಿ ಸಂಗಾತಿಗೆ ಸಂಪೂರ್ಣ ವಿಶ್ರಾಂತಿ ನೀಡಿ ಮನೆಗೆಲಸವನ್ನು ನೀವೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್