Romantic Life: ನಿಮ್ಮ ಸಂಗಾತಿಯ ಜತೆಗೆ ಪ್ರಣಯಕ್ಕೆ ಅವಕಾಶ ಇಲ್ಲವೇ? ಈ ಸಲಹೆಗಳನ್ನು ಅನುಸರಿಸಿ

ಸಹಜವಾಗಿ ಪ್ರಣಯದ ಬಯಕೆಗಳು ಪುರುಷರಲ್ಲಿ ಬೇಗನೆ ಬರುತ್ತವೆ. ಆದರೆ ಮಹಿಳೆಯರಲ್ಲಿ ಇದು ಕೊಂಚ ನಿಧಾನ. ಅದಕ್ಕಾಗಿಯೇ ಮಡದಿಯಲ್ಲಿ ಭಾವನೆಗಳನ್ನು ಮೂಡಿಸುವುದು ಗಂಡನ ಜವಾಬ್ದಾರಿಯಾಗಿದೆ. ಇನ್ನು ಇಬ್ಬರಲ್ಲೂ ಭಾವನೆಗಳು ಬಂದಾಗ ಮಾತ್ರ ಪ್ರಣಯ ಸುಖಕರ.

Romantic Life: ನಿಮ್ಮ ಸಂಗಾತಿಯ ಜತೆಗೆ ಪ್ರಣಯಕ್ಕೆ ಅವಕಾಶ ಇಲ್ಲವೇ? ಈ ಸಲಹೆಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 06, 2021 | 8:11 AM

ಗಂಡ ಮತ್ತು ಹೆಂಡತಿಯ ನಡುವಿನ ಬಾಂಧವ್ಯವನ್ನು ಬಲಪಡಿಸಲು ಪ್ರೀತಿ, ವಿಶ್ವಾಸದ ಜತೆಗೆ ಪ್ರಣಯವು ಕೂಡ ಒಂದು ಪ್ರಮುಖ ಭಾಗವಾಗಿದೆ. ಪ್ರಣಯವು ವಿಶೇಷವಾಗಿ ಮದುವೆಯಾದ ನಂತರ ತನ್ನತ್ತ ಬಾಳ ಸಂಗಾತಿಯನ್ನು ಸೆಳೆಯಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ತಜ್ಞರು ತಮ್ಮ ಬಾಳ ಸಂಗಾತಿಯನ್ನು ಪ್ರಣಯದ (Romance) ಹಾದಿಗೆ ಒಲಿಸಿಕೊಳ್ಳಲು ಅನೇಕ ಸಲಹೆಗಳನ್ನು ನೀಡುತ್ತಾರೆ. ಆದಾಗ್ಯೂ, ಹೆಚ್ಚಿನ ಜನರು ಪ್ರಣಯವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಬದಲಾದ ಜೀವನಶೈಲಿ, ಒತ್ತಡ ಇತ್ಯಾದಿಗಳಿಂದಾಗಿ ದಂಪತಿಗಳ ನಡುವಿನ ಪ್ರಣಯಕ್ಕೆ ತೊಂದರೆ ತರಬಹುದು. ಇದು ಮುಂದೆ ಮನಸ್ತಾಪಕ್ಕೂ ಕಾರಣವಾಗುತ್ತದೆ. 

ಸಹಜವಾಗಿ ಪ್ರಣಯದ ಬಯಕೆಗಳು ಪುರುಷರಲ್ಲಿ ಬೇಗನೆ ಬರುತ್ತವೆ. ಆದರೆ ಮಹಿಳೆಯರಲ್ಲಿ ಇದು ಕೊಂಚ ನಿಧಾನ. ಅದಕ್ಕಾಗಿಯೇ ಮಡದಿಯಲ್ಲಿ ಭಾವನೆಗಳನ್ನು ಮೂಡಿಸುವುದು ಗಂಡನ ಜವಾಬ್ದಾರಿಯಾಗಿದೆ. ಇನ್ನು ಇಬ್ಬರಲ್ಲೂ ಭಾವನೆಗಳು ಬಂದಾಗ ಮಾತ್ರ ಪ್ರಣಯ ಸುಖಕರ. ಹೀಗಾಗಿ ಪ್ರಣಯಕ್ಕೆ ಆಹ್ವಾನಿಸುವಾಗ ತಮ್ಮ ಮಡದಿಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮ ಅಗತ್ಯ. ಪ್ರಣಯದ ಸಮಯದಲ್ಲಿ ಸಂಗಾತಿಯನ್ನು ತೃಪ್ತಿಪಡಿಸುವುದು ಹೇಗೆ? ಅಥವಾ ಬಾಳ ಸಂಗಾತಿಯನ್ನು ಆಕರ್ಷಿಸುವುದು ಹೇಗೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು ಅದಕ್ಕೆ ಉತ್ತರ ಇಲ್ಲಿದೆ

ಕುತ್ತಿಗೆ ಭಾಗ ಮಹಿಳೆಯರ ಕುತ್ತಿಗೆ ಭಾಗ ತುಂಬಾ ಸೂಕ್ಷ್ಮವಾಗಿರುತ್ತದೆ. ಪ್ರಣಯಕ್ಕೆ ಆಹ್ವಾನಿಸುವಾಗ ಈ ಭಾಗಕ್ಕೆ ಚುಂಬಿಸಬೇಕು ಎಂದು ತಜ್ಞರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಅವರು ತಕ್ಷಣವೇ ಪ್ರಣಯದ ಮನಸ್ಥಿತಿಗೆ ಬರುತ್ತಾರೆ.

ಕಿವಿ ಮಹಿಳೆಯರ ಕಿವಿಗಳು ಬಹಳ ಸೂಕ್ಷ್ಮವಾದ ಭಾಗವಾಗಿದೆ. ವಿಶೇಷವಾಗಿ ಕಿವಿಯನ್ನು ನಾಲಿಗೆಯಿಂದ ನಿಧಾನವಾಗಿ ಸ್ಪರ್ಶಿಸಿ. ಇದು ನಿಮತ್ತ ಅವರನ್ನು ಆಕರ್ಷಿಸುತ್ತದೆ.

ಕೂದಲು ಕೂದಲು ಸೂಕ್ಷ್ಮವಾದ ಭಾಗ. ನಿಮ್ಮ ಬೆರಳುಗಳಿಂದ ಮೃದುವಾಗಿ ಮಡದಿಯ ಕೂದಲಿಗೆ ಮಸಾಜ್ ಮಾಡಿ. ಇದು ಪ್ರಣಯದ ಭಾವನೆಯನ್ನು ಅವರಲ್ಲಿ ಹುಟ್ಟು ಹಾಕಲು ಪ್ರೇರಣೆ ನೀಡುತ್ತದೆ.

ಮಂಡಿ ಅಥವಾ ಮೊಣಕಾಲು ಕೈ ಬೆರಳುಗಳಿಂದ ಸಂಗಾತಿಯ ಮೊಣಕಾಲಿನ ಮೇಲೆ ನಿಧಾನವಾಗಿ ಸವರಿ ಅಥವಾ ಮೊಣಕಾಲಿನ ಮೇಲೆ ನಿಮ್ಮ ಕೈ ಇರಿಸಿ. ಈ ಕ್ರಮವು ಪ್ರಣಯದ ಭಾವನೆಗಳನ್ನು ಉತ್ತೇಜಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಮಂಡಿಗೆ ಮೃದುವಾಗಿ ಸ್ಪರ್ಶಿಸುವುದು ಮಹಿಳೆಯರಲ್ಲಿ ಪ್ರಣಯ ಭಾವನೆಗಳನ್ನು ಉಂಟುಮಾಡುತ್ತದೆ.

ಪಾದ ಪಾದ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ನಿಮ್ಮ ಕೈ ಬೆರಳುಗಳಿಂದ ಮೃದುವಾದ ಪಾದಗಳನ್ನು ಸವರಿ. ಇದು ಮಡದಿಯನ್ನು ಪ್ರಣಯಕ್ಕೆ ಪ್ರಚೋದಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಸಂಗಾತಿ ನಿಮ್ಮತ್ತ ವಾಲುತ್ತಾರೆ.

ಇದನ್ನೂ ಓದಿ: Viral Video: ಮದುವೆ ದಿನ ವರನ ಬಾಯಿಂದ ಬಂದ ಅದೊಂದು ಮಾತಿಗೆ ಖುಷಿಯಾಗಿ, ಎಲ್ಲರೆದುರು ಪತಿಯನ್ನು ಅಪ್ಪಿ-ಮುದ್ದಿಸಿದ ವಧು

Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ