Hair Care Tips: ಕೂದಲು ತೆಳುವಾಗುತ್ತಿದೆಯಾ? ಆರೈಕೆಗೆ ಏನು ಮಾಡಬೇಕು? ಯಾವ ಗಿಡಮೂಲಿಕೆಗಳನ್ನು ಬಳಸಬೇಕು ಇಲ್ಲಿದೆ ಮಾಹಿತಿ
ಕೂದಲು ತೆಳುವಾಗುವುದು ಆನುವಂಶಿಕವಾಗಿರಬಹುದು ಅಥವಾ ಇನ್ನಿತರ ಕಾರಣಗಳಿಂದಾಗಿರಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹಾಗಾದರೆ ಯಾವ ರೀತಿಯ ಗಿಡಮೂಲಿಕೆಗಳನ್ನು ಬಳಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಅದರ ಜೊತೆ ಜೊತೆಗೆ ಕೂದಲು ತೆಳುವಾಗುತ್ತಿದೆ. ಮತ್ತೆ ಹೊಸದಾಗಿ ಹುಟ್ಟುವ ಕೂದಲಿನಲ್ಲಿಯೂ ಇದೇ ಸಮಸ್ಯೆ. ಬದಲಾಗುತ್ತಿರುವ ಜೀವನಶೈಲಿ, ಆಹಾರದ ಆಯ್ಕೆಗಳು, ವ್ಯಾಯಾಮದ ಕೊರತೆ, ದೈಹಿಕ ಚಟುವಟಿಕೆ ಮತ್ತು ಕೂದಲಿನ ಆರೈಕೆಯ ದಿನಚರಿಯಲ್ಲಿ ವ್ಯತ್ಯಾಸ. ಇವೆಲ್ಲವೂ ನೆತ್ತಿ ಮತ್ತು ಕೂದಲಿನ ಆರೋಗ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೂದಲು ಉದುರುವಿಕೆ, ತಲೆಹೊಟ್ಟು, ಒಡೆದ ತುದಿಗಳು ಮತ್ತು ಒಣ ಮತ್ತು ಒರಟು ನೆತ್ತಿಯಂತಹ ಸಮಸ್ಯೆಗಳು ಕೂದಲಿನ ಆರೈಕೆ ಸರಿಯಾಗಿ ಆಗದೆ ಇದ್ದಾಗ ಕಾಣಸಿಗುತ್ತದೆ. ಕೂದಲು ತೆಳುವಾಗುವುದು ಬಹಳಷ್ಟು ಜನರು ಅನುಭವಿಸುವ ಮತ್ತೊಂದು ತೊಂದರೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ (ಎಎಡಿ) ಪ್ರಕಾರ, ದಿನಕ್ಕೆ 50 ರಿಂದ 100 ಕೂದಲುಗಳನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕಿಂತ ಹೆಚ್ಚಿನ ಕೂದಲನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂದರೆ, ಮುಂದಿನ ದಿನಗಳಲ್ಲಿ ಇದು ಕೂದಲು ತೆಳುವಾಗಲು ಕಾರಣವಾಗಬಹುದು.
ನಿಮ್ಮ ಕೂದಲನ್ನು ಅತಿಯಾದ ಬಿಸಿ ನೀರಿನಿಂದ ತೊಳೆಯುವುದು, ಬೇರೆ ಬೇರೆ ಉತ್ಪನ್ನಗಳ ಬಳಕೆ, ಬಿಗಿಯಾದ ಕೇಶವಿನ್ಯಾಸ, ಪೋಷಕಾಂಶಗಳ ಕೊರತೆಯ ಆಹಾರ, ಕಡಿಮೆ ಎಣ್ಣೆ ಮತ್ತು ದೀರ್ಘಕಾಲದ ಒತ್ತಡದಿಂದ ಕೂದಲು ತೆಳುವಾಗಬಹುದು. ಇದೆಲ್ಲ ಸಮಸ್ಯೆಗಳಿಗೆ ನೀವು ನಿಮ್ಮ ದೈನಂದಿನ ಕೂದಲಿನ ಆರೈಕೆಗೆ ಸೇರಿಸಬಹುದಾದ ಕೆಲವು ಪರಿಣಾಮಕಾರಿ ಗಿಡಮೂಲಿಕೆಗಳಿವೆ ಇವು ನಿಮ್ಮ ಕೂದಲಿನ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿದೆ.
ರೋಸ್ಮರಿ: ರೋಸ್ಮರಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ಕಡಿಮೆ ಮಾಡುವ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ನೆತ್ತಿಯನ್ನು ನಿರ್ವಿಷಗೊಳಿಸುವ ಹಾಗೂ ಕೂದಲಿನ ವರ್ಣದ್ರವ್ಯಗಳನ್ನು ಮತ್ತೆ ನೆತ್ತಿಯ ಮೇಲೆ ಕಾಣುವ ಸಾಮರ್ಥ್ಯವನ್ನು ಹೊಂದಿದೆ, ಇದು ಆರೋಗ್ಯಕರ ನೆತ್ತಿಯನ್ನು ನಿಮ್ಮದಾಗಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಳ್ಳು: ಇದು ಒಮೆಗಾ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಹಾಗಾಗಿ ಇದು ಕೂದಲಿನ ಬೆಳವಣಿಗೆಗೆ ಸಂಬಂಧಿಸಿದೆ. ಆರೋಗ್ಯಕರವಾದ ನೆತ್ತಿಯನ್ನು ಉತ್ತೇಜಿಸುವುದರ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ. ಬೇಕಾದಷ್ಟು ಪೋಷಣೆಯನ್ನು ಒದಗಿಸಿ ಕೂದಲಿಗೆ ಕಂಡೀಷನಿಂಗ್ ನೀಡಲು ಸಹಾಯ ಮಾಡುತ್ತವೆ.
ಭೃಂಗರಾಜ್: ಭೃಂಗರಾಜ್ ಒಂದು ಜನಪ್ರಿಯ ಗಿಡಮೂಲಿಕೆಯಾಗಿದ್ದು, ಇದನ್ನು ವಿವಿಧ ಕೂದಲಿನ ಆರೈಕೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ಮತ್ತು ಇದನ್ನು ವ್ಯಾಪಕವಾಗಿಯೂ ಬೇರೆ ಬೇರೆ ದೇಶಗಳಲ್ಲಿ ಬಳಸಲಾಗುತ್ತದೆ. ಇದು ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವುದು ಸೇರಿದಂತೆ ಇತರ ಕೂದಲಿನ ಆರೈಕೆ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ ಎಂದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಅದಲ್ಲದೆ ಇದು ಅತ್ಯಂತ ಜನಪ್ರಿಯ ಗಿಡಮೂಲಿಕೆಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:Hair Care Tips: ಬೇಸಿಗೆಯಲ್ಲಿ ಕೂದಲು ಉದುರುವಿಕೆ ತಡೆಯಲು ಈ ಪೋಷಕಾಂಶ ಆಹಾರಗಳನ್ನು ಸೇವನೆ ಮಾಡಿ
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ ಕಾಂಪ್ಲೆಕ್ಸ್, ರಂಜಕ ಮತ್ತು ಕ್ಯಾರೋಟಿನ್ ನಿಂದ ಸಮೃದ್ಧವಾಗಿದೆ, ಇವುಗಳನ್ನು ಕೂದಲಿನ ಬೆಳವಣಿಗೆಗೆ ಮತ್ತು ನೆತ್ತಿಯಿಂದ ಕೂದಲನ್ನು ಬಲಪಡಿಸಲು ಅಗತ್ಯವಾದ ಪೋಷಕಾಂಶಗಳು ಎಂದು ವರ್ಗೀಕರಿಸಲಾಗಿದೆ.
ಜಿನ್ಸೆಂಗ್: ದೇಹದಲ್ಲಿ ರಕ್ತ ಪರಿಚಲನೆ ಮತ್ತು ಕೂದಲಿನ ಬುಡವನ್ನು ಸುಧಾರಿಸುವ ಮೂಲಕ ಕೂದಲು ಉದುರುವುದನ್ನು ತಡೆಯುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಇದು ಕೂದಲನ್ನು ಅದರ ಬೇರುಗಳಿಂದ ಪೋಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಜಿನ್ಸೆಂಗ್ ಜಿನ್ಸೆನೊಸೈಡ್ಸ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದೆ, ಇದು ಕೂದಲಿನ ಬೆಳವಣಿಗೆ ಮತ್ತು ಅದರ ಚಕ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: