
ಮಹಿಳೆಯರಿಗೆ (women) ತಾವು ಧರಿಸುವ ಕೆಲವೊಂದು ಬಟ್ಟೆಗಳಲ್ಲಿರುವ ರಹಸ್ಯದ ಬಗ್ಗೆ ಗೊತ್ತಿರಲ್ಲ. ಅದರಲ್ಲೂ ಒಳಉಡುಪಿ ಬಗ್ಗೆ ಕೆಲವೊಂದು ಸಂಗತಿಗಳು ಗೊತ್ತಿರಲ್ಲ, ಮಹಿಳೆಯರು ಧರಿಸುವ ಒಳ ಉಡುಪಿನಲ್ಲಿ (underwear) ಪಾಕೆಟ್ನಂತಹ ಬಟ್ಟೆಗಳು ಇರುತ್ತದೆ. ಇದು ಯಾಕಿದೆ? ಎಂಬುದು ಯಾರು ಗಮನಿಸಿಲ್ಲ, ಇದರ ಬಗ್ಗೆ ಯೋಚನೆ ಕೂಡ ಮಾಡಿರಲ್ಲ. ಆದರೆ ಇದು ಪಾಕೆಟ್ ಅಲ್ಲ, ಇದನ್ನು ಗಸ್ಸೆಟ್ (gusset purpose) ಎಂದು ಕರೆಯುತ್ತಾರೆ. ಒಳ ಉಡುಪುಗಳ ಒಳಗೆ ನೋಡಿ ಕ್ರೋಚ್ ಪ್ರದೇಶದಲ್ಲಿ ಸಣ್ಣ ಪಾಕೆಟ್ ತರಹದ ಭಾಗ ಇರುತ್ತದೆ. ಇದು ಯಾಕಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಈ ಗಸ್ಸೆಟ್ಗಗಳನ್ನು ಯಾಕೆ ಒಳಉಡುಪಿನಲ್ಲಿ ಹಾಕಿರುತ್ತಾರೆ ಗೊತ್ತಾ? ಇದು ಒಳ ಉಡುಪುಗಳ ಒಳಭಾಗದಲ್ಲಿ ಹೊಲಿಯಲಾದ ಹೆಚ್ಚುವರಿ ಬಟ್ಟೆಯ ತುಂಡಾಗಿದೆ. ಸಾಮಾನ್ಯವಾಗಿ ಕ್ರೋಚ್ ಪ್ರದೇಶದಲ್ಲಿ ಇವುಗಳು ಇರುತ್ತದೆ. ಒಳ ಉಡುಪಿನ ಉಳಿದ ಭಾಗಗಳು ಲೇಸ್ ಅಥವಾ ಸಿಂಥೆಟಿಕ್ ಬಟ್ಟೆಯಾಗಿರುತ್ತದೆ. ಆದರೆ ಈ ಪಾಕೆಟ್ ರೀತಿಯ ಬಟ್ಟೆಗಳು ಹತ್ತಿಯಿಂದ ಮಾಡಲ್ಪಟ್ಟಿದೆ.
ಇದು ಒಳಗಿನ ಭಾಗಕ್ಕೆ ಗಾಳಿ ಹೋಗಲು, ಸ್ವಚ್ಛ ಮತ್ತು ಆರಾಮದಾಯಕವಾಗಿಡಲು ಹತ್ತಿಯ ಗಸ್ಸೆಟ್ ಅತ್ಯಗತ್ಯ. ಕೆಲವೊಮ್ಮೆ ಗಸ್ಸೆಟ್‌ನ ಒಂದು ಬದಿಯನ್ನು ಹೊಲಿಯಲಾಗುವುದಿಲ್ಲ, ಅದಕ್ಕಾಗಿಯೇ ಅದು ಪಾಕೆಟ್‌ನಂತೆ ಕಾಣುತ್ತದೆ. ಹತ್ತಿ ಗಸ್ಸೆಟ್ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಉಂಟಾಗುವ ನೈರ್ಮಲ್ಯತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬೆವರು ಅಥವಾ ನೈಸರ್ಗಿಕ ವಿಸರ್ಜನೆಯಂತಹ ಕ್ರಿಯೆಗಳು ಉಂಟಾದಾಗ ದಿನವಿಡೀ ಸ್ವಚ್ಛವಾಗಿರಿಸುತ್ತದೆ. ಜತೆಗೆ ಮಹಿಳೆಯರಿಗೆ ದೈಹಿಕವಾಗಿ ನಡೆಯುವ ಇಂತಹ ಕಿರಿಕಿರಿಗಳಿಂದ ಕಾಪಾಡಲು ಸಹಾಯ ಮಾಡುತ್ತದೆ. ಸೋಂಕುಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹತ್ತಿಯು ಇತರ ಬಟ್ಟೆಗಳಿಗಿಂತ ಹೆಚ್ಚು ಆರಾಮದಾಯಕವಾಗಿರುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳ ಕಾಟವೇ ಇರೋಲ್ಲ ನೋಡಿ
ಇನ್ನು ಆರಾಮದಾಯಕ ಗಸ್ಸೆಟ್ ಇಲ್ಲದೆ ಒಳ ಉಡುಪು ಧರಿಸುವುದರಿಂದ, ಇದರಿಂದ ಸಾಕಷ್ಟು ಅನಾನುಕೂಲತೆಯನ್ನು ಅನುಭವಿಸಬಹುದು.ಗಸ್ಸೆಟ್ ಮೃದುವಾದ, ನಯವಾದ ಪದರವನ್ನು ಹೊಂದಿದೆ. ತೊಡೆಗಳ ನಡುವಿನ ಉಜ್ಜುವಿಕೆಯಿಂದ ತಪ್ಪಿಸುತ್ತದೆ. ಇದರ ಜತೆಗೆ ಗಸ್ಸೆಟ್ ಇರುವ ಒಳಉಡುಪುಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇದು ನಿಮಗೆ ವಿಚಿತ್ರವಾಗಿ ಕಾಣಿಸಬಹುದು, ಆದರೆ ಇದು ಒಂದು ಸ್ಮಾರ್ಟ್ ವಿನ್ಯಾಸ ಇದು ನಿಮ್ಮನ್ನು ದಿನವಿಡೀ ಸ್ವಚ್ಛವಾಗಿ, ಆರಾಮದಾಯಕವಾಗಿ ಇಡುತ್ತದೆ. ಮಹಿಳೆಯರು ಒಳಉಡುಪುಗಳಲ್ಲಿ ಇಂತಹ ಪಾಕೆಟ್ ಕಂಡು ಬಂದರೆ ಈ ಕಾರಣಕ್ಕೆ ಎಂದು ತಿಳಿದುಕೊಳ್ಳಿ, ಹಾಗೂ ಇಂತಹ ಒಳಉಡುಪುಗಳನ್ನೇ ಖರೀದಿಸಿ, ಯಾಕೆಂದರೆ, ಇದು ನಿಮ್ಮ ಗೌಪ್ಯ ಹಾಗೂ ದೈಹಿಕ ಆರೋಗ್ಯಕ್ಕಾಗಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ