
ನೀವು ಎಷ್ಟೇ ಪ್ರಯತ್ನ ಪಟ್ಟರೂ ಸಹ ತೊಡೆಯ ಹೆಚ್ಚುವರಿ ಕೊಬ್ಬನ್ನು ನಿವಾರಿಸುವುದು ನಿಮಗೆ ತಲೆನೋವಾಗಿದೆಯಾ? ಅಲ್ಲಲ್ಲಿ ಕೊಬ್ಬು ಸಂಗ್ರಹ ಆಗುವುದನ್ನು ಹೇಗೆ ತಡೆಯಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ನಿಮ್ಮ ಇಡೀ ದೇಹಕ್ಕೆ ಪೂಕವಾಗುವಂತ ವ್ಯಾಯಾಮಗಳನ್ನು ಮಾಡಬೇಕು. ತೊಡೆಯ ಭಾಗದಲ್ಲಿ ಶೇಖರಣೆಯಾದ ಅನಾವಶ್ಯಕ ಕೊಬ್ಬನ್ನು ಕರಗಿಸುವ ಗುರಿ ಹೊಂದಿದ್ದರೆ, ತಾಳ್ಮೆಯಿಂದಿರಿ ಮತ್ತು ತ್ವರಿತ ಫಲಿತಾಂಶಗಳ ಮೊರೆ ಹೋಗಬೇಡಿ. ಏಕೆಂದರೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವು ಎಲ್ಲಕ್ಕಿಂತ ಮುಖ್ಯವಾಗಿದೆ. ವಾಸ್ತವವಾಗಿ, ನಿಮ್ಮ ದೈನಂದಿನ ವ್ಯಾಯಾಮದ ದಿನಚರಿಯಲ್ಲಿ ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಕೆಲವು ಯೋಗ ಭಂಗಿಗಳನ್ನು ಸಹ ಸೇರಿಸಿಕೊಳ್ಳಬಹುದು. ಯೋಗವು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡುತ್ತದೆ, ಜೊತೆಗೆ ಒಟ್ಟಾರೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೋಗ ತಜ್ಞ ಅಭಿಷೇಕ್ ಒತ್ವಾಲ್ ಅವರ ಪ್ರಕಾರ, ಯೋಗಾಭ್ಯಾಸವು ಸ್ನಾಯುಗಳನ್ನು ಬಲಪಡಿಸಿ ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹಂತ ಹಂತದ ಪ್ರಕ್ರಿಯೆಯಾಗಿದೆ, ಇದೆಲ್ಲದರ ಜೊತೆಗೆ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಯೋಗಾಸನಗಳ ಸಂಯೋಜನೆಯು ಈ ಸಮಸ್ಯೆಗೆ ಪರಿಣಾಮಕಾರಿ ಮತ್ತು ಶಾಶ್ವತ ಫಲಿತಾಂಶಗಳನ್ನು ಕೊಡುತ್ತದೆ.
ನಿಮ್ಮ ತೊಡೆಗಳು, ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಭಂಗಿ ಉತ್ತಮವಾಗಿದೆ. ಇದು ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ಸಮತೋಲನ ಕಾಪಾಡುವುದರ ಜೊತೆಗೆ ತ್ರಾನ ಹೆಚ್ಚಿಸುತ್ತದೆ. ಜಡ ಮತ್ತು ಕುಳಿತು ಕೆಲಸ ಮಾಡುವವರಿಗೆ ಇದು ಲಾಭಕಾರಿ ಆಸನ.
3 -4 ಅಡಿ ಅಂತರವಿಟ್ಟುಕೊಂಡು ಕಾಲುಗಳನ್ನು ಅಗಲವಾಗಿಸಿ ನೇರವಾಗಿ ನಿಲ್ಲಿ. ಬಲದ ಕಾಲನ್ನು 90 ಡಿಗ್ರಿ ಮತ್ತು ಎಡ ಕಾಲನ್ನು 15 ಡಿಗ್ರಿಯಲ್ಲಿ ಇಡಬೇಕು. ಅಂಗೈಯು ಪರಸ್ಪರ ಎದುರಾಗುವಂತೆ ನೀವು ಎರಡು ಕೈಗಳನ್ನು ಹಾಗೆ ಮೇಲಕ್ಕೆತ್ತಿಕೊಳ್ಳಿ. ಉಸಿರನ್ನು ಬಿಡಿ ಮತ್ತು ಬಲದ ಮೊಣಕಾಲನ್ನು ಬಗ್ಗಿಸಿ.
ಈ ಭಂಗಿಯು ಸೊಂಟ ಮತ್ತು ತೊಡೆಗಳ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.
ಹೆಸರು ಹೇಳುವಂತೆ ದೋಣಿಯಾಕಾರದಲ್ಲಿ ಈ ಭಂಗಿಯನ್ನು ಮಾಡಬೇಕು. ಅದನ್ನು ಮಾಡಲು ಮೊದಲು ನೆಲದ ಮೇಲೆ ಕುಳಿತು, ಸ್ವಲ್ಪ ಹಿಂದಕ್ಕೆ ಬಾಗಿ, ವಿ- ಆಕಾರದಲ್ಲಿ ನಿಮ್ಮ ಕಾಲುಗಳನ್ನು ಎತ್ತಿ. ನೆಲಕ್ಕೆ ಸಮಾನಾಂತರವಾಗಿ ನಿಮ್ಮ ತೋಳುಗಳನ್ನು ಮುಂದಕ್ಕೆ ಚಾಚಿ. ಬೆನ್ನು ಮೂಳೆಯನ್ನು ನೇರವಾಗಿರಿಸಿಕೊಳ್ಳಿ.
ಕುರ್ಚಿಯ ಭಂಗಿ ಅಥವಾ ಉತ್ಕಟಾಸನವು ತೋಳು ಮತ್ತು ತೊಡೆಗಳನ್ನು ಬಲಪಡಿಸುತ್ತದೆ. ಜೊತೆಗೆ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಈ ಆಸನವನ್ನು ಅನುಸರಿಸಲು ನೀವು ಒಂದು ಕಾಲ್ಪನಿಕ ಕುರ್ಚಿಯ ಮೇಲೆ ಕುಳಿತಿಕೊಳ್ಳುವಂತೆ ನಿರ್ವಹಿಸಬೇಕು. ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ, ಮೊಣಕಾಲುಗಳನ್ನು ಬಗ್ಗಿಸಿ, ಮತ್ತು ಕುರ್ಚಿಯಲ್ಲಿ ಕುಳಿತಂತೆ ಸೊಂಟವನ್ನು ಕೆಳಗಿಳಿಸಿ. ನಿಮ್ಮ ತೋಳುಗಳನ್ನು ಮೇಲಕ್ಕೆ ಚಾಚಿ, ಅಂಗೈಗಳನ್ನು ಪರಸ್ಪರ ಎದುರಾಗಿ ಚಾಚಿ. ಹಿಮ್ಮಡಿ ಮತ್ತು ಬೆನ್ನು ಮೂಳೆಯನ್ನು ನೇರವಾಗಿರಿಸಿ. ಪೂರ್ಣವಾಗಿ ಉಸಿರು ಎಳೆದು ಕೊಂಡು ಗರಿಷ್ಟವಾಗಿ ಕೆಲವಾರು ಸೆಕೆಂಡುಗಳ ಕಾಲ ಉಸಿರು ಕಟ್ಟಿ ಹಾಗೇ ಇರಿ. ಬಳಿಕ ನಿಧಾನವಾಗಿ ಕೈಗಳನ್ನು ಕೆಳಕ್ಕೆ ತರುತ್ತಾ ಮೊದಲ ಸ್ಥಾನಕ್ಕೆ ಬನ್ನಿ. ಈ ಆಸನ ನಿಮ್ಮ ಎರಡೂ ಕೈ ಮತ್ತು ಕಾಲುಗಳಿಗೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ತೊಡೆಯ ಸುತ್ತ ಇರುವ ಅನಗತ್ಯ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಈ ಆಸನದ ಸಮಯದಲ್ಲಿ ನಿಮ್ಮ ಕೈಗಳನ್ನು ನಿಮ್ಮ ಮುಂದಕ್ಕೂ ಚಾಚಬಹುದು ಅಥವಾ ಮೇಲಕ್ಕೂ ಚಾಚಬಹುದು.
ಇದನ್ನೂ ಓದಿ:ಅಸ್ತಮಾಕ್ಕೆ ಯೋಗ ಪರಿಹಾರ; ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವ 3 ಯೋಗಾಸನಗಳಿವು
ತ್ರಿಕೋನ ಭಂಗಿಯು ತೊಡೆಗಳು, ಸ್ನಾಯುಗಳು ಮತ್ತು ಸೊಂಟಗಳನ್ನು ಬಲಪಡಿಸುತ್ತದೆ, ಇದು ತೊಡೆಗಳನ್ನು ತೆಳ್ಳಗೆ ಕಾಣುವಂತೆ ಮಾಡುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಬೆನ್ನು ನೋವನ್ನು ನಿವಾರಿಸಲು ಇದು ಒಳ್ಳೆಯ ಆಸನವಾಗಿದೆ.
ನೇರವಾಗಿ ನಿಂತು, ನಿಮ್ಮ ಕಾಲುಗಳನ್ನು ಅಗಲ ಮಾಡಿ, ಬಲ ಪಾದವನ್ನು 90 ಡಿಗ್ರಿ ಮತ್ತು ಎಡ ಪಾದವನ್ನು 15 ಡಿಗ್ರಿಗಳಲ್ಲಿ ಇರಿಸಿ. ನಿಮ್ಮ ತೋಳುಗಳನ್ನು ಎರಡೂ ಬದಿಗಳಲ್ಲಿ ಅಗಲವಾಗಿ ಇರಿಸಿ. ಆಳವಾಗಿ ಉಸಿರಾಡಿ. ನಿಮ್ಮ ದೇಹವನ್ನು ಬಲ ಭಾಗಕ್ಕೆ ಮತ್ತು ಸೊಂಟದಿಂದ ಕೆಳಕ್ಕೆ ಬಗ್ಗಿಸಿ, ನಿಮ್ಮ ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲಕ್ಕೆ ತೆಗೆದುಕೊಳ್ಳಿ. ನಿಮ್ಮ ಸೊಂಟವನ್ನು ನೇರವಾಗಿ ಇರಿಸಿಕೊಳ್ಳಿ. ಈಗ ಬಲಗೈಯನ್ನು ಪಾದ ಅಥವಾ ಕಾಲ್ಬೆರಳುಗಳ ಮೇಲೆ ಇರಿಸಿ, ನಿಮ್ಮ ಎಡಗೈಯನ್ನು ಚಾವಣಿಯ ಕಡೆಗೆ ಮಾಡಿ. ನಿಮ್ಮ ದೇಹವನ್ನು ಹಿಗ್ಗಿಸಿ ಮತ್ತು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ಇದೇ ಭಂಗಿಯಲ್ಲಿ 20- 25 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಆರಂಭಿಕ ಸ್ಥಾನಕ್ಕೆ ಬರುವಾಗ ಉಸಿರನ್ನು ತೆಗೆದುಕೊಂಡು ಮೇಲಕ್ಕೆ ಬನ್ನಿ. ಬಳಿಕ ನೀವು ಇದನ್ನು ಇನ್ನೊಂದು ಬದಿಯಲ್ಲಿ ಪುನರಾವರ್ತಿಸಬಹುದು.
ಸೇತುಬಂಧಾಸನ ಅಥವಾ ಆಂಗ್ಲ ಭಾಷೆಯಲ್ಲಿ “ಬ್ರಿಡ್ಜ್ ಪೋಸ್” ಎಂತಲೂ ಕರೆಯಲ್ಪಡುವ ಈ ಆಸನವು ರಕ್ತದೊತ್ತಡವನ್ನು ನಿರ್ವಹಿಸಲು ಉತ್ತಮವಾಗಿದೆ. ಈ ಭಂಗಿಯು ತೊಡೆಗಳು ಮತ್ತು ಕೆಳ ಬೆನ್ನನ್ನು ಬಲಪಡಿಸುತ್ತದೆ ಹಾಗೂ ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ. ಇದು ಒತ್ತಡ ಮತ್ತು ಸೌಮ್ಯ ಖಿನ್ನತೆಯನ್ನು ಸಹ ನಿವಾರಿಸುತ್ತದೆ.
ಮೊದಲಿಗೆ, ನಿಮ್ಮ ಎರಡೂ ಕಾಲುಗಳು ಮುಂದಕ್ಕೆ ಚಾಚಿ ಕೆಳಗೆ ಕುಳಿತುಕೊಳ್ಳಬೇಕು. ನಿಧಾನವಾಗಿ ಹಾಗೆ ಹಿಂದಕ್ಕೆ ಬಾಗಿ ಮಲಗಿ. ನಿಮ್ಮ ಪಾದಗಳಿಗೆ ಮತ್ತು ಸೊಂಟಕ್ಕೆ ಸ್ವಲ್ಪ ಅಂತರವಿರುವಂತೆ ಮಂಡಿಯನ್ನು ಮಡಿಸಿ. ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿ ಅಂಗೈ ಕೆಳಕ್ಕೆ ಮುಖ ಮಾಡುವಂತೆ ಇರಿಸಬೇಕು. ದೀರ್ಘವಾಗಿ ಉಸಿರಾಡುತ್ತಾ ನಿಧಾನವಾಗಿ ಬೆನ್ನನ್ನು ಎತ್ತಬೇಕು. ನಿಮ್ಮ ಗದ್ದವು ನಿಮ್ಮ ಎದೆಭಾಗಕ್ಕೆ ತಾಕುವ ತನಕ ಮೇಲೆತ್ತಬೇಕು. ನಿಮ್ಮ ಎರಡೂ ತೊಡೆಗಳು ಸಮನಾಂತರವಾಗಿರಬೇಕು. ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ, ನಿಮ್ಮ ಬೆನ್ನು ಮೇಲೆತ್ತಿ. ಇದೇ ಭಂಗಿಯಲ್ಲಿ ಕೆಲ ಕ್ಷಣಗಳ ಕಾಲ ಇರಬೇಕು. ಆದರೆ ಈ ಆಸನ ಮಾಡುವಾಗ ನುರಿತ ಯೋಗಾ ತರಬೇತಿದಾರರ ಸಲಹೆ ಸೂಚನೆಗಳ ಆಧಾರದ ಮೇಲೆ ಅಭ್ಯಾಸ ಮಾಡುವುದು ಹೆಚ್ಚು ಸೂಕ್ತ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ