ವಿಮಾನ ನಿಲ್ದಾಣಗಳು ಸೆಲೆಬ್ರಿಟಿಗಳ ಫ್ಯಾಷನ್ ಲೋಕ ಎಂದರೆ ತಪ್ಪಾಗಲಾರದು. ಸ್ಟೈಲಿಶ್ ಆಗಿ ಕಾಣಲು ವಿನೂತನ ರೀತಿಯ ಬಟ್ಟೆಗಳನ್ನು ತೊಡುವುದನ್ನು ನೀವು ನೋಡಿರಬಹುದು. ನಿಮಗೂ ಏರ್ಪೋರ್ಟ್ಗಳಿಗೆ ಹೋಗ ಬೇಕಾಗಿ ಬಂದಾಗ ಯಾವ ರೀತಿಯ ಬಟ್ಟೆ, ಬ್ಯಾಗ್, ಚಪ್ಪಲಿಗಳನ್ನು ಹಾಕಿಕೊಳ್ಳಬೇಕು ಎಂದು ಗೊಂದಲವಾಗಿದೆಯಾ? ವಿಮಾನದಲ್ಲಿ ದೀರ್ಘ ಪ್ರಯಾಣ ಮಾಡುವಾಗ ಯಾವ ರೀತಿಯ ಬಟ್ಟೆಗಳು ಆರಾಮ ದಾಯಕವಾಗಿರುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನಿಮಗೆ ಸ್ಟೈಲಿಶ್ ಆಗಿ ಕಾಣುವುದರ ಜೊತೆಗೆ ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಬೇಕು, ಪದೇ ಪದೇ ವಾಶ್ ರೂಮ್ ಹೋಗುವ ಅಗತ್ಯವಿರುತ್ತದೆ. ಇದೆಲ್ಲದರ ಜೊತೆಗೆ ಈ ಬಟ್ಟೆಗಳು ನಿಮ್ಮ ಪ್ರಯಾಣದಲ್ಲಿ ಅನಾನುಕೂಲಕರ ವಾಗಿರಬೇಕು. ಹೊರತು ಕಿರಿಕಿರಿ ಉಂಟು ಮಾಡಬಾರದು ಹಾಗಾಗಿ ಈಗಲೇ ಅನೇಕ ಅಂಶಗಳಿದ್ದು ಇದರಲ್ಲಿ ಆರಾಮಕ್ಕೆ ಆದ್ಯತೆ ನೀಡುವುದು ಉತ್ತಮವಾಗಿದೆ. ಚಿಂತಿಸಬೇಡಿ, ನೀವು ನಿಮ್ಮ ಶೈಲಿಯ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಿಮಗಾಗಿ ನಾವು ಕೆಲವು ಸಲಹೆಗಳನ್ನು ನೀಡುತ್ತೇವೆ. ಅದು ನಿಮಗೆ ನಿಮ್ಮ ನೈಜ ಶೈಲಿ ಮತ್ತು ಆರಾಮದಾಯಕವಾಗಿ ಸ್ಟೈಲ್ ಮಾಡಲು ಸಹಕಾರಿಯಾಗುತ್ತದೆ.
ಬಹಳ ಹಿಂದೆ ಬಿಗಿಯಾದ ಜೀನ್ಸ್ ಫ್ಯಾಶನ್ ಆಗಿದ್ದವು ಆದರೆ ಈಗ ಅಲ್ಲ. ಈಗೇನಿದ್ದರೂ ಪೇಪರ್ ಬ್ಯಾಗ್ ಜೀನ್ಸ್ ನ ಹವಾ! ಇದು ಸುಂದರವಾಗಿ ಕಾಣುವುದರ ಜೊತೆಗೆ ಟೈಟ್ ಜೀನ್ಸ್ ನ ಹಾಗೇ ನಿಮ್ಮ ರಕ್ತದ ಹರಿವನ್ನು ಅಡ್ಡಿಪಡಿಸುವುದಿಲ್ಲ. ಇದು ದೀರ್ಘಾವಧಿಯ ಪ್ರವಾಸಕ್ಕೂ ಒಳ್ಳೆಯದು. ಜೊತೆಗೆ ಫ್ಯಾಷನ್ ಪ್ರಿಯರಿಗೆ ಇದು ಗ್ಲಾಮ್ ಲುಕ್ ನೀಡುವುದರಿಂದ ಇದೊಂದು ಒಳ್ಳೆಯ ಆಯ್ಕೆಯಾಗಿದೆ.
ಪ್ರಸ್ತುತ, ನೀವು ವಾಸಿಸುವ ಸ್ಥಳದಲ್ಲಿ ಬಿಸಿಲು ಜಾಸ್ತಿ ಇದ್ದು ಅತೀ ಹೆಚ್ಚು ಶಾಖ ಇದ್ದರೆ ಅದು ಸಾಮಾನ್ಯ. ಆದರೆ ವಿಮಾನದಲ್ಲಿ ಹಾಗಲ್ಲ ಸಾಕಷ್ಟು ತಂಪಾಗಿರುತ್ತವೆ, ಹಾಗಾಗಿ ತೆಳುವಾದ ಅಥವಾ ಹಗುರವಾದ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಕಾಟನ್ ಕಾರ್ಡಿಗನ್ ಅಥವಾ ಹಗುರವಾದ ಜಾಕೆಟ್ ಅನ್ನು ಒಯ್ಯಿರಿ. ಬೇಡದಿದ್ದಲ್ಲಿ ಅದನ್ನು ಬಳಸದೇ ಇರಬಹುದು ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ಜಾಕೆಟ್ ಹಾಕಿಕೊಳ್ಳುವುದರಿಂದ ಬೆಚ್ಚಗಿನ ಅನುಭವ ನೀಡುವುದರ ಜೊತೆಗೆ ಸುಂದರವಾಗಿ ಕಾಣುತ್ತದೆ.
ಜಂಪ್ಸೂಟ್ಗಳನ್ನು ಧರಿಸುವ ಬದಲು, ಕೋ-ಆರ್ಡ್ ಸೆಟ್ಗಳನ್ನು ಧರಿಸುವುದು ಒಳ್ಳೆಯದು. ಏಕೆಂದರೆ ಇದು ಶ್ರಮ ರಹಿತ ಮತ್ತು ಆಕರ್ಷಕ ವಾಗಿರುವುದಲ್ಲದೆ, ಜಂಪ್ಸೂಟ್ಗಳನ್ನು ಧರಿಸಿ ವಾಶ್ರೂಮ್ ಹೋಗುವುದರಿಂದ ಪಡುವ ತೊಂದರೆಗಳನ್ನು ದೂರ ಮಾಡುತ್ತವೆ. ಜೊತೆಗೆ ಒಳ್ಳೆಯ ಲುಕ್ ಅನ್ನು ನೀಡುತ್ತದೆ.
ಇದನ್ನೂ ಓದಿ: ಜೀವನಶೈಲಿ ಬದಲಾಯಿಸಿ ಹಾಗೂ ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಿರಿ
ಖಂಡಿತವಾಗಿಯೂ, ಟೋಟ್ ಬ್ಯಾಗ್ಗಳನ್ನು ಕ್ಲಾಸಿ ಲುಕ್ ನೀಡುವುದರ ಜೊತೆಗೆ ಪ್ರಯಾಣದ ವಿಷಯಕ್ಕೆ ಬಂದಾಗ, ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಜೊತೆಗೆ ನೀವು ನಿಮ್ಮ ವಸ್ತುಗಳನ್ನು ಅತ್ಯಂತ ಆರಾಮವಾಗಿ ಸಾಗಿಸಬಹುದು.
ವಿಮಾನ ನಿಲ್ದಾಣಕ್ಕೆ ಹೋಗುವಾಗ ನಿಮ್ಮ ಕಾಲುಗಳಿಗೆ ಹೆಚ್ಚು ಆರಾಮ ನೀಡುವ ಚಪ್ಪಲಿ ಅಥವಾ ಶೂಗಳನ್ನು ಧರಿಸಿ. ಹೀಗಿರುವಾಗ ಸ್ಲಿಪ್-ಆನ್ ಶೂಗಳು ಅತ್ಯುತ್ತಮ ಆಯ್ಕೆಯಾಗಿದೆ ಏಕೆಂದರೆ ಅವುಗಳನ್ನು ಭದ್ರತಾ ತಪಾಸಣೆಯ ಸಮಯದಲ್ಲಿಯೂ ನಿಮಗೆ ಯಾವುದೇ ತೊಂದರೆ ಯಾಗುವುದಿಲ್ಲ ಜೊತೆಗೆ ವಿಮಾನ ವಿಳಂಬವಾಗಿ ಎಷ್ಟು ಹೊತ್ತು ಕುಳಿತರು ಕಿಚಿಕಿಚಿ ಅಥವಾ ಏನು ತೊಂದರೆ ಯಾಗದೇ ಆರಾಮವಾಗಿರಬಹುದು.
Published On - 11:21 am, Wed, 7 June 23