Weight Loss: 40ರ ನಂತರವೂ ನೀವು ಸ್ಲಿಮ್​ ಆಗಿ ಕಾಣಬೇಕಾ? ಹಾಗಾದ್ರೆ ನಿಮ್ಮ ಜೀವನಶೈಲಿ ಹೀಗಿರಬೇಕು

ಎಲ್ಲರಿಗೂ ಎಲ್ಲಾ ವಯಸ್ಸಿನಲ್ಲೂ ತಾವು ಚೆಂದವಾಗಿ ಕಾಣಬೇಕು, ಸ್ಲಿಮ್(Slim)  ಹಾಗೂ ಫಿಟ್​ ಆಗಿರಬೇಕು ಎನ್ನುವ ಬಯಕೆ ಇದ್ದೇ ಇರುತ್ತೆ. ಈ ರೀತಿ ಇರಬೇಕೆಂದರೆ ನೀವು ಸ್ವಲ್ಪ ಆರೋಗ್ಯದ ಬಗ್ಗೆ ಗಮನಕೊಡಲೇಬೇಕು.

Weight Loss: 40ರ ನಂತರವೂ ನೀವು ಸ್ಲಿಮ್​ ಆಗಿ ಕಾಣಬೇಕಾ? ಹಾಗಾದ್ರೆ ನಿಮ್ಮ ಜೀವನಶೈಲಿ ಹೀಗಿರಬೇಕು
Weight Loss
Follow us
| Updated By: ನಯನಾ ರಾಜೀವ್

Updated on: Dec 12, 2022 | 4:30 PM

ಎಲ್ಲರಿಗೂ ಎಲ್ಲಾ ವಯಸ್ಸಿನಲ್ಲೂ ತಾವು ಚೆಂದವಾಗಿ ಕಾಣಬೇಕು, ಸ್ಲಿಮ್(Slim)  ಹಾಗೂ ಫಿಟ್​ ಆಗಿರಬೇಕು ಎನ್ನುವ ಬಯಕೆ ಇದ್ದೇ ಇರುತ್ತೆ. ಈ ರೀತಿ ಇರಬೇಕೆಂದರೆ ನೀವು ಸ್ವಲ್ಪ ಆರೋಗ್ಯದ ಬಗ್ಗೆ ಗಮನಕೊಡಲೇಬೇಕು. ನಲವತ್ತು ವರ್ಷ ದಾಟಿದ ಬಳಿಕ ತೂಕದ ಸಮತೋಲನವನ್ನು ಕಾಯ್ದುಕೊಳ್ಳುವುದು ಒಂದು ಸವಾಲು.

ಅದಕ್ಕೆ ಡೆಡಿಕೇಷನ್​ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಈ ವಯಸ್ಸಿನ ನಂತರ ದೇಹದಲ್ಲಿ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ನಿಷ್ಕ್ರಿಯತೆ , ಹಾರ್ಮೋನ್​ಗಳ ಏರಿಳಿತದಿಂದಾಗಿ ಬೊಜ್ಜು ಶೇಖರಣೆಗೊಳ್ಳುತ್ತದೆ. 40ರ ನಂತರವೂ ನಿಮ್ಮ ತೂಕವನ್ನು ಸಮತೋಲನದಲ್ಲಿಟ್ಟುಕೊಂಡು ಸ್ಲಿಮ್ ಆಗಿ ಕಾಣುವಂತೆ ಮಾಡಲು ಏನು ಮಾಡಬೇಕು ಮಾಹಿತಿ ಇಲ್ಲಿದೆ.

ತಣ್ಣನೆಯ ಸ್ನಾನ ಮಾಡಿ ನಿತ್ಯ ನೀವು ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ, ಸಾಕಷ್ಟು ಅಧ್ಯಯನದಲ್ಲಿ ನೀವು ತಣ್ಣನೆಯ ಸ್ನಾನ ಮಾಡುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಎಂದು ಹೇಳಿದೆ ಅದರ ಜತೆಗೆ ನರಮಂಡಲವನ್ನು ಶಾಂತಗೊಳಿಸುತ್ತದೆ.

ಬೇಗ ನಿದ್ರೆ ಮಾಡಿ ನೀವು ಉತ್ತಮವಾಗಿರಲು ಹಾಗೂ ತೂಕ ಹೆಚ್ಚಳವನ್ನು ತಡೆಯಲು ನಿತ್ಯ ಕನಿಷ್ಠ 7-8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವುದು ಅತ್ಯಗತ್ಯ. ನಿದ್ರೆಯನ್ನು ಕಡಿಮೆ ಮಾಡುವುದರಿಂದ ಆ ಸಂದರ್ಭದಲ್ಲಿ ನಿಮಗೆ ಏನೋ ತಿನ್ನುವ ಬಯಕೆಯಾಗಬಹುದು, ಪದೇ ಪದೇ ಏನನ್ನೋ ತಿನ್ನಬೇಕೆನಿಸಬಹುದು. ಹೀಗಾಗಿ ನಿಮಗೆ ಉತ್ತಮ ನಿದ್ರೆ ಬೇಕೇ ಬೇಕು.

ಮತ್ತಷ್ಟು ಓದಿ: Weight Loss: ತೂಕ ಇಳಿಸಿಕೊಳ್ಳಬೇಕಾ, ಬೆಳಗಿನ ಉಪಾಹಾರದಲ್ಲಿ ಬ್ರೌನ್ ಬ್ರೆಡ್ ಬದಲಿಗೆ ಈ ಬ್ರೆಡ್ ತಿನ್ನಿ

ರಾತ್ರಿ ಊಟ ಮಾಡಬೇಡಿ ದೇಹದ ಕೊಬ್ಬನ್ನು ಸುಡಲು ನೀವು ರಾತ್ರಿ ಹೊತ್ತು ಏನಾದರೂ ತಿನ್ನುವುದನ್ನು ತಪ್ಪಿಸಬೇಕು. ರಾತ್ರಿಯಿಂದ ಬೆಳಗ್ಗೆವರೆಗೆ ಉಪವಾಸ ಇರುವುದರಿಂದ ನಿಮ್ಮ ದೇಹದಲ್ಲಿ ಈಗಾಗಲೇ ಇರುವ ಆಹಾರವನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ.

ಆಲ್ಕೋಹಾಲ್​ನಿಂದ ದೂರವಿರಿ ನಿತ್ಯ ಮದ್ಯಪಾನ ಮಾಡುವುದಿಲ್ಲ, ವಾರಕ್ಕೊಮ್ಮೆ ಕುಡಿಯುವುದು ಎನ್ನುವವರೂ ಕೂಡ ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡಲೇಬೇಕು. ಪ್ರತಿ ವಾರವೂ ಕುಡಿಯುವುದನ್ನು ತಪ್ಪಿಸಬೇಕು. ಆಲ್ಕೋಹಾಲ್​ನಲ್ಲಿ ಹೆಚ್ಚಿನ ಕ್ಯಾಲೋರಿ ಇದ್ದು, ಅದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಆರೋಗ್ಯಕರ ಕೊಬ್ಬನ್ನು ಸೇರಿಸಿ ಬಾದಾಮಿ, ಮೀನು, ವಾಲ್​ನಟ್ಸ್​ ಹಾಗೂ ದೇಸಿ ತುಪ್ಪದಲ್ಲಿರುವಂತಹ ಆರೋಗ್ಯಕರ ಕೊಬ್ಬುಗಳು ಹಸಿವನ್ನು ನಿಗ್ರಹಿಸುವಾಗ ವಿಟಮಿನ್ ಎ, ಇ ಹಾಗೂ ಡಿ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಬಹುದು.

ಹೆಚ್ಚು ಪ್ರೋಟೀನ್ ಸೇವಿಸಿ ಪ್ರೋಟೀನ್​ಗಳು ಹಸಿವನ್ನು ನಿಗ್ರಹಿಸುವ ಮ್ಯಾಕ್ರೋನ್ಯೂಟ್ರಿಯೆಂಟ್​ ಆಗಿದ್ದು ಅದು ಹಸಿವು ಹಾಗೂ ಕೊಬ್ಬಿನ ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಮತ್ತಷ್ಟು ಓದಿ: Anjeer Benefits: ನೀವು ತೂಕ ಇಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದೀರಾ ಹಾಗಾದರೆ ಈ ಹಣ್ಣು ನಿಮಗೆ ಸಹಾಯ ಮಾಡಬಹುದು

ತೂಕ ಎತ್ತುವುದು ತೂಕ ನಷ್ಟಕ್ಕಾಗಿ ವೇಯ್ಟ್​ ಲಿಫ್ಟಿಂಗ್ ಅಥವಾ ತೂಕ ಎತ್ತುವ ಅಭ್ಯಾಸ ಮಾಡಬಹುದು, ಇದರಿಂದ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ.

ಆರೋಗ್ಯಕರ ತಿಂಡಿಗಳನ್ನು ಆರಿಸಿ ಆರೋಗ್ಯಕರ ತಿಂಡಿಗಳು ತೂಕ ನಿರ್ವಹಣೆಗೆ ಪ್ರಮುಖವಾಗಿವೆ ಏಕೆಂದರೆ ಅವು ಹಸಿವನ್ನು ಕಡಿಮೆ ಮಾಡುತ್ತವೆ ಹಾಗೆಯೇ ರಕ್ತದಲ್ಲಿರುವ ಸಕ್ಕರೆ ಮಟ್ಟ ಹೆಚ್ಚಳವನ್ನು ಕಡಿಮೆ ಮಾಡುತ್ತದೆ. ಚಿಪ್ಸ್ ಹಾಗೂ ಬಿಸ್ಕತ್ತುಗಳನ್ನು ತಿನ್ನುವ ಬದಲು ಡ್ರೈಫ್ರೂಟ್ಸ್​ಗಳನ್ನು ನೀವು ತಿನ್ನಬಹುದು.

ಬೆಳಗ್ಗೆ ಬೇಗ ಎದ್ದೇಳಿ ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ, ತೂಕ ನಿರ್ವಹಣೆಗಾಗಿ ಜಿಮ್​ಗೆ ಹೋಗಬಹುದು, ಇದರಿಂದ ಕೂಡ ದೀರ್ಘಕಾಲದ ಅಥವಾ ತೀವ್ರವಾದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು