Homemade Protein Powder: ನಿಮ್ಮ ದೇಹದ ಆರೋಗ್ಯಕ್ಕೆ ಮನೆಯಲ್ಲಿಯೇ ಪ್ರೋಟೀನ್ ಪೌಡರ್ ತಯಾರಿಸಿ
ನಿಮಗಾಗಿ ಪ್ರೋಟೀನ್ ಪುಡಿಯನ್ನು ತಯಾರಿಸುವ ಸಿಂಪಲ್ ವಿಧಾನವನ್ನು ಪೌಷ್ಟಿಕತಜ್ಞರಾದ ಅವಂತಿ ದೇಶಪಾಂಡೆಯವರು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ನೀವು ಸಾಮಾನ್ಯವಾಗಿ ಅಂಗಡಿಯಿಂದ ಖರೀದಿಸಿದ ಪ್ರೋಟೀನ್ ಪುಡಿ(Protein Powder) ಗಳನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುತ್ತೀರಿ. ಅವುಗಳು ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುತ್ತದೆ ಆದರೆ ಅದಕ್ಕೆ ಕೃತಕ ಸುವಾಸನೆ ಹಾಗೂ ತಿಂಗಳು ಕಾಲ ಹಾಳಾಗದಂತೆ ಸಂರಕ್ಷಕಗಳನ್ನು ಕೂಡ ಸೇರಿಸಲಾಗುತ್ತದೆ. ಪ್ರೋಟೀನ್ ಪೌಡರ್, ಸಾಮಾನ್ಯವಾಗಿ, ನಿಮ್ಮ ಆಹಾರದಲ್ಲಿ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಪ್ರೋಟೀನ್ ದೇಹದ ವಿವಿಧ ಕಾರ್ಯಗಳಿಗೆ ಅವಶ್ಯಕವಾಗಿದೆ. ಇದು ನಿಮ್ಮ ದೇಹದ ತೂಕ ಇಳಿಕೆ, ಮೂಳೆಗಳನ್ನು ಆರೋಗ್ಯವಾಗಿಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕವಾಗಿದೆ.
ನಿಮ್ಮ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಲು ನೀವು ಬಯಸಿದರೆ ಮನೆಯಲ್ಲಿಯೇ ಆರೋಗ್ಯಕರ ಪ್ರೋಟೀನ್ ಪುಡಿಯನ್ನು ತಯಾರಿಸಿ. ಆದರೆ ಯಾವ ರೀತಿ ತಯಾರಿಸುವುದು ಎಂದು ಗೊತ್ತಿಲ್ಲದ್ದಿದ್ದರೆ ಚಿಂತಿಸದಿರಿ. ನಿಮಗಾಗಿ ಪ್ರೋಟೀನ್ ಪುಡಿಯನ್ನು ತಯಾರಿಸುವ ಸಿಂಪಲ್ ವಿಧಾನವನ್ನು ಪೌಷ್ಟಿಕತಜ್ಞರಾದ ಅವಂತಿ ದೇಶಪಾಂಡೆಯವರು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಮೊದಲಿಗೆ ಬಾದಾಮಿ ಮತ್ತು ಪಿಸ್ತಾಗಳನ್ನು ಹುರಿದು ಒರಟಾದ ಪುಡಿಮಾಡಿ. ನಂತರ ಇದಕ್ಕೆ ಒಂದೊಂದಾಗಿ ಹುರಿದ ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು ಮತ್ತು ಕಲ್ಲಂಗಡಿ ಬೀಜಗಳು ಪುಡಿ ಮಾಡಿ ಹಾಕಿ. ನಂತರ ಪುಡಿ ಮಾಡಿದ ಎಲ್ಲಾ ಬೀಜಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಎರಡು ಭಾಗಗಳಾಗಿ ವಿಂಗಡಿಸಿ. ಈ ರೀತಿ ಮಾಡುವುದರಿಂದ ಎರಡು ವಿಭಿನ್ನ ರೀತಿಯ ಸುವಾಸನೆಯ ಪ್ರೋಟೀನ್ ಪುಡಿಯನ್ನು ತಯಾರಿಸಬಹುದಾಗಿದೆ.
ಇದನ್ನು ಓದಿ: ನೀವು ಸುಲಭವಾಗಿ ಮನೆಯಲ್ಲಿಯೇ ಖರ್ಜೂರದ ಬರ್ಫಿ ತಯಾರಿಸಿ
ಕೇಸರಿ ಎಲೈಚಿ ಪ್ರೋಟೀನ್ ಪೌಡರ್ ರೆಸಿಪಿ: ಮೊದಲಿಗೆ ಕಡಲೇ ಬೇಳೆಯನ್ನು ಪುಡಿಮಾಡಿ ಮತ್ತು ಇದನ್ನು ಈಗಾಗಲೇ ಮಾಡಿಟ್ಟ ಮಿಶ್ರಣಕ್ಕೆ ಈ ಪುಡಿಯನ್ನು ಸೇರಿಸಿ. ಜೊತೆಗೆ ಉತ್ತಮ ಸುವಾಸನೆಗಾಗಿ ಎಲೈಚಿ ಪುಡಿ ಅಥವಾ ಕೇಸರ್ ಪುಡಿಯನ್ನು ಸೇರಿಸಿ.
ಪ್ರೋಟೀನ್ ಚಾಕೊಲೇಟ್ ಪೌಡರ್: ಉಳಿದ ಬೀಜಗಳ ಮಿಶ್ರಣಕ್ಕೆ ಸ್ವಲ್ಪ ಕೆನೆರಹಿತ ಹಾಲಿನ ಪುಡಿ ಮತ್ತು ಕೋಕೋ ಪೌಡರ್ ಸೇರಿಸಿ. ಚಾಕೊಲೇಟ್ ಪ್ರೋಟೀನ್ ಪುಡಿ ಸಿದ್ಧವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: