ತುಟಿಗಳ ಮೇಲಿನ ಬಿಳಿ ಕಲೆಗಳನ್ನು ಹೋಗಲಾಡಿಸುವುದು ಹೇಗೆ? ಈ ಸಲಹೆ ಪಾಲಿಸಿ
ಎಲ್ಲರಿಗೂ ಕೂಡ ತಮ್ಮ ತುಟಿಗಳು ನೋಡಲು ಆಕರ್ಷಕವಾಗಿರಬೇಕು ಎನ್ನುವುದಿರುತ್ತದೆ. ಆದರೆ ಸೂರ್ಯನ ಹಾನಿಕಾರಕ ಕಿರಣ, ಶುಷ್ಕ ಗಾಳಿ, ಧೂಳುಗಳಿಂದ ತುಟಿಗಳ ಅಂದಗೆಡುತ್ತದೆ. ಅದಲ್ಲದೇ, ಚರ್ಮದಲ್ಲಿ ಮೇದೋಗ್ರಂಥಿಗಳು ಹೆಚ್ಚು ಸ್ರವಿಸುವಿಕೆಯಾದಾಗ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಸೋಂಕು ಉಂಟಾಗಿ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆಯಲ್ಲಿ ತುಟಿಗಳನ್ನು ಆರೈಕೆ ಮಾಡುವುದು ಬಹಳ ಮುಖ್ಯ, ಈ ಬಿಳಿ ಕಲೆಗಳು ನಿವಾರಿಸಲು ಸರಳ ಮನೆ ಮದ್ದುಗಳು ಇಲ್ಲಿವೆ.
ಹೆಣ್ಣು ಮಕ್ಕಳ ಮುಖದ ಅಂದ ಹೆಚ್ಚಿಸುವುದೇ ಈ ಗುಲಾಬಿ ಬಣ್ಣದ ಸುಂದರ ತುಟಿಗಳು. ಆದರೆ ಈ ತುಟಿಗಳ ಅಂದಗೆಟ್ಟರೆ ಏನು ಚಂದ ಇರುತ್ತೆ ಹೇಳಿ. ಹೀಗಾಗಿ ಹೆಂಗಳೆಯರು ತುಟಿಗಳನ್ನು ಮೃದುವಾಗಿ ಹಾಗೂ ಕಲೆಮುಕ್ತವಾಗಿರುವಂತೆ ನೋಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ತುಟಿಗಳ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಮನೆಯಲ್ಲಿರುವ ಈ ಮನೆ ಮದ್ದನ್ನು ಪ್ರಯತ್ನಿಸಿದರೆ ತುಟಿಯ ಮೇಲಿನ ಬಿಳಿ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತದೆ.
- ಸ್ವಲ್ಪ ನೀರಿಗೆ ಒಂದೆರಡು ಚಮಚ ನಿಂಬೆರಸವನ್ನು ಸೇರಿಸಿ, ಹತ್ತಿ ಉಂಡೆಯಲ್ಲಿ ಅದ್ದಿಕೊಳ್ಳಿ. ಇದನ್ನು ನಿಮ್ಮ ತುಟಿಗಳ ಮೇಲೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಬಿಳಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
- ಮೊದಲಿಗೆ ಬೆಳ್ಳುಳ್ಳಿ ಎಸಳು ಗಳನ್ನು ಜಜ್ಜಿಕೊಂಡು, ಅದಕ್ಕೆ ಬಾದಾಮಿ ಎಣ್ಣೆ ಸೇರಿಸಿಕೊಳ್ಳಿ. ಇದನ್ನು ದಿನನಿತ್ಯ ತುಟಿಗಳಿಗೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಾಲ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದು ಪರಿಣಾಮಕಾರಿ ಮನೆ ಮದ್ದಾಗಿದೆ.
- ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ಎರಡೇ ವಾರಗಳಲ್ಲಿ ಕಲೆಯೂ ಇಲ್ಲದಂತಾಗುತ್ತದೆ.
- ಒಂದು ಚಮಚ ಅರಶಿನ ಪುಡಿಗೆ ಎರಡು ಚಮಚ ಸಾಸಿವೆ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ಕಲೆಯಿದ್ದಲ್ಲಿ ಹಚ್ಚಿದರೆ ಕಲೆಯೂ ನಿವಾರಣೆಯಾಗುತ್ತದೆ.
- ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಹತ್ತಿ ಉಂಡೆ ಅದ್ದಿ, ಇದನ್ನು ತುಟಿಗಳಲ್ಲಿ ಕಲೆ ಇರುವಲ್ಲಿಗೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
- ಆಲಿವ್ ತೈಲವನ್ನು ತುಟಿಗಳಲ್ಲಿ ಕಲೆ ಇರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ, ಒಂದು ಗಂಟೆ ಕಾಲ ಹಾಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ದಿನಕ್ಕೆ ಎರಡು ಮೂರು ಸಲ ಈ ಮನೆ ಮದ್ದನ್ನು ಹಚ್ಚಿದರೆ ಕಲೆಯೂ ನಿವಾರಣೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ