
ಈ ಬೇಸಿಗೆ (Summer ) ದೇಹ ತುಂಬಾ ಬಿಸಿಯಾಗಿರುತ್ತದೆ. ದೇಹದಲ್ಲಿ ಒತ್ತಡ ಉಂಟಾಗುವುದು ಅಥವಾ ಸುಸ್ತು ಹೀಗೆ ಅನೇಕ ಬದಲಾವಣೆಗಳು ನಮ್ಮ ದೇಹದಲ್ಲಿ ಕಂಡುಬರುತ್ತದೆ. ಬಿಸಿಲು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ತಲೆಯ ಮೇಲು ಇದರ ಪರಿಣಾಮವನ್ನು ಉಂಟು ಮಾಡುತ್ತದೆ. ಇದರಿಂದ ತಲೆನೋವು ಕೂಡ ಬರುವ ಸಾಧ್ಯತೆ. ತಲೆ ಬಿಸಿಯಾದಾಗ ತಲೆನೋವು (headache) ಬರುವುದು ಸಹಜ, ಆದರೆ ಅದನ್ನು ಕಡಿಮೆ ಮಾಡಲು ಕೆಲವೊಂದು ಸಲಹೆಗಳು ಇಲ್ಲಿದೆ. ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಎಳ್ಳು ಎಣ್ಣೆ ತುಂಬಾ ಉಪಕಾರಿ. ಪ್ರತಿದಿನ ಎಳ್ಳೆಣ್ಣೆಯಿಂದ ನೆತ್ತಿಗೆ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ದೇಹದಲ್ಲಿ ಉಲ್ಲಾಸ ಹಾಗೂ ತಲೆನೋವು ಹೋಗುತ್ತದೆ. ಹೆಚ್ಚು ಹೊತ್ತು ಬಿಸಿಲಿನಲ್ಲಿ ಸಮಯ ಕಳೆಯುವುದರಿಂದ ತಲೆನೋವು ಬರುತ್ತದೆ.
ತಲೆ ನೋವುವನ್ನು ತಡೆಯಲು ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಿ, ಹೀಗೆ ಮಾಡಿದ್ರೆ ತಲೆನೋವು ಬರುವುದಿಲ್ಲ. ಒಂದು ವೇಳೆ ಬಿಸಿಲಿಗೆ ಹೋಗಬೇಕೆಂದರೆ, ಛತ್ರಿಯನ್ನು ತೆಗೆದುಕೊಂಡು ಹೋಗುವುದು ಅಥವಾ ತಲೆಯ ಮೇಲೆ ಸ್ಕಾರ್ಫ್ ಅಥವಾ ಕ್ಯಾಪ್ ಧರಿಸುವುದು ಒಳ್ಳೆಯದು. ಇಂತಹ ಮುನ್ನೆಚ್ಚರಿಕೆ ಕ್ರಮದಿಂದ ತಲೆ ನೋವು ಬರದಂತೆ ನೋಡಿಕೊಳ್ಳಬಹುದು. ಈ ಬೇಸಿಗೆಯಲ್ಲಿ ಬಿಸಿಲಿಗೆ ಹೋದ್ರೆ ಮಾತ್ರವಲ್ಲದೆ ಬರುವ ತಲೆನೋವಿಗೆ ಮನೆಯಲ್ಲೇ ಮನೆಮದ್ದು ಮಾಡಬಹುದು.
1. ತುಳಸಿ ಮತ್ತು ಶುಂಠಿಯಿಂದ ತಯಾರಿಸಿದ ಚಹಾ ಮಾಡಿ ಕುಡಿಯಿರಿ ಯಾಕೆಂದರೆ ತಲೆಗೆ ಭಾರ ಎಂದಾಗ, ಅದನ್ನು ಕಡಿಮೆ ಮಾಡಲು ಒಂದು ದಿವ್ಯ ಔಷಧಿಯಾಗಿ ಈ ಚಾಹ ನಿರ್ವಹಿಸುತ್ತದೆ. ಈ ಚಹಾ ಕುಡಿಯುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಏಕೆಂದರೆ ಅದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದು ನೈಸರ್ಗಿಕ ಮನೆ ಮದ್ದು ಎಂದು ಹೇಳಲಾಗುತ್ತದೆ.
2.ಇನ್ನೊಂದು ಮಜ್ಜಿಗೆ, ಇದನ್ನು ಕುಡಿಯುವುದರಿಂದ ತಲೆನೋವು ಕಡಿಮೆ ಆಗುತ್ತದೆ. ಬೇಸಿಗೆಯಲ್ಲಿ ತಣ್ಣನೆಯ ಮಜ್ಜಿಗೆ ಕುಡಿಯುವುದರಿಂದ ದೇಹವು ತಂಪಾಗುತ್ತದೆ ಮತ್ತು ಬಾಯಾರಿಕೆಯೂ ತಣಿಸುತ್ತದೆ. ಇದು ದೇಹದಲ್ಲಿ ನೀರಿನ ಸಂಗ್ರಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಜ್ಜಿಗೆ ಕುಡಿಯುವುದರಿಂದ ತಲೆನೋವು ಮತ್ತು ಆಯಾಸ ಕಡಿಮೆಯಾಗುತ್ತದೆ.
3.ಜೀರ್ಣವಾಗುವ ಆಹಾರ ಸೇವನೆ ಮಾಡಿ, ಹೌದು ಮಜ್ಜಿಗೆ, ತಣ್ಣನೆಯ ಹಣ್ಣುಗಳು ಮತ್ತು ಸಲಾಡ್‌ಗಳಂತಹ ಆಹಾರಗಳು ದೇಹವನ್ನು ಹೈಡ್ರೀಕರಿಸುತ್ತವೆ. ಅವು ದೇಹದ ಉಷ್ಣತೆಯನ್ನು ಸಹ ಕಡಿಮೆ ಮಾಡುತ್ತವೆ.
4.ಸ್ವಲ್ಪ ವಿಶ್ರಾಂತಿ ಅಗತ್ಯವಾಗಿರುತ್ತದೆ. ದೇಹವನ್ನು ವಿಶ್ರಾಂತಿ ಮಾಡುವ ಮೂಲಕ ತಲೆನೋವು ಕಡಿಮೆಯಾಗಬಹುದು. ವಿಶ್ರಾಂತಿಯ ಸಮಯದಲ್ಲಿ, ದೇಹವು ಉತ್ತೇಜಿತವಾಗಿರುತ್ತದೆ ಮತ್ತು ಶಾಂತವಾಗಿರುತ್ತದೆ. ಅಂತಹ ವಿಶ್ರಾಂತಿ ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಏಪ್ರಿಲ್ 25 ರಂದು ನಡೆಯಲಿದೆ ಖಗೋಳ ವಿಸ್ಮಯ; ಗ್ರಹಗಳ ಸಂಯೋಗದಿಂದ ಆಕಾಶದಲ್ಲಿ ರೂಪುಗೊಳ್ಳಲಿದೆ ‘ಸ್ಮೈಲಿ ಫೇಸ್’
5.ಯೋಗ ಮತ್ತು ಪ್ರಾಣಾಯಾಮ ಮಾಡಿ. ತಕ್ಷಣಕ್ಕೆ ಕಡಿಮೆಯಾಗದಿದ್ದರು, ಮುಂದಿನ ದಿನಗಳಲ್ಲಿ ತಲೆ ನೋವು ಬರುವುದನ್ನು ತಡೆಯುತ್ತದೆ. ಯಾಮಗಳು ದೇಹವನ್ನು ಶಾಂತಗೊಳಿಸುತ್ತವೆ ಮತ್ತು ರಕ್ತದ ಹರಿವನ್ನು ಸುಧಾರಿಸುವ ಮೂಲಕ ತಲೆನೋವನ್ನು ತಡೆಯಬಹುದು. ಬೇಸಿಗೆಯಲ್ಲಿ ಈ ವ್ಯಾಯಾಮಗಳನ್ನು ಮಾಡುವುದರಿಂದ ದೇಹವು ಅಧಿಕ ಬಿಸಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Fri, 25 April 25