Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಪದೇಪದೆ ವಯಾಗ್ರ ಬಳಸುತ್ತೀರಾ?; ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ

ನೀವೇನಾದರೂ ಕಾಮ ಪ್ರಚೋದನೆಯನ್ನು ಹೆಚ್ಚಿಸುವ ವಯಾಗ್ರವನ್ನು ನಿಯಮಿತವಾಗಿ ಬಳಸುತ್ತಿದ್ದರೆ ಅದರಿಂದ ಉಂಟಾಗುವ ಅಪಾಯದ ಬಗ್ಗೆಯೂ ತಿಳಿದಿರುವುದು ಉತ್ತಮ.

ನೀವು ಪದೇಪದೆ ವಯಾಗ್ರ ಬಳಸುತ್ತೀರಾ?; ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ
ವಯಾಗ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 08, 2022 | 7:35 PM

ನವದೆಹಲಿ: ವೈವಾಹಿಕ ಜೀವನದಲ್ಲಿ ಲೈಂಗಿಕ ಸಂಬಂಧ ಬಹಳ ಮುಖ್ಯವಾದುದು. ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಪುರುಷರು- ಮಹಿಳೆಯರು ಅನೇಕ ರೀತಿಯ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊಲದೆಲ್ಲ ಈ ಬಗ್ಗೆ ವೈದ್ಯರ ಬಳಿ ಚರ್ಚಿಸಿ, ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದ ದಂಪತಿ ಇದೀಗ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಹೆಚ್ಚಾಗಿದೆ. ನೀವೇನಾದರೂ ಕಾಮ ಪ್ರಚೋದನೆಯನ್ನು ಹೆಚ್ಚಿಸುವ ವಯಾಗ್ರವನ್ನು ನಿಯಮಿತವಾಗಿ ಬಳಸುತ್ತಿದ್ದರೆ ಅದರಿಂದ ಉಂಟಾಗುವ ಅಪಾಯದ ಬಗ್ಗೆಯೂ ತಿಳಿದಿರುವುದು ಉತ್ತಮ. ಏಕೆಂದರೆ, ಇತ್ತೀಚಿನ ಅಧ್ಯಯನವೊಂದು ನಿರಂತರವಾಗಿ ವಯಾಗ್ರವನ್ನು ಬಳಸುವುದರಿಂದ ನಿಮ್ಮ ದೃಷ್ಟಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ನಿಮ್ಮನ್ನು ಕುರುಡರನ್ನಾಗಿ ಮಾಡುವ ಸಾಧ್ಯತೆಯೂ ಇದೆ ಎಂಬ ಅಂಶವನ್ನು ಬಯಲಿಗೆಳೆದಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ನಿಯಮಿತವಾಗಿ ವಯಾಗ್ರವನ್ನು ಬಳಸುವ ಜನರು ಹಠಾತ್ ದೃಷ್ಟಿ ಕಳೆದುಕೊಳ್ಳುವುದು, ಬೆಳಕಿನ ತೀಕ್ಷ್ಣತೆಯನ್ನು ಎದುರಿಸಲು ಸಾಧ್ಯವಾಗದಂತಾಗುವುದು ಮುಂತಾದ ಸಮಸ್ಯೆಗಳನ್ನು ಅನುಭವಿಸಬಹುದು ಎಂದು ಕಂಡುಹಿಡಿದಿದ್ದಾರೆ. ಈ ಕುರಿತು ಡೈಲಿ ಮೇಲ್ ವರದಿ ಮಾಡಿದೆ.

ವಯಾಗ್ರವನ್ನು ನಿರಂತರವಾಗಿ ಬಳಸುವುದರಿಂದ ಜನನಾಂಗಗಳಿಗೆ ರಕ್ತದ ಹರಿವು ಹೆಚ್ಚಾಗಬಹುದು. ಇದು ಕಣ್ಣುಗಳು ಹಾನಿಗೊಳಗಾಗಲು ಕಾರಣವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧನಾ ತಂಡವು ಇತರ ಔಷಧಗಳಾದ ಸಿಯಾಲಿಸ್, ಲೆವಿಟ್ರಾ ಮತ್ತು ಸ್ಪೆಡ್ರಾ ಕೂಡ ಕಣ್ಣಿನ ಸಮಸ್ಯೆಗಳನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದೆ. ಲೈಂಗಿಕ ದೌರ್ಬಲ್ಯವನ್ನು ಕಡಿಮೆಗೊಳಿಸುವ ಮಾತ್ರೆಗಳನ್ನು ನಿಯಮಿತವಾಗಿ ಬಳಸುವವರು ಗಂಭೀರ ದೃಷ್ಟಿಯ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಶೇ. 85ರಷ್ಟು ಹೆಚ್ಚು ಎಂದು JAMA ನೇತ್ರವಿಜ್ಞಾನದಲ್ಲಿ ಪ್ರಕಟವಾದ ಅಧ್ಯಯನವು ಬಹಿರಂಗಪಡಿಸಿದೆ.

ವಯಾಗ್ರವನ್ನು ನಿಯಮಿತವಾಗಿ ಬಳಸುವ 2 ಲಕ್ಷಕ್ಕೂ ಹೆಚ್ಚು ಪುರುಷರನ್ನು ಈ ಅಧ್ಯಯನಕ್ಕಾಗಿ ವಿಶ್ಲೇಷಿಸಲಾಗಿದೆ: ಅಧ್ಯಯನಕ್ಕೊಳಗಾದ 2,13,033 ಪುರುಷರ ಪೈಕಿ 1,23,347 ಪುರುಷರು ಸಿಲ್ಡೆನಾಫಿಲ್ ಬಳಸುತ್ತಿದ್ದರು. ಇದು ಫಿಜರ್‌ನಿಂದ ವಯಾಗ್ರ ಎಂದು ಬ್ರಾಂಡ್ ಮಾಡಿದ ಔಷಧಿಯಾಗಿದೆ. 78,609 ಜನರು ತಡಾಲಾಫಿಲ್ (ಸಿಯಾಲಿಸ್) ಬಳಸುತ್ತಿದ್ದರು. 6,604 ಜನರು ವರ್ಡೆನಾಫಿಲ್ (ಲೆವಿಟ್ರಾ) ಬಳಸುತ್ತಿದ್ದರು. 4,473 ಜನರು ಅವನ್‌ಫಿಲ್ (ಸ್ಪೆಡ್ರಾ) ಬಳಸುತ್ತಿದ್ದರು ಎಂದು ವರದಿ ಹೇಳಿದೆ.

ಇದನ್ನೂ ಓದಿ: ತಮಿಳುನಾಡು ಲೈಂಗಿಕ​ ಹಗರಣ; ವಿದ್ಯಾರ್ಥಿಗಳೊಂದಿಗಿನ ಶಾಲಾ ಶಿಕ್ಷಕಿಯ ಸೆಕ್ಸ್​ ವಿಡಿಯೋ ವೈರಲ್!

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್