ಸಾಂದರ್ಭಿಕ ಚಿತ್ರ
ನಾವು ಪ್ರೀತಿಸುವ ವ್ಯಕ್ತಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡರೆ ಸಾಲದು. ನಿಮ್ಮ ಪ್ರೀತಿಯೂ ಆ ವ್ಯಕ್ತಿಯ ಮನಸ್ಸಿನ ಕದವನ್ನು ತಟ್ಟಬೇಕು. ಹೌದು ಎಲ್ಲರೂ ಕಾದು ಕುಳಿತಿದ್ದ ಪ್ರಪೋಸ್ ಡೇ ಬಂದೇ ಬಿಟ್ಟಿದೆ. ಈ ಬಾರಿಯ ಪ್ರಪೋಸ್ ಡೇಗೆ ನಿಮ್ಮ ಮನದರಸಿಗೆ ಅಥವಾ ಮನದರಸನಿಗೆ ಪ್ರೀತಿಯನ್ನು ಹೇಳಲು ಬಯಸಿದರೆ ಈ ಕೆಲವು ಉಡುಗೊರೆ ನೀಡಿ. ಈ ಗಿಫ್ಟ್ ನೀಡಿದರೆ ನಿಮ್ಮ ಪ್ರೇಮಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದೇ ಬರುತ್ತದೆ. ಪ್ರಪೋಸ್ ಡೇಗೆ ನೀಡಬಹುದಾದ ಕೆಲವು ಗಿಫ್ಟ್ ಐಡಿಯಾಗಳು ಇಲ್ಲಿವೆ.
- ಗುಲಾಬಿ ಹೂ ನೀಡಿ : ಕೆಂಪು ಬಣ್ಣದ ಗುಲಾಬಿ ಹೂ ಪ್ರೀತಿಯ ಸಂಕೇತವಾಗಿದೆ. ಹೀಗಾಗಿ ಈ ದಿನ ನಿಮ್ಮ ಪ್ರೇಮಿಗೆ ಪ್ರಪೋಸ್ ಮಾಡಲು ಮುಂದಾದರೆ ಗುಲಾಬಿ ಹೂವನ್ನು ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಹುಡುಗಿಯರು ಗುಲಾಬಿ ಹೂವನ್ನು ತುಂಬಾ ಇಷ್ಟಪಡುತ್ತಾರೆ. ಪ್ರೇಮದ ಸಂಕೇತವಾಗಿರುವ ಕೆಂಪು ಬಣ್ಣದ ಗುಲಾಬಿಯನ್ನು ನೀಡುವುದು ಉತ್ತಮ ಆಯ್ಕೆಯಾಗಿದೆ.
- ಆಭರಣ ನೀಡಿ ಪ್ರೀತಿ ಹೇಳಿಕೊಳ್ಳಿ : ಹುಡುಗಿಯರಿಗೆ ಆಭರಣಗಳೆಂದರೆ ಅಚ್ಚುಮೆಚ್ಚು. ಪ್ರೀತಿಯನ್ನು ವ್ಯಕ್ತಪಡಿಸುವ ನಿಮ್ಮ ಪ್ರೇಮಿಯ ಕೈ ಬೆರಳಿಗೆ ರಿಂಗ್ ತೊಡಿಸುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ವಿವಿಧ ಸ್ಟೈಲಿಶ್ ಹಾಗೂ ಸಿಂಪಲ್ ಗೋಲ್ಡ್ ರಿಂಗ್ ನ್ನು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು. ಈ ರೀತಿ ರಿಂಗ್ ನೀಡಿದರೆ ನೀವು ಪ್ರೀತಿಸುವ ಹುಡುಗಿಯೂ ನೋ ಎನ್ನಲು ಸಾಧ್ಯವೇ ಇಲ್ಲ.
- ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸಿ : ರಾತ್ರಿಯ ವೇಳೆ ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸುವ ಮೂಲಕ ಪ್ರೀತಿಯನ್ನು ಹೇಳಿಕೊಳ್ಳಬಹುದು. ಇದು ಇಬ್ಬರಿಗೂ ವಿಶೇಷ ಅನುಭವವನ್ನು ತಂದು ಕೊಡುತ್ತದೆ. ರೋಮ್ಯಾಂಟಿಕ್ ಡಿನ್ನರ್ ಗಾಗಿ ಅದ್ಭುತ ರೆಸ್ಟೋರೆಂಟ್ ಅಥವಾ ಕೆಫೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
- ಚಾಕೊಲೇಟ್ ಹೂಗುಚ್ಛಗಳು : ಪ್ರಪೋಸ್ ಡೇಗೆ ಚಾಕೊಲೇಟ್ ಹೂಗುಚ್ಛಗಳನ್ನು ನೀಡಿದರೆ ನಿಮ್ಮ ಪ್ರೇಮಿಗೆ ನಿಜಕ್ಕೂ ಇಷ್ಟವಾಗುತ್ತದೆ. ಚಾಕೋಲೇಟ್ ಎಂದರೆ ಹುಡುಗಿಯರಿಗೆ ಇಷ್ಟ. ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವಾಗ ಚಾಕೊಲೇಟ್ ಹೂಗುಚ್ಛ ಕೊಟ್ಟರೆ ಪ್ರೀತಿ ಗೆ ಒಪ್ಪಿಗೆ ಸಿಕ್ಕಂತೆಯೇ. ಒಂದು ವೇಳೆ ನೀವಿಗಾಗಲೇ ಪ್ರೀತಿಯಲ್ಲಿದ್ದರೆ ಈ ರೀತಿಯ ಉಡುಗೊರೆಗಳು ನಿಮ್ಮ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಚಾಕೋಲೇಟ್ ಹೂಗುಚ್ಛಗಳು ಪ್ರಪೋಸ್ ಡೇಗೆ ಪರಿಪೂರ್ಣ ಉಡುಗೊರೆಯಲ್ಲಿ ಒಂದಾಗಿದೆ.
- ಗಿಫ್ಟ್ ಬುಟ್ಟಿ ನೀಡಿ : ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಎದುರಿಗಿರುವ ವ್ಯಕ್ತಿ ಒಪ್ಪಿಕೊಳ್ಳುತ್ತಾರೆಯೇ ಇಲ್ಲವೇ ಎನ್ನುವ ಭಯವಿರುತ್ತದೆ. ಈ ವೇಳೆ ನೀವು ನೀಡುವ ಉಡುಗೊರೆಯೂ ಕೂಡ ಅಷ್ಟೇ ಪ್ರೀತಿಗೆ ಒಪ್ಪಿಗೆ ಸೂಚಿಸಲು ಮಹತ್ವದ ಪಾತ್ರ ವಹಿಸುತ್ತದೆ. ಪ್ರೀತಿ ವ್ಯಕ್ತಪಡಿಸುವ ಆ ಗಿಫ್ಟ್ ಬುಟ್ಟಿ ಉಡುಗೊರೆಯಾಗಿ ನೀಡಬಹುದು. ಆದರೆ ಈ ಗಿಫ್ಟ್ ಬುಟ್ಟಿಯಲ್ಲಿ ನಿಮ್ಮ ಹುಡುಗ ಅಥವಾ ಹುಡುಗನ ಇಷ್ಟದ ವಸ್ತುಗಳೇ ಇರಲಿ. ಅದನ್ನು ಆ ವಸ್ತುಗಳನ್ನು ಆಕರ್ಷಕವಾಗಿ ಜೋಡಿಸಿಡಿ.
- ಹೂಗುಚ್ಛದೊಂದಿಗೆ ಪ್ರೇಮ ಪತ್ರ ನೀಡಿ : ನಿಮ್ಮ ಗೆಳತಿ ಗೆಳೆಯನಿಗೆ ಪ್ರಪೋಸ್ ಮಾಡುವಾಗ ಹೂವಿನ ಜೊತೆಗೆ ಪ್ರೇಮ ಪತ್ರ ನೀಡುವುದನ್ನು ಮರೆಯದಿರಿ. ಕೆಲವೊಮ್ಮೆ ಮನಸ್ಸಿನ ಎಲ್ಲಾ ಭಾವನೆಗಳನ್ನು ಬಾಯಲ್ಲಿ ಹೇಳಲು ಸಾಧ್ಯವಾಗದು. ಹೀಗಾಗಿ ನಿಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿ ಪ್ರೇಮ ಪತ್ರ ಬರೆಯಿರಿ. ಇದನ್ನು ಹೂ ಗುಚ್ಛದೊಂದಿಗೆ ನೀಡಿ ಪ್ರೇಮ ನಿವೇದನೆ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ