AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rose Day Gift Ideas : ರೋಸ್ ಡೇಗೆ ನಿಮ್ಮ ಸಂಗಾತಿಗೆ ಈ ರೀತಿ ಉಡುಗೊರೆ ನೀಡಿ

Valentine's Week 2025 : ಫೆಬ್ರವರಿ 7 (ನಾಳೆ) ರಿಂದ ಪ್ರೇಮಿಗಳ ವಾರ ಪ್ರಾರಂಭವಾಗಲಿದೆ. ಈ ವಾರದಲ್ಲಿ ಬರುವ ಮೊದಲ ದಿನವೇ ರೋಸ್ ಡೇ. ಹೀಗಾಗಿ ಈ ವಿಶೇಷ ದಿನದಂದು ಮಾರುಕಟ್ಟೆಯ ತುಂಬೆಲ್ಲಾ ಗುಲಾಬಿಗಳ ಕಾರುಬಾರು ಜೋರಾಗಿರುತ್ತದೆ. ಹೀಗಾಗಿ ತಮ್ಮ ಮನ ಮೆಚ್ಚಿದ ಹುಡುಗ ಅಥವಾ ಹುಡುಗನಿಗೆ ಕೆಂಪು ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಈ ಬಾರಿಯ ರೋಸ್ ಡೇ ವಿಶೇಷವಾಗಿ ಆಚರಿಸಬಹುದಾಗಿದ್ದು, ಈ ಕೆಲವು ಗಿಫ್ಟ್ ಐಡಿಯಾಗಳು ಇಲ್ಲಿವೆ ನೋಡಿ.

Rose Day Gift Ideas : ರೋಸ್ ಡೇಗೆ ನಿಮ್ಮ ಸಂಗಾತಿಗೆ ಈ ರೀತಿ ಉಡುಗೊರೆ ನೀಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 06, 2025 | 4:53 PM

Share

ಪ್ರೇಮಿಗಳ ದಿನ ಫೆಬ್ರವರಿ 14 ಕ್ಕೆ ಆದರೂ, ಒಂದು ವಾರಕ್ಕೂ ಮುಂಚಿತವಾಗಿಯೇ ಆಚರಣೆಗಳು ಆರಂಭವಾಗುತ್ತದೆ. ಹೌದು, ಫೆಬ್ರವರಿ 7 ರಂದು ರೋಸ್ ಡೇಯನ್ನು ಆಚರಿಸಲಾಗುತ್ತದೆ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಈಗಾಗಲೇ ಯಾರಾದರೂ ವಿಶೇಷ ವ್ಯಕ್ತಿ ಇದ್ದರೆ, ರೋಸ್ ಡೇಯ ವಿಶೇಷ ಸಂದರ್ಭದಲ್ಲಿ ಅವರಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಆದರೆ ಈ ದಿನ ಗುಲಾಬಿ ಹೂವುಗಳನ್ನೆ ನೀಡಬೇಕಿಲ್ಲ. ಈ ದಿನವನ್ನು ವಿಶೇಷವಾಗಿಸಲು, ನೀವು ಗುಲಾಬಿಯ ಜೊತೆಗೆ ವಿಶೇಷ ಉಡುಗೊರೆಯನ್ನು ನೀಡಬಹುದಾಗಿದ್ದು, ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.

  • ವೈಯುಕ್ತಿಕ ಉಡುಗೊರೆಗಳಿರಲಿ : ನಿಮ್ಮ ಸಂಗಾತಿಗೆ ಅವರ ಹೃದಯ ಮುಟ್ಟುವ ಉಡುಗೊರೆಯನ್ನು ನೀಡಲು ಬಯಸಿದರೆ, ವೈಯಕ್ತಿಕ ಉಡುಗೊರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಕಸ್ಟಮೈಸ್ ಮಾಡಿದ ಜೋಡಿ ಫೋಟೋ ಫ್ರೇಮ್, ಹೆಸರು ಹಾಗೂ ಫೋಟೋ ಇರುವ ಮಗ್, ಮುದ್ದಾದ ಪ್ರೇಮ ಪತ್ರ ನೀಡುವ ಮೂಲಕ ಈ ದಿನವನ್ನು ಕಲರ್ ಫುಲ್ ಆಗಿಸಬಹುದು. ಈ ಕೆಲವು ವಿಶೇಷ ಉಡುಗೊರೆಗಳು ನೆನಪುಗಳನ್ನು ರಿಫ್ರೆಶ್ ಮಾಡುವುದಲ್ಲದೆ, ಸಂಬಂಧವನ್ನು ಗಟ್ಟಿಗೊಳಿಸುತ್ತದೆ.
  • ರೋಮ್ಯಾಂಟಿಕ್ ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸಿ : ಪ್ರತಿಯೊಬ್ಬರು ತಮ್ಮ ಪ್ರೇಮಿ ಅಥವಾ ಸಂಗಾತಿಯೊಂದಿಗೆ ಸಮಯ ಕಳೆಯಬೇಕು ಎಂದುಕೊಳ್ಳುತ್ತಾರೆ. ಹೀಗಾಗಿ ರೋಸ್ ಡೇಯಂದು ಮನೆಯಲ್ಲೇ ಕ್ಯಾಂಡಲ್‌ಲೈಟ್ ಡಿನ್ನರ್ ಆಯೋಜಿಸಿ. ಇಲ್ಲವಾದರೆ ಸುಂದರವಾದ ರೆಸ್ಟೋರೆಂಟ್‌ನಲ್ಲಿ ಟೇಬಲ್ ಬುಕ್ ಮಾಡಿ ಜೊತೆಯಾಗಿ ಊಟ ಮಾಡುವ ಮೂಲಕ ಸಮಯ ಕಳೆಯಿರಿ. ಈ ರೀತಿ ಸರ್ಪ್ರೈಸ್ ಡಿನ್ನರ್ ನಿಮ್ಮವರ ಮೊಗದಲ್ಲಿ ನಗು ಮೂಡಿಸುತ್ತದೆ.
  • ಜೋಡಿ ಬ್ರೇಸ್ಲೆಟ್ ಅಥವಾ ಕೀ ಚೈನ್: ಗುಲಾಬಿ ದಿನದಂದು ಸಂಗಾತಿಗೆ ಜೋಡಿ ಬ್ರೇಸ್ಲೆಟ್ ನೀಡುವುದು ಅತ್ಯಂತ ಸುಂದರವಾದ ಉಡುಗೊರೆಯಲ್ಲಿ ಒಂದಾಗಿದೆ. ನಿಮ್ಮ ಸಂಗಾತಿಗೆ ಕೀ ಚೈನ್‌ಗಳ ಮೇಲೆ ಹೆಚ್ಚು ಒಲವು ಇದ್ದರೆ ಕೀ ಚೈನ್ ಅನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ಹೆಸರಿನೊಂದಿಗೆ ಕಸ್ಟಮೈಸ್ ಮಾಡಿದ ಬ್ರೇಸ್ಲೆಟ್ ಅಥವಾ ಕೀ ಚೈನನ್ನು ಗಿಫ್ಟ್ ಆಗಿ ನೀಡಿದರೆ ನಿಮ್ಮ ಪ್ರೇಮಿ ಅಥವಾ ಸಂಗಾತಿಗೆ ಖಂಡಿತ ಖುಷಿಯಾಗುತ್ತದೆ.
  • ಆಭರಣಗಳನ್ನು ನೀಡಿ : ನಿಮ್ಮ ಸಂಗಾತಿಗೆ ದೀರ್ಘಕಾಲ ಬಾಳಿಕೆ ಬರುವ ಉಡುಗೊರೆಯನ್ನು ನೀಡಲು ಬಯಸಿದರೆ, ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರೋಜ್ ಡಿಸೈನ್ ಇರುವ ಪೆಂಡೆಂಟ್ ಅಥವಾ ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದರೆ ಖಂಡಿತ ಇಷ್ಟವಾಗುತ್ತದೆ. ಈ ದುಬಾರಿ ಬೆಲೆಯ ಉಡುಗೊರೆಗಳು ಶಾಶ್ವತವಾಗಿ ನಿಮ್ಮ ಸಂಗಾತಿಯ ಜೊತೆಗೆ ಇರುತ್ತದೆ.
  • ಗುಲಾಬಿಗೆ ಸಂಬಂಧಿಸಿದ ವಿಶಿಷ್ಟ ಉಡುಗೊರೆಯನ್ನು ನೀಡಿ: ಗುಲಾಬಿಯ ಪರಿಮಳಯುಕ್ತ ಮೇಣದಬತ್ತಿ, ಗುಲಾಬಿ ದಳಗಳಿಂದ ಮಾಡಿದ ಸುಗಂಧ ದ್ರವ್ಯ ಅಥವಾ ವಿಶೇಷ ಗುಲಾಬಿಯ ಹೂ ಬೊಕ್ಕೆ ಹೀಗೆ ನಾನಾ ರೀತಿಯ ಉಡುಗೊರೆಯನ್ನು ನೀಡುವ ಮೂಲಕ ಇನ್ನಷ್ಟು ಸ್ಮರಣೀಯವಾಗಿಸಬಹುದು.
  • ಕೈಯಿಂದ ಮಾಡಿದ ಉಡುಗೊರೆಗಳನ್ನು ನೀಡಿ : ದುಡ್ಡು ಕೊಟ್ಟು ಖರೀದಿಸಿ ಕೊಡುವ ಉಡುಗೊರೆಗಿಂತ ನಿಮ್ಮ ಕೈಯಲ್ಲೇ ತಯಾರಿಸಿದ ಹೆಚ್ಚು ಇಷ್ಟವಾಗುತ್ತದೆ. ನೀವೇನಾದ್ರು ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಿದರೆ ಕೈಯಿಂದ ಮಾಡಿದ ಉಡುಗೊರೆಗಳನ್ನು ನೀಡುವುದು ಉತ್ತಮ. ಸುಂದರವಾದ ಪ್ರೇಮ ಪತ್ರ, ಗ್ರೀಟಿಂಗ್ ಕಾರ್ಡ್ ಗಳು ಹಾಗೂ ನಿಮ್ಮ ಸಂಗಾತಿಗಾಗಿ ಮುದ್ದಾದ ಸಂದೇಶಗಳೊಂದಿಗೆ ಕೈಯಿಂದ ಮಾಡಿದ ಶುಭಾಶಯ ಪತ್ರಗಳು ನೀಡಿ. ಈ ಉಡುಗೊರೆ ದುಬಾರಿಯಲ್ಲದಿರಬಹುದು, ಆದರೆ ಭಾವನಾತ್ಮಕವಾಗಿ ಮನಸ್ಸಿಗೆ ಹತ್ತಿರವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ