Teddy Day 2026 Date: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

Valentine’s Week 2026: ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನ ಟೆಡ್ಡಿ ಡೇಯನ್ನು ಆಚರಿಸಲಾಗುತ್ತದೆ. ಟೆಡ್ಡಿ ಡೇ ಕೇವಲ ಆಟಿಕೆ ನೀಡುವ ದಿನವಲ್ಲ, ಇದು ಪ್ರೀತಿ, ವಾತ್ಸಲ್ಯ ಮತ್ತು ನೆನಪುಗಳನ್ನು ಆಚರಿಸುವ ಸಂದರ್ಭವಾಗಿದೆ. ಹೆಚ್ಚಿನವರು ತಮ್ಮ ಗರ್ಲ್‌ ಫ್ರೆಂಡ್‌, ಸಂಗಾತಿಗೆ ಕ್ಯೂಟ್‌ ಟೆಡ್ಡಿ ಬೇರ್ ನೀಡುವ ಮೂಲಕ ಈ ದಿನವನ್ನು ವಿಶೇಷವಾಗಿ ಅಚರಿಸುತ್ತಾರೆ. ಅಷ್ಟಕ್ಕೂ ಈ ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯೇನು ಎಂಬುದನ್ನು ತಿಳಿಯಿರಿ.

Teddy Day 2026 Date: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ
ಟೆಡ್ಡಿ ಡೇ
Image Credit source: vecteezy

Updated on: Feb 09, 2026 | 5:09 PM

ಪ್ರತಿ ವರ್ಷ ಫೆಬ್ರವರಿ 10 ರಂದು ಅಂದರೆ ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನದಂದು ಟೆಡ್ಡಿ ಡೇ (Teddy Day) ಆಚರಿಸಲಾಗುತ್ತದೆ. ಈ ದಿನವು ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲಿರುವ ಒಂದು ವಿಶೇಷ ಸಂದರ್ಭವಾಗಿದೆ, ಟೆಡ್ಡಿ ಬೇರ್‌ಗಳು ಮುದ್ದಾದ ಉಡುಗೊರೆ ಮಾತ್ರವಲ್ಲ, ಭಾವನೆಗಳು ಮತ್ತು ಭಾವನೆಗಳ ಸಂಕೇತವೂ ಆಗಿದೆ. ಹಾಗಾಗಿ ಹೆಚ್ಚಿನವರು ತಮ್ಮ ನೆಚ್ಚಿನ ವ್ಯಕ್ತಿಗೆ ಈ ದಿನದಂದು ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ವ್ಯಾಲೆಂಟೈನ್‌ ವೀಕ್‌ನಲ್ಲಿ ಟೆಡ್ಡಿ ಡೇ ಆಚರಿಸುವುದೇಕೆ? ಈ ವಿಶೇಷ ದಿನದ ಹಿನ್ನೆಲೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಟೆಡ್ಡಿ ಡೇ ಏಕೆ ಆಚರಿಸಲಾಗುತ್ತದೆ?

ಟೆಡ್ಡಿ ಬೇರ್‌ಗಳು ಪ್ರೀತಿ, ವಾತ್ಸಲ್ಯ ಮತ್ತು ಬಾಲ್ಯದ ಮುಗ್ಧತೆಯನ್ನು ಪ್ರತಿನಿಧಿಸುವಂತ ಒಂದು ಸಾಫ್ಟ್‌ ಟಾಯ್‌ ಅಂತಾನೇ ಹೇಳಬಹುದು. ಇದು ಒತ್ತಡವನ್ನು ಕಡಿಮೆ ಮಾಡಲು, ಸಂತೋಷವನ್ನು ಹೆಚ್ಚಿಸಲು ಮತ್ತು ಸಂಬಂಧಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ದಂಪತಿಗಳು ಮತ್ತು ಪ್ರೇಮಿಗಳು ಟೆಡ್ಡಿಯನ್ನು ಪ್ರೀತಿ ಮತ್ತು ಕಾಳಜಿಯ ಸಂಕೇತವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ವಿಶೇಷವಾಗಿ ಪ್ರೇಮಿಗಳು ಟೆಡ್ಡಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಟೆಡ್ಡಿ ಡೇ ಇತಿಹಾಸವೇನು?

ನವೆಂಬರ್ 14, 1902 ರಂದು, ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್, ಮಿಸ್ಸಿಸ್ಸಿಪ್ಪಿಯ ಕಾಡಿಗೆ ಬೇಟೆಯಾಡಲು ಹೋಗಿದ್ದರು. ಅವರೊಂದಿಗೆ ಸಹಾಯಕ ಹೋಲ್ಟ್ ಕೊಲಿಯರ್ ಕೂಡಾ ಇದ್ರು. ಇಲ್ಲಿ ಕೊಲಿಯರ್ ಗಾಯಗೊಂಡ ಕರಡಿಯೊಂದನ್ನು ಹಿಡಿದು ಮರಕ್ಕೆ ಕಟ್ಟಿ, ನಂತರ ಅವರು ಕರಡಿಗೆ ಗುಂಡು ಹಾರಿಸಲು ರಾಷ್ಟ್ರಪತಿಗಳಿಂದ ಅನುಮತಿ ಕೋರಿದರು. ಆದರೆ ಗಾಯಗೊಂಡ ಕರಡಿಯನ್ನು ನೋಡಿದಾಗ ಅಧ್ಯಕ್ಷ ರೂಸ್ವೆಲ್ಟ್ ಅವರ ಹೃದಯ ಕರಗಿ, ಕರಡಿಯನ್ನು ಕೊಲ್ಲಲು ನಿರಾಕರಿಸಿದರು. ನಂತರ ನವೆಂಬರ್ 16 ರಂದು, ದಿ ವಾಷಿಂಗ್ಟನ್ ಪೋಸ್ಟ್‌ನ ವ್ಯಂಗ್ಯಚಿತ್ರಕಾರ ಕ್ಲಿಫರ್ಡ್ ಕೆ ಬೆರ್ರಿಮನ್ ಅವರು ನಡೆದ ಈ ಘಟನೆಯನ್ನು ಆಧರಿಸಿ ವ್ಯಂಗ್ಯಚಿತ್ರವನ್ನು ರಚಿಸಿದರು.

ಆಟಿಕೆ ತಯಾರಿಕಾ ಉದ್ಯಮಿ ಮಾರಿಸ್ ಮಿಚ್ಟಮ್ ಪತ್ರಿಕೆಯಲ್ಲಿ ಈ ವ್ಯಂಗ್ಯ ಚಿತ್ರವನ್ನು ನೋಡಿ ಕರಡಿ ಮರಿಯ ಆಕಾರದ ಆಟಿಕೆ ಮಾಡುವ ಬಗ್ಗೆ ಯೋಚಿಸಿದರು. ಅವರು ಅದನ್ನು ತಮ್ಮ ಪತ್ನಿ ರೋಸ್ ಅವರೊಂದಿಗೆ ವಿನ್ಯಾಸಗೊಳಿಸಿದರು ಮತ್ತು ಆ ಆಟಿಕೆಗೆ ‘ಟೆಡ್ಡಿ ಬೇರ್‌ʼ ಎಂದು ಹೆಸರಿಟ್ಟರು. ಟೆಡ್ಡಿ ಎಂಬ ಹೆಸರು ಇಡಲು ಕಾರಣವೆಂದರೆ ಅಧ್ಯಕ್ಷ ರೂಸ್ವೆಲ್ಟ್ ಅವರ ಅಡ್ಡ ಹೆಸರು ಟೆಡ್ಡಿ, ಆ ಆಟಿಕೆಗೆ ಟೆಡ್ಡಿ ಎಂಬ ಹೆಸರಿಡುವ ಮೂಲಕ ಆಟಿಕೆಯನ್ನು ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಸಮರ್ಪಿಸಿದರು. ನಂತರ ಅದು ಬಹಳ ಜನಪ್ರಿಯವಾಯಿತು. ಅದಲ್ಲದೆ ಟೆಡ್ಡಿ ಬೇರ್ ಪ್ರೀತಿಯ ಸಂಕೇತವಾಯಿತು ಮತ್ತು ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನನವಾದ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲು ಪ್ರಾರಂಭಿಸಲಾಯಿತು.

ಇದನ್ನೂ ಓದಿ: ವ್ಯಾಲೆಂಟೈನ್‌ ವೀಕ್‌ನಲ್ಲಿ ಚಾಕೊಲೇಟ್ ಡೇ ಆಚರಿಸುವುದೇಕೆ? ಇದರ ಹಿಂದೆಯೂ ಇದೆ ಕಾರಣ

 ಟೆಡ್ಡಿ ಡೇ ಮಹತ್ವವೇನು?

  • ಪ್ರೇಮಿಗಳ ದಿನಕ್ಕೆ ನಾಲ್ಕು ದಿನಗಳ ಮೊದಲು ಆಚರಿಸಲಾಗುವ ಟೆಡ್ಡಿ ಡೇ ನಿಮ್ಮ ಪ್ರೇಮಿಯ ಮುಖದಲ್ಲಿ ನಗು ತರಿಸಲು ಸೂಕ್ತವಾದ ದಿನವಾಗಿದೆ. ಈ ದಿನವನ್ನು ಮುದ್ದಾದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಆಚರಿಸಲಾಗುತ್ತದೆ, ಇದು ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಸಂಬಂಧವನ್ನು ಸಂಕೇತಿಸುತ್ತದೆ.
  • ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲು ಟೆಡ್ಡಿ ಡೇ ಆಚರಿಸಲಾಗುತ್ತದೆ. ಟೆಡ್ಡಿ ಡೇಯಂದು ದಂಪತಿಗಳು, ಪ್ರೇಮಿಗಳು ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Mon, 9 February 26