Cold Coffee: ಬೇಸಿಗೆಯಲ್ಲಿ ಕೋಲ್ಡ್ ಕಾಫಿ ಕುಡಿಯಬೇಕೆಂದೆನಿಸುತ್ತಿದೆಯೇ? ಮನೆಯಲ್ಲಿ ಮಾಡಬಹುದು ಕೋಲ್ಡ್ ಕಾಫಿ

ಈ ಬೇಸಿಗೆಯ ದಿನಗಳಲ್ಲಿ ಎಲ್ಲರು ತಂಪು ಹಾಗೂ ರೆಫ್ರೆಶ್ ಪಾನೀಯಗಳನ್ನು ಸೇವಿಸಲು ಬಯಸುತ್ತಾರೆ. ಅದರಲ್ಲಿ ಕೋಲ್ಡ್ ಕಾಫಿ ಕೂಡಾ ಜನಪ್ರಿಯ ಬೇಸಿಗೆಯ ಪಾನೀಯವಾಗಿದೆ. ಈ ಕೋಲ್ಡ್ ಕಾಫಿಯನ್ನು ಮಾಡಲು ಇಲ್ಲಿದೆ ಸಲಹೆ

Cold Coffee: ಬೇಸಿಗೆಯಲ್ಲಿ ಕೋಲ್ಡ್ ಕಾಫಿ ಕುಡಿಯಬೇಕೆಂದೆನಿಸುತ್ತಿದೆಯೇ? ಮನೆಯಲ್ಲಿ ಮಾಡಬಹುದು ಕೋಲ್ಡ್ ಕಾಫಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 05, 2023 | 6:42 PM

ನಾವು ಪ್ರಸ್ತುತ ಬೇಸಿಗೆಯ ಋತುವಿನಲ್ಲಿದ್ದೇವೆ. ಈ ಬೇಸಿಗೆಯ ಶಾಖದಿಂದ ಮುಕ್ತಿ ಪಡೆಯಲು ತಂಪು ಹಾಗೂ ರಿಫ್ರೆಶ್ ಪಾನೀಯಗಳನ್ನು ಕುಡಿಯಲು ಹಂಬಲಿಸುತ್ತಿದ್ದೇವೆ. ಬೇಸಿಗೆಯಲ್ಲಿ ಸೇವಿಸುವ ಅನೇಕ ಪಾನೀಯಗಳ ಪಟ್ಟಿಯೇ ಇದೆ. ಅದರಲ್ಲಿ ಕೋಲ್ಡ್ ಕಾಫಿ ಕೂಡಾ ಒಂದು. ಇದು ಜನಪ್ರಿಯ ಬೇಸಿಗೆಯ ಪಾನೀಯವಾಗಿದ್ದು, ಇದು ತಂಪು ಮತ್ತು ಉಲ್ಲಾಸಕರವಾದ ಪಾನೀಯವಾಗಿದೆ. ಇದನ್ನು ಕಾಫಿ ಸಕ್ಕರೆ ಮತ್ತು ತಣ್ಣನೆಯ ಹಾಲಿನ್ನು ಬೆರಿಸಿ ತಯಾರಿಸಲಾಗುತ್ತದೆ. ಆದರೆ ಈ ಕೋಲ್ಡ್ ಕಾಫಿಯನ್ನು ಮಾಡುವ ವಿಧಾನಲದಲ್ಲಿ ಭಿನ್ನತೆ ಇದೆ. ಈ ಕೋಲ್ಡ್​​ಕಾಫಿಯನ್ನು ಮನೆಯಲ್ಲಿಯೇ ತಯಾರಿಸಲು ಬೇಕಾದ ಸಲಹೆಗಳ ಬಗ್ಗೆ ತಿಳಿಸಿಕೊಡುತ್ತೇವೆ.

 ಕೋಲ್ಡ್ ಕಾಫಿ ಮಾಡಲು ಈ 5 ಸುಲಭ ಹಂತಗಳನ್ನು ಅನುಸರಿಸಿ

ಹಂತ 1; ಚಾಕೊಲೇಟ್ ಸಿರಪ್ ತಯಾರಿಸಿ: ಒಂದು ಬೌಲ್‌ನಲ್ಲಿ ದೊಡ್ಡ ಚಮಚ ಡಾರ್ಕ್ ಚಾಕೊಲೇಟ್ ತೆಗೆದುಕೊಳ್ಳಿ, ಅದಕ್ಕೆ ಬಿಸಿ ಹಾಲನ್ನು ಸೇರಿಸಿ ಮತ್ತು ಚಾಕೊಲೇಟ್ ಸಂಪೂರ್ಣವಾಗಿ ಕರಗುವ ತನಕ ಅದನ್ನು ಮಿಶ್ರಣ ಮಾಡಿ.

ಹಂತ 2: ಗಾಜಿನ ಲೋಟ: ಒಂದು ದೊಡ್ಡ ಗಾಜಿನ ಲೋಟವನ್ನು ತೆಗೆದುಕೊಳ್ಳಿ. ಮತ್ತು ಚಮಚದ ಸಹಾಯದಿಂದ ಲೋಟದ ಒಳಭಾಗದಲ್ಲಿ ಸುತ್ತಲೂ ಚಾಕೊಲೇಟ್ ಸಿರಪ್‌ನ್ನು ಹರಡಿ. ಗ್ಲಾಸ್‌ನ್ನು ಫ್ರಿಡ್ಜ್​​ನಲ್ಲಿ ಇರಿಸಿ.

ಹಂತ 3 ಫ್ರಾತ್ (ನೊರೆ) ತಯಾರಿಸಿಕೊಳ್ಳಿ: ಒಂದು ಬೌಲ್‌ಗೆ 3 ಚಮಚ ಕಾಫಿ ಪುಡಿ ಹಾಕಿ ಮತ್ತು 4 ಚಮಚ ಸಕ್ಕರೆ ಮತ್ತು ಒಂದು ಚಮಚ ಬಿಸಿ ಹಾಲನ್ನು ಸೇರಿಸಿ. ಈ ಮಿಶ್ರಣವು ದಪ್ಪ ಫೇಸ್ಟ್ ರೀತಿ ಆಗುವವರೆಗೆ ಬ್ಲೆಂಡರ್‌ನಿಂದ ಅದನ್ನು ಮಿಕ್ಸ್ ಮಾಡಿಕೊಳ್ಳಿ.

ಇದನ್ನೂ ಓದಿ: ನೀವು ಎಗ್ ಕಾಫಿ ಕುಡಿದಿದ್ದೀರಾ? ಮಾಡುವ ವಿಧಾನ ಸುಲಭವಿದೆ

ಹಂತ 4 ಕೋಲ್ಡ್ ಕಾಫಿಯನ್ನು ತಯಾರಿಸಿ: ಮಿಕ್ಸಿ ಜಾರ್‌ಗೆ ಎರಡು ಲೋಟ ತಣ್ಣನೆಯ ಹಾಲನ್ನು ಹಾಕಿ. ಇದಕ್ಕೆ ಸ್ವಲ್ಪ ಸಕ್ಕರೆ, ಐಸ್‌ಕ್ಯೂಬ್ ಮತ್ತು ಮೊದಲೇ ತಯಾಸಿಟ್ಟ ಫ್ರಾತ್ ಮಿಶ್ರಣವನ್ನು ಸೇರಿಸಿ 2 ರಿಂದ 3 ಸೆಕೆಂಡುಗಳ ಕಾಲ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

ಹಂತ 5: ಕೋಲ್ಡ್ ಕಾಫಿಯನ್ನು ಅಲಂಕರಿಸಿ: ಮೊದಲು ಫ್ರಿಡ್ಜ್​​ನಲ್ಲಿ ಲೋಟವನ್ನು ಹೊರತೆಗೆದು ಅದಕ್ಕೆ ಒಂದು ಚಮಚ ಫ್ರಾತ್ ಮಿಶ್ರಣವನ್ನು ಹಾಕಿ. ಈಗ ಸಿದ್ಧಪಡಿಸಿದ ಕೋಲ್ಡ್ ಕಾಫಿಯನ್ನು ಲೋಟಕ್ಕೆ ಹಾಕಿ. ಅಲಂಕಾರಕ್ಕಾಗಿ ನೀವು ಅದರ ಮೇಲೆ ಸ್ವಲ್ಪ ಕಾಫಿ ಪುಡಿಯನ್ನು ಸಿಂಪಡಿಸಬಹುದು. ವೆನಿಲ್ಲಾ ಐಸ್‌ಕ್ರೀಮ್‌ನ್ನು ಕೂಡಾ ಇದಕ್ಕೆ ಸೇರಿಸಬಹದು.

Published On - 6:41 pm, Wed, 5 April 23