AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿನ ಕೋಣೆಗೆ ಬೇಸಿಗೆಯ ಮೇಕ್ಓವರ್ ಮಾಡಲು ಬಯಸಿದ್ದೀರಾ? ಹಾಗಾದರೆ ಇಲ್ಲಿದೆ 9 ಅತ್ಯುತ್ತಮ ಅಲಂಕಾರದ ಐಡಿಯಾಗಳು

ಗೋಡೆ ಬರಹದಿಂದ ಹಿಡಿದು ವ್ಯಂಗ್ಯ ಚಿತ್ರಗಳವರೆಗೆ, ಈ ಬೇಸಿಗೆಯಲ್ಲಿ ಮಕ್ಕಳ ಕೋಣೆಗೆ ಅಲಂಕಾರಿಕಾ ಕಲ್ಪನೆಗಳು ನಿಮ್ಮ ಮಕ್ಕಳು ಇಷ್ಟಪಡುವ ಹಾಗೇ ಮಾಡುತ್ತದೆ. ಅಲ್ಲದೆ ಬೇಸಗೆ ರಜೆಯನ್ನು ಅವರು ಖುಷಿಯಿಂದ ಕಳೆಯುವ ಹಾಗೇ ಮಾಡುತ್ತದೆ. ಈ ಬಗ್ಗೆ ಇಲ್ಲಿದೆ ಸಿಂಪಲ್ ಐಡಿಯಾಗಳು.

ಮಗುವಿನ ಕೋಣೆಗೆ ಬೇಸಿಗೆಯ ಮೇಕ್ಓವರ್ ಮಾಡಲು ಬಯಸಿದ್ದೀರಾ? ಹಾಗಾದರೆ ಇಲ್ಲಿದೆ 9 ಅತ್ಯುತ್ತಮ ಅಲಂಕಾರದ ಐಡಿಯಾಗಳು
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on:Apr 28, 2023 | 4:29 PM

Share

ಬೇಸಿಗೆ ಸಮಯದಲ್ಲಿ ನಿಮ್ಮ ಮಕ್ಕಳ ಕೋಣೆಗಳನ್ನು ಕೆಲವು ಮೋಜಿನ ಮತ್ತು ವರ್ಣರಂಜಿತ ಅಲಂಕಾರಗಳೊಂದಿಗೆ ಅಲಂಕರಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಮಕ್ಕಳು ಮೊದಲಾದರೆ ಶಾಲೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ಮನೆಯಲ್ಲಿ ಕಳೆಯುವ ಸಮಯ ತುಂಬಾ ಕಡಿಮೆಯಾಗಿತ್ತು ಆದರೆ ಈಗ ಅವರಿಗೆ ರಜಾ ಸಮಯ. ಬೇಸಗೆ ರಜೆಯಲ್ಲಿ ಮನೆಯಲ್ಲಿ ನೆಮ್ಮದಿಯಲ್ಲಿ ಕಾಲ ಕಳೆಯಲು ಅವರಿಗೆ ಒಳ್ಳೆಯ ಜಾಗ ಬೇಕು ಆಟವಾಡಲು ಮಲಗಲು ಪ್ರಶಸ್ತ ಜಾಗವೆಂದರೆ ಅದು ಮಗುವಿನ ಮಲಗುವ ಕೋಣೆ ಹಾಗಾಗಿ, ವಿವಿಧ ವಿನ್ಯಾಸ ಸ್ಪೂರ್ತಿದಾಯಕ ರೀತಿಯಲ್ಲಿ ಕೋಣೆಯ ಬಣ್ಣ ಬದಲಿಸುವುದು ಅತ್ಯಗತ್ಯ.

ಬೇಸಿಗೆ ಸಮೀಪಿಸುತ್ತಿದ್ದಂತೆ, ನಿಮ್ಮ ಮಗುವಿನ ಮಲಗುವ ಕೋಣೆಗೆ ಅಲಂಕಾರಿಕ ಬಣ್ಣ, ಹಾಸಿಗೆ ಹಾಗೂ ಬಗೆ ಬಗೆಯ ಚಿತ್ರಗಳನ್ನು ರಚಿಸಲು ನಿಮಗೆ ಹಲವಾರು ರೀತಿಯ ಐಡಿಯಾಗಳಿವೆ ಆದರೆ ನಿಮ್ಮ ಮಗು ಯಾವ ರೀತಿಯಲ್ಲಿ ಮಾಡಿದರೆ ಇಷ್ಟ ಪಡಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ ಬಳಿಕ ನಿಮ್ಮ ಪುಟ್ಟ ಮಕ್ಕಳಿಗೆ ಬೇಸಿಗೆಯ ಓಯಸಿಸ್ ಅನ್ನು ರಚಿಸಲು ಸಾಕಷ್ಟು ಮಾರ್ಗಗಳಲ್ಲಿ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಬಹುದು. ನೀರಸ ಅಲಂಕಾರಕ್ಕೆ ವಿದಾಯ ಹೇಳಿ ಋತುವಿನ ಅಲಂಕಾರವನ್ನು ಸ್ವೀಕರಿಸಿ.

ಐಕೆಇಎ ಇಂಡಿಯಾದ ಕಂಟ್ರಿ ಹೋಮ್ ಫರ್ನಿಶಿಂಗ್ ಮತ್ತು ರಿಟೇಲ್ ಡಿಸೈನ್ ಮ್ಯಾನೇಜರ್ ಎರಿಕ್ ಜಾನ್ ಮಿಡ್ಡೆಲ್ಹೋವನ್ ಅವರು ಎಚ್ಟಿ ಲೈಫ್ಸ್ಟೈಲ್ನೊಂದಿಗೆ ಕೆಲವು ಅದ್ಭುತ ಅಲಂಕಾರದ ಕಲ್ಪನೆಗಳನ್ನು ಹಂಚಿಕೊಂಡಿದ್ದಾರೆ. ಅವು ಈ ರೀತಿಯಾಗಿವೆ.

ಮಕ್ಕಳ ಕೋಣೆಗಾಗಿ ಅತ್ಯುತ್ತಮ ಬೇಸಿಗೆ ಅಲಂಕಾರ ಕಲ್ಪನೆಗಳು ಹೀಗಿವೆ:

ಚಾಕ್ ಬೋರ್ಡ್ ಗೋಡೆ:

ಚಾಕ್ ಬೋರ್ಡ್ ಗೋಡೆಯ ಮೂಲಕ ನಿಮ್ಮ ಮಗುವಿನ ಸೃಜನಶೀಲತೆಯನ್ನು ಅನಾವರಣಗೊಳಿಸಲು ಒಳ್ಳೆಯ ಅವಕಾಶ. ಚಾಕ್ ಬೋರ್ಡ್ ಪೇಂಟ್ ನೊಂದಿಗೆ ಕ್ಯಾನ್ವಾಸ್ ಆಗಿ ರೂಪಾಂತರಗೊಂಡ ಗೋಡೆಯ ಮೇಲೆ ಅವರು ತಮಗೆ ಬೇಕಾದ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲಿ.

ಮೋಜಿನ ಹಾಸಿಗೆ:

ಕೋಣೆಯಲ್ಲಿರುವ ಹಾಸಿಗೆಯನ್ನು ಬದಲಾಯಿಸಿ ಅಥವಾ ಅದಕ್ಕೆ ಹೊಸ ರೂಪ ನೀಡಿ. ಅಂದರೆ ಸರಳವಾಗಿದ್ದ ಹಾಸಿಗೆಯನ್ನು ಬದಲಾಯಿಸಿ ಮಕ್ಕಳು ಇಷ್ಟ ಪಡುವ ಗೊಂಬೆ, ಅಥವಾ ಪ್ರಾಣಿ, ಪಕ್ಷಿಗಳಿರುವ ಹಾಸಿಗೆ ಸಿದ್ದ ಪಡಿಸಿ. ಈ ಮೂಲಕ ಮಲಗುವ ಸಮಯವನ್ನು ಹೆಚ್ಚು ಆಹ್ಲಾದಕರವಾಗಿರುವಂತೆ ಮಾಡಿ. ಇಲ್ಲವಾದಲ್ಲಿ ನಿಮ್ಮ ಮಗುವಿನ ನೆಚ್ಚಿನ ಬಣ್ಣವನ್ನು ಆಯ್ಕೆ ಮಾಡಿ ಅದರಲ್ಲಿಯೇ ಬೇರೆ ಬೇರೆ ಡಿಸೈನ್ ಹಾಸಿಗೆ ಸಿದ್ದ ಪಡಿಸಬಹುದು.

ಇದನ್ನೂ ಓದಿ: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ

ವರ್ಣರಂಜಿತ ಗೋಡೆ:

ನಿಮ್ಮ ಮಗುವಿನ ಕೋಣೆಯನ್ನು ಉಲ್ಲಾಸಭರಿತವಾಗಿ ನೋಡಿಕೊಳ್ಳಲು ನಿಮ್ಮ ಮಗುವಿಗೆ ಇಷ್ಟವಾಗುವ ಗೋಡೆ ಬರಹ, ಚಿತ್ರ ಅಥವಾ ಪ್ರಾಣಿ ವ್ಯಂಗ್ಯಚಿತ್ರಗಳಂತಹ ಅವರ ಆಸಕ್ತಿಗಳನ್ನು ಪ್ರತಿಬಿಂಬಿಸುವ ಕಲಾಕೃತಿಗಳನ್ನು ಆರಿಸಿ. ನಿಮ್ಮ ಪುಟ್ಟ ಮಕ್ಕಳಿಗೆ ತಮ್ಮದೇ ಆದ ಒಂದು ಗೋಡೆಯಲ್ಲಿ ಜಾಗ ನೀಡುವ ಮೂಲಕ ಅವರಿಗೆ ಚಿತ್ರ ಬಿಡಿಸಿ ತಮ್ಮ ಸೃಜನಶೀಲತೆಯನ್ನು ಹೊರಹಾಕಲು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅವಕಾಶ ನೀಡಬಹುದು.

ವಾಲ್ ಡೆಕಾಲ್ಗಳು:

ಬಣ್ಣದ ಕಾಗದದಿಂದ ವಿನೈಲ್ ಸ್ಟಿಕ್ಕರ್ ಗಳು ಅಥವಾ ಕಟೌಟ್ ಗಳನ್ನು ಬಳಸಿಕೊಂಡು ಗೋಡೆ ಡೆಕಾಲ್ ಗಳನ್ನು ರಚಿಸಿ. ನಿಮ್ಮ ಮಗುವಿನ ಹೆಸರನ್ನು ಉಚ್ಚರಿಸಲು ಅಥವಾ ಗೋಡೆಯ ಮೇಲೆ ಮೋಜಿನ ಆಟಿಕೆಗಳ ದೃಶ್ಯವನ್ನು ರಚಿಸಲು ಡೆಕಾಲ್ ಗಳನ್ನು ಬಳಸಬಹುದು.

ಥೀಮ್ ಅಲಂಕಾರ:

ಸೂಪರ್ ಹೀರೋ, ರಾಜಕುಮಾರಿ ಅಥವಾ ಬಾಹ್ಯಾಕಾಶ ಥೀಮ್ನಂತಹ ನಿಮ್ಮ ಮಗುವಿನ ಆಸಕ್ತಿಗಳ ಆಧಾರದ ಮೇಲೆ ಥೀಮ್ ಕೋಣೆಯನ್ನು ರಚಿಸಿ. ಥೀಮ್ ಗೆ ಜೀವ ತುಂಬಲು ಹಾಸಿಗೆ, ಗೋಡೆ ಚಿತ್ರ ಮತ್ತು ಅಲಂಕಾರ ವಸ್ತುಗಳನ್ನು ಅದಕ್ಕೆ ತಕ್ಕಂತೆ ಬಳಸಿ.

ವಿನೋದಭರಿತ ಆಟಿಕೆಗಳ ಸಂಗ್ರಹಣೆ:

ಮುಗುವಿಗೆ ತನ್ನದೇ ಆದ ಒಂದಿಷ್ಟು ಆಟಿಕೆಗಳನ್ನು ಕೊಡುವುದು ಸಮಯ ಕಳೆಯುವುದಕ್ಕೆ ಅನುಕೂಲವಾಗಿದೆ. ಅದಕ್ಕೆ ತಕ್ಕಂತೆ ಅದನ್ನು ಹೇಗೆ ಶುಚಿಯಾಗಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಹೇಳಿ ಕೊಡಬೇಕು. ಸ್ವಲ್ಪ ಹೆಚ್ಚು ಮೋಜು ಮಾಡಲು ಬಿನ್ ಗಳು, ಬುಟ್ಟಿಗಳು ಮತ್ತು ಶೆಲ್ವಿಂಗ್ ಅನ್ನು ಮಾಡಿಕೊಡುವುದು. ಅವರಿಗೆ ಬೇಕಾದ ಬಣ್ಣಗಳು ಮತ್ತು ಆಕೃತಿಗಳಿರುವ ಆಟಿಕೆಯನ್ನೇ ಆರಿಸಿಕೊಡುವುದು ಇನ್ನು ಉತ್ತಮ.

ಪ್ರಕೃತಿ ಪ್ರೇರಿತ ಅಲಂಕಾರ:

ಪ್ರಕೃತಿ ಪ್ರೇರಿತ ಅಲಂಕಾರ ಮಾಡುವುದರಿಂದ ಮಕ್ಕಳಿಗೆ ಒಳ್ಳೆಯದು ಇದು ಕೋಣೆಯನ್ನು ತಂಪಾಗಿಡುವುದರ ಜೊತೆಗೆ ಶಾಂತತೆಯನ್ನು ಕಾಪಾಡುತ್ತದೆ. ಅದೇ ರೀತಿ ಸಸ್ಯ, ಪ್ರಾಣಿ ಒಳಗೊಂಡ ಗೋಡೆ ಕಲಾಕೃತಿ ಅಥವಾ ಪ್ರಕೃತಿ ಥೀಮ್ ಹೊಂದಿರುವ ಹಾಸಿಗೆಯನ್ನು ಸಹ ತರಬಹುದು.

ಸೀಲಿಂಗ್ ಅಲಂಕಾರ:

ಛಾವಣಿ(ಸೀಲಿಂಗ್) ಯನ್ನು ಅಲಂಕರಿಸುವ ಮೂಲಕ ನಿಮ್ಮ ಮಗುವಿನ ಕೋಣೆಗೆ ಮೋಜಿನ ತಿರುವು ನೀಡಬಹುದು. ಕಾಗದದ ಲ್ಯಾಂಟರ್ನ್ ಗಳು, ಸ್ಟ್ರಿಂಗ್ ದೀಪಗಳು ಅಥವಾ ರಾತ್ರಿ ಸಮಯದಲ್ಲಿ ಥ್ರೀಡಿ ಲೈಟ್ ಬಳಸಬಹುದು.

ಓದುವ ಮೂಲೆಯ ರಚನೆ:

ನಿಮ್ಮ ಮಗುವಿನ ಕೋಣೆಯಲ್ಲಿ ಆರಾಮದಾಯಕ ಓದುವ ಮೂಲೆಯನ್ನು ರಚಿಸಿ, ಸ್ಥಳವನ್ನು ಇನ್ನಷ್ಟು ಆಹ್ಲಾದಕರವಾಗಿಸಲು ದೀಪ, ದಿಂಬು ಇಡಬಹುದು. ಅಲ್ಲಿ ಅವರು ನೆಚ್ಚಿನ ಕಥೆಗಳನ್ನು ಓದಬಹುದು. ಅಭ್ಯಾಸ ಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:29 pm, Fri, 28 April 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ