Relationship: ಕಷ್ಟಕರವಾದ ಸಂಭಾಷಣೆಯನ್ನು ನಿಭಾಯಿಸುವುದು ಹೇಗೆ? ಕೆಲವು ಸಲಹೆಗಳು ಇಲ್ಲಿವೆ
ಸಂಬಂಧದಲ್ಲಿ ಕೆಟ್ಟ ಹಾಗೂ ಒಳ್ಳೆಯ ಸಮಯ ಎರಡೂ ಇರುತ್ತದೆ. ಸಂಬಂಧವೆಂದರೆ ಹಾಗೆ ಸಂಗಾತಿಯಿಬ್ಬರ ಮನಸ್ಥಿತಿಯು ಬೇರೆ ಇರುವ ಕಾರಣ ಆಗಾಗ ಜಗಳವೂ ಸಾಮಾನ್ಯ. ಆದರೆ ಪ್ರತಿನಿತ್ಯ ಜಗಳವೇ ನಡೆಯುತ್ತಿದ್ದರೆ ಅದು ಸಂಬಂಧ ಹಾಳಾಗಲು ಕಾರಣವಾಗುತ್ತದೆ.
ಸಂಬಂಧದಲ್ಲಿ ಕೆಟ್ಟ ಹಾಗೂ ಒಳ್ಳೆಯ ಸಮಯ ಎರಡೂ ಇರುತ್ತದೆ. ಸಂಬಂಧವೆಂದರೆ ಹಾಗೆ ಸಂಗಾತಿಯಿಬ್ಬರ ಮನಸ್ಥಿತಿಯು ಬೇರೆ ಇರುವ ಕಾರಣ ಆಗಾಗ ಜಗಳವೂ ಸಾಮಾನ್ಯ. ಆದರೆ ಪ್ರತಿನಿತ್ಯ ಜಗಳವೇ ನಡೆಯುತ್ತಿದ್ದರೆ ಅದು ಸಂಬಂಧ ಹಾಳಾಗಲು ಕಾರಣವಾಗುತ್ತದೆ.
ನಾವು ಸಂಗಾತಿಯೊಂದಿಗೆ ಹೇಗೆ ಸಂವಹನ ನಡೆಸುತ್ತಿದ್ದೇವೆ ಎಂಬುದರ ಮೇಲೆ ಸಂಬಂಧ ಬಲ ನಿಂತಿರುತ್ತದೆ. ನಾವು ಬಳಸುವ ಪದಗಳು, ನಾವು ತೋರಿಸುವ ಸನ್ನೆಗಳು ಮತ್ತು ನಮ್ಮ ಸಂಗಾತಿಯೊಂದಿಗೆ ನಾವು ಮಾತನಾಡುವ ರೀತಿ ಸಂಬಂಧದಲ್ಲಿ ಮುಖ್ಯವಾಗುತ್ತದೆ.
ನೀವು ಸಂಬಂಧವನ್ನು ಕೊನೆಗೊಳಿಸಬಯಸಿದ್ದರೆ, ಅಥವಾ ನಿಮ್ಮ ಸಂಬಂಧದಲ್ಲಿ ಏನೋ ಸರಿ ಇಲ್ಲ ಎಂದು ನಿಮಗನಿಸಿದರೆ ಕುಳಿತು ಮಾತನಾಡುವುದು ಉತ್ತಮ. ಕಷ್ಟಕರ ಸಂಭಾಷಣೆಗಳು ಯಾವಾಗಲೂ ಸ್ವಲ್ಪ ಆತಂಕವನ್ನು ಉಂಟುಮಾಡುತ್ತವೆ, ಆ ಒತ್ತಡವನ್ನು ಸಂಪೂರ್ಣವಾಗಿ ತೊಡೆದುಹಾಕಲು ಯಾವುದೇ ಮಾರ್ಗವಿಲ್ಲ.
ನಿಮ್ಮ ಸಂಭಾಷಣೆ ಉತ್ತಮವಾಗಿದ್ದರೆ ನಿಮ್ಮ ಭಾವನೆಗಳು ಹಾಗೂ ನಂಬಿಕೆಗಳನ್ನು ನಿಮ್ಮ ಸಂಗಾತಿಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಷ್ಟಕರವಾದ ಸಂಭಾಷಣೆಗೆ ನಿಮಗೆ ಸಹಾಯ ಮಾಡುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಮಾತು ಆಲಿಸಿ: ಯಾವುದೋ ಒಂದು ವಿಚಾರ ನಿಮಗೆ ಸರಿ ಅನಿಸದಿರಬಹುದು, ಆದರೂ ನಿಮ್ಮ ಸಂಗಾತಿಯು ಏನು ಹೇಳಲು ಹೊರಟಿದ್ದಾರೆ ಎಂಬುದನ್ನು ಆಲಿಸಿ. ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮಗೆ ಗೊಂದಲಗಳಿದ್ದರೆ ಪ್ರಶ್ನೆಗಳನ್ನು ಕೇಳಿ. ಆದರೆ ಅವರು ನಡೆದುಕೊಂಡಿರುವ ರೀತಿಯಾಗಲಿ ಅವರ ದೃಷ್ಟಿಕೋನದ ಬಗ್ಗೆಯಾಗಲಿ ಬೇರೆ ಎಲ್ಲೂ ಮಾತನಾಡಬೇಡಿ.
ಒಪ್ಪಿಗೆ ಕೇಳುವುದು : ಕಠಿಣ ಸಂಭಾಷಣೆಯ ಪ್ರಾರಂಭವು ಒಪ್ಪಿಗೆ ಕೇಳುವುದರೊಂದಿಗೆ ಪ್ರಾರಂಭವಾಗಬೇಕು. ಸಂಗಾತಿಯ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಿ ಬಳಿಕ ಚರ್ಚೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಉತ್ತಮ ಮಾರ್ಗವಾಗಿದೆ.
ವಿಷಯವನ್ನು ಪ್ರಸ್ತಾಪಿಸುವುದು : ಯಾವುದೇ ಕಷ್ಟಕರ ವಿಷಯಗಳನ್ನು ಪ್ರಸ್ತಾಪಿಸುವಾಗ ಮೆಲುಧ್ವನಿ ಇರಲಿ.
ಪ್ರೀತಿ ಮತ್ತು ಗೌರವ : ಎಲ್ಲದರ ಜತೆಗೆ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಅವರು ಎಷ್ಟು ಮುಖ್ಯ ಎಂಬುದನ್ನು ತಿಳಿಸಿ. ಎಲ್ಲಾ ವಿಷಯಗಳನ್ನು ಒಪ್ಪಿಕೊಳ್ಳಬೇಕೆಂದೇನಿಲ್ಲ: ಸಂಬಂಧದಲ್ಲಿ ಒಂದೇ ವಿಷಯಗಳನ್ನು ಒಪ್ಪಿಕೊಳ್ಳುವುದು ಕಡ್ಡಾಯವಲ್ಲ. ಆದಾಗ್ಯೂ, ಸಾಮಾನ್ಯ ನೆಲೆಯನ್ನು ಕಂಡುಹಿಡಿಯುವುದು ಮತ್ತು ಅಭಿಪ್ರಾಯಗಳ ನಡುವೆ ಸಮತೋಲನದಲ್ಲಿ ವಿಷಯವನ್ನು ಕೊಂಡೊಯ್ಯುವುದು ಮುಖ್ಯವಾಗುತ್ತದೆ.
ಸಹಾಯವನ್ನು ಕೇಳಿ : ಕಠಿಣ ಪರಿಸ್ಥಿತಿಯ ನೀವೇ ಲೆಕ್ಕಾಚಾರ ಮಾಡುವುದು ಸರಿಯಲ್ಲ, ನಿಮ್ಮ ಸಂಗಾತಿಗೆ ಅದು ದೊಡ್ಡ ವಿಚಾರ ಎನಿಸದೇ ಇರಬಹುದು. ಹಾಗಾಗಿ ಅವರ ಅಭಿಪ್ರಾಯವನ್ನು ಕೇಳಿ ಮುಂದುವರೆಯಿರಿ. ನಿಮಗೆ ಸಾಧ್ಯವಾಗದಿದ್ದಲ್ಲಿ, ಸಂಗಾತಿಯ ಸಹಾಯವನ್ನು ಪಡೆಯುವುದು ಸರಿ ಮತ್ತು ಮುಂದಿನ ಉತ್ತಮ ಮಾರ್ಗ ಯಾವುದು ಎಂದು ಅವರನ್ನು ಕೇಳುವುದು ಕೂಡ ಸರಿ.
ಮುಕ್ತವಾಗಿ ಕೇಳಿ: ನಿಮ್ಮ ಸಂಗಾತಿಯ ಬಳಿ ಮುಕ್ತವಾಗಿ ಕೇಳುವುದು, ಸಂಭಾಷಣೆಯನ್ನು ಮುಂದಕ್ಕೆ ಕೊಂಡೊಯ್ಯಲು ಉತ್ತಮ ಮಾರ್ಗವಾಗಿದೆ.
ಕಷ್ಟಕರವಾದ ಸಂಭಾಷಣೆಗಳು ಕೆಲವೊಮ್ಮೆ ಸ್ವಲ್ಪ ಬಿಸಿಯಾಗಬಹುದು, ಏಕೆಂದರೆ ಜನರು ಭಾವನಾತ್ಮಕ ಅಥವಾ ನೋವನ್ನು ಅನುಭವಿಸಬಹುದು, ಕೋಪಗೊಳ್ಳಬಹುದು ಅಥವಾ ಗೊಂದಲಕ್ಕೊಳಗಾಗಬಹುದು. ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಆದ್ಯತೆಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ