AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lose Belly Fat: ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವ ಸಿಂಪಲ್ ಪಾನೀಯಗಳು ಇಲ್ಲಿವೆ

ನಿಮ್ಮ ದೇಹದ ಬೊಜ್ಜು, ವಿಶೇಷವಾಗಿ ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯಕವಾಗುವ ಪಾನೀಯಗಳ ಕುರಿತು ಆರೋಗ್ಯ ತಜ್ಞರಾದ ಅಂಬಿಕಾ ದಂಡೋನಾ ಮಾಹಿತಿ ನೀಡಿದ್ದಾರೆ.

Lose Belly Fat: ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವ ಸಿಂಪಲ್ ಪಾನೀಯಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Jan 10, 2023 | 10:14 PM

Share

ಚಳಿಗಾಲ(Winter Season)ದಲ್ಲಿ ಕರಿದ ತಿಂಡಿಗಳನ್ನು ತಿನ್ನುವ ಬಯಕೆ ಹೆಚ್ಚಿರುತ್ತದೆ. ಆದರೆ ಕ್ಯಾಲೊರಿಗಳು ಅಧಿಕ ಇರುವಂತಹ ತಿಂಡಿಗಳು ನಿಮ್ಮ ಆರೋಗ್ಯವನ್ನು ಕಡೆಸುವುದರ ಜೊತೆಗೆ ನಿಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ದೇಹದ ಬೊಜ್ಜು, ವಿಶೇಷವಾಗಿ ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯಕವಾಗುವ ಪಾನೀಯಗಳ ಕುರಿತು ಆರೋಗ್ಯ ತಜ್ಞರಾದ ಅಂಬಿಕಾ ದಂಡೋನಾ ಮಾಹಿತಿ ನೀಡಿದ್ದಾರೆ. ಹೊಟ್ಟೆಯ ಭಾಗದಲ್ಲಿ ಬೊಜ್ಜು ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ. ಜೊತೆಗೆ ನಿಮ್ಮ ನೆಚ್ಚಿನ ಯಾವುದೇ ಬಟ್ಟೆಯನ್ನು ಕೂಡ ಧರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಚಳಿಗಾಲದ ಸಮಯದಲ್ಲಿ ಮನೆಯಲ್ಲಿಯೇ ಸುಲಭವಾಗಿ ಬೊಜ್ಜು ಕರಗಿಸಲು ಈ ಮನೆ ಮದ್ದು ಪ್ರಯತ್ನಿಸಿ.

ಮೆಂತ್ಯ  ನೀರು:

ಮೆಂತ್ಯ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ ಎ, ಬಿ, ಡಿ, ಜೀವಸತ್ವಗಳು, ಫೈಬರ್, ಕಬ್ಬಿಣದ ಅಂಶಗಳು ಹೇರಳವಾಗಿದೆ. ಮೆಂತ್ಯ ಕಾಳಿನ ನೀರು ತೂಕ ನಷ್ಟಕ್ಕೆ ಉತ್ತಮ ಮನೆಮದ್ದು. ಜೊತೆಗೆ ಮಧುಮೇಹ ಕಾಯಿಲೆಗೂ ಉತ್ತಮ ಔಷಧಿಯಾಗಿದೆ. ಆದ್ದರಿಂದ ಪ್ರತಿದಿನ ರಾತ್ರಿ ನೆನೆಸಿಟ್ಟ ಮೆಂತ್ಯ ಕಾಳಿನ ನೀರನ್ನು ಕುಡಿಯಿರಿ.

ಜೀರಿಗೆ ನೀರು:

ನೀವು ಜೀರಿಗೆಯನ್ನು ಬೇಯಿಸಿ ಕೂಡ ಅದರ ರಸವನ್ನು ಸವಿಯಬಹುದಾಗಿದೆ. ಇಲ್ಲದಿದ್ದರೆ ಹಾಗೆಯೇ ನೀರಿನಲ್ಲಿ ನೆನೆಸಿಟ್ಟು ಕುಡಿಯಬಹುದಾಗಿದೆ. ರಾತ್ರಿ ಒಂದು ಗ್ಲಾಸಿಗೆ ಒಂದು ಚಮಚ ಜೀರಿಗೆ ಹಾಕಿ ಮತ್ತು ಅದಕ್ಕೆ ಸೇರಿಸಿ ನೆನೆಸಿಡಿ. ಈ ನೆನೆಸಿಟ್ಟ ಜೀರಿಗೆಯನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯಿರಿ. ಪ್ರತಿದಿನ ನೀವು ಈ ಅಭ್ಯಾಸವನ್ನು ರೂಢಿಸಿಕೊಡಿಸಿಕೊಳ್ಳುವುದರಿಂದ ನಿಮ್ಮ ದೇಹದ ತೂಕವನ್ನು ಇಳಿಸಬಹುದು.

ಇದನ್ನೂ ಓದಿ: ಉಪವಾಸದ ಸಮಯದಲ್ಲೂ ನೀವು ವರ್ಕ್​ ಔಟ್​ ಮಾಡುತ್ತೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ

ಗ್ರೀನ್ ಟೀ ಮತ್ತು ಲಿಂಬೆ ರಸ:

ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ದೇಹದಲ್ಲಿನ ಅಧಿಕ ಬೊಜ್ಜು ಕಡಿಮೆ ಮಾಡಲು ಗ್ರೀನ್ ಟೀ ಕುಡಿಯಿರಿ. ಜೊತೆಗೆ ಈ ಗ್ರೀನ್ ಟೀ ಗೆ ಲಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ನಿಮ್ಮ ತೂಕ ನಷ್ಟದ ಜೊತೆಗೆ ಚಳಿಗಾಲದಲ್ಲಿ ಹರಡುವ ನೆಗಡಿ, ಕೆಮ್ಮಿಗೂ ಉತ್ತಮ ಮನೆ ಮದ್ದು ಎಂದು ಪರಿಗಣಿಸಲಾಗಿದೆ.

ಶುಂಠಿ ಮತ್ತು ಪುದೀನ:

ಚಳಿಗಾಲದ ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಶುಂಠಿ ಒಂದು ಉತ್ತಮ ಔಷಧಿಯಾಗಿದೆ. ಜೊತೆಗೆ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಕೂಡ ಇದು ಸಹಾಯಮಾಡುತ್ತದೆ. ಪ್ರತಿದಿನ ಒಂದು ಲೋಟ ನೀರಿಗೆ ಸಣ್ಣ ತುಂಡು ಶುಂಠಿ ಸೇರಿಸಿ. ಕೆಲವು ಪುದೀನ ಎಲೆಗಳನ್ನು ಸೇರಿಸಿ ಮತ್ತು ಕೆಲವು ಗಂಟೆಗಳ ಕಾಲ ಅದನ್ನು ಬಿಡಿ. ಮುಂಜಾನೆ ಈ ನೀರನ್ನು ಕುಡಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ: 

Published On - 4:21 pm, Tue, 10 January 23

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್