
ರಾತ್ರಿ ಮಲಗುವಾಗ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು ಎಂಬ ಕಾರಣಕ್ಕೆ ಜನರು ಸಾಮಾನ್ಯವಾಗಿ ಸಡಿಲವಾದ ಪೈಜಾಮಾ ಮತ್ತು ಟಿ-ಶರ್ಟ್ ಸೇರಿದಂತೆ ಹೆಚ್ಚಾಗಿ ಆರಾಮದಾಯಕ ಬಟ್ಟೆಗಳನ್ನು ಧರಿಸುತ್ತಾರೆ. ಇನ್ನೂ ಕೆಲವರು ಉತ್ತಮ ನಿದ್ರೆ ಬರಲು ಒಳ ಉಡುಪುಗಳ ಧರಿಸದೆ ಮಲಗುತ್ತಾರೆ. ಆದರೆ ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ (Sleep with bra on) ಧರಿಸುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ನಿಜಕ್ಕೂ ರಾತ್ರಿ ಬಿಗಿಯಾದ ಬ್ರಾ ಧರಿಸಿ ಮಲಗುವುದು ಹಾನಿಕರವೇ? ಇದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಸೋಂಕಿನ ಅಪಾಯ: ರಾತ್ರಿಯಲ್ಲಿ ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನ ಭಾಗದಲ್ಲಿ ಬೆವರು ಸಂಗ್ರಹವಾಗುತ್ತದೆ. ಇದರಿಂದ ತೇವಾಂಶ ಹಾಗೆಯೇ ಉಳಿದು, ಇದು ಶಿಲೀಂಧ್ರ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ರಾತ್ರಿ ಮಲಗುವಾಗ ಬ್ರಾ ಧರಿಸಬಾರದು ಎಂದು ಹೇಳುವುದು
ಅಲರ್ಜಿ ಸಮಸ್ಯೆಗಳು: ದಿನವಿಡೀ ಬ್ರಾ ಧರಿಸುವುದರಿಂದ ಸ್ತನಗಳ ಸುತ್ತಲೂ ಬೆವರು ಸಂಗ್ರಹವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ರಾತ್ರಿಯಲ್ಲಿ ಅದೇ ಬ್ರಾ ಧರಿಸಿದರೆ, ನಿಮ್ಮ ಚರ್ಮವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯವೂ ದ್ವಿಗುಣಗೊಳ್ಳುತ್ತದೆ ಮತ್ತು ಇದರಿಂದಾಗಿ ನೀವು ದದ್ದುಗಳು, ಹುಣ್ಣುಗಳು ಮತ್ತು ಅಲರ್ಜಿಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ರಕ್ತ ಪರಿಚಲನೆಗೆ ಅಡಚಣೆ: ರಾತ್ರಿಯಲ್ಲಿ ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನಗಳ ಸುತ್ತಲ ಪ್ರದೇಶದಲ್ಲಿ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ. ನೀವು ಬಿಗಿಯಾದ ಬ್ರಾ ಧರಿಸಿದಾಗ, ಅದು ನಿಮ್ಮ ಸ್ತನಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಇದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ.
ನಿದ್ರೆಗೆ ಭಂಗ: ಉತ್ತಮ ನಿದ್ರೆಗಾಗಿ ಹಾಸಿಗೆ ಮಾತ್ರವಲ್ಲ ಬಟ್ಟೆಯೂ ಸಹ ಆರಾಮದಾಯಕವಾಗಿರಬೇಕು. ಹೀಗಿರುವಾಗ ಬಿಗಿಯಾದ ಬ್ರಾ ಧರಿಸುವುದರಿಂದ ಗಾಳಿಯು ಎದೆಯ ಪ್ರದೇಶವನ್ನು ತಲುಪುವುದನ್ನು ತಡೆಯುತ್ತದೆ, ಇದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ. ಇದರಿಂದ ಉಸಿರುಗಟ್ಟಿದಂತಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಡಪಡಿಕೆ ಹೆಚ್ಚಾಗುತ್ತದೆ ಮತ್ತು ನಿಮ್ಮ ನಿದ್ರೆಗೂ ತೊಂದರೆಯಾಗಬಹುದು. ಹಾಗಾಗಿ ಉತ್ತಮ ನಿದ್ರೆಗಾಗಿ ರಾತ್ರಿ ಬ್ರಾ ಧರಿಸದೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಇದನ್ನೂ ಓದಿ: ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲಕ್ಕಿಂತ ಉತ್ತಮ ಮದ್ದು ಇನ್ನೊಂದಿಲ್ಲ
ಚರ್ಮದ ಕಿರಿಕಿರಿ: ರಾತ್ರಿ ಮಲಗುವ ಸಮಯದಲ್ಲಿ ಬ್ರಾ ಧರಿಸಿ ಮಲಗುವುದರಿಂದ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ಬ್ರಾ ಹುಕ್ಸ್‌ಗಳು ಪಟ್ಟಿಗಳು ಚರ್ಮದ ಮೇಲೆ ಕೇಂದ್ರೀಕೃತ ಒತ್ತಡವನ್ನು ಹೇರುತ್ತವೆ. ಇದರ ಪರಿಣಾಮ ಉರಿ, ತುರಿಕೆ ಕಾಣಿಸಿಕೊಳ್ಳುತ್ತವೆ.
ಸ್ತನ ಕ್ಯಾನ್ಸರ್ ಅಪಾಯ: ರಾತ್ರಿ ಬ್ರಾ ಧರಿಸದೆ ಮಲಗುವುದರಿಂದ ಸ್ತನಗಳ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ರಕ್ತದ ಹರಿವು ಸರಾಗವಾಗಿರುತ್ತದೆ. ಇದು ಮತ್ತು ನಿದ್ರೆಯನ್ನು ಸುಧಾರಿಸುತ್ತದೆ. ಪ್ರತಿದಿನ ರಾತ್ರಿ ಮಲಗುವಾಗ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ