ಮಗುವಿನ ಲಾಲನೆ-ಪಾಲನೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರವೂ ಕೂಡ ಇರುತ್ತದೆ. ಪ್ರತಿ ಕೆಲಸವನ್ನು ಸಮನಾಗಿ ಹಂಚಿಕೊಂಡು ಬೇಸರ ಮಾಡಿಕೊಳ್ಳದೆ ಸಂತೋಷದಿಂದ ಮಾಡಿದಾಗ ಮಗುವಿನ ಪೋಷಣೆ ಉತ್ತಮವಾಗಿರುತ್ತದೆ. ಈ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.
ಮಾದರಿಯನ್ನು ಹುಡುಕುವುದು
ನೀವು ನಿಮ್ಮ ತಂದೆಯನ್ನು ತುಂಬಾ ಪ್ರೀತಿಸುತ್ತೀರಿ, ಹಾಗೆಯೇ ನಿಮ್ಮ ಮಕ್ಕಳೊಂದಿಗೆ ನಿಮ್ಮ ಸಂಬಂಧವು ವಿಭಿನ್ನವಾಗಿರಬೇಕೆಂದು ನೀವು ಬಯಸಬಹುದು.
ತಂದೆಯು ಕೂಡ ತಾಯಿಯಷ್ಟೇ ಮಗುವಿನ ಆರೈಕೆಯನ್ನು ಮಾಡುತ್ತಾನೆ, ಆದರೆ ಕೆಲವು ತಂದೆಯರು ಹಾಗಿರುವುದಿಲ್ಲ. ಅವರಿಗೆ ಮಗುವಿನ ಬೆಳವಣಿಗೆಯ ಪ್ರತಿ ಹಂತವನ್ನು ತಾನೂ ಅನಂದಿಸಬೇಕೆಂಬುದು ತಿಳಿದಿರುವುದಿಲ್ಲ.
ನಿಮ್ಮ ಮಗು ತಲೆಕೆಡಿಸಿಕೊಳ್ಳುವುದಿಲ್ಲ
ತಮ್ಮ ತಾಯಿ ತಂದೆ ತಮ್ಮನ್ನು ನೋಡಿಕೊಳ್ಳುವ ಬಗೆ ಕುರಿತು ಮಕ್ಕಳು ಸಂತೋಷ ಪಡುತ್ತಾರೆ. ನೀವು ಎಷ್ಟೇ ಸ್ಥಿತಿವಂತರಾಗಿರಬಹುದು, ಬಡವರೂ ಆಗಿರಬಹುದು ಮಗುವಿಗೆ ಅದ್ಯಾವುದು ಬೇಡ ಮಗುವಿಗೆ ಬೇಕಾಗಿರುವುದು ಭದ್ರತೆ, ತಾನು ಪೋಷಕರ ತೋಳಿನಲ್ಲಿ ಸುರಕ್ಷಿತವಾಗಿದ್ದೇನೆ ಎನ್ನುವ ಭಾವ, ಅಪ್ಪುಗೆ ಮಾತ್ರ.
ಪೋಷಕರ ಅಗತ್ಯತೆ
ಮಕ್ಕಳಿಗೆ ತಾಯಿಯಾಗಿ ನೀವು ಹೇಗೆ ನಡೆದುಕೊಳ್ಳುತ್ತಿದ್ದೀರಿ, ತಂದೆಯಾಗಿ ನೀವು ಹೇಗೆ ನಡೆದುಕೊಳ್ಳುತ್ತೀರಿ ಎಂಬುದು ಮುಖ್ಯವಲ್ಲ, ಮಗುವಿಗೆ ಕೇವಲ ಪಾಲನೆ ಬೇಕು, ಹಾಗೆಯೇ ಮಾದರಿ ಪೋಷಕರನ್ನು ಅವರು ಬಯಸುತ್ತಾರೆ.
ತಂದೆ ಹೇಗಿರಬೇಕು
ಮಗು ತನ್ನ ಅಗತ್ಯಗಳಿಗಾಗಿ ತನ್ನ ತಂದೆಯನ್ನು ಇತರೆ ಪೋಷಕರಿಗೆ ಕಂಪೇರ್ ಮಾಡುತ್ತದೆ ನೀವು ಉತ್ತಮ ತಂದೆಯಾಗ ಬಯಸಿದರೆ ಮಗುವಿನ ಬಟ್ಟೆ ಬದಲಿಸುವುದರಿಂದ ಹಿಡಿದು ಎಲ್ಲಾ ಕೆಲಸಕ್ಕೂ ನಿಮ್ಮ ಪತ್ನಿಯ ಸಾಥ್ ನೀಡಿ, ಅವರೊಂದು ಕೆಲಸ ಮಾಡಿದರೆ ನೀವೊಂದು ಕೆಲಸ ಮಾಡಿ ಆಗ ನೀವು ಮಗುವಿಗೆ ಇನ್ನಷ್ಟು ಹತ್ತಿರವಾಗುತ್ತೀರಿ.
ಮಗುವನ್ನು ಪಡೆಯುವ ಆಲೋಚನೆ ಮಾಡುವ ಮುನ್ನ ಮುನ್ನ ಕ್ಲ್ಯಾರಿಟಿ ಇರಲಿ
ನೀವು ಮಗುವನ್ನು ಹೊಂದುವ ಕುರಿತು ಆಲೋಚಿಸುವ ಮುನ್ನ ಸ್ಪಷ್ಟತೆ ಇರಲಿ, ನಿಮ್ಮ ಕನಸಿನ ಮನೆ, ಕಾರು ಕೊಳ್ಳುವುದು ಸೇರಿದಂತೆ ಎಲ್ಲಾ ಕನಸುಗಳು ಮುಂದೆ ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಗಮನವಿರಲಿ.
ಮಕ್ಕಳಿಲ್ಲದಿದ್ದರೆ ಕೇಳುವುದು ಮಹಿಳೆಯನ್ನೇ
ಮಕ್ಕಳನ್ನು ಹೊಂದುವುದು ಅಥವಾ ತಡವಾಗಿ ಮಕ್ಕಳನ್ನು ಪಡೆಯುವುದು ಪತಿ-ಪತ್ನಿ ಇಬ್ಬರು ಒಪ್ಪಿಗೆಯಿಂದ ತೆಗೆದುಕೊಂಡ ನಿರ್ಧಾರವಾಗಿರುತ್ತದೆ. ಆದರೆ ಹಿರಿಯರು ಕೇವಲ ಹೆಣ್ಣುಮಕ್ಕಳನ್ನೇ ಪ್ರಶ್ನಿಸುತ್ತಾರೆ. ಅಂತಹ ಸಂದರ್ಭದಲ್ಲಿ ಪತಿಯು ಕೂಡ ಪತ್ನಿಯ ಬೆಂಬಲಕ್ಕೆ ನಿಂತು ಸೂಕ್ತ ಉತ್ತರ ನೀಡಬೇಕಾಗುತ್ತದೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ