ವ್ಯಾನವಾಯು
ಸ್ಥಳ: ಉಸಿರಾಟ
ತತ್ವ: ನೀರು
ಚಕ್ರ: ಸ್ವಾಧಿಷ್ಠಾನ
ಕ್ರಿಯಾಶೀಲವಾಗಿಸುವುದು: ದೀರ್ಘವಾಗಿ ಉಸಿರು ತೆಗೆದುಕೊಳ್ಳಿ ದೀರ್ಘವಾಗಿ ಉಸಿರು ಬಿಡಿ, ದೀರ್ಘವಾಗಿ ಉಸಿರು ತೆಗೆದುಕೊಳ್ಳಿ ಉಸಿರಾಡುವಾಗ
ವ್ಯಾನವಾಯು ಐದನೇ ಹಾಗೂ ಕೊನೆಯ ವಾಯುವಾಗಿದೆ. ವಾಯುವು ಮೇಲಕ್ಕೆ ಪ್ರವಹಿಸುತ್ತದೆ. ಇದು ಶರೀರದ ಎಲ್ಲಾ 72 ಸಾವಿರ ನಾಡಿಗಳಲ್ಲಿ ಪ್ರವಹಿಸುವ ಶಕ್ತಿಯಾಗಿದೆ. ವ್ಯಾನ ಶಬ್ದವು ವ್ಯಾಪ್ತ ಶಬ್ದಕ್ಕೆ ಸಂಬಂಧಿಸಿದೆ. ಇದು ಇಡೀ ಶರೀರವನ್ನು ವ್ಯಾಪಿಸಿದೆ.
ನಾಲ್ಕು ವಿಧಗಳಿವೆ ಅವುಗಳು ಅಂತರ್ ಪೂರಕ, ಅಂತರ್ ಕುಂಭಕ, ಉಸಿರನ್ನು ಬಿಡುವುದು ರೇಚಕ,ಉಸಿರನ್ನು ಬಿಗಿ ಹಿಡಿಯುವುದು ಬಾಹಿರ್ ಕುಂಭಕ.
ಐದೂ ವಾಯುಗಳನ್ನು ಮೂಲ ಶೋಧನದಿಂದ ಶುದ್ಧಿಗೋಳಿಸುವುದು ಸಾಧ್ಯವಿದೆ. ಮಲವು ಒಳಗೇ ಉಳಿದುಬಿಟ್ಟರೆ ಅದು ವಿಷವಾಗುತ್ತದೆ. ಅದರ ನಿರ್ಮೂಲನೆ ಅವಶ್ಯ. ಹೆಚ್ಚಿನ ರೋಗಗಳಿಗೆ ಮೂಲವಾಗಿರುವುದು ಮಲಬದ್ಧತೆ. ಅದರ ನಿವಾರಣೆ ಅತ್ಯವಶ್ಯಕ.
ವ್ಯಾನವು ಇಡೀ ದೇಹವನ್ನು ವ್ಯಾಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀಸಲು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ವ್ಯಾನ ಸ್ನಾಯು ವ್ಯವಸ್ಥೆಯನ್ನು ಸಹ ನಿಯಂತ್ರಿಸುತ್ತದೆ, ಸಮತೋಲನವನ್ನು ಕಾಪಾಡುತ್ತದೆ, ಇದು ಇಡೀ ದೇಹವನ್ನು ವ್ಯಾಪಿಸುತ್ತಿರುವಾಗ, ವ್ಯಾನ ವಿಶೇಷವಾಗಿ ಅಂಗಗಳಲ್ಲಿ ಸಕ್ರಿಯವಾಗಿದೆ.
ವ್ಯಾನ ವಾಯುವು ವಿಚಲಿತವಾದಾಗ, ದೇಹ ಮತ್ತು ಮನಸ್ಸು ಎರಡೂ ವಿಘಟಿತವಾಗುತ್ತವೆ ಮತ್ತು ದುರ್ಬಲಗೊಳ್ಳುತ್ತವೆ, ಇದರ ಪರಿಣಾಮವಾಗಿ ಅಸಮಂಜಸ ಪ್ರಯತ್ನಗಳು, ವಿವಿಧ ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆ, ಆತಂಕ ಉಂಟಾಗುತ್ತದೆ.
-ಮೊದಲು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ ನಿಧಾನವಾಗಿ ಉಸಿರನ್ನು ಬಿಡಿ
-ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳಿ- ಅಂತರ್ ಕುಂಭಕ
-ಉಸಿರನ್ನು ತೆಗೆದುಕೊಳ್ಳುವುದು ಪೂರಕ, ಉಸಿರನ್ನು ತೆಗೆದುಕೊಂಡ ಬಳಿಕ ಅದು ಅಂತರ್ಕುಂಭಕ, ಉಸಿರನ್ನು ಬಿಡುವುದು ರೇಚಕ, ಉಸಿರನ್ನು ಬಿಟ್ಟ
ಬಳಿಕ ಉಸಿರನ್ನು ಬಿಗಿ ಹಿಡಿಯುವುದು ಬಾಹಿರ್ ಕುಂಭಕ.