AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Insomnia: ಕಡಿಮೆ ವಯಸ್ಸಿನಲ್ಲೇ ನಿದ್ರಾಹೀನತೆ, ನಿವೃತ್ತಿ ಜೀವನದಲ್ಲಿ ಈ ಸಮಸ್ಯೆಗಳಿಗೆ ಕಾರಣವಾಗುತ್ತೆ

Insomnia: ನಿದ್ರೆ ಎಂಬುದು ಮನುಷ್ಯನ ಜೀವನಕ್ಕೆ ಬಹುಮುಖ್ಯವಾಗಿ ಬೇಕಾಗಿದ್ದು, ನಿದ್ರಾಹೀನತೆ(Insomnia)ಸಮಸ್ಯೆಯು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ.

Insomnia: ಕಡಿಮೆ ವಯಸ್ಸಿನಲ್ಲೇ ನಿದ್ರಾಹೀನತೆ, ನಿವೃತ್ತಿ ಜೀವನದಲ್ಲಿ ಈ ಸಮಸ್ಯೆಗಳಿಗೆ ಕಾರಣವಾಗುತ್ತೆ
ನಿದ್ರಾಹೀನತೆ
Follow us
TV9 Web
| Updated By: ನಯನಾ ರಾಜೀವ್

Updated on:May 23, 2022 | 11:10 AM

ನಿದ್ರೆ ಎಂಬುದು ಮನುಷ್ಯನ ಜೀವನಕ್ಕೆ ಬಹುಮುಖ್ಯವಾಗಿ ಬೇಕಾಗಿದ್ದು, ನಿದ್ರಾಹೀನತೆ(Insomnia)ಸಮಸ್ಯೆಯು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಆರೋಗ್ಯವಾಗಿರಲು 8 ಗಂಟೆಗಳ ಕಾಲ ನಿದ್ರೆ ಮಾಡುವುದು ಅನಿವಾರ್ಯ, ಒಂದೊಮ್ಮೆ ನೀವು ಎಂಟು ತಾಸುಗಳ ಕಾಲ ನಿದ್ರೆ ಮಾಡಿಯೂ ಮಧ್ಯೆ ಮಧ್ಯೆ ಹತ್ತಾರು ಬಾರಿ ಎಚ್ಚರವಾಗುತ್ತಿದ್ದರೆ ಅದೂ ಕೂಡ ಉತ್ತಮ ನಿದ್ರೆ ಎನಿಸಿಕೊಳ್ಳುವುದಿಲ್ಲ.

ಕೆಲವರಿಗೆ ಅವರ ವಯಸ್ಸಿನ ಆಧಾರದ ಮೇಲೆ ಕಡಿಮೆ ಬೇಕಾಗಬಹುದು. ನಿದ್ರೆ ಒಂದು ಪ್ರಮುಖ ಕಾರ್ಯ. ನಮ್ಮನ್ನ ರಿಫ್ರೆಶ್ ಮಾಡುವುದು ನಿದ್ರೆಯಿಂದ ಮಾತ್ರ ಸಾಧ್ಯ. ನಾವು ನಿದ್ರೆಯಿಂದ ಎದ್ದಾಗ ರಿಫ್ರೆಶ್ ಮಾತ್ರವಲ್ಲದೇ, ರೀಚಾರ್ಚ್ ಕೂಡ ಆಗಿರುತ್ತೇವೆ.

ಮನುಷ್ಯರಿಗೆ ಬದುಕಲು ಆಹಾರ, ನೀರು ಮತ್ತು ಗಾಳಿ ಅಗತ್ಯವಿರುವಂತೆ ನಿದ್ರೆ ಬೇಕು. ರಾತ್ರಿ ನಿದ್ದೆ ಮಾಡದೇ ಇರುವುದು ಆರೋಗ್ಯಕ್ಕೆ ಹಾನಿಕಾರಕ, ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ನಿದ್ದೆಗೆಡುವುದು ತೊಂದರೆಯಾಗುವುದಿಲ್ಲ. ಆದರೆ ಹೆಚ್ಚು ನಿದ್ದೆ ಗೆಡುವುದು, ನಿಮ್ಮ ಮಾನಸಿಕ ಮತ್ತು ದೈಹಿಕವಾಗಿ ಹೆಚ್ಚು ಕೆಟ್ಟ ಪರಿಣಾಮಗಳಾಗುತ್ತದೆ.

ಮಧ್ಯ ವಯಸ್ಸಿನಲ್ಲಿ ನಿದ್ರಾಹೀನತೆ ಆವರಿಸಿಕೊಂಡರೆ ಕಷ್ಟ: ಮಧ್ಯ ವಯಸ್ಸಿನಲ್ಲೇ ನಿದ್ರಾಹೀನತೆ ಸಮಸ್ಯೆ ಉಂಟಾದರೆ ನಿವೃತ್ತಿ ಜೀವನ ಕಷ್ಟಮಯವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಒಂದೊಮ್ಮೆ ಮೊದಲೇ ನೀವು ನಿದ್ರಾ ಹೀನತೆ ಸಮಸ್ಯೆ ಎದುರಿಸುತ್ತಿದ್ದರೆ ನಿವೃತ್ತಿ ಸಮಯದಲ್ಲಿ ಜ್ಞಾಪಕ ಶಕ್ತಿ, ಏಕಾಗ್ರತೆ ಎರಡೂ ದೂರವಾಗುತ್ತದೆ.

ವಿಭಿನ್ನ ರೋಗಗಳು: ನಿದ್ರೆಯ ಕೊರತೆಯಿರುವ ಮಕ್ಕಳು ವಯಸ್ಕರಿಗಿಂತ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರುವ ಸಾಧ್ಯತೆಯಿದೆ. ಮಕ್ಕಳಲ್ಲಿ, ನಿದ್ರೆಯ ಕೊರತೆಯು ಅತಿಯಾದ ಚಟುವಟಿಕೆ ಮತ್ತು ಗಮನ ಶಕ್ತಿ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ ಅಲ್ಲದೇ ಏಕಾಏಕಿ ನಡುವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಹಾಗೂ ಶಾಲಾ ಚಟುವಟಿಕೆಗಳಲ್ಲಿ ಗಮನ ಕಡಿಮೆಯಾಗುತ್ತದೆ. ಈ ನಿದ್ರಾ ಹೀನತೆ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗಳು ಹಲವಾರು.

ಆಯಾಸ: ನಿದ್ರೆ ಕಡಿಮೆಯಾದಾಗ ಆಯಾಸ ಹೆಚ್ಚಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ದೈಹಿಕವಾಗಿ ಆಯಾಸವಾಗುತ್ತದೆ. ಅಲ್ಲದೇ ಮತ್ತೆ ನಿದ್ರೆ ಮಾಡಬೇಕು ಎಂದು ಅನಿಸುತ್ತದೆ. ಯಾವುದೇ ಕೆಲಸಗಳನ್ನು ಮಾಡಲು ಆಸಕ್ತಿ ಇರುವುದಿಲ್ಲ.

ಗಮನದ ಕೊರತೆ: ನಿದ್ದೆ ಕಡಿಮೆಯಾದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕಷ್ಟವಾಗುತ್ತದೆ. ಗೊಂದಲ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಗಮನ ಎಲ್ಲೋ ಇರುತ್ತದೆ. ನೀವು ಸ್ನೇಹಿತರೊಂದಿಗೆ ಇದ್ದೀರಿ ಎಂದರೆ, ಅವರೊಡನೆ ಒಳ್ಳೆಯ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ನೀವು ಎಲ್ಲೋ ಕಳೆದು ಹೋದಂತೆ ಇರುತ್ತೀರಿ. ಅಷ್ಟೇ ಅಲ್ಲದೇ ನಿದ್ರಾ ಹೀನತೆ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ.

ತೂಕದಲ್ಲಿ ಹೆಚ್ಚಳ: ಹಸಿವು ಮತ್ತು ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ನಿದ್ರೆ ಪರಿಣಾಮ ಬೀರಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನೀವು ಚೆನ್ನಾಗಿ ನಿದ್ರೆ ಮಾಡಬೇಕು. ನಿದ್ರೆ ಸರಿಯಾಗದಿದ್ದಲ್ಲಿ, ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಛಾಗಿ, ತು ಸಹ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಡಯಾಬಿಟೀಸ್ ಟೈಪ್ 2 ಆಗುವ ಸಾಧ್ಯತೆ ಹೆಚ್ಚು.

ಮೂಡ್ ಸ್ವಿಂಗ್ಸ್: ಕೆಲ ನಿಮಿಷಗಳ ಹಿಂದೆ ಇದ್ದ ನಮ್ಮ ಮೂಡ್ ಬದಲಾಗಿರುತ್ತದೆ. ಬಹಳ ಹಿಂಸೆಯನ್ನು ಅನುಭವಿಸುತ್ತೇವೆ. ನಿದ್ರೆ ಸರಿಯಾಗಿ ಆಗದಿದ್ದಾಗ, ನಮಗೆ ಪ್ರತಿ ಸಣ್ಣ ಸಣ್ಣ ವಿಚಾರಗಳು ತಪ್ಪು ಎಂದು ಅನಿಸಿ, ಕೋಪ, ಒತ್ತಡಗಳು ಹೆಚ್ಚಾಗುತ್ತದೆ. ನಿದ್ರಾಹೀನತೆ ನಮ್ಮ ನಡುವಳಿಕೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರುತ್ತದೆ. ನಮಗೆ ಸರಿಯಾಗಿ ನಿದ್ದೆ ಬರದಿದ್ದಾಗ ಕಿರಿ ಕಿರಿ ಅನುಭವಿಸುತ್ತೇವೆ.

ಈ ಮೇಲಿನ ಮಾಹಿತಿ ಟಿವಿ9ನ ಅಧಿಕೃತ ಮಾಹಿತಿಯಅಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:43 am, Mon, 23 May 22