Father’s Role In Parenting: ಗರ್ಭದಲ್ಲಿರುವ ಮಗು ಯಾವಾಗ ನಿಮ್ಮ ಮಾತನ್ನು ಆಲಿಸಲು ಶುರು ಮಾಡುತ್ತೆ?

| Updated By: ನಯನಾ ರಾಜೀವ್

Updated on: Jul 27, 2022 | 3:26 PM

ತಾನು ಗರ್ಭಿಣಿ ಎಂದು ತಿಳಿದಾಗಿನಿಂದ ತಾಯಿಗೆ ಮಗುವಿನ ಜತೆ ಬಾಂಧವ್ಯ ಗೊತ್ತಿಲ್ಲದಂತೆಯೇ ಬೆಳೆದುಬಿಡುತ್ತದೆ. ಮಗುವು ಗರ್ಭದಲ್ಲಿರುವಾಗಲೇ ನಿಮ್ಮ ಮಾತನ್ನು ಆಲಿಸಿ ಪ್ರತಿಕ್ರಿಯೆ ನೀಡಲು ಶುರು ಮಾಡುತ್ತದೆ.

Fathers Role In Parenting: ಗರ್ಭದಲ್ಲಿರುವ ಮಗು ಯಾವಾಗ ನಿಮ್ಮ ಮಾತನ್ನು ಆಲಿಸಲು ಶುರು ಮಾಡುತ್ತೆ?
Kamala Bharadwaj
Follow us on

ತಾನು ಗರ್ಭಿಣಿ ಎಂದು ತಿಳಿದಾಗಿನಿಂದ ತಾಯಿಗೆ ಮಗುವಿನ ಜತೆ ಬಾಂಧವ್ಯ ಗೊತ್ತಿಲ್ಲದಂತೆಯೇ ಬೆಳೆದುಬಿಡುತ್ತದೆ. ಮಗುವು ಗರ್ಭದಲ್ಲಿರುವಾಗಲೇ ನಿಮ್ಮ ಮಾತನ್ನು ಆಲಿಸಿ ಪ್ರತಿಕ್ರಿಯೆ ನೀಡಲು ಶುರು ಮಾಡುತ್ತದೆ. ಗರ್ಭಿಣಿಗೆ 5-6 ತಿಂಗಳು ಆದಾಗಿನಿಂದ ಮಗುವು ಗರ್ಭದೊಳಗೆ ಮೆಲು ಧ್ವನಿಯನ್ನು ಆಲಿಸಿ ಪ್ರತಿಕ್ರಿಯಿಸಲು ಶುರು ಮಾಡುತ್ತದೆ.

ಮಗುವು ಕೇವಲ ತಾಯಿ ಮಾತು ಮಾತ್ರವಲ್ಲ ತಂದೆಯ ಧ್ವನಿಯನ್ನೂ ಗುರುತಿಸುತ್ತದೆ ಹೀಗಾಗಿ ತಾಯಿಗಿಂತ ಮೆಲುಧ್ವನಿಯಲ್ಲಿ ಮಾತನಾಡಿ. ಸಂಗಾತಿಯ ಹೊಟ್ಟೆಯ ಮೇಲೆ ಕೈಯಿಡಿ ಮಗುವಿನ ಚಲನೆಯನ್ನು ಆನಂದಿಸಿ.

ಸಂಗಾತಿಯ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ, ಸಂಗಾತಿಯ ಹೊಟ್ಟೆಯನ್ನು ಚುಂಬಿಸಿ, ಮಗುವಿನ ಚಲನೆಯು ನಿಮಗೆ ಗೋಚರಿಸುತ್ತದೆ, ಅಲ್ಲಿಂದಲೇ ಮಗು ಹಾಗೂ ತಂದೆ ನಡುವೆ ಬಾಂಧವ್ಯ ಶುರುವಾಗುತ್ತದೆ.

ಮಗುವಿನ ಹೃದಯ ಬಡಿತ ಕೇಳಬಹುದು: ಟಿಶ್ಯೂ ಪೇಪರ್​ ರೋಲ್​ನಲ್ಲಿರುವ ರಟ್ಟಿನ ಮೂಲಕ ಮಗುವಿನ ಹೃದಯ ಬಡಿತವನ್ನು ಆಲಿಸಬಹುದು.

ಸ್ಕ್ಯಾನ್​ ಮಾಡಿ: ನಿಮ್ಮ ಸಂಗಾತಿ ಜತೆ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡುವ ಮೂಲಕ ನಿಮ್ಮ ಮಗುವಿನ ಬೆಳವಣಿಗೆಯನ್ನು ವೀಕ್ಷಿಸಬಹುದು.

ಮಗುವಿನ ಹೆಸರಿನ ಕುರಿತು ಒಟ್ಟಿಗೆ ಕುಳಿತು ಸಮಾಲೋಚಿಸಿ: ಮಗುವಿಗೆ ಏನು ಹೆಸರಿಡಬೇಕೆಂಬುದನ್ನು ಒಟ್ಟಿಗೆ ಕುಳಿತು ಸಮಾಲೋಚಿಸಿ.

ಮತ್ತಷ್ಟು ಓದಿ

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 3:20 pm, Wed, 27 July 22