ಪ್ರತೀ ವ್ಯಕ್ತಿಗೂ ಕೋಪ ಎನ್ನುವುದು ಸಹಜ ಗುಣ. ಆದರೆ ಅದು ಕೆಲವರಲ್ಲಿ ಹೆಚ್ಚು ಕೆಲವರಲ್ಲಿ ಕಡಿಮೆ ಇರುತ್ತದೆ. ವ್ಯಕ್ತಿಗಳು ಹುಟ್ಟಿದ ಪರಿಸರ, ಒಡನಾಟ, ಮಾನಸಿಕ ಸ್ಥಿತಿ ಎಲ್ಲವೂ ಮನುಷ್ಯನ ಕೋಪವನ್ನು ಪ್ರತಿನಿಧಿಸುತ್ತದೆ. ಅದೇ ರೀತಿ ರಾಶಿ ಚಕ್ರಗಳೂ ಕೂಡ ಪ್ರತೀ ವ್ಯಕ್ತಿಯ ಸಿಟ್ಟನ್ನು ನಿರ್ಧರಿಸುತ್ತದೆ. ಬೇರೆ ಬೇರೆ ರಾಶಿಯ ವ್ಯಕ್ತಿಗಳ ಕೋಪದ ಪ್ರಮಾಣ ಬೇರೆ ಬೇರೆ ರೀತಿ ಇರುತ್ತದೆ. ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಇಲ್ಲಿದೆ ನೋಡಿ ಮಾಹಿತಿ. ಯಾವ ರಾಶಿಯವರಿಗೆ ಸಿಟ್ಟು ಹೆಚ್ಚು, ಅವರ ವ್ಯಕ್ತಿತ್ವ ಏನು ಎನ್ನುವ ಮಾಹಿತಿ ಇಲ್ಲಿದೆ.
ಮೇಷ ರಾಶಿ:
ಮೇಷ ರಾಶಿಯವರಿಗೆ ಬಹಳ ಬೇಗ ಕೋಪ ಬರುತ್ತದೆ. ಅದೇ ರೀತಿ ಬೇಗ ಸಿಟ್ಟು ಕಡಿಮೆಯಾಗುತ್ತದೆ. ಮೇಷ ರಾಶಿಯವರ ಮಾತು ಕೂಡ ಕಟುವಾಗಿರುತ್ತದೆ.
ವೃಷಭ ರಾಶಿ:
ರಾಶಿ ಚಕ್ರದಲ್ಲಿ ವೃಷಭ ರಾಶಿಯವರಿಗೆ ಸಿಟ್ಟು ಕಡಿಮೆ. ಆದರೆ ಒಮ್ಮೆ ಸಿಟ್ಟು ಬಂದರೆ ಅವರನ್ನು ನಿಯಂತ್ರಿಸುವುದು ಕಷ್ಟ. ವೃಷಭನಂತೆ ಸಿಟ್ಟಿನಲ್ಲಿ ಮುನ್ನುಗ್ಗುವ ವ್ಯಕ್ತಿತ್ವವನ್ನುಬ ಹೊಂದಿರುತ್ತಾರೆ.
ಮಿಥುನ ರಾಶಿ:
ಮಿಥುನ ರಾಶಿಯವರು ತಾಳ್ಮೆಯ ವ್ಯಕ್ತಿತ್ವವನ್ನು ಹೊಂದಿರುವವರು. ಕೋಪವನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳುತ್ತಾರೆ. ಬೇರೆಯವರ ಮೇಲೆ ಕೋಪವನ್ನು ಹೊಂದಿರುವುದನ್ನೇ ಮರೆತು ಮುಂದುವರೆಯುತ್ತಾರೆ. ಹೀಗಾಗಿ ಮಿಥುನ ರಾಶಿ ಜನರು ಸಾಧುಗಳೆಂದೇ ಹೇಳಬಹುದಾಗಿದೆ.
ಕರ್ಕಾಟಕ:
ಕರ್ಕಾಟಕ ರಾಶಿಯ ಜನರಿಗೆ ಕೋಪ ಸಿಡಿದೇಳುವ ವ್ಯಕ್ತಿತ್ವವಿರುತ್ತದೆ. ಭಾವನೆಗಳನ್ನು ಹೆಚ್ಚು ತಡೆ ಹಿಡಿಯುತ್ತಾರೆ. ಕೋಪದಲ್ಲಿಯೂ ತಾಳ್ಮೆವಹಿಸಿ ನಿರ್ಧಾರವನ್ನು ಕೈಗೊಳ್ಳುತ್ತಾರೆ.
ಸಿಂಹ ರಾಶಿ:
ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಯ ಜನರು ಮೇಷ ರಾಶಿಗಿಂತಲೂ ಹೆಚ್ಚು ಸಿಟ್ಟನ್ನು ಹೊಂದಿರುತ್ತಾರೆ. ತೀಕ್ಷ್ಣ ಮಾತುಗಳಿಂದ ಎದುರಿಗಿರುವವರನ್ನು ಮಾತಿನಿಂದಲೇ ಕಟ್ಟಿಹಾಕುತ್ತಾರೆ.
ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಕೋಪ ಹೆಚ್ಚು ಬರುತ್ತದೆ. ಅದೇ ರೀತಿ ಅಷ್ಟೇ ಬೇಗ ಕಡಿಮೆಯಾಗುತ್ತದೆ. ಹೆಚ್ಚು ನಂಬಿಕೆಯಿಡುವ ಈ ರಾಶಿಯ ಜನರಿಗೆ ಒಂದು ಬಾರಿ ಅಪನಂಬಿಕೆ ಮೂಡಿದರೆ, ನಂಬಿಕೆ ಗಳಿಸುವುದು ಕಷ್ಟದ ಕೆಲಸ.
ತುಲಾ ರಾಶಿ:
ಸಾರಾಸಗಟಾಗಿ ಮಾತುಗಳನ್ನು ಆಡುವ ತುಲಾ ರಾಶಿಯ ಜನರು ನೇರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ತುಲಾ ರಾಶಿಯ ಜನರು ನೇರವಾಗಿ ಮಾತನಾಡುತ್ತಾರೆ. ಹೀಗಿರುವ ವ್ಯಕ್ತಿಗಳು ಸಹಜವಾಗಿ ವರ್ತಿಸಲಿಲ್ಲ ಎಂದರೆ ಕೋಪಗೊಂಡಿದ್ದಾರೆ ಎಂದರ್ಥ. ಅಲ್ಲದೆ ಇವರ ಕೋಪ ದೀರ್ಘ ಕಾಲ ಇರುವ ಸಾಧ್ಯತೆಗಳೂ ಇರುತ್ತದೆ.
ವೃಶ್ಚಿಕ ರಾಶಿ:
ಈ ರಾಶಿಯ ಜನ ಕೋಪಗೊಂಡರೆ ಸೇಡು ತೀರಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹೀಗಾಗಿ ವೃಶ್ಚಿಕ ರಾಶಿಯ ಜನರೊಂದಿಗೆ ಮಾತನಾಡುವಾಗ ಎಚ್ಚರಿಕೆವಹಿಸುವುದು ಅಗತ್ಯ. ಸಿಟ್ಟನ್ನು ಕಡಿಮೆಗೊಳಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.
ಧನು ರಾಶಿ:
ತಾವು ಅಂದುಕೊಂಡಿರುವುದನ್ನು ನೇರವಾಗಿ ಹೇಳುವ ಧನುರಾಶಿಯ ಜನರ ಸಿಟ್ಟು ಅಷ್ಟು ಸುಲಭವಾಗಿ ಕಡಿಮೆಯಾಗದು. ಒಂದು ಬಾರಿ ಅಪನಂಬಿಕೆ ಮೂಡಿದ ಮೇಲೆ ಧನುರಾಶಿಯ ಜನರು ಮತ್ತೆಂದೂ ನಂಬಿಕೆಯನ್ನು ಇಡುವುದಿಲ್ಲ.
ಮಕರ ರಾಶಿ:
ಮಕರ ರಾಶಿಯ ಜನ ಹೆಚ್ಚು ತಾಳ್ಮೆವಹಿಸುತ್ತಾರೆ. ಸಿಟ್ಟನ್ನು ಹಿಡಿದಿಟ್ಟುಕೊಂಡು ಕ್ಷಮಿಸುವ ಗುಣ ಹೊಂದಿರುತ್ತಾರೆ. ಆದರೆ ಕ್ಷಮಿಸಲು ಸಮಯ ತೆಗೆದುಕೊಳ್ಳುತ್ತಾರೆ.
ಕುಂಭ ರಾಶಿ:
ಕುಂಭ ರಾಶಿಯ ಜನರು ಸಿಟ್ಟನ್ನು ತೋರಿಸಿಕೊಳ್ಳುವುದಿಲ್ಲ. ಬೇಗನೆ ಕೋಪಗೊಳ್ಳುವ ಇವರು ಇತರರೊಂದಿಗೆ ಸಭ್ಯವಾಗಿಯೇ ವರ್ತಿಸುತ್ತಾರೆ. ಸಿಟ್ಟು ಬಂದರೆ ಮುಖಕ್ಕೆ ಮುಖ ಕೊಟ್ಟು ಮಾತನಾಡಲು ಇಷ್ಟ ಪಡುವುದಿಲ್ಲ.
ಮೀನ ರಾಶಿ:
ಭಾವುಕ ಮನಸ್ಥಿತಿಯ ಈ ರಾಶಿಯ ಜನ ಹೆಚ್ಚು ಕೋಪಗೊಳ್ಳುವುದಿಲ್ಲ. ಮಾನಸಿಕವಾಗಿ ಭಾವನಾತ್ಮ ಜೀವಿಯಾಗಿರುವ ಇವರು ತಮ್ಮ ಸಿಟ್ಟನ್ನು ಕಡೆಗಣಿಸಿ ಸಂಬಂಧಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ.
ಇದನ್ನೂ ಓದಿ:
Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ