
ಪ್ರತಿಯೊಂದು ದೇಶವೂ ತನ್ನದೇ ಆದ ಆಹಾರ ಪದ್ಧತಿಗಳನ್ನು ಪಳಗೊಂಡಿದೆ. ಆದರೆ ಚೀನಾ (China) ತನ್ನ ವಿಚಿತ್ರ ಆಹಾರ ಪದ್ಧತಿಯ ಕಾರಣದಿಂದಲೇ ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿನ ಜನ ಹಾವಿನ ಸೂಪ್, ಬಾವಲಿ ಸೂಪ್, ನಾಯಿ ಮಾಂಸ, ಜೇಡ ಎಲ್ಲವನ್ನೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅದೇ ರೀತಿ ಜಿರಳೆಗಳನ್ನು ಸಹ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಜಿರಳೆಗಳನ್ನು ಕಂಡರೆ ಹೊಡೆದು ಸಾಯಿಸುತ್ತೇವೆ. ಚೀನಾದ ಜನ ಮಾತ್ರ ಇದೇ ಜಿರಳೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಅಷ್ಟಕ್ಕೂ ಚೀನಿಯರು ಜಿರಳೆಗಳನ್ನು ತಿನ್ನೋದೇಕೆ, ಈ ಕುರಿತ ಆಸಕ್ತಿದಾಯಕ ಮಾಹಿತಿಯಲ್ಲಿ ತಿಳಿಯಿರಿ.
ಚೀನಾದಲ್ಲಿ ಜಿರಳೆ ಇತ್ಯಾದಿ ಕೀಟಗಳನ್ನು ಪ್ರೋಟೀನ್, ಪೋಷಕಾಂಶಗಳ ಉತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗಿರುವುದರಿಂದ, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತದೆ ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನಲಾಗುತ್ತದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಚೀನಾದ ಕ್ಸಿಚಾಂಗ್‌ನಲ್ಲಿರುವ ಒಂದು ಔಷಧ ಕಂಪನಿಯು ಒಂದು ದೊಡ್ಡ ಕಟ್ಟಡದಲ್ಲಿ ವಾರ್ಷಿಕವಾಗಿ ಸುಮಾರು 6 ಬಿಲಿಯನ್ ಜಿರಳೆಗಳನ್ನು ಸಾಕುತ್ತದೆ. ವಿವಿಧ ಭಕ್ಷ್ಯಗಳು ಮಾತ್ರವಲ್ಲದೆ ಜಿರಳೆಗಳನ್ನು ಪುಡಿಮಾಡಿ ಅವುಗಳ ಸಿರಪ್ ಅನ್ನು ಸಹ ಚೀನಾದ ಜನ ಸೇವನೆ ಮಾಡುತ್ತಾರೆ. ಈ ಜಿರಳೆ ಸಿರಪ್ ಅನ್ನು ಸಾಂಪ್ರದಾಯಿಕ ಚೀನೀ ಔಷಧವಾಗಿ ಸೇವಿಸಲಾಗುತ್ತದೆ. ಅಲ್ಲಿ ಇದನ್ನು ಅತಿಸಾರ, ವಾಂತಿ, ಹೊಟ್ಟೆಯ ಹುಣ್ಣು, ಉಸಿರಾಟದ ತೊಂದರೆಗಳು ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಒಟ್ಟಾರೆಯಾಗಿ ಜಿರಳೆಗಳು ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣ, ಸತು ಇತ್ಯಾದಿ ಖನಿಜಗಳಿಂದ ಸಮೃದ್ಧವಾಗಿದ್ದು, ಹಂದಿ, ಕೋಳಿ, ಇತ್ಯಾದಿ ಮಾಂಸಗಳಿಗೆ ಹೋಲಿಸಿದರೆ ಇವುಗಳನ್ನು ಬೆಳೆಸುವುದು ಕೂಡ ಅಗ್ಗ ಮತ್ತು ಸುಲಭವಾಗಿದೆ. ಹಾಗಾಗಿ ಜಿರಳೆಗಳನ್ನು ಪ್ರೋಟೀನ್, ಪೋಷಕಾಂಶಗಳ ಉತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗಿರುವುದರಿಂದ ಚೀನಾದ ಜನ ಜಿರಳೆಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತದೆ.
ಇದನ್ನೂ ಓದಿ: ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ
ಅಲ್ಲದೆ ಚೀನಾದ ಹಲವು ಪ್ರದೇಶಗಳಲ್ಲಿ ನಾಯಿ ಮತ್ತು ಹಾವಿನ ಮಾಂಸವನ್ನು ಸೇವಿಸಲಾಗುತ್ತದೆ, ಒಂದು ವರದಿಯ ಪ್ರಕಾರ, ಚೀನಾದಲ್ಲಿ ಪ್ರತಿ ವರ್ಷ 10,000 ಟನ್‌ಗಳಿಗಿಂತ ಹೆಚ್ಚು ಹಾವುಗಳನ್ನು ತಿನ್ನಲಾಗುತ್ತಿತ್ತು ಮತ್ತು ಅನೇಕ ಪ್ರದೇಶಗಳಲ್ಲಿ, ನಾಯಿಗಳನ್ನು ಬೇಯಿಸಿ ತಿನ್ನಲಾಗುತ್ತಿತ್ತು. ಆದರೆ 2020 ರಲ್ಲಿ COVID-19 ಮಹಾಮಾರಿ ಏಕಾಏಕಿ ಹರಡಿದ ನಂತರ, ಅನೇಕ ಪ್ರಮುಖ ನಗರಗಳಲ್ಲಿ ನಾಯಿ ಮತ್ತು ಬೆಕ್ಕಿನ ಮಾಂಸ ಸೇವನೆಯನ್ನು ನಿಷೇಧಿಸಲಾಯಿತು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ