AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಳಗೆ ಚಪ್ಪಲಿ ಧರಿಸಬಾರದು; ಸಂಪ್ರದಾಯಕ್ಕೆ ಇಂಬು ನೀಡಿದ ವೈಜ್ಞಾನಿಕ ಕಾರಣ

ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯೊಳಗೆ ಧರಿಸುವುದರಿಂದ ಮನೆ ಮಲಿನವಾಗುತ್ತದೆ. ಮನೆಯ ನೆಲ ಗಲೀಜಾಗುತ್ತದೆ. ಚಪ್ಪಲಿಗೆ ತಾಗಿರುವ ಮಣ್ಣು, ನೀರು, ಸಗಣಿಯಂತಹ ವಸ್ತುಗಳಿಂದ ಮನೆ ಅಶುಚಿಗೊಳ್ಳುತ್ತವೆ. ಇದು ಬಹು ಬೇಗನೇ ಅನಾರೋಗ್ಯ ತಂದೊಡ್ಡುತ್ತದೆ.

ಮನೆಯೊಳಗೆ ಚಪ್ಪಲಿ ಧರಿಸಬಾರದು;  ಸಂಪ್ರದಾಯಕ್ಕೆ ಇಂಬು ನೀಡಿದ ವೈಜ್ಞಾನಿಕ ಕಾರಣ
ಸಾಂಕೇತಿಕ ಚಿತ್ರ
guruganesh bhat
| Edited By: |

Updated on: Jun 02, 2021 | 7:44 AM

Share

ಏನು ಇರದಿದ್ದರೂ ಸರಿ, ಆರೋಗ್ಯ ಇದ್ದರೆ ಸಾಕು ಎನ್ನುವ ಕಾಲ ಇದು. ಆರೋಗ್ಯ ಕಾಪಾಡಿಕೊಳ್ಳುವ ಎಲ್ಲಾ ಮಾರ್ಗಗಳನ್ನೂ ಪ್ರತಿದಿನ ಅನುಸರಿಸುವ ರೂಢಿ ಬಹುತೇಕ ಎಲ್ಲರಲ್ಲೂ ಇರುತ್ತದೆ. ಸ್ವಚ್ಛತೆ, ಪೌಷ್ಠಿಕ ಆಹಾರ, ನಿದ್ರೆ ಮುಂತಾದ ಅಂಶಗಳನ್ನು ಪಾಲಿಸಿಯೇ ಪಾಲಿಸುತ್ತೇವೆ ನಾವು. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವುದೆಲ್ಲವೂ ನಮ್ಮ ಸಂಸ್ಕೃತಿಯೇ ಆಗಿದೆ. ಇಂತಹುದೇ ಒಂದು ಆಚರಣೆ ಚಪ್ಪಲಿಯನ್ನು ಮನೆಯ ಆಚೆಯೇ ಇಡುವುದು. ಮನೆಯೊಳಗೆ ಪ್ರತ್ಯೇಕ ಸ್ಲಿಪರ್ ಹಾಕಿಕೊಳ್ಳುವುದು. ಅಂದಹಾಗೆ ನಿಮಗೆ ಗೊತ್ತೇ? ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯಲ್ಲಿ ಬಳಸದಿರುವ ಹಿಂದೆ ವೈಜ್ಞಾನಿಕ ಕಾರಣವೂ ಇದೆ.

ಹೊರಜಗತ್ತಿನಲ್ಲಿ, ಅಂದರೆ ರಸ್ತೆ, ಕಚೇರಿ, ಬಸ್ ಸ್ಟಾಂಡ್ ಮುಂತಾದೆಡೆ ಬಳಸುವ ಚಪ್ಪಲಿಗಳಲ್ಲಿ ಧೂಳು, ಕಸ ಕಡ್ಡಿ, ಕೊಳಚೆಗಳಂತಹ ಕಲ್ಮಶಗಳು ಸೇರಿರುತ್ತವೆ. ಇಂತಹ ಕಲ್ಮಶದಿಂದ ರೋಗ ರುಚಿನ ಉಂಟುಮಾಡುವ ರೋಗಕಾರಕಗಳು ಮನೆ ಸೇರುವ ಸಂಭವವಿದೆ. ಅಲ್ಲದೇ ಕೊಳಚೆಯಲ್ಲಿ ಇರಬಹುದಾದ ಬ್ಯಾಕ್ಟೀರಿಯಾಗಳು ಮನೆ ಸೇರುವ ಸಂಭವವೂ ಚಪ್ಪಲಿಗಳಿಂದ ಇದೆ. ಹೀಗಾಗಿ ಮನೆಯ ಹೊರಗೇ ಚಪ್ಪಲಿಗಳನ್ನು ಇಡುವುದು ಅತ್ಯಂತ ಉತ್ತಮವಾದದ್ದು ಎನ್ನುತ್ತದೆ ವಿಜ್ಞಾನ.

ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯೊಳಗೆ ಧರಿಸುವುದರಿಂದ ಮನೆ ಮಲಿನವಾಗುತ್ತದೆ. ಮನೆಯ ನೆಲ ಗಲೀಜಾಗುತ್ತದೆ. ಚಪ್ಪಲಿಗೆ ತಾಗಿರುವ ಮಣ್ಣು, ನೀರು, ಸಗಣಿಯಂತಹ ವಸ್ತುಗಳಿಂದ ಮನೆ ಅಶುಚಿಗೊಳ್ಳುತ್ತವೆ. ಇದು ಬಹು ಬೇಗನೇ ಅನಾರೋಗ್ಯ ತಂದೊಡ್ಡುತ್ತದೆ. ಹೀಗಾಗಿ ಮನೆಯೊಳಗೆ ಹೊರಗೆ ಬಳಸುವ ಚಪ್ಪಲಿ ಧರಿಸಬಾರದು ಎಂದು ಸಂಶೋಧನೆಗಳು ತಿಳಿಸಿವೆ. ಹಿಂದಿನಿಂದ ಪಾಲಿಸುವ ಸಂಪ್ರದಾಯಕ್ಕೆ ಈ ಸಂಶೋಧನೆ ಇನ್ನಷ್ಟು ಇಂಬು ಕೊಟ್ಟಂತಾಗಿದೆ.

ಹಾಗಾದರೆ ಏನು ಮಾಡಬಹುದು? ಮನೆಯ ಹೊರಗೇ ಚಪ್ಪಲಿ ಇರಿಸುವುದು ರೂಢಿ ಮಾಡಿಕೊಳ್ಳಿ. ನೆಂಟರು, ಗೆಳೆಯರು ಬಂದಾಗಲೂ ಇದೇ ನಿಯಮ ಪಾಲಿಸಿ. ಮನೆಯ ಹೊರಗೆ ಚಪ್ಪಲಿ ಇರಿಸುವ ಜಾಗವನ್ನು ಗುರುತಿಸಿ. ಇಂಥದ್ದೇ ಸ್ಥಳದಲ್ಲಿ ಚಪ್ಪಲಿ ಇರಿಸಬೇಕು ಎಂಬ ನಿಯಮ ಮಾಡಿ ಮನೆಯ ಎಲ್ಲರಿಗೂ ತಿಳಿಸಿ. ಮನೆ ಪ್ರವೇಶಿಸುವ ಬಾಗಿಲಿನ ಮುಂದೆ ಒಂದು ಮ್ಯಾಟ್ ಹಾಕಿ. ಮ್ಯಾಟ್​ಗೆ ಕಾಲನ್ನು ಒರೆಸಿಕೊಂಡೇ ಹೊರಗಿನಿಂದ ಬರುವವರು ಮನೆಯನ್ನು ಪ್ರವೇಶಿಸುವಂತೆ ತಿಳಿಸಿ.

ಇಂತಹ ಕೆಲವು ಸರಳ ಸೂತ್ರಗಳ ಮೂಲಕವೂ ನೀವು ನಿಮ್ಮ ಆರೋಗ್ಯದ ರಕ್ಷಕರಾಗಬಹುದು. ಎಷ್ಟೋ ಹಣ ವ್ಯರ್ಥ ಮಾಡಿ ಆಸ್ಪತ್ರೆಗೆ ಅಲೆಯುವುದಕ್ಕಿಂತ ಇಂತಹ ಸೂತ್ರಗಳು ಸುಲಭವಲ್ಲವೇ?

ಇದನ್ನೂ ಓದಿ: ದೇಶ ಮತ್ತು ರಾಜ್ಯದಲ್ಲಿ ಕೊವಿಡ್​ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ

990 ರೂ. ಬೆಲೆಯ ಡಿಆರ್‌ಡಿಒದ ಆಂಟಿ-ಕೊವಿಡ್ ಔಷಧವನ್ನು ಯಾರೆಲ್ಲ ಬಳಸಬಹುದು? ಇಲ್ಲದೆ ವಿವರ

(Why footwear must keep outside the house where is the scientific reasons)