Toe silver ring: ಮದುವೆಯಾದ ಮಹಿಳೆಯರು ತಮ್ಮ ಕಾಲ್ಬೆರಳುಗಳಿಗೆ ಬೆಳ್ಳಿ ಕಾಲುಂಗರ ಧರಿಸುತ್ತಾರೆ ಏಕೆ? ನಿಮಗಿದು ತಿಳಿದಿದೆಯಾ?

ಮಹಿಳೆಯರು ಮಧ್ಯದ ಬೆರಳಿಗೆ ಬೆಳ್ಳಿ ಕಾಲುಂಗರಗಳನ್ನು ಧರಿಸಬೇಕು. ಈ ಬೆರಳು ನೇರವಾಗಿ ಹೃದಯಕ್ಕೆ ಸಂಬಂಧಿಸಿದೆ.

Toe silver ring: ಮದುವೆಯಾದ ಮಹಿಳೆಯರು ತಮ್ಮ ಕಾಲ್ಬೆರಳುಗಳಿಗೆ ಬೆಳ್ಳಿ ಕಾಲುಂಗರ ಧರಿಸುತ್ತಾರೆ ಏಕೆ? ನಿಮಗಿದು ತಿಳಿದಿದೆಯಾ?
ಮಹಿಳೆಯರು ಬೆಳ್ಳಿ ಕಾಲುಂಗರ ಧರಿಸುತ್ತಾರೆ ಏಕೆ?
Follow us
ಸಾಧು ಶ್ರೀನಾಥ್​
|

Updated on: May 08, 2023 | 12:04 PM

ಹಿಂದೂ ಧರ್ಮದಲ್ಲಿ ಮದುವೆಗೆ ವಿಶೇಷ ಸ್ಥಾನ, ಮಹತ್ವವಿದೆ. ವಿವಾಹವು ಇಬ್ಬರು ವ್ಯಕ್ತಿಗಳನ್ನು ಒಂದುಗೂಡಿಸುವ ಪವಿತ್ರ ಬಂಧವಾಗಿದೆ. ಮದುವೆ ನಿಗದಿಯಾಗಿ, ವಧು (Bride) ಮತ್ತು ವರರ ಮನೆಯಲ್ಲಿ ಮದುವೆಯ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಯುವಕ-ಯುವತಿಯರ ಜಾತಕ ಕೂಡಿಬರುತ್ತದಾ? ದಾಂಪತ್ಯ ಜೀವನದಲ್ಲಿ (Marriage Rituals) ಯಾವುದೇ ಅಡೆತಡೆಗಳು ಬರುವುದಿಲ್ಲವಾ? ಎಲ್ಲವೂ ಸುಸೂತ್ರವಾಗಿ ನೆರವೇರುತ್ತದಾ? ಎಂದು ಜ್ಯೋತಿಷಿಗಳು, ಪುರೋಹಿತರ ಸಲಹೆಯನ್ನೂ ತೆಗೆದುಕೊಳ್ಳುತ್ತಾರೆ. ಮದುವೆಯ ನಂತರ ಮಹಿಳೆಯರು ತಮ್ಮ ಕಾಲ್ಬೆರಳುಗಳಿಗೆ ಬೆಳ್ಳಿ ಕಾಲುಂಗರ ಧರಿಸುತ್ತಾರೆ ಎಂಬುದು ಹಿಂದೂ ಧರ್ಮದಲ್ಲಿ ಎಲ್ಲರಿಗೂ ತಿಳಿದ ವಿಷಯ. ಹಾಗಾದರೆ ಬೆಳ್ಳಿ ಕಾಲುಂಗರ (Toe silver ring) ಧರಿಸಲು ಕಾರಣವೇನು ಗೊತ್ತಾ?

ಬೆಳ್ಳಿ ಕಾಲುಂಗರ ಧರಿಸುವುದು ಹಿಂದೂ ಸಂಪ್ರದಾಯದ ಒಂದು ಭಾಗವಾಗಿದೆ. ಆದರೆ ಈಗ ಅದು ಫ್ಯಾಶನ್ ಆಗಿ ಮಾರ್ಪಟ್ಟಿದೆ. ಬೆಳ್ಳಿ ಕಾಲುಂಗರ ಧರಿಸುವುದು ಅಂದರೆ ಮಹಿಳೆ ವಿವಾಹವಾದರು ಎಂಬುದು ಸಾಂಕೇತಿಕವಾಗುತ್ತದೆ. ವಿವಾಹಿತ ಮಹಿಳೆಯ ಬಾಹ್ಯ ರೂಪ ಪ್ರದರ್ಶನದ ಪ್ರಮುಖ ಭಾಗ ಬೆಳ್ಳಿ ಕಾಲುಂಗರ ಧರಿಸುವುದು ಎಂದು ಪರಿಗಣಿಸಲಾಗಿದೆ. ಮದುವೆಯ ನಂತರ.. ಬೆಳ್ಳಿ ಕಾಲುಂಗರ ಧರಿಸಿರುವುದು ವಧು ಮತ್ತು ವರನ ಆನಂದದಾಯಕ ದಾಂಪತ್ಯ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ.

Also Read: ತಾಳಿ ಕಟ್ಟುವ ಶುಭ ವೇಳೆ, ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ! ವೈರಲ್ ವಿಡಿಯೋ ಇಲ್ಲಿದೆ

ಪತಿ-ಪತ್ನಿಯರ ನಡುವೆ ಉತ್ತಮ ಬಾಂಧವ್ಯ ಹೊಂದಲು ಎರಡು ಅಥವಾ ಮೂರು ಬೆಳ್ಳಿ ಕಾಲುಂಗರಗಳನ್ನು ಎರಡೂ ಪಾದಗಳಿಗೆ ಧರಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಲಕ್ಷ್ಮಿ ದೇವಿಯು ಬೆಳ್ಳಿ ಕಾಲುಂಗರಗಳನ್ನು ಧರಿಸಿರುವ ಮಹಿಳೆಯನ್ನು ನೋಡಿ ಸಂತೋಷಪಡುತ್ತಾಳೆ. ಲಕ್ಷ್ಮಿ ದೇವಿಯ ಶಾಶ್ವತ ಆಶೀರ್ವಾದಕ್ಕಾಗಿ ಬೆಳ್ಳಿ ಬೆಳ್ಳಿ ಕಾಲುಂಗರಗಳನ್ನು ಧರಿಸುವುದು ಬಹಳ ಮುಖ್ಯ. ಮಹಿಳೆಯರು ಬೆಳ್ಳಿ ಕಾಲುಂಗರ, ಗೆಜ್ಜೆಗಳನ್ನು ಧರಿಸುವ ಈ ಸಂಪ್ರದಾಯವು ರಾಮಾಯಣದೊಂದಿಗೆ ಸಂಬಂಧಿಸಿದೆ. ರಾವಣ ಸೀತೆಯನ್ನು ಅಪಹರಿಸಿದಾಗ, ಅವಳು ತನ್ನ ವಸ್ತುಗಳನ್ನು ದಾರಿಯಲ್ಲಿ ಎಸೆಯುತ್ತಾಳೆ. ರಾಮನು ತನ್ನ ಜಾಡನ್ನು ಸುಲಭವಾಗಿ ಕಂಡುಕೊಳ್ಳುವಂತೆ ಸೀತೆ ಹೀಗೆ ಮಾಡಿದಳು ಎಂಬ ಮಾತಿದೆ. ಇನ್ನು ಲಕ್ಷ್ಮಣನು ತನ್ನ ಅತ್ತಿಗೆ ಸೀತೆಯ ಬೆಳ್ಳಿ ಕಾಲುಂಗರಗಳನ್ನು ನೋಡಿ ನೆನಪಿಸಿಕೊಂಡನು.

ಮಹಿಳೆಯರು ಮಧ್ಯದ ಬೆರಳಿಗೆ ಬೆಳ್ಳಿ ಕಾಲುಂಗರಗಳನ್ನು ಧರಿಸಬೇಕು. ಈ ಬೆರಳು ನೇರವಾಗಿ ಹೃದಯಕ್ಕೆ ಸಂಬಂಧಿಸಿದೆ. ಈ ಬೆರಳಿಗೆ ಬೆಳ್ಳಿಯ ಕಡಗಗಳನ್ನು ಧರಿಸುವುದರಿಂದ ಜಾತಕದಲ್ಲಿ ಚಂದ್ರನು ಬಲಗೊಳ್ಳುತ್ತಾನೆ. ಪತಿ ಪತ್ನಿಯರ ಜೀವನದಲ್ಲಿ ಶಾಂತಿ ನೆಲೆಸಲಿದೆ. ಅಲ್ಲದೆ, ಬೆಳ್ಳಿಯನ್ನು ದೇಹಕ್ಕೆ ಉತ್ತಮವಾದ ಲೋಹವೆಂದು ಪರಿಗಣಿಸಲಾಗಿದೆ. ಈ ಲೋಹವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಹಾಗಾಗಿ ಬೆಳ್ಳಿ ಕಾಲುಂಗರ ಧರಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ