International Day Of Older Persons: ವಿಶ್ವ ಹಿರಿಯರ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಇತಿಹಾಸ ಪ್ರಾಮುಖ್ಯತೆ ಇಲ್ಲಿದೆ

ವೃದ್ಧಾಪ್ಯವು ಜೀವನದ ಒಂದು ಹಂತವಾಗಿದ್ದು, ಈ ಸಮಯದಲ್ಲಿ ವ್ಯಕ್ತಿಗೆ ಹೆಚ್ಚು ಪ್ರೀತಿ, ಕಾಳಜಿ ಮತ್ತು ಬೆಂಬಲದ ಅಗತ್ಯವಿದೆ. ಆದರೆ ಇಂದು ಹಿರಿಯ ವ್ಯಕ್ತಿಗಳಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ. ಸ್ವತಃ ಮನೆಯವರೇ ಅವರನ್ನು ವೃದ್ಧಾಶ್ರಮಕ್ಕೆ ನೂಕುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಜೀವನದ ದಾರಿಯನ್ನು ತೋರಿದ ಹಿರಿಯರನ್ನು ಗೌರವಿಸಬೇಕು, ವೃದ್ಧಾಪ್ಯದಲ್ಲಿ ಅವರಿಗೆ ಸರಿಯಾದ ಪ್ರೀತಿ ಮತ್ತು ಕಾಳಜಿಯನ್ನು ತೋರಬೇಕೆಂದು ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 1 ರಂದು ವಿಶ್ವ ಹಿರಿಯರ ದಿವನ್ನು ಆಚರಿಲಾಗುತ್ತದೆ.

International Day Of Older Persons: ವಿಶ್ವ ಹಿರಿಯರ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಇತಿಹಾಸ ಪ್ರಾಮುಖ್ಯತೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 30, 2023 | 6:32 PM

ಹಿರಿಯ ವ್ಯಕ್ತಿಗಳು ಕುಟುಂಬದ ಆಧಾರ ಸ್ತಂಭ. ಜೀವನ ಪಾಠವನ್ನು ಹೇಳುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಡುತ್ತಾರೆ. ನಮಗೆಲ್ಲರಿಗೂ  ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕಲು ಸರಿಯಾದ ದಾರಿಯನ್ನು ತೋರುವವರು ಹಿರಿಯರು. ಆದ್ದರಿಂದ ನಾವು ಅವರನ್ನು ಎಂದಿಗೂ ನಿರ್ಲಕ್ಷಿಬಾರದು. ಆದರೆ  ಇಂದು ಹಿರಿಯ ವ್ಯಕ್ತಿಗಳಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ. ಸ್ವತಃ ಮನೆಯವರೇ ಅವರನ್ನು ವೃದ್ಧಾಶ್ರಮಕ್ಕೆ ನೂಕುತ್ತಿದ್ದಾರೆ.   ಇನ್ನೂ ಹೆಚ್ಚಿನ ವೃದ್ಧರು ಮನೆಯಲ್ಲಿದ್ದರೂ ಅವರಿಗೆ ತಮ್ಮ ಮಕ್ಕಳಿಂದ ಸರಿಯಾದ ಆರೈಕೆ ಮತ್ತು ಪ್ರೀತಿ ಸಿಗುತ್ತಿಲ್ಲ.  ಈ ನಿಟ್ಟಿನಲ್ಲಿ  ಹಿರಿಯರನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ಳಬೇಕು,.  ವೃದ್ಧಾಪ್ಯದಲ್ಲಿ ಅವರಿಗೆ ಸರಿಯಾದ ಪ್ರೀತಿ ಮತ್ತು ಕಾಳಜಿಯನ್ನು ತೋರಬೇಕೆಂದು ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 1 ರಂದು ವಿಶ್ವದಾದ್ಯಂತ  ಹಿರಿಯರ ದಿನವನ್ನು ಆಚರಿಸಲಾಗುತ್ತದೆ.

 ವಿಶ್ವ ಹಿರಿಯರ ದಿನದ ಇತಿಹಾಸ:

ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅನ್ಯಾಯವನ್ನು ತಡೆಯಲು  ಹಾಗೂ ಸಮಾಜದಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ಮತ್ತು ಗೌರವ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 14 ಡಿಸೆಂಬರ್ ಅಕ್ಟೋಬರ್ 1990 ರಂದು ಹಿರಿಯರ ದಿನವನ್ನು ಆಚರಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿತು.  ಮತ್ತು ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯರ ದಿನವನ್ನು ಆಚರಿಸುವುದಾಗಿ ಘೋಷಿಸಿತು. ನಂತರ 1991, ಅಕ್ಟೋಬರ್ 1 ರಂದು ಮೊದಲ ಬಾರಿಗೆ ವಿಶ್ವ ಹಿರಿಯರ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಇತಿಹಾಸ, ಮಹತ್ವ ಇಲ್ಲಿದೆ

ಅಂತರಾಷ್ಟ್ರೀಯ ಹಿರಿಯದ ದಿನದ ಮಹತ್ವ:

ಹಿರಿಯ ವ್ಯಕ್ತಿಗಳು ಪ್ರತಿಯೊಂದು ಕುಟುಂಬದ ಆಧಾರಸ್ತಂಭವಾಗಿದ್ದು, ಜೀವನ ಪಾಠವನ್ನು ಹೇಳುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಡುತ್ತಾರೆ. ನಮಗೆ ಬದುಕಲು ಸರಿಯಾದ ದಾರಿಯನ್ನು ತೋರುವವರು ಹಿರಿಯರು, ಆದ್ದರಿಂದ ನಾವು ಅವರನ್ನು ಎಂದಿಗೂ ನಿರ್ಲಕ್ಷಿಬಾರದು. ಹಿರಿಯರ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಗಮನವನ್ನು ನೀಡಬೇಕು.  ಅವರಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಹಾಗೂ ಹಿರಿಯರಿಗೆ ನಿಂದಿಸದೆ ಅವರನ್ನು ಗೌರವಭಾವದಿಂದ ನೋಡಿಕೊಳ್ಳಬೇಕೆಂದು ವಿಶ್ವ ಹಿರಿಯರ ದಿನದ ಮೂಲಕ ಜಾಗೃತಿಯನ್ನು ಮೂಡಿಸಲಾಗುತ್ತದೆ. ಅಲ್ಲದೆ ಈ ದಿನವು ನಮ್ಮ ಸಮಾಜಕ್ಕೆ ಹಿರಿಯರ ಕೊಡುಗೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.  ಹಿರಿಯ ವ್ಯಕ್ತಿಗಳ  ಬಗ್ಗೆ ತಾರತಮ್ಯ, ಆರೈಕೆಯ ನಿರ್ಲಕ್ಷ್ಯವನ್ನು  ಮತ್ತು ಅನ್ಯಾಯವನ್ನು ನಿಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅನೇಕ  ಸಂಸ್ಥೆಗಳು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತವೆ. ಹಾಗೂ ಈ ದಿನ  ಹಿರಿಯರನ್ನು ಸಂತೋಷವಾಗಿರಿಸಲು ವೃದ್ಧಾಶ್ರಮಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ