AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀತಾ ಅಂಬಾನಿ ಉಟ್ಟ ಜಗತ್ತಿನ ದುಬಾರಿ ಸೀರೆಯ ವಿನ್ಯಾಸಕರು ಯಾರು? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ನೀತಾ ಅಂಬಾನಿ 2015ರಲ್ಲಿ ಮದುವೆಯೊಂದರಲ್ಲಿ ಉಟ್ಟಿದ್ದ ಗುಲಾಬಿ ಬಣ್ಣದ ಸೀರೆ ಎಲ್ಲ ಫ್ಯಾಷನ್​ ಪ್ರಿಯರ ಗಮನ ಸೆಳೆದಿತ್ತು. ಇದು ಇಡೀ ಪ್ರಪಂಚದ ಅತ್ಯಂತ ದುಬಾರಿ ಸೀರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೀರೆಯು ಸೂಕ್ಷ್ಮವಾದ ಥ್ರೆಡ್‌ವರ್ಕ್ ಅನ್ನು ಹೊಂದಿತ್ತು.

ನೀತಾ ಅಂಬಾನಿ ಉಟ್ಟ ಜಗತ್ತಿನ ದುಬಾರಿ ಸೀರೆಯ ವಿನ್ಯಾಸಕರು ಯಾರು? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
ನೀತಾ ಅಂಬಾನಿ ಉಟ್ಟಿದ್ದ ದುಬಾರಿ ಸೀರೆ
Follow us
ಸುಷ್ಮಾ ಚಕ್ರೆ
|

Updated on: Sep 30, 2023 | 4:52 PM

ಸೀರೆ ಇಷ್ಟವಾಗದ ಭಾರತೀಯ ಮಹಿಳೆಯರೇ ಇಲ್ಲ ಎನ್ನಬಹುದು. ಆದರೆ, ಈ ಜಗತ್ತಿನಲ್ಲಿ ಅತಿ ದುಬಾರಿ ಸೀರೆ ಯಾವುದು ಗೊತ್ತಾ? ಬಿಲಿಯನೇರ್ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಧರಿಸಿದ ಸೀರೆ ವಿಶ್ವದ ಅತ್ಯಂತ ದುಬಾರಿ ಸೀರೆ ಎನಿಸಿಕೊಂಡಿದೆ. ನೀತಾ ಅಂಬಾನಿಯ ಡ್ರೆಸಿಂಗ್ ಸ್ಟೈಲ್ ಯಾವ ಬಾಲಿವುಡ್ ನಟಿಯರ ಸ್ಟೈಲ್​ಗೂ ಕಡಿಮೆಯಿಲ್ಲ. ನೀತಾ ಅಂಬಾನಿ 2015ರಲ್ಲಿ ಮದುವೆಯೊಂದರಲ್ಲಿ ಉಟ್ಟಿದ್ದ ಗುಲಾಬಿ ಬಣ್ಣದ ಸೀರೆ ಎಲ್ಲ ಫ್ಯಾಷನ್​ ಪ್ರಿಯರ ಗಮನ ಸೆಳೆದಿತ್ತು. ಇದು ಇಡೀ ಪ್ರಪಂಚದ ಅತ್ಯಂತ ದುಬಾರಿ ಸೀರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2015ರಲ್ಲಿ ಮಾಜಿ ರಾಜ್ಯಸಭಾ ಸಂಸದರಾದ ಪರಿಮಳ ನಾಥ್ವಾನಿ ಅವರ ಮಗನ ಮದುವೆಗೆ ನೀತಾ ಅಂಬಾನಿ ಕೂಡ ತೆರಳಿದ್ದರು. ಈ ಐಷಾರಾಮಿ ಮದುವೆಯಲ್ಲಿ ಗಿನ್ನೆಸ್ ವಿಶ್ವ ಪುಸ್ತಕದಲ್ಲಿ ಅತ್ಯಂತ ದುಬಾರಿ ಸೀರೆ ಎಂಬ ದಾಖಲೆಯನ್ನು ಪಡೆದಿದೆ. ಹಾಗಾದರೆ, ನೀತಾ ಅಂಬಾನಿ ಉಟ್ಟಿದ್ದ ಜಗತ್ತಿನ ಅತ್ಯಂತ ದುಬಾರಿ ಸೀರೆಯ ಡಿಸೈನರ್ ಯಾರು? ಇಲ್ಲಿದೆ ಮಾಹಿತಿ.

ನೀತಾ ಅಂಬಾನಿ ಉಟ್ಟಿದ್ದ ಈ ದುಬಾರಿ ಸೀರೆಯನ್ನು ಚೆನ್ನೈ ಸಿಲ್ಕ್ಸ್‌ನ ನಿರ್ದೇಶಕ ಶಿವಲಿಂಗಂ ವಿನ್ಯಾಸಗೊಳಿಸಿದ್ದಾರೆ. ಗುಲಾಬಿ ಬಣ್ಣದ ಈ ಸೀರೆಯ ಮೇಲೆ ಕೈಯಿಂದ ಕಸೂತಿ ಮಾಡಲಾಗಿದೆ. ಇದರಲ್ಲಿ ನಿಜವಾದ ಮುತ್ತುಗಳು, ಪಚ್ಚೆ, ಮಾಣಿಕ್ಯ, ಪುಖರಾಜ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬಳಸಿ ಅಲಂಕೃತಗೊಳಿಸಲಾಗಿದೆ.

ಇದನ್ನೂ ಓದಿ: ಮುಖದ ಸೌಂದರ್ಯಕ್ಕೆ ಹರಳೆಣ್ಣೆ ಬಳಸುವುದು ಹೇಗೆ?

ತಮಿಳುನಾಡಿನ ಅತಿದೊಡ್ಡ ಜವಳಿ ಸಾಮ್ರಾಜ್ಯವಾದ ಚೆನ್ನೈ ಸಿಲ್ಕ್ಸ್ (TCS) ತನ್ನ ವಿಶೇಷವಾದ ಡಿಸೈನ್​ ಮತ್ತು ರೇಷ್ಮೆಯ ಗುಣಮಟ್ಟದಿಂದ ಹಲವು ತಲೆಮಾರುಗಳಿಂದ ಜನರನ್ನು ಸಂತೃಪ್ತಿಗೊಳಿಸುತ್ತಿದೆ. ಚೆನ್ನೈ, ಕೊಯಮತ್ತೂರು, ತ್ರಿಪುರ ಮುಂತಾದ ಸ್ಥಳಗಳಲ್ಲಿ ವಿಸ್ತಾರವಾದ ಜವಳಿ ಅಂಗಡಿಗಳನ್ನು ತೆರೆಯುವ ಮೂಲಕ ಚೆನ್ನೈ ಸಿಲ್ಕ್ ಜನರಿಗೆ ಸರ್ವಿಸ್ ನೀಡುತ್ತಿದೆ. ಎಲ್ಲ ರಾಜ್ಯಗಳ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಚೆನ್ನೈ ಸಿಲ್ಕ್ಸ್ ಪ್ರಯತ್ನಗಳನ್ನು ಮಾಡುತ್ತಲೇ ಇದೆ.

ನೀತಾ ಅಂಬಾನಿಯವರ ಅತ್ಯಂತ ದುಬಾರಿ ಸೀರೆಯ ಬೆಲೆ ಎಷ್ಟು?:

ನೀತಾ ಅಂಬಾನಿ ಉಟ್ಟಿದ್ದ ದುಬಾರಿ ಸೀರೆಯ ಬೆಲೆ 40 ಲಕ್ಷ ರೂ. ಈ ಸೀರೆಯು ಸೂಕ್ಷ್ಮವಾದ ಥ್ರೆಡ್‌ವರ್ಕ್ ಅನ್ನು ಹೊಂದಿತ್ತು. ನಾಥದ್ವಾರದ ದೇವರ ಸುಂದರವಾದ ಚಿತ್ರವನ್ನು ಪ್ರದರ್ಶಿಸುವ ಅದ್ಭುತವಾದ ಸೆರಗು ಮತ್ತು ಅದರ ವಿಶೇಷ ವಿನ್ಯಾಸದ ಬ್ಲೌಸ್ ಜನರ ಗಮನವನ್ನು ಸೆಳೆದಿತ್ತು. ಶಿವಲಿಂಗಂ ರಚಿಸಿದ ಈ ದುಬಾರಿ ಸೀರೆಯನ್ನು ಕಾಂಚೀಪುರಂನ 35 ಮಹಿಳಾ ಕುಶಲಕರ್ಮಿಗಳು ಸೇರಿ ಸಿದ್ಧಪಡಿಸಿದ್ದರು. ಈ ಸೀರೆಯು 8 ಕೆ.ಜಿಗೂ ಹೆಚ್ಚು ತೂಕವಿದೆ.

ಈ ಸೀರೆಯ ಜೊತೆಗೆ ನೀತಾ ಅಂಬಾನಿ ವಜ್ರ ಮತ್ತು ಪಚ್ಚೆಯ ನೆಕ್ಲೇಸ್, ಅದಕ್ಕೆ ಹೊಂದುವ ಡೈಮಂಡ್ ಕಿವಿಯೋಲೆಯನ್ನು ಹಾಕಿಕೊಂಡಿದ್ದರು. ನೀತಾ ಅಂಬಾನಿ ವಿಶೇಷ ಆಭರಣದ ಸೆಟ್​ಗಳ ಕಲೆಕ್ಷನ್​ ಅನ್ನು ಹೊಂದಿದ್ದಾರೆ.

ಇದನ್ನೂ ಓದಿ: ಅತಿ ಸೋಮಾರಿಗಳಿಗೆ 90,000 ರೂ. ಬಹುಮಾನ; ಈ ವಿಚಿತ್ರ ಉತ್ಸವದ ಬಗ್ಗೆ ಗೊತ್ತಾ?

ನೀತಾ ಅವರ ಲಿಪ್​ಸ್ಟಿಕ್ ಮತ್ತು ಚಪ್ಪಲಿಗಳ ಸಂಗ್ರಹ:

ನೀತಾ ಅಂಬಾನಿಯ ಡ್ರೆಸ್, ಮೇಕಪ್ ವಸ್ತುಗಳ ಬಗ್ಗೆ ದೊಡ್ಡ ಕತೆಗಳೇ ಇವೆ. ನೀತಾ ತಾವು ತೊಡುವೆ ಬಟ್ಟೆಗಳಿಗೆ ಅನುಗುಣವಾಗಿ ತಮಗೆ ಬೇಕಾದಂತೆ ಲಿಪ್​ಸ್ಟಿಕ್​ಗಳನ್ನು ಕಸ್ಟಮೈಸ್ ಮಾಡಿಸಿಕೊಳ್ಳುತ್ತಾರೆ. ಅವರು ಈಗಾಗಲೇ ಸೇಲ್ ಆಗುತ್ತಿರುವ ಬ್ರಾಂಡ್​ಗಳ ಮೇಕಪ್ ಕಟ್ ಖರೀದಿಸುವುದಿಲ್ಲ. ಅವರಿಗೆಂದೇ ಪ್ರತ್ಯೇಕವಾಗಿ ಅದನ್ನು ಕಸ್ಟಮೈಸ್ ಮಾಡಲಾಗುತ್ತದೆ.

ಮಾರ್ಕೆಟಿಂಗ್ ಮೈಂಡ್ ಒಮ್ಮೆ ನೀತಾ ಅಂಬಾನಿ ಅವರ ಲಿಪ್‌ಸ್ಟಿಕ್ ಬಾಟಲಿಗಳನ್ನು ಬೆಳ್ಳಿ ಮತ್ತು ಚಿನ್ನದಿಂದ ತಯಾರಿಸಲಾಗುತ್ತದೆ, ಆ ಲಿಪ್​ಸ್ಟಿಕ್​ಗಳ ತಯಾರಿಕೆಗೆ 40 ಲಕ್ಷ ವೆಚ್ಚವಾಗುತ್ತದೆ ಎಂದು ವರದಿ ಮಾಡಿತ್ತು. ನೀತಾ ಅಂಬಾನಿ ಬಳಿ ಇರುವ ಚಪ್ಪಲಿಗಳನ್ನು ಆಕೆ ಒಮ್ಮೆ ಧರಿಸಿದರೆ ಮತ್ತೆ ಅದನ್ನು ಧರಿಸುವುದಿಲ್ಲ. ಅವರು ಧರಿಸುವ ಪ್ರತಿ ಚಪ್ಪಲಿ, ಶೂಗೂ ಕನಿಷ್ಟವೆಂದರೂ 1 ಲಕ್ಷ ರೂ. ಇರುತ್ತದೆ!

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ