Cracked heels: ಒಡೆದ ಹಿಮ್ಮಡಿಗಳಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಸರಳ ಮನೆಮದ್ದು ಪ್ರಯತ್ನಿಸಿ!

ತೇವಾಂಶದ ಕೊರತೆಯು ಒಣ ಮತ್ತು ಬಿರುಕು ಹಿಮ್ಮಡಿಗಳಿಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಪಾದಗಳನ್ನು ಮಾಯಿಶ್ಚರೈಸ್ ಮಾಡುವುದು ಒಡೆದ ಹಿಮ್ಮಡಿಗಳನ್ನು ಗುಣಪಡಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಅದರಲ್ಲಿಯೂ ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ನೀವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

Cracked heels: ಒಡೆದ ಹಿಮ್ಮಡಿಗಳಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಸರಳ ಮನೆಮದ್ದು ಪ್ರಯತ್ನಿಸಿ!
Cracked heelsImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Oct 01, 2023 | 1:11 PM

ಒಡೆದ ಹಿಮ್ಮಡಿ(Cracked heels) ಗಳನ್ನು ಮರೆಮಾಡಲು ನೀವು ಪ್ರಯತ್ನಿಸುತ್ತೀರಾ? ಹಿಮ್ಮಡಿಯ ಅಂಚಿನಲ್ಲಿರುವ ಒಣ ಮತ್ತು ದಪ್ಪ ಚರ್ಮದಿಂದ ಉಂಟಾಗುವ ಒಡೆದ ಹಿಮ್ಮಡಿಗಳಿಗೆ ಚಿಕಿತ್ಸೆ ನೀಡಲು ಅಂಗಡಿಗಳಲ್ಲಿ ಲಭ್ಯವಿರುವ ಚರ್ಮದ ಆರೈಕೆಯ ಉತ್ಪನ್ನಗಳು ಏಕೈಕ ಆಯ್ಕೆಯಲ್ಲ. ಕೆಲವೊಮ್ಮೆ, ಹಿಮ್ಮಡಿಗಳಲ್ಲಿನ ಬಿರುಕುಗಳು ಆಳವಾಗಬಹುದು. ಇದು ರಕ್ತಸ್ರಾವ ಅಥವಾ ನೋವಿಗೆ ಕಾರಣವಾಗಬಹುದು. ಆದ್ದರಿಂದ, ಮನೆಯಲ್ಲಿ ಒಡೆದ ಹಿಮ್ಮಡಿಗಳನ್ನು ಗುಣಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಿ.

ಹಿಮ್ಮಡಿಯಲ್ಲಿ ಬಿರುಕು ಕಾಣಲು ಕಾರಣಗಳೇನು?

ಬಿರುಕು ಹಿಮ್ಮಡಿಗಳು ಅನೇಕ ಕಾರಣಗಳಿಂದಾಗಿ ಸಂಭವಿಸಬಹುದು:

1. ಒಣ ಚರ್ಮ:

ಒಡೆದ ಹಿಮ್ಮಡಿಗಳು ಮುಖ್ಯವಾಗಿ ಒಣ ಚರ್ಮದಿಂದ ಉಂಟಾಗುತ್ತವೆ ಎಂದು ದೆಹಲಿ ಮೂಲದ ಕಾಸ್ಮೆಟಾಲಜಿಸ್ಟ್ ಮತ್ತು ಚರ್ಮ ತಜ್ಞ ಡಾ. ಜತಿನ್ ಮಿತ್ತಲ್ ಹೇಳುತ್ತಾರೆ. ಪಾದಗಳ ಚರ್ಮವು ತುಂಬಾ ಒಣಗಿದಾಗ ನಮ್ಯತೆಯನ್ನು ಕಳೆದುಕೊಳ್ಳುತ್ತದೆ, ಇದು ಅಂತಿಮವಾಗಿ ಹಿಮ್ಮಡಿಗಳು ಬಿರುಕುಗೊಳ್ಳಲು ಕಾರಣವಾಗುತ್ತದೆ.

2. ಅತಿಯಾದ ಒತ್ತಡ:

ಆಗಾಗ ಹೈ ಹೀಲ್ಸ್ ಧರಿಸುವ ಮಹಿಳೆಯರು ತಮ್ಮ ಪಾದಗಳ ಮೇಲೆ ಹೆಚ್ಚಿನ ಒತ್ತಡ ಅನುಭವಿಸಬಹುದು, ಜೊತೆಗೆ ಇದು ಬಿರುಕು ಮೂಡಲು ಕಾರಣವಾಗಬಹುದು. ಆದ್ದರಿಂದ, ನಿಮ್ಮ ನೆಚ್ಚಿನ ಸ್ಟಿಲೆಟ್ಟೊಗಳನ್ನು ಧರಿಸುವ ಮೊದಲು, ಎರಡು ಬಾರಿ ಯೋಚಿಸಿ.

3. ತೇವಾಂಶದ ಕೊರತೆ:

ಸ್ನಾನ ಅಥವಾ ಸ್ನಾನದ ನಂತರ ನಿಮ್ಮ ಪಾದಗಳು ಸಾಕಷ್ಟು ತೇವಗೊಳ್ಳದಿದ್ದಲ್ಲಿ ಒಣಗಿದ ಮತ್ತು ಬಿರುಕುಗೊಂಡ ಹಿಮ್ಮಡಿಗಳು ನಿಮ್ಮನ್ನು ಕಾಡಬಹುದು.

4. ವಯಸ್ಸಾಗುವಿಕೆ:

ವಯಸ್ಸಾದಂತೆ, ನಮ್ಮ ಚರ್ಮವು ತೇವಾಂಶ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತದೆ. ಇದು ನಿಮ್ಮ ಮುಖ ಅಥವಾ ಕುತ್ತಿಗೆಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ನಿಮ್ಮ ಹಿಮ್ಮಡಿಗಲ ಮೇಲೂ ಬಿರುಕುಗೊಳ್ಳಲು ಕಾರಣವಾಗಬಹುದು.

5. ದೀರ್ಘಕಾಲ ನಿಂತಿರುವುದು:

ಪಾದಗಳ ಮೇಲೆ ಹೆಚ್ಚಿದ ಒತ್ತಡದಿಂದಾಗಿ, ಅಂದರೆ ಮಹಿಳೆಯರು ದೀರ್ಘಕಾಲದವರೆಗೆ ನಿಲ್ಲುವುದು ಅಥವಾ ನಡೆಯುವುದನ್ನು ಒಳಗೊಂಡಿರುವ ಕೆಲವು ಉದ್ಯೋಗಗಳಲ್ಲಿ ಇರುವವರಲ್ಲಿಯೂ ಹಿಮ್ಮಡಿಗಳಲ್ಲಿ ಬಿರುಕು ಕಾಣಬಹುದು.

6. ಆರೋಗ್ಯ ಸಮಸ್ಯೆಗಳು:

ಮಧುಮೇಹ, ಥೈರಾಯ್ಡ್ ಸಮಸ್ಯೆಗಳು ಮತ್ತು ಸೋರಿಯಾಸಿಸ್ ಅಥವಾ ಎಸ್ಜಿಮಾದಂತಹ ಚರ್ಮದ ಪರಿಸ್ಥಿತಿಗಳು ಹಿಮ್ಮಡಿ ಒಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

7. ಸರಿಯಾಗಿ ಹೊಂದಿಕೊಳ್ಳದ ಬೂಟು ಅಥವಾ ಚಪ್ಪಲಿಗಳು:

ನಿಮಗೆ ಸರಿಯಾಗಿ ಹೊಂದಿಕೊಳ್ಳದ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದು ಕೂಡ ಹಿಮ್ಮಡಿಯ ಬಿರುಕಿಗೆ ಕಾರಣವಾಗುತ್ತದೆ. ಏಕೆಂದರೆ ಇವು ಪಾದಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ನಿಮ್ಮ ಹಿಮ್ಮಡಿಗಳನ್ನು ಸಂಕುಚಿತಗೊಳಿಸುತ್ತದೆ, ಇದು ಚರ್ಮದ ಬಿರುಕುಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಮುಖದ ಸೌಂದರ್ಯಕ್ಕೆ ಹರಳೆಣ್ಣೆ ಬಳಸುವುದು ಹೇಗೆ?

ಒಡೆದ ಹಿಮ್ಮಡಿಗಳನ್ನು ಗುಣಪಡಿಸುವ ಮಾರ್ಗಗಳು:

ಒಡೆದ ಹಿಮ್ಮಡಿಗಳು ಹೆಚ್ಚಾಗಿ ಒಣ ಚರ್ಮದಿಂದ ಉಂಟಾಗುತ್ತವೆ. ಆದ್ದರಿಂದ, ಪ್ರತಿದಿನ ನಿಮ್ಮ ಹಿಮ್ಮಡಿಗಳಿಗೆ ಉತ್ತಮ ಮಾಯಿಶ್ಚರೈಸರ್ ಹಚ್ಚಿ, ವಿಶೇಷವಾಗಿ ಸ್ನಾನದ ನಂತರ, ನಿಮ್ಮ ದೇಹಕ್ಕೆ ಹೊಂದುವ ಕ್ರೀಮ್ಗಳನ್ನು ಹಚ್ಚಿಕೊಳ್ಳಿ.

  • ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯಿರಿ: ನಿಮ್ಮ ಪಾದಗಳನ್ನು ಬೆಚ್ಚಗಿನ ನೀರು ಮತ್ತು ಸೌಮ್ಯ ಸಾಬೂನಿನಿಂದ ತೊಳೆಯಿರಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. ಆದರೆ ಡಾ. ಮಿತ್ತಲ್ ಹೇಳುವ ಪ್ರಕಾರ ನಿಮ್ಮ ಪಾದಗಳನ್ನು ಹೆಚ್ಚು ಸಮಯ ನೀರಿನಲ್ಲಿ ನೆನೆಸಬೇಡಿ, ಏಕೆಂದರೆ ಇದು ಚರ್ಮದ ಪದರವನ್ನು ಹಾನಿಗೊಳಿಸುತ್ತದೆ ಮತ್ತು ತೇವಾಂಶ ನಷ್ಟಕ್ಕೆ ಕಾರಣವಾಗಬಹುದು.
  • ತೆಂಗಿನ ಎಣ್ಣೆ: ತೆಂಗಿನಕಾಯಿಯ ತಿರುಳನ್ನು ಹೆಚ್ಚಾಗಿ ತೆಂಗಿನ ಎಣ್ಣೆಯನ್ನು ತಯಾರಿಸಲು ಬಳಸಲಾಗುತ್ತದೆ, ಇದನ್ನು ಚರ್ಮವನ್ನು ದೀರ್ಘಕಾಲದವರೆಗೆ ತೇವಗೊಳಿಸಲು ಬಳಸಲಾಗುತ್ತದೆ. ಆದ್ದರಿಂದ, ಇದನ್ನು ಒಡೆದ ಹಿಮ್ಮಡಿಗಳ ಮೇಲೂ ಅನ್ವಯಿಸಬಹುದು. ತೆಂಗಿನ ಎಣ್ಣೆ ವಿಶೇಷವಾಗಿ ಹೊಸ ಚರ್ಮದ ಕೋಶಗಳ ತ್ವರಿತ ರಚನೆಯನ್ನು ಬೆಂಬಲಿಸುತ್ತದೆ ಮತ್ತು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಒಡೆದ ಹಿಮ್ಮಡಿಗಳಿಗೆ ನೈಸರ್ಗಿಕ ಪರಿಹಾರವಾಗಿ, ತೆಂಗಿನ ಎಣ್ಣೆಯನ್ನುಹಚ್ಚಬಹುದು.
  •  ನೈಸರ್ಗಿಕ ಜೆಲ್: ಜೇನುತುಪ್ಪ, ಮೊಸರು, ಬಾಳೆಹಣ್ಣಿನ ಸಿಪ್ಪೆಗಳು ಮತ್ತು ಅಲೋವೆರಾ ಒಳಗೊಂಡ ಜೆಲ್ ಅನ್ನು ಮನೆಯಲ್ಲಿ ತಯಾರಿಸಿ ಒಂದು ರೀತಿಯ ಮಾಸ್ಕ್ ತಯಾರಿಸಿಕೊಳ್ಳಬಹುದು. ಇದನ್ನು ನಿಮ್ಮ ಪಾದಗಳಿಗೆ ಹಚ್ಚಿ ಮತ್ತು 20 ರಿಂದ 30 ನಿಮಿಷಗಳ ನಂತರ, ತೊಳೆಯಿರಿ. ಈ ನೈಸರ್ಗಿಕ ಪದಾರ್ಥಗಳು ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ.
  • ಸಾಕ್ಸ್ ಧರಿಸಿ:ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ನೆನೆಸಿದ ನಂತರ, ಅವುಗಳನ್ನು ನಿಧಾನವಾಗಿ ಒಣಗಿಸಿ. ನಂತರ ಮಲಗುವ ಮೊದಲು ಸಾಕ್ಸ್ ಧರಿಸಿ.
  • ಕೊಕುಮ್ ಬೆಣ್ಣೆ: ಕೋಕುಮ್ ಬೆಣ್ಣೆಯನ್ನು ಹೆಚ್ಚಾಗಿ ಸಾಬೂನು ಮತ್ತು ಲೋಷನ್ ಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಲ್ಲದೆ ಒಡೆದ ಹಿಮ್ಮಡಿಗಳಿಗೆ ಮನೆಮದ್ದುಗಳಲ್ಲಿ ಇದು ಒಂದಾಗಿದೆ. ನೀವು ಕೊಕುಮ್ ಬೆಣ್ಣೆಯನ್ನು ನೇರವಾಗಿ ನಿಮ್ಮ ಹಿಮ್ಮಡಿಗಳಿಗೆ ಹಚ್ಚಬಹುದು ಅಥವಾ ನಿಮ್ಮ ಆಯ್ಕೆಯ ಎಣ್ಣೆಯೊಂದಿಗೆ ಬೆರೆಸಬಹುದು. ನೀವು ಕೊಕುಮ್ ಬೆಣ್ಣೆಯನ್ನು ಹಚ್ಚಿ ನಂತರ ಹತ್ತಿಯಿಂದ ಮಾಡಿದ ಕಾಲು ಚೀಲ ಅಥವಾ ಸಾಕ್ಸ್ ಧರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ನಿಮ್ಮ ಪಾದಗಳನ್ನು ನಿಯಮಿತವಾಗಿ ಮಾಯಿಶ್ಚರೈಸ್ ಮಾಡುವುದು ಮತ್ತು ಹೈ ಹೀಲ್ಸ್ ಕಡಿಮೆ ಧರಿಸುವುದರ ಹೊರತಾಗಿ, ಬಿರುಕುಗಳಿಗೆ ಕಾರಣವಾಗಬಹುದಾದ ಸತ್ತ ಚರ್ಮದ ಕೋಶಗಳನ್ನು ತೊಡೆದು ಹಾಕಲು ನೀವು ನಿಮ್ಮ ಹಿಮ್ಮಡಿಗಳನ್ನು ಆಗಾಗ ಎಕ್ಸ್ಫೋಲಿಯೇಟ್ ಮಾಡಬೇಕು. ಆದರೆ ಅದನ್ನು ಅತಿಯಾಗಿ ಮಾಡಬೇಡಿ ಏಕೆಂದರೆ ಅತಿಯಾದ ಎಕ್ಸ್ ಫೋಲಿಯೇಷನ್ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!