Womenʼs Day Wishes: ನಿಮ್ಮ ಜೀವನವನ್ನು ಬೆಳಗಿದ ಸ್ತ್ರೀಶಕ್ತಿಗೆ ಈ ರೀತಿ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿ

Womenʼs Day 2026: ಮಹಿಳೆಯ ಸಾಧನೆಗಳನ್ನು ಗೌರವಿಸಲು, ಮನೆ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು, ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಆಕೆಯ ತ್ಯಾಗ, ಪರಿಶ್ರಮವನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇಂತಹ ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಜೀವನದ ಸ್ಪೆಷಲ್‌ ಮಹಿಳೆಗೆ ಧನ್ಯವಾದ, ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಅರ್ಥಪೂರ್ಣ ಶುಭಾಶಯಗಳು.

Womenʼs Day Wishes: ನಿಮ್ಮ ಜೀವನವನ್ನು ಬೆಳಗಿದ ಸ್ತ್ರೀಶಕ್ತಿಗೆ ಈ ರೀತಿ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿ
Image Credit source: vecteezy

Updated on: Mar 08, 2026 | 9:17 AM

ಮಹಿಳೆ (Women) ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ. ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ, ಮಗಳಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ಆಕೆ ಜೀವವನ್ನು ನೀಡುವುದರ ಜೊತೆಗೆ ಜೀವನಕ್ಕೆ ಶಕ್ತಿ ತುಂಬುವವಳು. ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುವವಳು. ಈ ಸ್ತ್ರೀ ಶಕ್ತಿಗೆ ಧನ್ಯವಾದ ತಿಳಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಶುಭ ದಿನ ನಿಮ್ಮ ಜೀವನಕ್ಕೂ ಶಕ್ತಿ ತುಂಬಿದ, ಸ್ಫೂರ್ತಿ ನೀಡಿದ, ನಿಮ್ಮ ಕಷ್ಟಕ್ಕೆ ಹೆಗಲಾಗಿ ನಿಂತ ನಿಮ್ಮ ಬದುಕಿನ ವಿಶೇಷ ಮಹಿಳೆಗೆ ಈ ಮಹಿಳಾ ದಿನದ ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸುವ ಮೂಲಕ ಅವರನ್ನು ಸಂಭ್ರಮಿಸಿ. ಇಲ್ಲಿದೆ ನೋಡಿ ಮಹಿಳಾ ದಿನದ ಅರ್ಥಪೂರ್ಣ ಸಂದೇಶಗಳು.

ಇಲ್ಲಿವೆ ಮಹಿಳಾ ದಿನಾಚರಣೆಯ ಶುಭ ಸಂದೇಶಗಳು:

  • ಅಮ್ಮನಿಂದ ಹಿಡಿದು ಮಡದಿಯವರೆಗೆ ಸಹೋದರಿಯಿಂದ ಹಿಡಿದು ಪುತ್ರಿಯವರೆಗೆ ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾ ಚೈತನ್ಯ. ಮಹಿಳಾ ದಿನಾಚರಣೆಯ ಶುಭಾಶಯಗಳು.
  • ಓ ನನ್ನ ಜೀವನ ಸಂಗಾತಿ… ಮಡದಿಯಾಗಿ, ಸ್ನೇಹಿತೆಯಾಗಿ ನೀವು ತೋರಿದ ನಿಸ್ವಾರ್ಥ ಪ್ರೀತಿ, ಕಾಳಜಿ, ಅಕ್ಕರೆಗೆ ನಾನು ಸದಾ ಚಿರಋಣಿ. ನನ್ನ ಮುದ್ದಿನ ಮಡದಿಗೆ ಹ್ಯಾಪಿ ವುಮೆನ್ಸ್‌ ಡೇ.
  • ನನ್ನ ಬುದುಕಿನಲ್ಲಿ ವಿಶೇಷ ಸ್ಥಾನ ಪಡೆದವರಲ್ಲಿ ನೀವೂ ಒಬ್ಬರು. ನಿಮ್ಮ ಬದುಕು ಸದಾ ಸಂತೋಷ, ನೆಮ್ಮದಿಯಿಂದ ಕೂಡಿರಲಿ ಎಂಬ ಹಾರೈಕೆ ನನ್ನದು. ನಿಮಗೆ ಮಹಿಳಾ ದಿನದ ಶುಭಾಶಯಗಳು.
  • ನನ್ನ ಪ್ರಪಂಚ ತುಂಬಾ ಸುಂದರವಾಗಿದೆ ಎಂದರೆ ಅದಕ್ಕೆ ಕಾರಣ ನೀನು, ನನ್ನ ಬದುಕಿನ ಸ್ಫೂರ್ತಿ ನೀನು. ನನ್ನ ಜೀವನದ ನಾರಿಶಕ್ತಿಗೆ ಮಹಿಳಾ ದಿನದ ಶುಭಾಶಯಗಳು.
  • ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಹಿರಿದು. ಹಲವು ಜವಾಬ್ದಾರಿಗಳನ್ನು ನಿಭಾಯಿಸಿ, ಕುಟುಂಬವನ್ನು ನಡೆಸುವ ಶ್ರೇಷ್ಠ ಶಕ್ತಿ ಮಹಿಳೆ. ಎಲ್ಲ ಸ್ತ್ರೀಯರಿಗೂ ಮಹಿಳಾ ದಿನದ ಶುಭಾಶಯಗಳು.
  • ಅಮ್ಮಾ… ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ನನ್ನ ಬದುಕಿನ ಶಕ್ತಿ ನೀವು, ನಿರ್ಮಲ ಪ್ರೀತಿ, ಕಾಳಜಿ ತೋರಿದ ನಿಮಗೆ ನಾನು ಚಿರಋಣಿ.
  • ಮಹಿಳೆ ತ್ಯಾಗಮೂರ್ತಿ, ತನ್ನ ಬದುಕನ್ನು ಕುಟುಂಬಕ್ಕಾಗಿ ಮೀಸಲಿಡುವ ಶಕ್ತಿ. ಆಕೆಯ ಶ್ರಮ, ಪ್ರೀತಿ ಅದ್ಭುತ. ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
  • ಪ್ರತಿ ಮಹಿಳೆ ಈ ಸಮಾಜಕ್ಕೆ ಅನನ್ಯ ಕೊಡುಗೆ. ಎಲ್ಲ ಸ್ತ್ರೀಯರಿಗೂ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು.
  • ಪ್ರತಿಯೊಬ್ಬರ ಬದುಕು ಉದಯವಾಗುವುದು ಮಹಿಳೆಯಿಂದ. ಮಹಿಳೆ ಸೃಷ್ಟಿಕರ್ತೆ. ಇಂತಹ ನಾರಿಶಕ್ತಿಗೆ ಮಹಿಳಾ ದಿನದ ಶುಭಾಶಯಗಳು.
  • ನನ್ನ ಬದುಕಿಗೆ ಹೊಸ ಅರ್ಥ ನೀಡಿ, ಸುಂದರಗೊಳಿಸಿದ ಶಿಲ್ಪಿ ನೀನು, ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಕಾರಣ ನೀನು. ನನ್ನ ಮುದ್ದು ಅಮ್ಮನಿಗೆ ಮಹಿಳಾ ದಿನದ ಶುಭಾಶಯಗಳು.
  • ಹೆಣ್ಣಿನಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ಘೋರ. ಹೆಣ್ಣನ್ನು ರಕ್ಷಿಸಿ, ಹೆಣ್ಣನ್ನು ಗೌರವಿಸಿ. ಎಲ್ಲಾ ಸ್ತ್ರೀಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
  • ಮಹಿಳಾ ದಿನಾಚರಣೆಯ ಶುಭಾಶಯಗಳು. ಬದುಕಿಗೆ ದಾರಿ, ಕುಟುಂಬದ ಶಕ್ತಿ, ಸಾಧನೆಗೆ ಸ್ಪೂರ್ತಿ, ಎಲ್ಲರ ಬದುಕಿನಲ್ಲೂ ಪ್ರಮುಖ ಘಟ್ಟದ ಮಹತ್ವ ಸ್ಥಾನ ಪಡೆದವಳು ಸ್ತ್ರಿ, ಅವಳಿಗೊಂದು ನಮನ.
  • ಪ್ರತಿ ಗಂಡಿನ ಯಶಸ್ಸಿನ ಹಿಂದೆ ಇರುವ ನಿಸ್ವಾರ್ಥ, ತ್ಯಾಗಮಯಿ, ಕ್ಷಮಯಾಧರಿತ್ರಿ, ತಾಯಿ ಹೃದಯದ ಹೆಣ್ಣು ಮಕ್ಕಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
  • ಇಂದು ನಿಮ್ಮ ದಿನ ನಿಮ್ಮ ಬದುಕಿನ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ಜೀವನದಲ್ಲಿ ಸಂಭ್ರಮ ಮನೆ ಮಾಡಲಿ. ಎಲ್ಲಾ ಸ್ತ್ರೀಯರಿಗೂ ಮಹಿಳಾ ದಿನದ ಶುಭಾಶಯಗಳು.
  • ನೀವು ನನಗೆ ಎಂದಿಗೂ ಸ್ಫೂರ್ತಿ, ಮಾದರಿ. ನನಗಾಗಿ ನೀವು ಮಾಡಿದ ಪ್ರತಿಯೊಂದು ತ್ಯಾಗಕ್ಕೂ ನಾನು ಕೃತಜ್ಞನಾಗಿದ್ದೇನೆ. ನನ್ನ ಜೀವನದ ವಿಶೇಷ ಮಹಿಳೆಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
  • ನಿಸ್ವಾರ್ಥ ಪ್ರೀತಿಗೆ ಮಾದರಿ ನೀವು. ಇದು ನಿಮ್ಮ ದಿನ, ಈ ಶುಭ ಸಂದರ್ಭದಲ್ಲಿ ನಿಮ್ಮ ಕನಸುಗಳೆಲ್ಲಾ ಸಾಕಾರಗೊಳ್ಳಲಿ. ನಿಮ್ಮ ಬದುಕಿನುದ್ದಕ್ಕೂ ಬರೀ ಖುಷಿಯೇ ತುಂಬಿರಲಿ. ಮಹಿಳಾ ದಿನದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 am, Sun, 8 March 26

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us