AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Arthritis Day 2021: ಸಂಧಿವಾತ ಸಮಸ್ಯೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಪರಿಣಾಮ ಬೀರುತ್ತದೆ ತಿಳಿದಿದೆಯೇ?

ವಿಶ್ವ ಸಂಧಿವಾತ ದಿನ 2021: ಸಂಧಿವಾತ ಸಮಸ್ಯೆ ನಿಯಂತ್ರಿಸಲು ಮಾರ್ಗಗಳು ಯಾವುವು ಎಂಬುದರ ಕುರಿತಾದ ಕೆಲವೊಂದಿಷ್ಟು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.

World Arthritis Day 2021: ಸಂಧಿವಾತ ಸಮಸ್ಯೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಪರಿಣಾಮ ಬೀರುತ್ತದೆ ತಿಳಿದಿದೆಯೇ?
TV9 Web
| Edited By: |

Updated on:Oct 12, 2021 | 11:15 AM

Share

ಸಂಧಿವಾತ ಸಮಸ್ಯೆಯು ಸಾಮಾನ್ಯವಾಗಿ ವೃದ್ದಾಪ್ಯದಲ್ಲಿ ಕಂಡು ಬರುವ ಸಮಸ್ಯೆ. ಆದರೆ ಇತ್ತೀಚೆಗೆ ಯುವಕರಲ್ಲಿ, ಮಕ್ಕಳಲ್ಲಿಯೂ ಸಹ ಕಂಡು ಬರುತ್ತಿದೆ. ಈ ಸ್ಥಿತಿ ಮಕ್ಕಳಲ್ಲಿ ಜುವೆನೈಲ್ ಇಡಿಯೋಪಥಿಕ್ ಆಥ್ರೈರ್ಟಿಸ್ (JIA) ಎಂದು ಕರೆಯಲಾಗುತ್ತದೆ. ಸಂಧಿವಾತ ಸಮಸ್ಯೆಯಲ್ಲಿ ಉರಿಯೂತ, ಸ್ನಾಯು ಸೆಳೆತ, ಕೀಲುಗಳಲ್ಲಿ ನೋವು ಸಮಸ್ಯೆ ಉಂಟಾಗುತ್ತದೆ. ಸಂಧಿವಾತ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇಲ್ಲದಿದ್ದರೂ ಸಹ ಸೂಕ್ತ ಚಿಕಿತ್ಸೆ ನೀಡಿ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಸಂಧಿವಾತ ಸಮಸ್ಯೆ ಕೀಲುಗಳ ಉರಿಯೂತಕ್ಕೆ ಕಾರಣವಾಗಬಹುದು. ಈ ಸ್ಥಿತಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಕೆಲವು ಸಂದರ್ಭಗಳಲ್ಲಿ ಇದು ಅನುವಂಶೀಯ ಎಂದೂ ಹೇಳಲಾಗುತ್ತದೆ. ಜೆಐಎ ಹೊಂದಿರುವ ಮಕ್ಕಳು ಕಣ್ಣು, ಹೃದಯ, ಶ್ವಾಸಕೋಶ ಮತ್ತು ಕರುಳಿನ ಆರೋಗ್ಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಕೀಲುಗಳಲ್ಲಿ ಮೂಳೆಗಳು ದುರ್ಬಲಗೊಳ್ಳುವ ಸಂಧಿವಾತ ಮತ್ತು ಕೀಲುಗಳಲ್ಲಿ ಉರಿಯೂತ, ನೋವು ಕಾಣಿಸಿಕೊಳ್ಳುವ ಸಂಧಿವಾತಗಳಿರುತ್ತವೆ. ಇದು ನಿಮ್ಮಗೆ ಕುಳಿತುಕೊಳ್ಳಲು, ಬಾಗಲು ಸಹ ಕಷ್ಟವಾಗುವಂತಹ ಸ್ಥಿತಿಯಾಗಿದೆ.

ಸಂಧಿವಾತ ಸಮಸ್ಯೆಯ ಹೊಂದಿರುವವರು ತೀವ್ರವಾದ ಕೀಲುಗಳ ನೋವನ್ನು ಅನುಭವಿಸುತ್ತಾರೆ. ಜತೆಗೆ ಹೃದಯ ಮತ್ತು ಶ್ವಾಸಕೋಶ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಜೆಐಎ ಹೊಂದಿರುವ ಮೊದಲ ಆರು ತಿಂಗಳಲ್ಲಿ ಕೀಲುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಗುವಿನ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ.

ಸಂಧಿವಾತ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇಲ್ಲದಿದ್ದರೂ ಸಹ ಸೂಕ್ತ ಚಿಕಿತ್ಸೆ ನೀಡಿ ಸಮಸ್ಯೆಯನ್ನು ನಿಯಂತ್ರಿಸಬಹುದು. ಸಂಧಿವಾತ ಸಮಸ್ಯೆಯು ಕೀಲುಗಳ ಮೇಲೆ ಪರಿಣಾಮ ಬೀರುವ ಒಂದು ಸಮಸ್ಯೆ. ಯಾವುದೇ ಕಾರಣಕ್ಕೂ ಕೀಲುಗಳ ನೋವು, ಊತ, ಉರಿಯೂತದಂಹ ಲಕ್ಷಣಗಳು ಕಂಡು ಬರುತ್ತಿದ್ದರೆ. ನಿರ್ಲಕ್ಷ್ಯ ಮಾಡದೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಇದನ್ನೂ ಓದಿ:

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ

High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸಲು ಕೆಲವು ಸಲಹೆಗಳು ಇಲ್ಲಿವೆ

Published On - 11:14 am, Tue, 12 October 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ